ಪ್ರಧಾನ ಮಂತ್ರಿಯವರ ಕಛೇರಿ

ಉತ್ತರಾಖಂಡದಲ್ಲಿ ನಮಾಮಿ ಗಂಗೆ, ಆರು ಬೃಹತ್ ಯೋಜನೆಗಳ ಉದ್ಘಾಟನೆ ವೇಳೆ ಪ್ರಧಾನಿ ಅವರ ಭಾಷಣ

Posted On: 29 SEP 2020 1:37PM by PIB Bengaluru

ಉತ್ತರಾಖಂಡದ ರಾಜ್ಯಪಾಲರಾದ ಶ್ರೀಮತಿ ಬೇಬಿ ರಾಣಿ ಮೌರ್ಯ ಜಿ, ಮುಖ್ಯಮಂತ್ರಿ ಶ್ರೀ ತ್ರಿವೇಂದ್ರ ಸಿಂಗ್ ರಾವತ್ ಜಿ, ನನ್ನ ಸಂಪುಟ ಸಹೋದ್ಯೋಗಿಗಳಾದ ಶ್ರೀ ಗಜೇಂದ್ರ ಸಿಂಗ್ ಶೆಖಾವತ್ ಜಿ, ಡಾ. ರಮೇಶ್ ಪೋಖ್ರಿಯಾಲ್ ನಿಶಾಂಖ್ ಜಿ, ಶ್ರೀ ರತನ್ ಲಾಲ್ ಕಟಾರಿಯಾ ಜಿ ಮತ್ತು ಇತರೆ ಅಧಿಕಾರಿಗಳೇ ಹಾಗೂ ಉತ್ತರಾಖಂಡದ ನನ್ನ ಸಹೋದರ ಮತ್ತು ಸಹೋದರಿಯರೇ. ನಾಲ್ಕು ಧಾಮಗಳಿಂದ ಸುತ್ತುವರಿದ ಪವಿತ್ರ ಉತ್ತರಾಖಂಡಕ್ಕೆ ನಾನು ನಮಿಸುತ್ತೇನೆ.

ಇಂದು ತಾಯಿ ಗಂಗೆಯನ್ನು ಶುದ್ಧೀಕರಣ ಖಾತ್ರಿಪಡಿಸುವ ಆರು ಬೃಹತ್ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಇದರಲ್ಲಿ ಹರಿದ್ವಾರ, ಋಷಿಕೇಶ, ಬದ್ರಿನಾಥ್ ಮತ್ತು ಮುನಿ ಕಿ ರೆಟಿಯ ವಸ್ತುಸಂಗ್ರಹಾಲಯ, ತ್ಯಾಜ್ಯ ನೀರು ಸಂಸ್ಕರಣಾ ಘಟಕ ಯೋಜನೆಗಳೂ ಸಹ ಸೇರಿವೆ ಎಲ್ಲ ಯೋಜನೆಗಳಿಗಾಗಿ ನಾನು ಉತ್ತರಾಖಂಡದ ನನ್ನ ಎಲ್ಲ ಮಿತ್ರರನ್ನು ಅಭಿನಂದಿಸುತ್ತೇನೆ.

ಮಿತ್ರರೇ,

ಕೆಲವೇ ಕ್ಷಣಗಳ ಹಿಂದೆ ಜಲಜೀವನ್ ಮಿಷನ್ ಕಾರ್ಯಸೂಚಿ ಮತ್ತು ಸುಂದರ ಲಾಂಛನವನ್ನು ಬಿಡುಗಡೆ ಮಾಡಲಾಯಿತು. ಜಲಜೀವನ್ ಮಿಷನ್ ಪ್ರತಿಯೊಂದು ಗ್ರಾಮಗಳ ಪ್ರತಿಯೊಂದು ಮನೆಗೂ ಶುದ್ಧ ಕುಡಿಯುವ ನೀರು ಪೂರೈಸುವ ಬೃಹತ್ ಯೋಜನೆಯಾಗಿದೆ. ಮಿಷನ್ ಲಾಂಛನ ಸದಾ ನಮಗೆ ಪ್ರತಿಯೊಂದು ಹನಿ ನೀರಿನ ಅಗತ್ಯತೆ ಕುರಿತು ನಿರಂತರವಾಗಿ ಸ್ಫೂರ್ತಿ ನೀಡುತ್ತದೆ. ಇದೇ ವೇಳೆ ಮಾರ್ಗದರ್ಶಿ, ಗ್ರಾಮಗಳ ಜನರಿಗೆ ಮತ್ತು ಗ್ರಾಮ ಪಂಚಾಯಿತಿಗೆ ಅತ್ಯಂತ ಪ್ರಮುಖವಾಗಿ ಬೇಕಾಗಿದೆ ಮತ್ತು ಇದು ಸರ್ಕಾರಿ ಯಂತ್ರಕ್ಕೆ ಅತ್ಯವಶ್ಯಕವಾಗಿದೆ. ಇದು ಯೋಜನೆಯ ಯಶಸ್ಸು ಗಳಿಸುವಲ್ಲಿ ಅತ್ಯಂತ ಮಹತ್ವದ ಕ್ರಮವಾಗಿದೆ.

ಮಿತ್ರರೇ,

ಇಂದು ಬಿಡುಗಡೆ ಮಾಡಲಾದ ಕೃತಿಯಲ್ಲಿ ಅತ್ಯಂತ ವಿವರವಾಗಿ ಹೇಗೆ ನಮ್ಮ ಗಂಗೆಯ ಸಾಂಸ್ಕೃತಿಕ ವೈಭವ, ನಂಬಿಕೆ ಮತ್ತು ಪರಂಪರೆಯ ಶ್ರೇಷ್ಠ ಸಂಕೇತವಾಗಿದೆ ಎಂಬುದನ್ನು ವಿಸ್ತೃತವಾಗಿ ವಿವರಿಸಲಾಗಿದೆ. ಗಂಗಾ ನದಿ ದೇಶದ ಸುಮಾರು ಅರ್ಧದಷ್ಟು ಜನಸಂಖ್ಯೆಯ ಜೀವನವನ್ನು ಶ್ರೀಮಂತಗೊಳಿಸುತ್ತಿದೆ ಮತ್ತು ಇದು ಉತ್ತರಾಖಂಡದಲ್ಲಿ ಹುಟ್ಟಿ ಪಶ್ಚಿಮ ಬಂಗಾಳದ ಗಂಗಾ ಸಾಗರದ ವರೆಗೆ ಹರಿಯಲಿದೆ. ಆದ್ದರಿಂದ ಗಂಗಾ ನದಿಯ ಶುದ್ಧೀಕರಣ ಅತ್ಯಂತ ಅಗತ್ಯವಾಗಿದ್ದು, ಗಂಗಾ ಮಾತೆ ಯಾವುದೇ ಅಡೆತಡೆ ಇಲ್ಲದೆ ಹರಿಯುವುದು ಅತ್ಯವಶ್ಯಕವಾಗಿದೆ. ಹಿಂದಿನ ದಶಕಗಳಲ್ಲಿ ಗಂಗಾ ನದಿ ಶುದ್ಧೀಕರಣಕ್ಕೆ ಬೃಹತ್ ಆಂದೋಲನಗಳನ್ನು ಕೈಗೊಳ್ಳಲಾಗಿತ್ತು. ಅದಕ್ಕೆ ಸಾರ್ವಜನಿಕ ಸಹಭಾಗಿತ್ವ ಇರಲಿಲ್ಲ ಅಥವಾ ಅಭಿಯಾನಗಳಲ್ಲಿ ಯಾವುದೇ ದೂರದೃಷ್ಟಿ ಇರಲಿಲ್ಲ. ಅದರ ಪರಿಣಾಮ ಗಂಗಾ ನದಿ ಶುದ್ಧೀಕರಣವಾಗಲೇ ಇಲ್ಲ.

