ಚುನಾವಣಾ ಆಯೋಗ
ಕರ್ನಾಟಕದ ಶಿರಾ ಹಾಗು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ಸೇರಿದಂತೆ ಇತರೆ ರಾಜ್ಯಗಳ 56 ವಿಧಾನಸಭಾ ಕ್ಷೇತ್ರಗಳು ಹಾಗೂ ಬಿಹಾರದ ಒಂದು ಲೋಕಸಭಾ ಕ್ಷೇತ್ರದ ಉಪಚುನಾವಣಾ ವೇಳಾಪಟ್ಟಿ ಪ್ರಕಟ
Posted On:
29 SEP 2020 3:38PM by PIB Bengaluru
ಕೇಂದ್ರ ಚುನಾವಣಾ ಆಯೋಗ ಕರ್ನಾಟಕದ ಶಿರಾ, ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಗಳನ್ನು ಸೇರಿದಂತೆ ನಾನಾ ರಾಜ್ಯಗಳ 56 ವಿಧಾನಸಭಾ ಕ್ಷೇತ್ರಗಳು ಹಾಗೂ ಬಿಹಾರದ ಒಂದು ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆಯನ್ನು ನವೆಂಬರ್ 3 ರಂದು ನಡೆಸಲಿದ್ದು ನವೆಂಬರ್ 10 ರಂದು ಮತ ಎಣಿಕೆ ಜರುಗಲಿದೆ. ಆ ಕುರಿತಂತೆ ವೇಳಾಪಟ್ಟಿಯನ್ನು ಪ್ರಕಟಿಸಿಲಾಗಿದ್ದು, ವಿವರ ಈ ಕೆಳಗಿನಂತಿದೆ:
ಕ್ರ.ಸಂ.
|
ರಾಜ್ಯ
|
ಸಂಖ್ಯೆ ಮತ್ತು ಲೋಕಸಭಾ ಕ್ಷೇತ್ರದ ಹೆಸರು
|
1.
|
ಬಿಹಾರ
|
1-ವಾಲ್ಮೀಕಿ ನಗರ
|
ಕ್ರ.ಸಂ.
|
ರಾಜ್ಯ
|
ಸಂಖ್ಯೆ ಮತ್ತು ವಿಧಾನಸಭಾ ಕ್ಷೇತ್ರದ ಹೆಸರು
|
-
|
ಛತ್ತೀಸ್ ಗಢ
|
24-ಮರ್ವಾಹಿ(ಎಸ್ ಟಿ)
|
-
|
ಗುಜರಾತ್
|
01-ಅಬ್ದಾಸ
|
-
|
ಗುಜರಾತ್
|
61-ಲಿಬ್ಡಿ
|
-
|
ಗುಜರಾತ್
|
65-ಮೊರ್ವಿ
|
-
|
ಗುಜರಾತ್
|
94-ಧಾರಿ
|
-
|
ಗುಜರಾತ್
|
106- ಗಡ್ಹದಾ(ಎಸ್ ಸಿ)
|
-
|
ಗುಜರಾತ್
|
147-ಕರ್ಜಾನ್
|
-
|
ಗುಜರಾತ್
|
173- ದಂಗ್ಸ್ (ಎಸ್ ಟಿ)
|
-
|
ಗುಜರಾತ್
|
181-ಕಪರ್ದಾ(ಎಸ್ ಟಿ)
|
-
|
ಹರಿಯಾಣ
|
33-ಬರೋಡಾ
|
-
|
ಜಾರ್ಖಂಡ್
|
10-ದುಮ್ಕಾ(ಎಸ್ ಟಿ)
|
-
|
ಜಾರ್ಖಂಡ್
|
35- ಬೆರ್ಮೊ
|
-
|
ಕರ್ನಾಟಕ
|
136-ಶಿರಾ
|
-
|
ಕರ್ನಾಟಕ
|
154-ರಾಜರಾಜೇಶ್ವರಿನಗರ
|
-
|
ಮಧ್ಯಪ್ರದೇಶ
|
04-ಜೌರಾ
|
-
|
ಮಧ್ಯಪ್ರದೇಶ
|
5-ಸುಮವಾಲಿ
|
-
|
ಮಧ್ಯಪ್ರದೇಶ
|
6-ಮೊರೆನಾ
|
-
|
ಮಧ್ಯಪ್ರದೇಶ
