ಪ್ರಧಾನ ಮಂತ್ರಿಯವರ ಕಛೇರಿ

ಕಾರ್ಮಿಕ ಸುಧಾರಣಾ ಮಸೂದೆಗಳ ಅಂಗೀಕಾರವನ್ನು ಸ್ವಾಗತಿಸಿದ ಪ್ರಧಾನಿ


ಕಾರ್ಮಿಕ ಸುಧಾರಣೆಗಳು ಕಾರ್ಮಿಕರ ಯೋಗಕ್ಷೇಮ ಮತ್ತು ಆರ್ಥಿಕತೆ ವೃದ್ಧಿಯನ್ನು ಖಚಿತಪಡಿಸುತ್ತವೆ: ಪ್ರಧಾನಿ

Posted On: 23 SEP 2020 8:57PM by PIB Bengaluru

ಸಂಸತ್ತು ಕಾರ್ಮಿಕ ಸುಧಾರಣಾ ಮಸೂದೆಗಳನ್ನು ಅಂಗೀಕರಿಸಿರುವುದನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಸ್ವಾಗತಿಸಿದ್ದಾರೆ.

ಪ್ರಧಾನ ಮಂತ್ರಿಯವರು ಕುರಿತು ಸರಣಿ ಟ್ವೀಟ್ಗಳನ್ನು ಮಾಡಿದ್ದಾರೆ.

ದೀರ್ಘಕಾಲದಿಂದ ಬಾಕಿಯಿದ್ದ ಮತ್ತು ಬಹುನಿರೀಕ್ಷಿತ ಕಾರ್ಮಿಕ ಸುಧಾರಣೆಗಳನ್ನು ಸಂಸತ್ತು ಅಂಗೀಕರಿಸಿದೆ. ಸುಧಾರಣೆಗಳು ನಮ್ಮ ಶ್ರಮಶೀಲ ಕಾರ್ಮಿಕರ ಯೋಗಕ್ಷೇಮವನ್ನು ಖಚಿತಪಡಿಸುತ್ತವೆ ಮತ್ತು ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡುತ್ತವೆ. ಸುಧಾರಣೆಗಳುಕನಿಷ್ಠ ಸರ್ಕಾರ, ಗರಿಷ್ಠ ಆಡಳಿತಕ್ಕೆ ಜ್ವಲಂತ ಉದಾಹರಣೆಗಳಾಗಿವೆ.” ಎಂದು ಅವರು ಹೇಳಿದ್ದಾರೆ.

ಹೊಸ ಕಾರ್ಮಿಕ ಸಂಹಿತೆಯು ಕನಿಷ್ಠ ವೇತನ ಮತ್ತು ಸಕಾಲಿಕ ವೇತನ ಪಾವತಿಯನ್ನು ಸಾರ್ವತ್ರಿಕಗೊಳಿಸುತ್ತದೆ ಮತ್ತು ಕಾರ್ಮಿಕರ ಔದ್ಯೋಗಿಕ ಸುರಕ್ಷತೆಗೆ ಆದ್ಯತೆ ನೀಡುತ್ತದೆ. ಸುಧಾರಣೆಗಳು ಉತ್ತಮ ಕೆಲಸದ ವಾತಾವರಣಕ್ಕೆ ಸಹಕಾರಿಯಾಗಲಿದ್ದು, ಇವು ಆರ್ಥಿಕ ಬೆಳವಣಿಗೆಯ ವೇಗವನ್ನು ಹೆಚ್ಚಿಸುತ್ತವೆ.

ಕಾರ್ಮಿಕ ಸುಧಾರಣೆಗಳು 'ಸುಲಭ ವ್ಯವಹಾರವನ್ನು' ಖಚಿತಪಡಿಸುತ್ತವೆ. ಇವು ಪಾಲನೆ, ಅಧಿಕಾರಶಾಹಿ ಮತ್ತು 'ಇನ್ಸ್ಪೆಕ್ಟರ್ ರಾಜ್' ಅನ್ನು ಕಡಿಮೆ ಮಾಡುವ ಮೂಲಕ ಉದ್ಯಮಗಳನ್ನು ಸಶಕ್ತಗೊಳಿಸುವ ಭವಿಷ್ಯದ ಕಾಯ್ದೆಗಳಾಗಿವೆ. ಸುಧಾರಣೆಗಳು ಕಾರ್ಮಿಕರು ಮತ್ತು ಉದ್ಯಮದ ಸುಧಾರಣೆಗೆ ತಂತ್ರಜ್ಞಾನದ ಶಕ್ತಿಯನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತವೆ.” ಎಂದು ಪ್ರಧಾನಿಯವರು ತಿಳಿಸಿದ್ದಾರೆ.

***



(Release ID: 1658539) Visitor Counter : 142