ಮಿತ್ರರೇ,

ಗಂಗಾ ನದಿಯ ಶುದ್ಧೀಕರಣಕ್ಕೆ ಕೆಲವೊಂದು ಹಳೆಯ ಪದ್ಧತಿಗಳನ್ನೇ ಅಳವಡಿಸಿಕೊಂಡರೇ ಇಂದೂ ಸಹ ಅದೇ ರೀತಿಯ ಸಮಾನ ಬಡ ಪರಿಸ್ಥಿತಿ ಇರಲಿದೆ. ಆದರೆ ನಾವು ಹೊಸ ಆಲೋಚನೆ ಮತ್ತು ಹೊಸ ಕಾರ್ಯತಂತ್ರದ ಮೂಲಕ ಮುಂದಡಿ ಇಟ್ಟಿದ್ದೇವೆ. ನಾವು ನಮಾಮಿ ಗಂಗೆ ಮಿಷನ್ ಅಡಿ ಗಂಗಾ ಮಾತೆಯ ಶುದ್ಧೀಕರಣಕ್ಕಷ್ಟೇ ಸೀಮಿತವಾಗಿಲ್ಲ. ನಾವು ಅತ್ಯಂತ ದೊಡ್ಡ ಮತ್ತು ಸಮಗ್ರ ನದಿ ಸಂರಕ್ಷಣಾ ಅಭಿಯಾನವನ್ನು ದೇಶದಲ್ಲಿ ಕೈಗೊಂಡಿದ್ದೇವೆ. ಸರ್ಕಾರ ನಾಲ್ಕು ಹಂತದ ಕಾರ್ಯತಂತ್ರದೊಂದಿಗೆ ನಿರಂತರವಾಗಿ ಕಾರ್ಯೋನ್ಮುಖವಾಗಿದೆ. ಮೊದಲಿಗೆ ಗಂಗಾ ನದಿಗೆ ಹರಿದು ಬಿಡಲಾಗುತ್ತಿರುವ ಮಲಿನ ನೀರು ತಡೆಗೆ ತ್ಯಾಜ್ಯ ಸಂಸ್ಕರಣಾ ಘಟಕಗಳ ಜಾಲವನ್ನು ಆರಂಭಿಸಲಾಗುತ್ತಿದೆ. ಎರಡನೆಯದಾಗಿ, ರೀತಿಯ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ನಿರ್ಮಾಣ ಮಾಡುವುದರಿಂದ ಮುಂದಿನ ಹತ್ತರಿಂದ ಹದಿನೈದು ವರ್ಷಗಳ ಅಗತ್ಯತೆ ಪೂರ್ಣಗೊಳ್ಳಲಿದೆ. ಮೂರನೆಯದಾಗಿ ಗಂಗಾ ನದಿಯ ಪಾತ್ರದಲ್ಲಿರುವ ನೂರಾರು ದೊಡ್ಡ ನಗರ/ಪಟ್ಟಣಗಳು ಮತ್ತು ಐದು ಸಾವಿರ ಗ್ರಾಮಗಳನ್ನು ಬಯಲು ಬಹಿರ್ದೆಸೆ ಮುಕ್ತಗೊಳಿಸಲಾಗುತ್ತಿದೆ ಮತ್ತು ನಾಲ್ಕನೆಯದಾಗಿ, ಎಲ್ಲಾ ಸಾಧ್ಯವಾದ ಕ್ರಮಗಳನ್ನು ಕೈಗೊಂಡು ಗಂಗಾ ಉಪನದಿಗಳ ಮಾಲಿನ್ಯವನ್ನು ತಡೆಯಲಾಗುತ್ತಿದೆ.

ಮಿತ್ರರೇ,

ಇಂದು ನಾವೆಲ್ಲಾ ಸಮಗ್ರ ಕಾರ್ಯತಂತ್ರದ ಪರಿಣಾಮದ ಫಲಿತಾಂಶಕ್ಕೆ ಸಾಕ್ಷಿಯಾಗಿದ್ದೇವೆ. ಇಂದು ಸುಮಾರು 30,000 ಕೋಟಿಗೂ ಅಧಿಕ ಮೊತ್ತದ ಯೋಜನೆಗಳು ಪ್ರಗತಿಯಲ್ಲಿವೆ ಅಥವಾ ನಮಾಮಿ ಗಂಗೆ ಕಾರ್ಯಕ್ರಮದಡಿ ಅವುಗಳು ಪೂರ್ಣಗೊಂಡಿವೆ. ಇಂದು ಚಾಲನೆ ನೀಡಿರುವ ಯೋಜನೆಗಳಲ್ಲದೆ, ಉತ್ತರಾಖಂಡದಲ್ಲಿ ಅಭಿಯಾನದಡಿ ಕೈಗೊಳ್ಳಲಾಗಿದ್ದ ಬಹುತೇಕ ಯೋಜನೆಗಳು ಪೂರ್ಣಗೊಂಡಿವೆ. ಯೋಜನೆಗಳು ಸಾವಿರಾರು ಕೋಟಿ ರೂ. ಮೌಲ್ಯದಾಗಿದ್ದು, ಉತ್ತರಾಖಂಡದಲ್ಲಿ ಕಳೆದ ಆರು ವರ್ಷಗಳಿಂದೀಚೆಗೆ ತ್ಯಾಜ್ಯ ಸಂಸ್ಕರಣಾ ಸಾಮರ್ಥ್ಯವನ್ನು ಬಹುತೇಕ ನಾಲ್ಕು ಪಟ್ಟು ಹೆಚ್ಚಿಸಿವೆ.

ಮಿತ್ರರೇ,

ಉತ್ತರಾಖಂಡದಲ್ಲಿ ಗಂಗೋತ್ರಿ, ಬದ್ರಿನಾಥ್, ಕೇದಾರನಾಥ್ ಮತ್ತು ಹರಿದ್ವಾರದ 130ಕ್ಕೂ ಅಧಿಕ ಕಾಲುವೆಗಳಿಂದ ತ್ಯಾಜ್ಯ ನೀರು ಹರಿದು ಗಂಗಾ ನದಿ ಸೇರುತ್ತಿತ್ತು. ಇಂದು ಕಾಲುವೆಗಳನ್ನು ಬಹುತೇಕ ನಿಯಂತ್ರಿಸಲಾಗಿದೆ. ಇದರಲ್ಲಿ ಚಂದ್ರೇಶ್ವರ ನಗರದ ಋಷಿಕೇಶಕ್ಕೆ ಹೊಂದಿಕೊಂಡಿರುವಮುನಿ ಕಿ ರೆತಿಯೂ ಸೇರಿದೆ. ಗಂಗಾ ನದಿಗೆ ಭೇಟಿ ನೀಡುವವರು ಮತ್ತು ರಾಫ್ಟರ್ ಗಳು ಕಾಲುವೆಯಿಂದಾಗಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಇಂದು ಮೊದಲ ನಾಲ್ಕು ಅಂತಸ್ತಿನ ತ್ಯಾಜ್ಯ ಸಂಸ್ಕರಣಾ ಘಟಕವನ್ನು ದೇಶಕ್ಕೆ ಸಮರ್ಪಿಸಲಾಯಿತು. ಹರಿದ್ವಾರದಲ್ಲೂ ಕೂಡ 20ಕ್ಕೂ ಹೆಚ್ಚು ಕಾಲುವೆಗಳನ್ನು ಮುಚ್ಚಲಾಗಿದೆ. ಮಿತ್ರರೇ, ಗಂಗಾ ಮಾತೆಯ ಶುದ್ಧೀಕರಣವನ್ನು ಜಗತ್ತಿನ ಎಲ್ಲಾ ಭಕ್ತರು ಪ್ರಯಾಗ್ ಕುಂಭದ ವೇಳೆ ಪ್ರತ್ಯಕ್ಷ ಅನುಭವಿಸಿದ್ದಾರೆ. ಇದೀಗ ಹರಿದ್ವಾರ ಕುಂಭದ ವೇಳೆ ವಿಶ್ವದ ಎಲ್ಲಾ ಭಕ್ತರು ಶುದ್ಧ ಗಂಗೆಯಲ್ಲಿ ಸ್ನಾನ ಮಾಡುವ ಅನುಭವ ಪಡೆಯಲಿದ್ದಾರೆ ಮತ್ತು ನಿಟ್ಟಿನಲ್ಲಿ ನಿರಂತರ ಪ್ರಯತ್ನಗಳು ಮುಂದುವರಿದಿವೆ.

