ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ
ಮೊಣಕಾಲು ಚಿಪ್ಪು ಅಳವಡಿಕೆಯ ಶಸ್ತ್ರಚಿಕಿತ್ಸೆಗೆ ಅಗತ್ಯವಿರುವ ಸಾಧನಗಳನ್ನು ನಿಗದಿತ ಬೆಲೆಯಲ್ಲಿ ಪೂರೈಸಲು ಸೆಪ್ಟೆಂಬರ್ 14, 2021ರವರೆಗೆ ಅವಧಿ ವಿಸ್ತರಣೆ.
ಈ ಕ್ರಮದಿಂದ ಶ್ರೀಸಾಮಾನ್ಯರಿಗೆ ₹ 1500 ಕೋಟಿ ರೂಪಾಯಿ ಉಳಿತಾಯವಾಗಲಿದೆ.
Posted On:
17 SEP 2020 11:15AM by PIB Bengaluru
ಜನರಿಗೆ ಸುಲಭದರದಲ್ಲಿ ವೈದ್ಯಕೀಯ ಸಾಧನಗಳು ಲಭ್ಯ ಇರಲಿ ಎಂಬ ಆಶಯದಿಂದ ಔಷಧಿಗಳ ಬೆಲೆ ನಿಯಂತ್ರಣ, ಔಷಧೀಯ ಇಲಾಖೆಯ ಅಡೊಯಲ್ಲಿರುವ ರಾಷ್ಟ್ರೀಯ ಬೆಲೆ ಪ್ರಾಧಿಕಾರ, ರಾಸಾಯನಿಕ ಮತಗತು ರಸಗೊಬ್ಬರ ಸಚಿವಾಲಯವು, ಮೊಣಕಾಲು ಚಿಪ್ಪಿನ ಅಳವಡಿಕೆಗೆ ಅನುಕೂಲವಾಗುವಂತೆ ಸೆ.21, 2021ವರೆಗೂ ವಿಸ್ತರಿಸಿದೆ.
ಸೆ.15 2020ರಂದು ಈ ಬಗ್ಗೆ ಎನ್‌ಪಿಪಿಎ ಔಷಧಿ ನಿಯಂತ್ರಣ ಪ್ರಾಧಿಕಾರವು ಆದೇಶ ಸಂಖ್ಯೆ (ಡಿಪಿಸಿಒ), 2013 (ಅನೆಕ್ಸ್ II) ಅಧಿಸೂಚನೆಯನ್ನು ಹೊರಡಿಸಲಾಗಿದೆ.
ಎನ್‌ಪಿಪಿಎ ಆದೇಶ ಸಂಖ್ಯೆ S.O. 2668(E)ಆ.16, 2017ರಂದು ಮೊದಲ ಬಾರಿಗೆ ಮೂಳೆಗಳ ವಿಭಾಗದಲ್ಲಿ ಮೊಣಕಾಲು ಚಿಪ್ಪಿನ ಅಳವಡಿಕೆಗಾಗಿ ಬೆಲೆ ನಿಗದಿಪಡಿಸಲಾಗಿತ್ತು. ಒಂದು ವರ್ಷದ ಅವಧಿಯವರೆಗೆ ಈ ಬೆಲೆಯನ್ನು ನಿಗದಿಪಡಿಸಲಾಗಿತ್ತು. ಅದಾದ ನಂತರ ಆ.132018ರವರೆಗೂ ಅದೇ ಬೆಲೆಯನ್ನೇ ಮುಂದುವರಿಸಲಾಗಿತ್ತು. ಈ ಯೋಜನೆಯ ಆದೇಶವನ್ನು ಪುನಃ ಆ. 15, 2019ರವರೆಗೂ ವಿಸ್ತರಿಸಲಾಯಿತು. ಮತ್ತೆ ಅದೇ ಆದೇಶವನ್ನು 2020ಸೆ.21ರವರೆಗೆ ಮುಂದುವರಿಸಲು ನಿರ್ಧರಿಸಲಾಯಿತು. ಇದೀಗ ಈ ಯೋಜನೆಯ ಲಾಭ ಇನ್ನಷ್ಟು ಜನರಿಗೆ ದೊರೆಯಲಿ ಎಂದು ಮುಂದಿನ ವರ್ಷ ಸೆ.21ರವರೆಗೆ ವಿಸ್ತರಿಸಲಾಗಿದೆ.
ಎನ್‌ಪಿಪಿಎ ಇದೇ ವರ್ಷದ ಜುಲೈತಿಂಗಳಿನಲ್ಲಿ ವೈದ್ಯಕೀಯ ಸಾಧನಗಳ ಉತ್ಪಾದನಾ ಕಂಪನಿಗಳಿಗೆ ಹಾಗೂ ಆಮದು ಮಾಡಿಕೊಳ್ಳುವ ಕಂಪನಿಗಳಿಗೆ 2018ರಿಂದ 2020ರ ಅವಧಿಯಲ್ಲಿ ಮಾರಾಟ ಆಗಿರುವ ಅಂಕಿ ಅಂಶಗಳನ್ನು ಒಪ್ಪಿಸಲು ಸೂಚಿಸಿತ್ತು.
