ಕೃಷಿ ಸಚಿವಾಲಯ

ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಮಸೂದೆ, 2020 ಮತ್ತು ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಹಾಗೂ ಕೃಷಿ ಸೇವೆಗಳ ಒಪ್ಪಂದ ಮಸೂದೆ, 2020 ಸಂಸತ್ತಿನಲ್ಲಿ ಅಂಗೀಕಾರ


ಕಾಯ್ದೆಗಳಲ್ಲಿ ರೈತರಿಗೆ ಸಂಪೂರ್ಣ ರಕ್ಷಣೆ; ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿ ಮುಂದುವರಿಕೆಗೆ ಪ್ರಧಾನಿ ಭರವಸೆ: ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್

Posted On: 20 SEP 2020 2:13PM by PIB Bengaluru

ದೇಶದ ಕೃಷಿ ಕ್ಷೇತ್ರವನ್ನು ಪರಿವರ್ತಿಸುವ ಮತ್ತು ರೈತರ ಆದಾಯವನ್ನು ಹೆಚ್ಚಿಸುವ ಉದ್ದೇಶದ ಎರಡು ಮಸೂದೆಗಳನ್ನು ಸಂಸತ್ತು ಇಂದು ಅಂಗೀಕರಿಸಿತು. 2020 ಸೆಪ್ಟೆಂಬರ್ 17 ರಂದು ಲೋಕಸಭೆಯಿಂದ ಅಂಗೀಕರಿಸಲ್ಪಟ್ಟ ರೈತರ ಉತ್ಪಾದನಾ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಮಸೂದೆ, 2020 ಮತ್ತು ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಒಪ್ಪಂದ ಮಸೂದೆ 2020 ನ್ನು ರಾಜ್ಯಸಭೆ ಅಂಗೀಕರಿಸಿತು. 2020 ಜೂನ್ 5 ರಂದು ಘೋಷಿಸಲಾದ ಸುಗ್ರೀವಾಜ್ಞೆಗಳನ್ನು ಬದಲಿಸಲು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್ ಅವರು 2020 ಸೆಪ್ಟೆಂಬರ್ 14 ರಂದು ಲೋಕಸಭೆಯಲ್ಲಿ ಈ ವಿಧೇಯಕಗಳನ್ನು ಮಂಡಿಸಿದ್ದರು.

ವಿಧೇಯಕಗಳ ಬಗ್ಗೆ ಮಾತನಾಡಿದ ಶ್ರೀ ನರೇಂದ್ರ ಸಿಂಗ್ ತೋಮರ್, ರೈತರು ತಮ್ಮ ಉತ್ಪನ್ನಗಳಿಗೆ ಸೂಕ್ತ ಬೆಲೆ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ರೈತರ ಆದಾಯ ಮತ್ತು ಜೀವನೋಪಾಯದ ಮಟ್ಟವನ್ನು ಹೆಚ್ಚಿಸಲು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಕಳೆದ ಆರು ವರ್ಷಗಳಲ್ಲಿ ಹಲವಾರು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಿದರು. ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿ ಮುಂದುವರಿಯುತ್ತದೆ ಎಂದು ಅವರು ಮತ್ತೊಮ್ಮೆ ಸ್ಪಷ್ಟಪಡಿಸಿದರು, ಇದಕ್ಕೆ ಮಾನ್ಯ ಪ್ರಧಾನ ಮಂತ್ರಿಯವರೇ ಸ್ವತಃ ಭರವಸೆ ನೀಡಿದ್ದಾರೆ, 2014-2020 ಅವಧಿಯಲ್ಲಿ ಎಂಎಸ್ಪಿ ದರವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ ಮತ್ತು ಮುಂಬರುವ ರಬಿ ಹಂಗಾನಮಿನ ಎಂಎಸ್ಪಿಯನ್ನು ಮುಂಬರುವ ವಾರದಲ್ಲಿ ಘೋಷಿಸಲಾಗುವುದು. ಕಾಯ್ದೆಗಳಲ್ಲಿ ರೈತರಿಗೆ ಸಂಪೂರ್ಣ ರಕ್ಷಣೆ ಕಲ್ಪಿಸಲಾಗಿದೆ ಎಂದು ಕೇಂದ್ರ ಕೃಷಿ ಸಚಿವರು ಹೇಳಿದರು.

ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಮಸೂದೆ, 2020

ಮುಖ್ಯ ನಿಬಂಧನೆಗಳು

  • ಹೊಸ ಕಾಯ್ದೆಯು ರೈತರು ಮತ್ತು ವ್ಯಾಪಾರಿಗಳಿಗೆ ಕೃಷಿ ಉತ್ಪನ್ನಗಳ ಮಾರಾಟ ಮತ್ತು ಖರೀದಿಯ ಸ್ವಾತಂತ್ರ್ಯವನ್ನು ನೀಡುವ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ.
  • ಇದು ರಾಜ್ಯ ಕೃಷಿ ಉತ್ಪಾದನಾ ಮಾರುಕಟ್ಟೆ ಕಾಯ್ದೆಗಳ ಅಡಿಯಲ್ಲಿ ಅಧಿಸೂಚಿಸಲ್ಪಟ್ಟ ಮಾರುಕಟ್ಟೆಗಳ ಭೌತಿಕ ಆವರಣದ ಹೊರಗೆ ತಡೆ ರಹಿತ ಅಂತರ-ರಾಜ್ಯ ಮತ್ತು ಅಂತರ್-ರಾಜ್ಯ ವ್ಯಾಪಾರ ಮತ್ತು ವಾಣಿಜ್ಯವನ್ನು ಉತ್ತೇಜಿಸುತ್ತದೆ.
  • ಉತ್ಪನ್ನಗಳನ್ನು ಮಾರಾಟ ರೈತರಿಗೆ ಮಾಡಲು ಯಾವುದೇ ಸೆಸ್ ಅಥವಾ ಲೆವಿ ವಿಧಿಸಲಾಗುವುದಿಲ್ಲ ಮತ್ತು ಅವರು ಸಾರಿಗೆ ವೆಚ್ಚವನ್ನು ಭರಿಸಬೇಕಾಗಿಲ್ಲ.
  • ವಿದ್ಯುನ್ಮಾನವಾಗಿ ತಡೆರಹಿತ ವ್ಯಾಪಾರವನ್ನು ಖಾತ್ರಿಪಡಿಸಿಕೊಳ್ಳಲು ವಹಿವಾಟು ವೇದಿಕೆಯಲ್ಲಿ ಎಲೆಕ್ಟ್ರಾನಿಕ್ ವಹಿವಾಟನ್ನು ಕಾಯ್ದೆ ಪ್ರಸ್ತಾಪಿಸುತ್ತದೆ.
  • ಮಂಡಿಗಳ ಜೊತೆಗೆ, ಫಾರ್ಮ್ಗೇಟ್, ಕೋಲ್ಡ್ ಸ್ಟೋರೇಜ್, ಗೋದಾಮು, ಸಂಸ್ಕರಣಾ ಘಟಕಗಳಲ್ಲಿ ವ್ಯಾಪಾರ ಮಾಡುವ  ಸ್ವಾತಂತ್ರ್ಯ ದೊರೆಯುತ್ತದೆ.
  • ರೈತರು ನೇರ ವ್ಯಾಪಾರೋದ್ಯಮದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಇದರಿಂದಾಗಿ ಮಧ್ಯವರ್ತಿಗಳ ಹಾವಳಿ ನಿರ್ಮೂಲನೆಯಾಗುತ್ತದೆ. ಇದರ ರೈತರಿಗೆ ಪರಿಣಾಮವಾಗಿ ಬೆಲೆ ಸಿಗುತ್ತದೆ.

ಅನುಮಾನಗಳು

  • ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿ ನಿಲ್ಲುತ್ತದೆ
  • ಎಪಿಎಂಸಿ ಮಂಡಿಗಳ ಹೊರಗೆ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಿದರೆ, ಎಪಿಎಂಸಿಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತವೆ
  • -ನ್ಯಾಮ್ನಂತಹ ಸರ್ಕಾರಿ ಎಲೆಕ್ಟ್ರಾನಿಕ್ ಟ್ರೇಡಿಂಗ್ ಪೋರ್ಟಲ್ ಭವಿಷ್ಯ ಏನು