ಮಿತ್ರರೇ,

ನಮಾಮಿ ಗಂಗೆ ಯೋಜನೆಯಡಿ ಗಂಗಾ ನದಿಯ ನೂರಾರು ಘಾಟ್ ಗಳನ್ನು ಸುಂದರೀಕರಣಗೊಳಿಸಲಾಗುತ್ತಿದೆ ಮತ್ತು ನದಿ ತಟದಲ್ಲಿ ಗಂಗಾ ವಿಹಾರಗಳನ್ನು ನಿರ್ಮಾಣ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಹರಿದ್ವಾರದ ನದಿ ತಟ ಸಿದ್ಧವಾಗಿದೆ. ಇದೀಗ ಗಂಗಾ ವಸ್ತುಸಂಗ್ರಹಾಲಯ ಸ್ಥಾಪನೆಯಿಂದಾಗಿ ಜಾಗ ಮತ್ತಷ್ಟು ಆಕರ್ಷಕವಾಗಲಿದೆ. ವಸ್ತುಸಂಗ್ರಹಾಲಯ ಹರಿದ್ವಾರಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಗಂಗಾ ನದಿ ಜೊತೆಗಿನ ಪಾರಂಪರಿಕ ಇತಿಹಾಸವನ್ನು ತಿಳಿದುಕೊಳ್ಳಲು ಒಂದು ಮಾಧ್ಯಮವಾಗಲಿದೆ.

ಮಿತ್ರರೇ,

ಇದೀಗ ನಮಾಮಿ ಗಂಗೆ ಅಭಿಯಾನವನ್ನು ಮತ್ತೊಂದು ಹಂತಕ್ಕೆ ಒಯ್ಯಲಾಗುತ್ತಿದೆ. ಗಂಗಾ ನದಿ ಶುದ್ಧೀಕರಣ ಮಾತ್ರವಲ್ಲದೆ, ಗಂಗಾ ನದಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಆರ್ಥಿಕತೆ ಮತ್ತು ಪರಿಸರ ಅಭಿವೃದ್ಧಿಗೂ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಅದಕ್ಕಾಗಿ ಸರ್ಕಾರ ಸಮಗ್ರ ಯೋಜನೆಯನ್ನು ಸಿದ್ಧಪಡಿಸಿದ್ದು, ಉತ್ತರಾಖಂಡ ಸೇರಿದಂತೆ ನದಿ ಪಾತ್ರದ ಎಲ್ಲಾ ರಾಜ್ಯಗಳಲ್ಲಿ ರೈತರಿಗೆ ಸಾವಯವ ಕೃಷಿ ಮತ್ತು ಆಯುರ್ವೇದ ಸಸ್ಯ ಮೂಲಿಕೆಗಳನ್ನು ಬೆಳೆಯಲು ಹಲವು ಅನುಕೂಲಗಳನ್ನು ಕಲ್ಪಿಸಲಾಗುತ್ತಿದೆ. ಗಂಗಾ ನದಿಯ ಎರಡೂ ಕಡೆ ಮರಗಳನ್ನು ನೆಡುವುದಲ್ಲದೆ, ಸಾವಯವ ಕೃಷಿಯ ಕಾರಿಡಾರ್ ಅನ್ನೂ ಸಹ ಅಭಿವೃದ್ಧಿಪಡಿಸಲಾಗುತ್ತಿದೆ. ಯೋಜನೆಗಳು ಗಂಗಾ ನದಿಯನ್ನು ಸುಧಾರಿಸುವುದಲ್ಲದೆ, ಮಿಷನ್ ಡಾಲ್ಫಿನ್ ಯೋಜನೆಯಿಂದ ಇದಕ್ಕೆ ಇನ್ನಷ್ಟು ಒತ್ತು ಸಿಗಲಿದೆ. ಆಗಸ್ಟ್ 15ರಂದು ಡಾಲ್ಫಿನ್ ಯೋಜನೆಯನ್ನು ಪ್ರಕಟಿಸಲಾಯಿತು. ಯೋಜನೆ ಗಂಗಾ ನದಿಯಲ್ಲಿ ಡಾಲ್ಫಿನ್ ಸಂತತಿಯನ್ನು ಹೆಚ್ಚಿಸುವ ಕಾರ್ಯಕ್ಕೆ ಇನ್ನಷ್ಟು ಉತ್ತೇಜನ ನೀಡಲಿದೆ.

ಮಿತ್ರರೇ,

ಇಂದು ದೇಶ ಹಣವನ್ನು ನೀರಿನಂತೆ ಪೋಲು ಮಾಡುವ ಹಾಗೂ ಅದರ ಫಲಿತಾಂಶಗಳು ಕಾಣದಿರುವ ಯುಗದಿಂದ ಹೊರಬಂದಿದೆ. ಇಂದು ಹಣ ನೀರಿನಂತೆ ಹರಿದು ಹೋಗುತ್ತಿಲ್ಲ ಮತ್ತು ಅದು ನೀರಿನಲ್ಲೂ ಉಳಿಯುತ್ತಿಲ್ಲ. ಆದರೆ ನೀರಿಗೆ ಸಂಬಂಧಿಸಿದಂತೆ ಖರ್ಚಾಗುತ್ತಿರುವ ಪ್ರತಿಯೊಂದು ಪೈಸೆಯೂ ವಿನಿಯೋಗವಾಗುತ್ತಿದೆ. ನಮ್ಮ ಪರಿಸ್ಥಿತಿ ಎಂದರೆ ನೀರಿನಂತಹ ಪ್ರಮುಖ ವಿಷಯದ ಕುರಿತು ಸರ್ಕಾರದ ಹಲವು ಸಚಿವಾಲಯಗಳು ಮತ್ತು ಇಲಾಖೆಗಳೊಂದಿಗೆ ವಿಭಜನೆಗೊಂಡಿದೆ. ಎಲ್ಲ ಸಚಿವಾಲಯಗಳ ನಡುವೆ ಯಾವುದೇ ಸಮನ್ವಯ ಇರಲಿಲ್ಲ ಹಾಗೂ ಒಂದೇ ಗುರಿಗಾಗಿ ಕಾರ್ಯನಿರ್ವಹಿಸಲು ಸ್ಪಷ್ಟ ಮಾರ್ಗಸೂಚಿಗಳು ಇರಲಿಲ್ಲ. ಅದರ ಪರಿಣಾಮ ನೀರಾವರಿ ಅಥವಾ ಕುಡಿಯುವ ನೀರಿಗೆ ಸಂಬಂಧಿಸಿದ ಸಮಸ್ಯೆಗಳು ದೇಶದಲ್ಲಿ ನಿರಂತರವಾಗಿ ವಿಫಲವಾಗುತ್ತಿದ್ದವು. ಸುಮ್ಮನೆ ಊಹಿಸಿಕೊಳ್ಳಿ ಸ್ವಾತಂತ್ರ್ಯಾ ನಂತರ ಇಷ್ಟು ವರ್ಷಗಳಾದರೂ ಸುಮಾರು 15 ಕೋಟಿ ಕುಟುಂಬಗಳಿಗೆ ಕೊಳವೆ ಮೂಲಕ ಶುದ್ಧ ಕುಡಿಯುವ ನೀರು ತಲುಪಿರಲಿಲ್ಲ. ಉತ್ತರಾಖಂಡದಲ್ಲೂ ಸಾವಿರಾರು ಮನೆಗಳಲ್ಲೂ ಇಂತಹುದೇ ಸ್ಥಿತಿ ಇತ್ತು. ಗುಡ್ಡಗಾಡಿನ ಗ್ರಾಮಗಳಲ್ಲೂ ಅತ್ಯಂತ ಕಷ್ಟಕರವಾಗಿದ್ದು, ನಮ್ಮ ಸಹೋದರಿಯರು ಮತ್ತು ಪುತ್ರಿಯರು ಕುಡಿಯುವ ನೀರಿನ ವ್ಯವಸ್ಥೆಗಾಗಿ ಸಾಕಷ್ಟು ದೂರ ಕ್ರಮಿಸಿ ಕಷ್ಟಪಡುತ್ತಿದ್ದರು. ಅವರು ತಮ್ಮ ಓದನ್ನೇ ಬಿಟ್ಟುಬಿಡುತ್ತಿದ್ದರು. ಕಷ್ಟಗಳಿಂದ ಹೊರಬರಲು ಜಲಶಕ್ತಿ ಸಚಿವಾಲಯವನ್ನು ಸ್ಥಾಪಿಸಲಾಗಿದ್ದು, ಅದು ನೀರಿಗೆ ಸಂಬಂಧಿಸಿದ ದೇಶದ ಎಲ್ಲ ಸವಾಲುಗಳನ್ನು ಪರಿಹರಿಸಲು ನೆರವಾಗಲಿದೆ.