|
7-ದಿಮಾನಿ
|
-
|
ಮಧ್ಯಪ್ರದೇಶ
|
8-ಅಂಭಾ(ಎಸ್ ಸಿ)
|
-
|
ಮಧ್ಯಪ್ರದೇಶ
|
12-ಮೇಘಾನ್
|
-
|
ಮಧ್ಯಪ್ರದೇಶ
|
13-ಗೊಹಾಡ್(ಎಸ್ ಸಿ)
|
-
|
ಮಧ್ಯಪ್ರದೇಶ
|
15-ಗ್ವಾಲಿಯರ್
|
-
|
ಮಧ್ಯಪ್ರದೇಶ
|
16-ಗ್ವಾಲಿಯರ್ ಪೂರ್ವ
|
-
|
ಮಧ್ಯಪ್ರದೇಶ
|
19-ದಬ್ರಾ(ಎಸ್ ಸಿ)
|
-
|
ಮಧ್ಯಪ್ರದೇಶ
|
21-ಭಂದೇರ್(ಎಸ್ ಸಿ)
|
-
|
ಮಧ್ಯಪ್ರದೇಶ
|
23-ಕರೇರಾ(ಎಸ್ ಸಿ)
|
-
|
ಮಧ್ಯಪ್ರದೇಶ
|
24-ಪೊಹರಿ
|
-
|
ಮಧ್ಯಪ್ರದೇಶ
|
28-ಬಮೊರಿ
|
-
|
ಮಧ್ಯಪ್ರದೇಶ
|
32-ಅಶೋಕ್ ನಗರ(ಎಸ್ ಸಿ)
|
-
|
ಮಧ್ಯಪ್ರದೇಶ
|
34-ಮುಂಗೋಲಿ
|
-
|
ಮಧ್ಯಪ್ರದೇಶ
|
37-ಸುರ್ಖಿ
|
-
|
ಮಧ್ಯಪ್ರದೇಶ
|
53- ಮಲ್ಹಾರ
|
-
|
ಮಧ್ಯಪ್ರದೇಶ
|
87-ಅನುಪ್ಪೂರ್(ಎಸ್ ಟಿ)
|
-
|
ಮಧ್ಯಪ್ರದೇಶ
|
142-ಸಾಂಚಿ(ಎಸ್ ಸಿ)
|
-
|
ಮಧ್ಯಪ್ರದೇಶ
|
161-ಬೈಯೋರಾ
|
-
|
ಮಧ್ಯಪ್ರದೇಶ
|
166-ಅಗರ್(ಎಸ್ ಸಿ)
|
-
|
ಮಧ್ಯಪ್ರದೇಶ
|
172-ಹಟ್ ಪಿಪ್ಲಿಯಾ
|
-
|
ಮಧ್ಯಪ್ರದೇಶ
|
175-ಮಂಧಾತ
|
-
|
ಮಧ್ಯಪ್ರದೇಶ
|
179-ನೇಪಾನಗರ್(ಎಸ್ ಟಿ)
|
-
|
ಮಧ್ಯಪ್ರದೇಶ
|
202-ಬದ್ನಾವರ್
|
-
|
ಮಧ್ಯಪ್ರದೇಶ
|
211-ಸನ್ವೇರ್(ಎಸ್ ಸಿ)
|
-
|
ಮಧ್ಯಪ್ರದೇಶ
|
226-ಸುವಾಸ್ರ
|
-
|
ಮಣಿಪುರ
|
30-ಲಿಲೋಂಗ್
|
-
|
ಮಣಿಪುರ
|
34-ವಾಂಗ್ ಜಿಂಗ್ ತೆಂತ
|
-
|
ನಾಗಾಲ್ಯಾಂಡ್
|
14-ಸದರನ್ ಅನ್ ಗಮಿ-I (ಎಸ್ ಟಿ)
|
-
|
ನಾಗಾಲ್ಯಾಂಡ್
|
60-ಪುಂಗ್ರೊ-ಕಿಫೈರ್ (ಎಸ್ ಟಿ)
|
-
|
ಒಡಿಶಾ
|
38-ಬಾಲ್ಸೋರ್
|
-
|
ಒಡಿಶಾ
|
102-ತಿರ್ ಟೋಲ್(ಎಸ್ ಸಿ)
|
-
|
ತೆಲಂಗಾಣ
|
41-ದುಬ್ಬಕ್
|
-
|
ಉತ್ತರ ಪ್ರದೇಶ
|
40- ನೌಗಾವನ್ ಸಾದತ್
|
-
|
ಉತ್ತರ ಪ್ರದೇಶ
|
65-ಬುಲೆಂದರ್ ಶಹರ್
|
-
|
ಉತ್ತರ ಪ್ರದೇಶ
|
95-ತುಂಡ್ಲಾ(ಎಸ್ ಸಿ)
|
-
|
ಉತ್ತರ ಪ್ರದೇಶ
|
162- ಬಂಗೇರುಮಾವು
|
-
|
ಉತ್ತರ ಪ್ರದೇಶ