ಸ್ಪಷ್ಟೀಕರಣ

  • ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿ ಮುಂದುವರಿಯುತ್ತದೆ, ರೈತರು ತಮ್ಮ ಉತ್ಪನ್ನಗಳನ್ನು ಎಂಎಸ್ಪಿ ದರದಲ್ಲಿ ಮಾರಾಟ ಮಾಡಬಹುದು, ರಬಿ ಹಂಗಾಮಿನ ಎಂಎಸ್ಪಿ ಮುಂದಿನ ವಾರ ಪ್ರಕಟಿಸಲಾಗುವುದು
  • ಮಂಡಿಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸುವುದಿಲ್ಲ, ಇಲ್ಲಿ ಮೊದಲಿನಂತೆಯೇ ವ್ಯಾಪಾರ ಮುಂದುವರಿಯುತ್ತದೆ. ಹೊಸ ವ್ಯವಸ್ಥೆಯಡಿ, ರೈತರು ತಮ್ಮ ಉತ್ಪನ್ನಗಳನ್ನು ಮಂಡಿಗಳ ಜೊತೆಗೆ ಇತರ ಸ್ಥಳಗಳಲ್ಲಿ ಮಾರಾಟ ಮಾಡುವ ಆಯ್ಕೆಯನ್ನು ಹೊಂದಿರುತ್ತಾರೆ
  • ಮಂಡಿಗಳಲ್ಲಿಯೂ -ನ್ಯಾಮ್ ವ್ಯಾಪಾರ ವ್ಯವಸ್ಥೆ ಮುಂದುವರಿಯುತ್ತದೆ
  • ಕೃಷಿ ಉತ್ಪನ್ನಗಳಲ್ಲಿನ ವ್ಯಾಪಾರವು ಎಲೆಕ್ಟ್ರಾನಿಕ್ ಪ್ಲಾಟ್ಫಾರ್ಮ್ಗಳಲ್ಲಿ ಹೆಚ್ಚಾಗುತ್ತದೆ. ಇದು ಹೆಚ್ಚಿನ ಪಾರದರ್ಶಕತೆ ಮತ್ತು ಸಮಯದ ಉಳಿತಾಯಕ್ಕೆ ಕಾರಣವಾಗುತ್ತದೆ

ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಒಪ್ಪಂದ ಮಸೂದೆ, 2020

ಮುಖ್ಯ ನಿಬಂಧನೆಗಳು

  • ಹೊಸ ಕಾಯ್ದೆಯು ಸಂಸ್ಕರಣ ಘಟಕಗಳು, ಸಗಟು ವ್ಯಾಪಾರಿಗಳು, ಒಟ್ಟುಗೂಡಿಸುವವರು, ದೊಡ್ಡ ಚಿಲ್ಲರೆ ವ್ಯಾಪಾರಿಗಳು, ರಫ್ತುದಾರರು ಇತ್ಯಾದಿಗಳೊಂದಿಗೆ ತೊಡಗಿಸಿಕೊಳ್ಳಲು ರೈತರಿಗೆ ಅಧಿಕಾರ ನೀಡುತ್ತದೆ. ಬೆಳೆಗಳನ್ನು ಬಿತ್ತನೆ ಮಾಡುವ ಮೊದಲೇ ರೈತರಿಗೆ ಬೆಲೆ ಭರವಸೆ. ಮಾರುಕಟ್ಟೆ ಬೆಲೆಯು ಹೆಚ್ಚಾದ ಸಂದರ್ಭದಲ್ಲಿ, ರೈತರು ಕನಿಷ್ಠ ಬೆಲೆಯ ಮೇಲೆ ಬೆಲೆಯನ್ನು ಪಡೆಯುತ್ತಾರೆ.
  • ಇದು ಮಾರುಕಟ್ಟೆಯ ಅನಿಶ್ಚಿತತೆಯ ಅಪಾಯವನ್ನು ರೈತನಿಂದ ಪ್ರಾಯೋಜಕರಿಗೆ ವರ್ಗಾಯಿಸುತ್ತದೆ. ಮುಂಚೆಯೇ ಬೆಲೆ ನಿರ್ಣಯದಿಂದಾಗಿ, ಮಾರುಕಟ್ಟೆ ಬೆಲೆಗಳ ಏರಿಕೆ ಮತ್ತು ಕುಸಿತದಿಂದ ರೈತರನ್ನು ರಕ್ಷಿಸಲಾಗುತ್ತದೆ.
  • ಇದು ಆಧುನಿಕ ತಂತ್ರಜ್ಞಾನ, ಉತ್ತಮ ಬೀಜ ಮತ್ತು ಇತರ ಸೌಲಭ್ಯಗಳನ್ನು ಪಡೆಯಲು ರೈತನಿಗೆ ಅನುವು ಮಾಡಿಕೊಡುತ್ತದೆ.
  • ಇದು ಮಾರುಕಟ್ಟೆ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ರೈತರ ಆದಾಯವನ್ನು ಹೆಚ್ಚಿಸುತ್ತದೆ.
  • ವಿವಾದ ಪರಿಹಾರಕ್ಕಾಗಿ ಸ್ಪಷ್ಟ ಕಾಲಮಿತಿಯೊಳಗೆ ಪರಿಣಾಮಕಾರಿ ವ್ಯವಸ್ಥೆಯನ್ನು ಒದಗಿಸಲಾಗಿದೆ.
  • ಕೃಷಿ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಹೊಸ ತಂತ್ರಜ್ಞಾನಕ್ಕೆ ಉತ್ತೇಜನ ದೊರಕುತ್ತದೆ.