ಅತ್ಯಲ್ಪ ಅವಧಿಯಲ್ಲೇ ಜಲಶಕ್ತಿ ಸಚಿವಾಲಯ ಪರಿಸ್ಥಿತಿಯನ್ನು ಸೂಕ್ತವಾಗಿ ನಿರ್ವಹಿಸುತ್ತಿರುವುದಕ್ಕೆ ನನಗೆ ಸಂತಸವಾಗುತ್ತಿದೆ. ನೀರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿರುವುದೇ ಅಲ್ಲದೆ ಸಚಿವಾಲಯ, ಇದೀಗ ಪ್ರತಿಯೊಂದು ಮನೆಗೂ, ದೇಶದ ಪ್ರತಿಯೊಂದು ಗ್ರಾಮಕ್ಕೂ ಕುಡಿಯುವ ನೀರು ಒದಗಿಸುವ ಕಾರ್ಯದಲ್ಲಿ ನಿರತವಾಗಿದೆ. ಇಂದು ಜಲಜೀವನ್ ಮಿಷನ್ ಅಡಿಯಲ್ಲಿ ಪ್ರತಿ ದಿನ ಸುಮಾರು ಒಂದು ಲಕ್ಷ ಕುಟುಂಬಗಳಿಗೆ ಶುದ್ಧ ಕುಡಿಯುವ ನೀರಿನ ಸೌಕರ್ಯದ ಸಂಪರ್ಕವನ್ನು ಒದಗಿಸಲಾಗುತ್ತಿದೆ. ಕೇವಲ ಒಂದೇ ವರ್ಷದಲ್ಲಿ ದೇಶದ ಸುಮಾರು 2 ಕೋಟಿಗೂ ಅಧಿಕ ಕುಟುಂಬಗಳಿಗೆ ಶುದ್ಧ ಕುಡಿಯುವ ನೀರಿನ ಸಂಪರ್ಕ ಒದಗಿಸಲಾಗಿದೆ. ಉತ್ತರಾಖಂಡದಲ್ಲಿ ತ್ರಿವೇಂದ್ರ ಜಿ ಮತ್ತು ಅವರ ತಂಡ ಒಂದು ಹೆಜ್ಜೆ ಮುಂದೆ ಹೋಗಿ ಕೇವಲ ಒಂದು ರೂಪಾಯಿಗೆ ನೀರಿನ ಸಂಪರ್ಕ ಒದಗಿಸುತ್ತಿದ್ದಾರೆ. ಉತ್ತರಾಖಂಡ ಸರ್ಕಾರ 2022ರೊಳಗೆ ತನ್ನ ರಾಜ್ಯದ ಪ್ರತಿಯೊಂದು ಕುಟುಂಬಕ್ಕೂ ಕುಡಿಯುವ ನೀರನ್ನು ಒದಗಿಸುವ ಗುರಿಯನ್ನು ಹಾಕಿಕೊಂಡಿರುವುದು ನನಗೆ ಸಂತಸವಾಗುತ್ತಿದೆ. ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲೂ ಅಂದರೆ ಕಳೆದ ನಾಲ್ಕೈದು ತಿಂಗಳಿನಿಂದೀಚೆಗೆ ಉತ್ತರಾಖಂಡದ ಸುಮಾರು 50,000ಕ್ಕೂ ಅಧಿಕ ಕುಟುಂಬಗಳಿಗೆ ಕುಡಿಯುವ ನೀರಿನ ಸಂಪರ್ಕ ಒದಗಿಸಲಾಗಿದೆ ಇದು ಉತ್ತರಾಖಂಡ ಸರ್ಕಾರದ ಬದ್ಧತೆಯನ್ನು ತೋರುತ್ತದೆ.

ಮಿತ್ರರೇ,

ಜಲಜೀವನ್ ಮಿಷನ್ ಕೇವಲ ಗ್ರಾಮಗಳಿಗೆ ಮತ್ತು ಬಡಕುಟುಂಬಗಳಿಗೆ ನೀರು ಒದಗಿಸುವ ಯೋಜನೆಯಲ್ಲ, ಗ್ರಾಮ ಸ್ವರಾಜ್ ಚಿಂತನೆ ಬಲಪಡಿಸಲು ಮತ್ತು ಗ್ರಾಮಗಳ ಸಬಲೀಕರಣ ಉತ್ತೇಜನಕ್ಕೆ ಕೈಗೊಂಡಿರುವ ಅಭಿಯಾನವಾಗಿದೆ. ಇದು ಸರ್ಕಾರದ ಕಾರ್ಯವೈಖರಿಯಲ್ಲಿ ಸಮಗ್ರ ಪರಿವರ್ತನೆಯಾಗಿರುವುದಕ್ಕೆ ಒಂದು ಅತ್ಯುತ್ತಮ ಉದಾಹರಣೆಯಾಗಿದೆ. ಹಿಂದೆ ಬಹುತೇಕ ಸರ್ಕಾರಿ ಯೋಜನೆಗಳು ದೆಹಲಿಯಲ್ಲಿ ರೂಪುಗೊಳ್ಳುತ್ತಿದ್ದವು. ಎಲ್ಲಿ ಟ್ಯಾಂಕ್(ತೊಟ್ಟಿ) ನಿರ್ಮಾಣ ಮಾಡಬೇಕು, ಎಲ್ಲಿ ಕೊಳವೆ ಮಾರ್ಗ ಅಳವಡಿಸಬೇಕು, ಯಾವ ಗ್ರಾಮಗಳು ಮತ್ತಿತರ ವಿಚಾರಗಳಲ್ಲಿ ಬಹುತೇಕ ರಾಜಧಾನಿಗಳಲ್ಲೇ ಕುರಿತು ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿತ್ತು. ಆದರೆ ಇದೀಗ ಜಲಜೀವನ್ ಮಿಷನ್ ಅಡಿಯಲ್ಲಿ ಇಡೀ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದೆ. ಇದೀಗ ನೀರಿಗೆ ಸಂಬಂಧಿಸಿದ ಎಲ್ಲ ನಿರ್ಧಾರಗಳನ್ನು ಗ್ರಾಮಗಳ ಜನರುಗಳೇ ನಿರ್ಧರಿಸುವ ಹಕ್ಕು ನೀಡಲಾಗಿದೆ. ಅಂದರೆ ಗ್ರಾಮಗಳಲ್ಲಿ ಯೋಜನೆಯ ಸ್ಥಳ ನಿಗದಿ, ಸಿದ್ಧತೆ ಮತ್ತಿತರವುಗಳ ಕುರಿತು ಅವರೇ ತೀರ್ಮಾನಿಸುತ್ತಾರೆ. ನೀರಿನ ಯೋಜನೆಗಳ ಒಟ್ಟಾರೆ ಯೋಜನೆ, ನಿರ್ವಹಣೆ ಮತ್ತು ಕಾರ್ಯಾಚರಣೆಯನ್ನು ಗ್ರಾಮ ಪಂಚಾಯಿತಿಗಳು ಮತ್ತು ಜಲ ಸಮಿತಿಗಳೇ ನೋಡಿಕೊಳ್ಳಲಿವೆ. ಜಲ ಸಮಿತಿಗಳಲ್ಲಿ ಶೇಕಡ 50ರಷ್ಟು ಸದಸ್ಯರು ಗ್ರಾಮಗಳ ಸಹೋದರಿಯರು ಮತ್ತು ಪುತ್ರಿಯರು ಇರುವುದನ್ನು ಖಾತ್ರಿಪಡಿಸಲಾಗಿದೆ.