ಈ ಬಗ್ಗೆ 14 ಪ್ರಮುಖ ಕಂಪನಿಗಳು 10 ಜನ ಆಮದುದಾರರು ಹಾಗೂ ನಾಲ್ಕು ಉತ್ಪಾದನಾ ಕಂಪನಿಗಳೂ ಸೇರಿದಂತೆ ಆ.6ರಂದು ಸಭೆ ಸೇರಿ ತಮ್ಮ ಅಂಕಿ ಅಂಶಗಳನ್ನು ಎನ್‌ಪಿಪಿಎಗೆ ಒಪ್ಪಿಸಿದವು. ಆ.15ರಂದು ನೀಡಿರುವ ಬೆಲೆಯನ್ನು ಸೆ.15 2020ರವರೆಗೂ ಮುಂದುವರಿಸುವಂತೆ ಈ ಸಭೆಯಲ್ಲಿ ನಿರ್ಣಯಿಸಲಾಯಿತು.
ಸೆ.14ರಂದು ಆಯೋಜಿಸಲಾದ ಅಧಿಕಾರಿಗಳ ಸಭೆಯಲ್ಲಿ ಮತ್ತೊಮ್ಮೆ ಈ ಬೆಲೆಗಳ ಬಗ್ಗೆ ಚರ್ಚಿಸಲಾಯಿತು. 2017ರಲ್ಲಿ ಮೊಣಕಾಲು ಚಿಪ್ಪಿನ ಅಳವಡಿಕೆಯ ಸಾಧನಕ್ಕೆ ನಿಗದಿಪಡಿಸಲಾದ ಬೆಲೆಯು ಮಾರುಕಟ್ಟೆಯ ಬೆಲೆಗಿಂತ ಶೇ 69ರಷ್ಟು ಇಳಿಸಲಾಗಿದೆ. ಹಾಗೂ ಉತ್ಪಾದಕರಿಗೆ ಮಾರುಕಟ್ಟೆಯಲ್ಲಿ ಶೇ 11ರಷ್ಟು ಪಾಲುದಾರಿಕೆ ಹೆಚ್ಚಾಗಿರುವುದು ಕಂಡುಬ ಂದಿದೆ. ಈ ಎರಡು ವರ್ಷಗಳ ಅವಧಿಯಲ್ಲಿ ಇದು ಆಶಾದಾಯಕ ಬೆಳವಣಿಗೆಯಾಗಿದೆ. ಅಲ್ಲದೇ ಕೇಂದ್ರ ಸರ್ಕಾರದ ‘ಆತ್ಮನಿರ್ಭರ ಭಾರತ’ ಆಶಯಕ್ಕೆ ತಕ್ಕಂತಾಗಿದೆ.
ಜನರ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು, ಹೀಗೆ ಬೆಲೆ ನಿಗದಿಪಡಿಸುವುದನ್ನು ಮುಂದುವರಿಸುವುದು ಅತ್ಯಗತ್ಯವಾಗಿದೆ ಎಂದು ಕಂಡು ಬಂದಿತು. ಈ ಅಂಶವನ್ನು ಗಮನದಲ್ಲಿರಿಸಿಕೊಂಡು ಪ್ರಾಧಿಕಾರವು ಬೆಲೆ ನಿಗದಿ ಪಡಿಸುವ ಕ್ರಮವನ್ನು ಮತ್ತೊಂದು ವರ್ಷಕ್ಕೆ (14 ಸೆ. 2021)ರವರೆಗೆ ಮುಂದುವರಿಸಲು ನಿರ್ಧರಿಸಿ, ಅಧಿಸೂಚನೆ ಹೊರಡಿಸಲು ತೀರ್ಮಾನ ತೆಗೆದುಕೊಳ್ಳಲಾಯಿತು.
ಈ ತೀರ್ಮಾನದಂತೆ ಸೆ.14, 2021ರವರೆಗೆ ಬೆಲೆನಿಗದಿ ಪಡಿಸಿರುವ ಕ್ರಮವನ್ನು ಮುಂದುವರಿಸಲು ಅಧಿಸೂಚನೆ ಹೊರಡಿಸಲಾಯಿತು. ಇದರಿಂದಾಗಿ ಜನ ಸಾಮಾನ್ಯರ ₹ 1500 ಕೋಟಿ ಉಳಿತಾಯವಾಗಲಿದೆ ಎಂಬ ಅಂಶ ಗಮನಾರ್ಹವಾಗಿದೆ.
(Release ID: 1655597)
Visitor Counter : 259
Read this release in:
English
,
Urdu
,
Hindi
,
Marathi
,
Assamese
,
Manipuri
,
Bengali
,
Punjabi
,
Odia
,
Tamil
,
Telugu