ಅನುಮಾನಗಳು

  • ಗುತ್ತಿಗೆ ಕೃಷಿಯಡಿಯಲ್ಲಿ, ರೈತರು ಒತ್ತಡಕ್ಕೆ ಒಳಗಾಗುತ್ತಾರೆ ಮತ್ತು ಅವರಿಗೆ ಬೆಲೆಗಳನ್ನು ನಿರ್ಧರಿಸಲು ಸಾಧ್ಯವಾಗುವುದಿಲ್ಲ
  • ಸಣ್ಣ ರೈತರು ಗುತ್ತಿಗೆ ಕೃಷಿಯನ್ನು ಮಾಡಲು ಸಾಧ್ಯವಾಗುವುದಿಲ್ಲ, ಪ್ರಾಯೋಜಕರು ಅವರಿಂದ ದೂರ ಸರಿಯುತ್ತಾರೆ
  • ಹೊಸ ವ್ಯವಸ್ಥೆಯು ರೈತರಿಗೆ ಸಮಸ್ಯೆಯಾಗಲಿದೆ
  • ವಿವಾದದ ಸಂದರ್ಭದಲ್ಲಿ, ದೊಡ್ಡ ಕಂಪನಿಗಳಿಗೆ  ಪ್ರಯೋಜನವಾಗುತ್ತದೆ

ಸ್ಪಷ್ಟೀಕರಣ

  • ಒಪ್ಪಂದದಲ್ಲಿ ರೈತರು ತಮ್ಮ ಉತ್ಪನ್ನಗಳಿಗೆ ಆಯ್ಕೆಯ ಮಾರಾಟ ಬೆಲೆಯನ್ನು ನಿಗದಿಪಡಿಸುವ ಸಂಪೂರ್ಣ ಅಧಿಕಾರವನ್ನು ಹೊಂದಿರುತ್ತಾರೆ. ಅವರು ಗರಿಷ್ಠ 3 ದಿನಗಳಲ್ಲಿ ಪಾವತಿಯನ್ನು ಪಡೆಯುತ್ತಾರೆ.
  • ದೇಶಾದ್ಯಂತ 10000 ರೈತ ಉತ್ಪಾದಕ ಸಂಸ್ಥೆಗಳು ರಚನೆಯಾಗುತ್ತಿವೆ. ಎಫ್ಪಿಒಗಳು ಸಣ್ಣ ರೈತರನ್ನು ಒಟ್ಟುಗೂಡಿಸುತ್ತವೆ ಮತ್ತು ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆಯನ್ನು ಖಚಿತಪಡಿಸಿಕೊಳ್ಳಲು ಕೆಲಸ ಮಾಡುತ್ತವೆ
  • ಒಪ್ಪಂದಕ್ಕೆ ಸಹಿ ಹಾಕಿದ ನಂತರ, ರೈತನು ವ್ಯಾಪಾರಿಗಳನ್ನು ಹುಡುಕಬೇಕಾಗುವುದಿಲ್ಲ. ಖರೀದಿಸುವ ಗ್ರಾಹಕರು ನೇರವಾಗಿ ಜಮೀನಿನಿಂದ ಉತ್ಪನ್ನಗಳನ್ನು ತೆಗೆದುಕೊಳ್ಳುತ್ತಾರೆ
  • ವಿವಾದದ ಸಂದರ್ಭದಲ್ಲಿ, ಪದೇ ಪದೇ ನ್ಯಾಯಾಲಯಕ್ಕೆ ಹೋಗುವ ಅಗತ್ಯವಿಲ್ಲ. ಸ್ಥಳೀಯವಾಗಿ ವಿವಾದ ಪರಿಹಾರ ವ್ಯವಸ್ಥೆ ಇರುತ್ತದೆ.

***



(Release ID: 1658216) Visitor Counter : 1577