ಮಿತ್ರರೇ,

ಇಂದು ಬಿಡುಗಡೆ ಮಾಡಿರುವ ಮಾರ್ಗಸೂಚಿಗಳು ಪಂಚಾಯಿತಿಗಳಲ್ಲಿನ ಸದಸ್ಯರು ಮತ್ತು ಜಲ ಸಮಿತಿಗಳಲ್ಲಿ ಸದಸ್ಯರಾಗಿರುವ ನಮ್ಮ ಸಹೋದರಿಯರು/ಪುತ್ರಿಯರಿಗೆ ಹೆಚ್ಚಿನ ಅನುಕೂಲವಾಗಲಿದೆ. ನೀರಿಗೆ ಸಂಬಂಧಿಸಿದಂತೆ ನೀರಿನ ಬೆಲೆ ಮತ್ತು ಹೇಗೆ ನೀರನ್ನು ಸೂಕ್ತ ರೀತಿಯಲ್ಲಿ ಮತ್ತು ಬಿಕ್ಕಟ್ಟಿನ ಸಂದರ್ಭಗಳಲ್ಲಿ ಬಳಸಬಹುದು ಎಂಬ ಕುರಿತು ನಮ್ಮ ಸಹೋದರಿಯರು ಮತ್ತು ತಾಯಂದಿರಿಗೆ ಹೊರತಾಗಿ ಇನ್ಯಾರು ಚೆನ್ನಾಗಿ ತಿಳಿದುಕೊಂಡಿರಲು ಸಾಧ್ಯವಿಲ್ಲ ಎಂಬ ಬಲವಾದ ನಂಬಿಕೆ ನನಗಿದೆ. ನೀರಿಗೆ ಸಂಬಂಧಿಸಿದ ಒಟ್ಟಾರೆ ಕಾರ್ಯ ನಮ್ಮ ತಾಯಂದಿರು ಮತ್ತು ಸಹೋದರಿಯರ ಕೈಗೆ ಹೋಗಿರುವುದರಿಂದ ಅವರು ಅತ್ಯಂತ ಸೂಕ್ಷ್ಮ, ಜವಾಬ್ದಾರಿಯಿಂದ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕಾಗಿದೆ ಮತ್ತು ಇದರಿಂದ ಸಕಾರಾತ್ಮಕ ಫಲಿತಾಂಶಗಳನ್ನು ಕಾಣಬಹುದಾಗಿದೆ.

ಅವರು ಗ್ರಾಮಗಳ ಜನರಿಗೆ ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬುದನ್ನು ತೋರಿಸಿ ಕೊಡುತ್ತಾರೆ ಮತ್ತು ನಿರ್ಧಾರಗಳನ್ನು ಕೈಗೊಳ್ಳಲು ನೆರವು ನೀಡುತ್ತಾರೆ. ಜಲಜೀವನ್ ಮಿಷನ್ ಗ್ರಾಮಗಳಲ್ಲಿನ ಜನರು ನೀರಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಹೊರಬರಲು ಒಂದು ಅತ್ಯುತ್ತಮ ಅವಕಾಶವಾಗಿದೆ ಎಂದು ನಾನು ನಂಬಿದ್ದೇನೆ. ಜಲಜೀವನ್ ಮಿಷನ್ ಅಭಿಯಾನದಡಿ ಅಕ್ಟೋಬರ್ 2 ಗಾಂಧಿ ಜಯಂತಿಯಂದು ಮತ್ತೊಂದು ಅಭಿಯಾನವನ್ನು ಆರಂಭಿಸಲಿದೆ ಎಂದು ನಾನು ಕೇಳಿದ್ದೇನೆ. ವಿಶೇಷ ಮೂರು ದಿನಗಳ ಅಭಿಯಾನದಡಿ ದೇಶದ ಪ್ರತಿಯೊಂದು ಅಂಗನವಾಡಿ, ಪ್ರತಿಯೊಂದು ಶಾಲೆಗೂ ಕೊಳವೆ ಮಾರ್ಗದ ಮೂಲಕ ಶುದ್ಧ ಕುಡಿಯುವ ನೀರು ಒದಗಿಸಲಾಗುವುದು. ಅಭಿಯಾನ ಅತ್ಯಂತ ಯಶಸ್ವಿಯಾಗಲಿ ಎಂದು ನಾನು ಬಯಸುತ್ತೇನೆ.

ಮಿತ್ರರೇ,

ನಮಾಮಿ ಗಂಗೆ ಅಭಿಯಾನವಾಗಿರಬಹುದು, ಜಲಜೀವನ್ ಮಿಷನ್ ಅಥವಾ ಸ್ವಚ್ಛ ಭಾರತ್ ಅಭಿಯಾನ ಸೇರಿದಂತೆ ಯಾವುದೇ ಕಾರ್ಯಕ್ರಮಗಳು ಕಳೆದ ಆರು ವರ್ಷಗಳಿಂದೀಚೆಗೆ ಕೈಗೊಂಡಿರುವ ಅತ್ಯಂತ ಪ್ರಮುಖ ಸುಧಾರಣಾ ಕ್ರಮಗಳಾಗಿವೆ. ಸುಧಾರಣೆಗಳು ಸಾಮಾನ್ಯ ಜನರ ಬದುಕಿನಲ್ಲಿ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಲು ಸುಧಾರಣೆಗಳು ನೆರವಾಗಿವೆ. ಕಳೆದ ಒಂದು-ಒಂದೂವರೆ ವರ್ಷಗಳಲ್ಲಿ ಚಟುವಟಿಕೆಗಳು ಮತ್ತಷ್ಟು ಚುರುಕುಗೊಂಡಿವೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಸಂಸತ್ ಅಧಿವೇಶನದಲ್ಲಿ ರೈತರು, ಕೂಲಿ ಕಾರ್ಮಿಕರು ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ವಲಯಗಳಲ್ಲಿ ಮಹತ್ವದ ಸುಧಾರಣೆಗಳನ್ನು ತರಲಾಗಿದೆ. ಸುಧಾರಣೆಗಳೊಂದಿಗೆ ಕಾರ್ಮಿಕರು, ಯುವಕರು, ಮಹಿಳೆಯರು ಮತ್ತು ದೇಶದ ರೈತರನ್ನು ಬಲವರ್ಧನೆಗೊಳಿಸಲಾಗುತ್ತಿದೆ. ಆದರೆ ಇಂದು ದೇಶದಲ್ಲಿ ಕೆಲವರು ಪ್ರತಿಭಟನೆ ಮಾಡುವ ಸಲುವಾಗಿಯೇ ಕೇವಲ ಪ್ರತಿಭಟನೆಗಳಲ್ಲಿ ತೊಡಗಿರುವುದನ್ನು ನಾವು ಕಾಣುತ್ತಿದ್ದೇವೆ.