|
218-ಘಟಂಪುರ್(ಎಸ್ ಸಿ)
|
-
|
ಉತ್ತರ ಪ್ರದೇಶ
|
337- ದಿಯೋರಿಯಾ
|
-
|
ಉತ್ತರ ಪ್ರದೇಶ
|
367-ಮಲ್ಹಾನಿ
|
ಸ್ಥಳೀಯ ಹಬ್ಬಗಳು, ಹವಾಮಾನ ಸ್ಥಿತಿಗತಿ ಸೇನಾಪಡೆಗಳ ಸಂಚಾರ, ಸಾಂಕ್ರಾಮಿಕ ಮತ್ತಿತರ ಎಲ್ಲಾ ಅಂಶಗಳನ್ನು ಪರಿಗಣಿಸಿದ ನಂತರ ಆಯೋಗ ಈ ಕೆಳಕಂಡ ವೇಳಾಪಟ್ಟಿಯಂತೆ ಖಾಲಿ ಇರುವ ಹುದ್ದೆಗಳ ಭರ್ತಿಗೆ ಉಪಚುನಾವಣೆಗಳನ್ನುನಡೆಸಲು ನಿರ್ಧರಿಸಿದೆ.
ಚುನಾವಣಾ ವೇಳಾಪಟ್ಟಿ
|
ನಾನಾ ರಾಜ್ಯಗಳ 54 ವಿಧಾನಸಭಾ ಕ್ಷೇತ್ರಗಳ ಉಪಚುನಾವಣಾ ವೇಳಾಪಟ್ಟಿ (ಮಣಿಪುರ ಹೊರತುಪಡಿಸಿ)
|
ಬಿಹಾರದ ಒಂದು ಲೋಕಸಭಾ ಕ್ಷೇತ್ರ ಮತ್ತು ಮಣಿಪುರದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ವೇಳಾಪಟ್ಟಿ
|
ಚುನಾವಣಾ ಅಧಿಸೂಚನೆ ಗೆಜೆಟ್ ಪ್ರಕಟ ದಿನಾಂಕ
|
09.10.2020
(ಶುಕ್ರವಾರ)
|
13.10.2020
(ಮಂಗಳವಾರ)
|
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ
|
16.10.2020
(ಶುಕ್ರವಾರ)
|
20.10.2020
(ಮಂಗಳವಾರ)
|
ನಾಮಪತ್ರಗಳ ಪರಿಶೀಲನೆ ದಿನಾಂಕ
|
17.10.2020
(ಶನಿವಾರ)
|
21.10.2020
(ಬುಧವಾರ)
|
ನಾಮಪತ್ರಗಳ ವಾಪಸಾತಿಗೆ ಕೊನೆಯ ದಿನ
|
19.10.2020
(ಸೋಮವಾರ)
|
23.10.2020
(ಶುಕ್ರವಾರ)
|
ಮತದಾನ ದಿನಾಂಕ
|
03.11.2020
(ಮಂಗಳವಾರ)
|
07.11.2020
(ಶನಿವಾರ)
|
ಮತ ಎಣಿಕೆ ದಿನಾಂಕ
|
10.11.2020
(ಮಂಗಳವಾರ)
|
10.11.2020
(ಮಂಗಳವಾರ)
|
ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವ ದಿನಾಂಕ
|
12.11.2020
(ಗುರುವಾರ)
|
12.11.2020
(ಗುರುವಾರ)
|
- ಮತದಾರರ ಪಟ್ಟಿ
ಮೇಲೆ ತಿಳಿಸಿದ ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರಗಳಲ್ಲಿ 01.01.2020ಕ್ಕೆ ಅನ್ವಯವಾಗುವಂತೆ ಅರ್ಹ ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿದೆ.