ಮಿತ್ರರೇ,

ಕೆಲವು ದಿನಗಳ ಹಿಂದೆ ದೇಶದಲ್ಲಿ ರೈತರನ್ನು ಹಲವು ಸಂಕೋಲೆಗಳಿಂದ ಮುಕ್ತಗೊಳಿಸಿದೆವು. ಇದೀಗ ರೈತರು ತಮ್ಮ ಉತ್ಪನ್ನಗಳನ್ನು ಯಾರಿಗೆ ಬೇಕಾದರೂ, ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ಆದರೆ ಇಂದು ಕೇಂದ್ರ ಸರ್ಕಾರ ರೈತರಿಗೆ ತಮ್ಮ ಹಕ್ಕುಗಳನ್ನು ನೀಡುತ್ತಿದೆ. ಆದರೆ ಕೆಲವು ಜನರು ಪ್ರತಿಭಟನೆಗಳನ್ನು ಆರಂಭಿಸಿದ್ದಾರೆ. ಪ್ರತಿಭಟನಾ ನಿರತ ಜನರಿಗೆ ದೇಶದ ರೈತರು ಮುಕ್ತ ಮಾರುಕಟ್ಟೆಗಳಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವುದು ಬೇಕಾಗಿಲ್ಲ. ಜನರು ರೈತರ ವಾಹನಗಳನ್ನು ನಿರಂತರವಾಗಿ ಜಪ್ತಿಯಾಗಲಿ ಎಂದು ಬಯಸುತ್ತಿದ್ದಾರೆ ಮತ್ತು ರೈತರು ಸತತ ವಂಚನೆಗೊಳಗಾಗಬೇಕು, ಕಡಿಮೆ ಬೆಲೆಗೆ ಧಾನ್ಯಗಳನ್ನು ಖರೀದಿಸಿ ಮಧ್ಯವರ್ತಿಗಳು ಲಾಭ ಮಾಡಿಕೊಳ್ಳಬೇಕು ಎಂದು ಬಯಸುತ್ತಿದ್ದಾರೆ. ರೈತರ ಸ್ವಾತಂತ್ರ್ಯವನ್ನು ಅವರು ವಿರೋಧಿಸುತ್ತಿದ್ದಾರೆ. ಜನರು ತಾವು ಪೂಜಿಸುವುದಕ್ಕೆ ಇನ್ನಷ್ಟು ಪ್ರಚೋದನೆ ನೀಡಿ ರೈತರಿಗೆ ಅಪಮಾನ ಮಾಡುತ್ತಿದ್ದಾರೆ.

ಮಿತ್ರರೇ,

ಹಲವು ವರ್ಷಗಳಿಂದ ಜನರು ನಾವು ಎಂ ಎಸ್ ಪಿ ಜಾರಿಗೊಳಿಸುತ್ತೇವೆ ಎಂದು ಹೇಳಿಕೊಂಡು ಬರುತ್ತಿದ್ದರು. ಆದರೆ ಮಾಡಲೇ ಇಲ್ಲ. ನಮ್ಮ ಸರ್ಕಾರ ಸ್ವಾಮಿನಾಥನ್ ಆಯೋಗದ ಶಿಫಾರಸ್ಸಿನಂತೆ ಕನಿಷ್ಠ ಬೆಂಬಲ ಬೆಲೆ(ಎಂ ಎಸ್ ಪಿ) ನೀಡುವುದನ್ನು ಜಾರಿಗೊಳಿಸಿದೆ. ಆದರೆ ಜನರು ಎಂ ಎಸ್ ಪಿ ಕುರಿತಂತೆ ರೈತರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ದೇಶದಲ್ಲಿ ಕೇವಲ ಎಂ ಎಸ್ ಪಿ ಮಾತ್ರವಲ್ಲ, ರೈತರು ಯಾವುದೇ ಸ್ಥಳದಲ್ಲಿ ಬೇಕಾದರೂ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಸ್ವಾತಂತ್ರ್ಯ ಪಡೆಯಲಿದ್ದಾರೆ. ರೈತರಿಗೆ ಸ್ವಾತಂತ್ರ್ಯ ನೀಡುವ ಕ್ರಮವನ್ನು ಕೆಲವು ಜನರಿಗೆ ಸಹಿಸಿಕೊಳ್ಳಲಾಗುತ್ತಿಲ್ಲ. ಅವರಿಗೆ ಸ್ವಲ್ಪ ಸಮಸ್ಯೆಯಾಗಿದೆ. ಏಕೆಂದರೆ ಕಪ್ಪು ಹಣದ ಮೂಲಕ ಅವರು ಮಾಡುತ್ತಿದ್ದ ಗಳಿಕೆ ನಿಂತುಹೋಗಿದೆ.

ಮಿತ್ರರೇ,

ಕೊರೊನಾ ಅವಧಿಯಲ್ಲಿ ಹೇಗೆ ಡಿಜಿಟಲ್ ಇಂಡಿಯಾ ಅಭಿಯಾನ ಬೆಳವಣಿಗೆಯಾಯಿತು ಎಂಬುದನ್ನು ನಾವು ಕಂಡಿದ್ದೇವೆ. ಜನಧನ್ ಬ್ಯಾಂಕ್ ಖಾತೆಗಳು ಮತ್ತು ರುಪೆ ಕಾರ್ಡ್ ಜನರಿಗೆ ನೆರವಾಗಿದೆ. ಆದರೆ ನಮ್ಮ ಸರ್ಕಾರ ಕಾರ್ಯಾರಂಭ ಮಾಡಿದ ವೇಳೆ ಹೇಗೆ ಜನರು ಅದನ್ನು ವಿರೋಧಿಸಿದರು ಎಂಬುದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು. ಅವರ ಕಣ್ಣಿನಲ್ಲಿ ದೇಶದ ಬಡವರು, ಗ್ರಾಮಗಳಲ್ಲಿನ ಜನರು, ಅನಕ್ಷರಸ್ಥರು ಮತ್ತು ಸಂಪೂರ್ಣ ಮುಗ್ಧರು ಎಂಬುದು. ಜನರು ದೇಶದಲ್ಲಿ ಬಡಜನರಿಗೆ ಬ್ಯಾಂಕ್ ಖಾತೆಗಳನ್ನು ತೆರೆಯುವ ಚಿಂತನೆಯನ್ನು ಸದಾ ವಿರೋಧಿಸುತ್ತಿದ್ದರು ಅಥವಾ ಬಡವರು ಡಿಜಿಟಲ್ ವಹಿವಾಟಿನಲ್ಲಿ ತೊಡಗುವುದನ್ನು ವಿರೋಧಿಸಿದ್ದರು.

ಮಿತ್ರರೇ,

ಜನರು ಒಂದು ರಾಷ್ಟ್ರಒಂದು ತೆರಿಗೆಜಿ ಎಸ್ ಟಿ ಪರಿಕಲ್ಪನೆಯನ್ನು ವಿರೋಧಿಸಿದ್ದನ್ನು ಇಡೀ ದೇಶ ಕಂಡಿದೆ. ಜಿ ಎಸ್ ಟಿ ಯಿಂದಾಗಿ ದೇಶದಲ್ಲಿ ಗೃಹ ಬಳಕೆ ಸರಕುಗಳ ಮೇಲಿನ ತೆರಿಗೆ ಗಣನೀಯವಾಗಿ ತಗ್ಗಿದೆ. ಬಹುತೇಕ ಗೃಹಬಳಕೆ ಮತ್ತು ಅಡುಗೆಗೆ ಅಗತ್ಯವಿರುವ ವಸ್ತುಗಳ ಮೇಲಿನ ತೆರಿಗೆ ಒಂದು ಶೇಕಡ ಸೊನ್ನೆಯಷ್ಟಿದೆ ಅಥವಾ ಶೇಕಡ ಐದಕ್ಕಿಂತ ಕಡಿಮೆ ಇದೆ. ಮೊದಲು ಅವುಗಳಿಗೆ ಹೆಚ್ಚಿನ ತೆರಿಗೆ ವಿಧಿಸಲಾಗುತ್ತಿತ್ತು ಹಾಗಾಗಿ ಜನರು ತಮ್ಮ ಜೇಬಿನಿಂದ ಹೆಚ್ಚಿನ ಹಣ ಖರ್ಚು ಮಾಡಬೇಕಾಗಿತ್ತು. ಆದರೆ ನೀವೇ ನೋಡಿ ಜನರಿಗೆ ಜಿ ಎಸ್ ಟಿಯಲ್ಲೂ ಕೆಲವು ಸಮಸ್ಯೆಗಳಿವೆ ಎನ್ನುತ್ತಾರೆ. ಅವರು ನಗೆಯಾಡುತ್ತಿದ್ದಾರೆ ಮತ್ತು ಅದನ್ನು ವಿರೋಧಿಸುತ್ತಿದ್ದಾರೆ.

ಮಿತ್ರರೇ,

ಜನರು ಅತ್ತ ರೈತರ ಪರವೂ ಅಲ್ಲ, ಇತ್ತ ಯುವಕರ ಪರವೂ ಅಲ್ಲ, ಯೋಧರ ಪರವೂ ಅಲ್ಲ. ನೀವು ನೆನಪಿಸಿಕೊಳ್ಳಿ ನಮ್ಮ ಸರ್ಕಾರ ಒಂದು ಶ್ರೇಣಿ ಒಂದು ಪಿಂಚಣಿ ಯೋಜನೆ ಜಾರಿಗೆ ತಂದಾಗ ಉತ್ತರಾಖಂಡದ ಸಾವಿರಾರು ಮಾಜಿ ಯೋಧರಿಗೆ ತಮ್ಮ ಹಕ್ಕುಗಳು ದೊರೆತವು. ಸಮಯದಲ್ಲೂ ಸಹ ಜನರು ಪ್ರತಿಭಟನೆಯಲ್ಲಿ ತೊಡಗಿದ್ದರು. ಒಂದು ಶ್ರೇಣಿ ಒಂದು ಪಿಂಚಣಿ ಯೋಜನೆ ಜಾರಿಯಾದಾಗಿನಿಂದ ಸರ್ಕಾರ ಸುಮಾರು 11 ಸಾವಿರ ಕೋಟಿ ರೂಪಾಯಿಗಳನ್ನು ನಿವೃತ್ತ ಯೋಧರಿಗೆ ನೀಡಿದೆ. ಉತ್ತರಾಖಂಡದಲ್ಲೂ ಸಹ ಯೋಜನೆಯಿಂದ ಒಂದು ಲಕ್ಷ ನಿವೃತ್ತ ಯೋಧರಿಗೆ ಅನುಕೂಲವಾಗಿದೆ ಒಂದು ಶ್ರೇಣಿ ಒಂದು ಪಿಂಚಣಿ ಯೋಜನೆ ಜಾರಿಯಲ್ಲೂ ಸಹ ಜನರು ಸದಾ ಸಮಸ್ಯೆಗಳನ್ನು ಹುಡುಕುತ್ತಿದ್ದಾರೆ. ಜನರೂ ಕೂಡ ಒಂದು ಶ್ರೇಣಿ ಒಂದು ಪಿಂಚಣಿ ಯೋಜನೆಯನ್ನು ವಿರೋಧಿಸಿದ್ದರು.

ಮಿತ್ರರೇ,

ಜನರು ದೇಶದ ಶಕ್ತಿಗಳನ್ನು, ದೇಶದ ವಾಯುಪಡೆಯನ್ನು ಬಲವರ್ಧನೆಗೊಳಿಸಲು ಯಾವ ಕೆಲಸವನ್ನೂ ಮಾಡಲಿಲ್ಲ. ವಾಯುಪಡೆ ಆಧುನಿಕ ಯುದ್ಧ ವಿಮಾನಗಳ ಅಗತ್ಯತೆ ಇದೆ ಎಂದು ಸದಾ ಹೇಳುತ್ತಲೇ ಇತ್ತು. ಆದರೆ ಜನರು ವಾಯುಪಡೆಯ ಬೇಡಿಕೆಯನ್ನು ಸದಾ ನಿರ್ಲಕ್ಷಿಸುತ್ತಲೇ ಬಂದರು. ನಮ್ಮ ಸರ್ಕಾರ ರಫೇಲ್ ಯುದ್ಧ ವಿಮಾನ ಖರೀದಿಗೆ ಫ್ರೆಂಚ್ ಸರ್ಕಾರದೊಂದಿಗೆ ನೇರವಾಗಿ ಒಪ್ಪಂದಕ್ಕೆ ಸಹಿ ಹಾಕಿದ ಕೂಡಲೇ, ಜನರು ಮತ್ತೆ ಧ್ವನಿ ಎತ್ತತೊಡಗಿದರು. ರಫೇಲ್ ಅನ್ನು ಭಾರತೀಯ ವಾಯುಪಡೆಗೆ ಸೇರ್ಪಡೆ ಮಾಡಿಕೊಳ್ಳಲಾಗಿದ್ದು, ಅವು ಭಾರತೀಯ ವಾಯುಪಡೆಯ ಸಾಮರ್ಥ್ಯವನ್ನು ಹೆಚ್ಚಳ ಮಾಡಿವೆ. ಆದರೂ ಅವರು ಅದನ್ನು ವಿರೋಧಿಸುತ್ತಿದ್ದಾರೆ. ಇಂದು ರಫೇಲ್ ಭಾರತೀಯ ವಾಯುಪಡೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತಿದೆ ಎಂಬುದನ್ನು ಹೇಳಲು ನನಗೆ ಹರ್ಷವಾಗುತ್ತಿದೆ. ಅವು ಅಂಬಾಲದಿಂದ ಲೇಹ್ ವರೆಗೆ ಹಾರಾಡಿದ್ದು ನಮ್ಮ ಭಾರತೀಯ ದಿಟ್ಟ ಯೋಧರ ಹೃದಯಗಳನ್ನು ಉತ್ತೇಜಿಸಿದೆ.

ಮಿತ್ರರೇ,

ನಾಲ್ಕು ವರ್ಷಗಳ ಹಿಂದೆ ದೇಶದ ದಿಟ್ಟ ಯೋಧರು ಲಕ್ಷ್ಯ ಕೇಂದ್ರಿತ ದಾಳಿಗಳನ್ನು ನಡೆಸಿ, ಉಗ್ರರ ನೆಲೆಗಳನ್ನು ದ್ವಂಸಗೊಳಿಸಿದ್ದರು. ನಮ್ಮ ಯೋಧರ ಧೈರ್ಯವನ್ನು ಪ್ರಶಂಸಿಸುವ ಬದಲಿಗೆ ಜನರು ಲಕ್ಷ್ಯ ಕೇಂದ್ರಿತ ದಾಳಿಗೆ ಸಾಕ್ಷ್ಯಗಳನ್ನು ಕೇಳಿದರು. ಅಲ್ಲದೆ ಲಕ್ಷ್ಯ ಕೇಂದ್ರಿತ ದಾಳಿಗಳನ್ನು ವಿರೋಧಿಸಿ ಜನರು ದೇಶದ ಮುಂದೆ ತಮ್ಮ ನಿಜವಾದ ಬಣ್ಣಗಳನ್ನು ಮತ್ತು ಉದ್ದೇಶಗಳನ್ನು ತಮಗೆ ತಾವೇ ಬಯಲು ಮಾಡಿಕೊಂಡರು. ದೇಶಕ್ಕಾಗಿ ಏನೇ ಮಾಡಿದರು ಅದಕ್ಕೆಲ್ಲಾ ವಿರೋಧ ವ್ಯಕ್ತಪಡಿಸುವುದು ಜನರಿಗೆ ಹವ್ಯಾಸವಾಗಿಬಿಟ್ಟಿದೆ. ಅವರು ಅನುಸರಿಸುತ್ತಿರುವ ಏಕೈಕ ರಾಜಕೀಯ ಕಾರ್ಯತಂತ್ರವೆಂದರೆ ಅದು ವಿರೋಧಿಸುವುದು. ಭಾರತ ಕೈಗೊಂಡ ಕ್ರಮದಿಂದಾಗಿ ಇಡೀ ವಿಶ್ವ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸುತ್ತಿದೆ. ಆದರೆ ಭಾರತದಲ್ಲಿನ ಜನರು ಅದನ್ನೂ ವಿರೋಧಿಸಿದ್ದರು ಎಂಬುದು ನೆನಪಿನಲ್ಲಿರಲಿ. ದೇಶದ ನೂರಾರು ಪ್ರಾಂತ್ಯಗಳನ್ನು ಒಗ್ಗೂಡಿಸುವ ಐತಿಹಾಸಿಕ ಕೆಲಸ ಮಾಡಿದ ಸರ್ದಾರ್ ವಲ್ಲಭಭಾಯ್ ಪಟೇಲರ ವಿಶ್ವದ ಅತಿದೊಡ್ಡ ಪ್ರತಿಮೆಯನ್ನು ಉದ್ಘಾಟಿಸಿದಾಗಲೂ ಜನರು ಅದನ್ನು ವಿರೋಧಿಸಿದ್ದರು. ಈವರೆಗೆ ಯಾವುದೇ ಪ್ರಮುಖ ನಾಯಕರು ಏಕತಾ ಮೂರ್ತಿಯ ಸ್ಥಳಕ್ಕೆ ಭೇಟಿ ನೀಡಿಲ್ಲ. ಅದೇಕೆ ಎಂದರೆ ಅವರು ಅದನ್ನು ವಿರೋಧಿಸುತ್ತಿರುವುದು.