- ವಿದ್ಯುನ್ಮಾನ ಮತಯಂತ್ರ(ಇವಿಎಂ) ಮತ್ತು ವಿವಿಪ್ಯಾಟ್
ಈ ಮೇಲೆ ತಿಳಿಸಿದ ಕ್ಷೇತ್ರಗಳ ಉಪಚುನಾವಣೆಗಾಗಿ ಅಗತ್ಯ ಸಂಖ್ಯೆಯ ಇವಿಎಂ ಮತ್ತು ವಿವಿಪ್ಯಾಟ್ ಗಳನ್ನು ಒದಗಿಸಲಾಗಿದೆ.
- ಮತದಾರರ ಗುರುತು ಪತ್ತೆ
ಮತದಾನದ ಸಮಯದಲ್ಲಿ ಉಪಚುನಾವಣೆಗೆ ಮತದಾರರ ಗುರುತು ಕಡ್ಡಾಯವಾಗಿದ್ದು, ಅದು ಈ ಮೊದಲು ಇದ್ದ ಪದ್ಧತಿಯಂತೆ ಮುಂದುವರಿಯಲಿದೆ. ಮತದಾರರ ಗುರುತಿನ ಚೀಟಿ(ಎಪಿಕ್) ಮತದಾರರ ಗುರುತು ಪತ್ತೆಗೆ ಪ್ರಮುಖ ದಾಖಲೆಯಾಗಿದೆ. ಆದರೂ ಯಾವುದೇ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿದ್ದರೂ ಅಂತಹವರು ಆತ/ಆಕೆ ತನ್ನ ಹಕ್ಕಿನಿಂದ ವಂಚಿತವಾಗಬಾರದು ಎಂಬ ಕಾರಣಕ್ಕೆ ಪರ್ಯಾಯ ಗುರುತಿನ ದಾಖಲೆಗಳನ್ನು ನಿಗದಿಪಡಿಸಲಾಗಿದೆ. ಅವುಗಳೆಂದರೆ:
- ಆಧಾರ್ ಕಾರ್ಡ್
- ಮನ್ರೇಗಾ ಉದ್ಯೋಗ ಕಾರ್ಡ್
- ಪ್ಯಾನ್ ಕಾರ್ಡ್
- ಬ್ಯಾಂಕ್/ಅಂಚೆ ಕಚೇರಿ ವಿತರಿಸಿರುವ ಛಾಯಾಚಿತ್ರವಿರುವ ಪಾಸ್ ಬುಕ್
- ಕಾರ್ಮಿಕ ಸಚಿವಾಲಯ ತನ್ನ ಯೋಜನೆ ಅಡಿ ವಿತರಿಸಿರುವ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್
- ಚಾಲನಾ ಪರವಾನಗಿ
- ಪಾಸ್ ಪೋರ್ಟ್
- ಉದ್ಯೋಗದಾತರು ನೀಡಿರುವ ಛಾಯಾಚಿತ್ರವಿರುವ ಸೇವಾ ಗುರುತಿನ ಚೀಟಿ
- ಎನ್ ಪಿ ಆರ್ ಅಡಿಯಲ್ಲಿ ಆರ್ ಜಿಐ ವಿತರಿಸಿರುವ ಸ್ಮಾರ್ಟ್ ಕಾರ್ಡ್
- ಛಾಯಾಚಿತ್ರವಿರುವ ಪಿಂಚಣಿ ದಾಖಲೆಗಳು
- ಸಂಸದರು/ಶಾಸಕರು/ವಿಧಾನಪರಿಷತ್ ಸದಸ್ಯರಿಗೆ ವಿತರಿಸಿರುವ ಅಧಿಕೃತ ಗುರುತಿನ ಚೀಟಿಗಳು
ಮಾದರಿ ನೀತಿಸಂಹಿತೆ
ಯಾವ ವಿಧಾನಸಭಾ ಕ್ಷೇತ್ರದಲ್ಲಿ ಅಥವಾ ಯಾವ ಭಾಗದಲ್ಲಿ ಚುನಾವಣೆ ನಡೆಯುತ್ತದೋ ಅಂತಹ ಜಿಲ್ಲೆಗಳಲ್ಲಿ ಚುನಾವಣಾ ಮಾದರಿ ನೀತಿಸಂಹಿತೆ ತಕ್ಷಣದಿಂದ ಜಾರಿಗೆ ಬರಲಿದೆ. ಆಯೋಗದ ನಿರ್ದೇಶನ ಸಂಖ್ಯೆ 437/6/ಐಎನ್ಎಸ್ ಟಿ/2016-ಸಿಸಿಎಸ್ ದಿನಾಂಕ 29 ಜೂನ್ 2017(ಆಯೋಗದ ವೆಬ್ ಸೈಟ್ ನಲ್ಲಿ ಲಭ್ಯ) ಭಾಗಶಃ ಮಾರ್ಪಾಡುಗಳನ್ನು ಸೇರ್ಪಡೆ ಮಾಡಲಾಗಿದೆ. ಚುನಾವಣಾ ಮಾದರಿ ನೀತಿಸಂಹಿತೆ ಸಂಬಂಧಿಸಿದ ಎಲ್ಲ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳಿಗೆ ಅನ್ವಯವಾಗಲಿದೆ. ಮಾದರಿ ನೀತಿಸಂಹಿತೆ ಕೇಂದ್ರ ಸರ್ಕಾರಕ್ಕೂ ಸಹ ಅನ್ವಯಿಸಲಿದೆ.