ಮಿತ್ರರೇ,

ಬಡವರಿಗೆ ಶೇ.10ರಷ್ಟು ಮೀಸಲು ನೀಡಲು ನಿರ್ಧರಿಸಿದಾಗಲೂ ಅವರು ಅದನ್ನು ವಿರೋಧಿಸಿದ್ದರು. ನವೆಂಬರ್ 26ಅನ್ನು ಸಂವಿಧಾನ ದಿನವನ್ನಾಗಿ ಆಚರಿಸಲು ನಿರ್ಧರಿಸಿದಾಗಲೂ ಅವರು ವಿರೋಧಿಸಿದ್ದರು. ಅವರು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನೂ ಸಹ ವಿರೋಧಿಸಿದ್ದರು. ಮಿತ್ರರೇ, ಕಳೆದ ಜುಲೈ ತಿಂಗಳಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಜನರು ಮೊದಲು ಸುಪ್ರೀಂಕೋರ್ಟ್ ನಲ್ಲಿ ರಾಮಮಂದಿರ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದರು ಮತ್ತು ಆನಂತರ ಭೂಮಿ ಪೂಜಾ ಕಾರ್ಯಕ್ರಮಕ್ಕೂ ಸಹ ವಿರೋಧ ವ್ಯಕ್ತಪಡಿಸಿದ್ದರು. ಪ್ರತಿಯೊಂದು ದಿನವೂ ಜನರು ಒಂದಲ್ಲಾ ಒಂದು ಕಾರಣಕ್ಕೆ ಪ್ರತಿಭಟನೆಗಳನ್ನು ನಡೆಸುತ್ತಲೇ ಇದ್ದಾರೆ. ಅವರು ಹತಾಶರಾಗಿ, ಬಸವಳಿದು ಚಡಪಡಿಸುತ್ತಿದ್ದಾರೆ. ಕುಟುಂಬದ ಪಕ್ಷ ನಾಲ್ಕು ತಲೆಮಾರು ದೇಶದ ಆಳ್ವಿಕೆ ನಡೆಸಿದೆ. ಇಂದು ಅವರು ತಮ್ಮ ಸ್ವಾರ್ಥ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಇತರೆಯವರನ್ನು ಮುಂದಿಟ್ಟುಕೊಂಡು ಹೋರಾಡುತ್ತಿದ್ದಾರೆ ಮತ್ತು ರಾಷ್ಟ್ರೀಯ ಹಿತಾಸಕ್ತಿಗೆ ಸಂಬಂಧಿಸಿದ ಪ್ರತಿಯೊಂದಕ್ಕೂ ವಿರೋಧಿಸುತ್ತಿದ್ದಾರೆ.

ಮಿತ್ರರೇ,

ನಮ್ಮ ದೇಶದಲ್ಲಿ ಹಲವು ಸಣ್ಣ ಪಕ್ಷಗಳು ಇವೆ. ಅವುಗಳಿಗೆ ಅಧಿಕಾರಕ್ಕೇರಲೂ ಎಂದೂ ಅವಕಾಶಗಳು ಸಿಗುವುದಿಲ್ಲ. ಅವುಗಳು ಸ್ಥಾಪನೆಯಾದಾಗಿನಿಂದ ಬಹುತೇಕ ವಿರೋಧ ಪಕ್ಷಗಳಲ್ಲೇ ಕಾಲ ಕಳೆಯುತ್ತಿವೆ. ಇಷ್ಟು ವರ್ಷಗಳ ಕಾಲ ಪ್ರತಿಪಕ್ಷಗಳ ಸ್ಥಾನದಲ್ಲಿದ್ದರೂ, ಅವರೆಂದೂ ದೇಶವನ್ನು ವಿರೋಧಿಸಿಲ್ಲ ಅಥವಾ ದೇಶದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸಿಲ್ಲ. ಆದರೆ ಕೆಲವು ವರ್ಷಗಳಿಂದ ಪ್ರತಿಪಕ್ಷದ ಸ್ಥಾನದಲ್ಲಿರುವ ಜನರು ಅದನ್ನು ವಿರೋಧಿಸುತ್ತಿದ್ದಾರೆ. ದೇಶ ಇಂದು ಅವರ ಕಾರ್ಯತಂತ್ರ ಮತ್ತು ನಡವಳಿಕೆಯನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುತ್ತಿದೆ. ಅವರ ಸ್ವಾರ್ಥದ ಉದ್ದೇಶಗಳು ಅರ್ಥಮಾಡಿಕೊಳ್ಳಬೇಕು. ಸ್ವಾವಲಂಬಿ ಭಾರತದ ನಿರ್ಮಾಣದ ಸುಧಾರಣೆಗಳನ್ನು ಅರ್ಥ ಮಾಡಿಕೊಳ್ಳಬೇಕು. ದೇಶದ ಸಂಪನ್ಮೂಲಗಳನ್ನು ವೃದ್ಧಿಗೊಳಿಸಬೇಕು, ದೇಶವನ್ನು ಬಡತನದಿಂದ ನಿರ್ಮೂಲನೆ ಮಾಡಬೇಕು ಮತ್ತು ದೇಶವನ್ನು ಬಲಿಷ್ಠಗೊಳಿಸುವ ಕಾರ್ಯ ಮುಂದುವರಿಯಲಿದೆ.

ಮತ್ತೊಮ್ಮೆ ಎಲ್ಲ ಅಭಿವೃದ್ಧಿ ಯೋಜನೆಗಳಿಗಾಗಿ ನಾನು ನಿಮ್ಮೆಲ್ಲರಿಗೂ ಹೃದಯಪೂರ್ವಕವಾಗಿ ಅಭಿನಂದನೆಗಳನ್ನು ಹೇಳಲು ಬಯಸುತ್ತೇನೆ.

ಮತ್ತೊಮ್ಮೆ ನಾನು ನೀವೆಲ್ಲರೂ ಅತ್ಯಂತ ಜಾಗರೂಕತೆಯಿಂದಿರಿ ಎಂದು ಹೇಳಲು ಬಯಸುತ್ತೇನೆ, ಆರೋಗ್ಯದಿಂದಿರಿ ಮತ್ತು ಸುರಕ್ಷಿತವಾಗಿರಿ. ಬಾಬಾ ಕೇದಾರ್ ಆಶೀರ್ವಾದ ನಮ್ಮೆಲ್ಲರ ಮೇಲಿರಲಿ.

ತುಂಬಾ ಧನ್ಯವಾದಗಳು, ಜೈ ಗಂಗೆ… !

***



(Release ID: 1660340) Visitor Counter : 209