ಎಲ್ಲ ರಾಜಕೀಯ ಪಕ್ಷಗಳ ಸಂಬಂಧಿಸಿದ ಅಭ್ಯರ್ಥಿಗಳು ತಮ್ಮ ಕ್ರಿಮಿನಲ್ ಹಿನ್ನೆಲೆಯ ಬಗ್ಗೆ ಎಲ್ಲ ಅಗತ್ಯ ಮಾಹಿತಿಗಳನ್ನು ತಮ್ಮನ್ನು ಆಯ್ಕೆ ಮಾಡುವ ಮತದಾರರಿಗೆ ನೀಡಬೇಕು. ಈ ಕುರಿತಂತೆ ದಿನಾಂಕ 6 ಮಾರ್ಚ್ 2020ರ ಪತ್ರ ಸಂಖ್ಯೆ 3/4/2020/ಎಸ್ ಡಿ ಆರ್/ಸಂಪುಟ-III ಮತ್ತು ಪತ್ರ ಸಂಖ್ಯೆ 3/4/2019/ಎಸ್ ಡಿ ಆರ್ /ಸಂಪುಟ- IV ದಿನಾಂಕ 16, ಸೆಪ್ಟೆಂಬರ್ 2020 ಈ ಚುನಾವಣೆಗಳಲ್ಲಿ ಪಾಲಿಸುವುದು ಕಡ್ಡಾಯವಾಗಿದೆ
ಹಿರಿಯ ನಾಗರಿಕರಿಗೆ(80 ವರ್ಷ ಮೇಲ್ಪಟ್ಟವರು) ಮತ್ತು ದಿವ್ಯಾಂಗರಿಗೆ ಅಂಚೆ ಮತ ಪತ್ರ ಒದಗಿಸುವುದು, ಚುನಾವಣಾ ವೆಚ್ಚ ನಿರ್ವಹಣೆ ಮತ್ತಿತರ ಸೂಚನೆಗಳು ಈ ಉಪಚುನಾವಣೆಗೆ ಅನ್ವಯವಾಗಲಿವೆ.
- ಉಪಚುನಾವಣೆ ನಡೆಸುವ ವೇಳೆ ಕೋವಿಡ್-19 ಸಾಂಕ್ರಾಮಿಕ ತಡೆಗೆ ಕೈಗೊಳ್ಳಬೇಕಾಗಿರುವ ವಿಸ್ತೃತ ಮಾರ್ಗಸೂಚಿ
ಕೋವಿಡ್-19 ಹರಡುವ ಭೀತಿ ಹಿನ್ನೆಲೆಯಲ್ಲಿ ಕೇಂದ್ರ ಚುನಾವನಾ ಆಯೋಗ 2020ರ ಆಗಸ್ಟ್ 21ರಂದು ವಿಸ್ತೃತ ಮಾರ್ಗಸೂಚಿಗಳನ್ನು ಹೊರಡಿಸಿದೆ. ಚುನಾವಣೆ ವೇಳೆ ಆ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ. ಅದರ ವಿವರಗಳು ಆಯೋಗದ ವೆಬ್ ಸೈಟ್ ನಲ್ಲಿ ಲಭ್ಯವಿದ್ದು, ಇಲ್ಲಿ ಅಡಕ-1ರಲ್ಲಿ ಲಗತ್ತಿಸಲಾಗಿದೆ.
ಕೋವಿಡ್ ಮಾರ್ಗಸೂಚಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Click here to see the COVID guidelines.
***
(Release ID: 1660050)
Visitor Counter : 676