ಹಣಕಾಸು ಸಚಿವಾಲಯ

ಆತ್ಮ ನಿರ್ಭರ್ ಭಾರತ: ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯಕ್ಕೆ ಸಂಬಂಧ ಪ್ರಗತಿ

Posted On: 13 SEP 2020 10:31AM by PIB Bengaluru

ಭಾರತದಲ್ಲಿ ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ  2020ರ ಮೇ.12ರಂದು ದೇಶದ ಒಟ್ಟು ಜಿಡಿಪಿಯ ಶೇ10ಕ್ಕೆ ಸಮನಾದ- 20 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಆರ್ಥಿಕ ಮತ್ತು ಸಮಗ್ರ ಪ್ಯಾಕೇಜ್ ಅನ್ನು ಪ್ರಕಟಿಸಿದರು. ಆತ್ಮ ನಿರ್ಭರ ಭಾರತ ಅಥವಾ ಸ್ವಾವಲಂಬಿ ಭಾರತ ಚಳವಳಿಗೆ ಪ್ರಧಾನಿ ಕರೆ ನೀಡಿದ್ದರು. ಆರ್ಥಿಕತೆ, ಮೂಲಸೌಕರ್ಯ, ಸರಕಾರಿ ವ್ಯವಸ್ಥೆ, ಕ್ರಿಯಾಶೀಲ ಜನಸಂಖ್ಯೆ ಮತ್ತು ಬೇಡಿಕೆ – ಈ ಐದು ಅಂಶಗಳನ್ನು ಆತ್ಮ ನಿರ್ಭರ ಭಾರತದ ಐದು ಆಧಾರಸ್ಥಂಭಗಳೆಂದು ಸ್ಥೂಲಚಿತ್ರಣ ನೀಡಿದ್ದರು. 
ಪ್ರಧಾನಮಂತ್ರಿಗಳ ಕರೆಯ ಮೇರಗೆ, ಹಣಕಾಸು ಮತ್ತು ಕಾರ್ಪೋರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್, 2020ರ ಮೇ 13ರಿಂದ 17ರ ವರೆಗೆ ನಡೆಸಿದ ಸರಣಿ ಸುದ್ದಿಗೋಷ್ಠಿಯಲ್ಲಿ ಆತ್ಮನಿರ್ಭರ  ಭಾರತ ಪ್ಯಾಕೇಜ್ ನ ವಿವರಗಳನ್ನು ಪ್ರಕಟಿಸಿದ್ದರು. 
ಹಣಕಾಸು ಮತ್ತು ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯ, ತಕ್ಷಣವೇ ಆತ್ಮನಿರ್ಭರ ಭಾರತ ಅಭಿಯಾನದಡಿ ಆರ್ಥಿಕ ಪ್ಯಾಕೇಜ್ ನಲ್ಲಿ ಘೋಷಿಸಲಾಗಿರುವ ಅಂಶಗಳ ಅನುಷ್ಠಾನ ಆರಂಭಿಸಿತು. ಈ ಪ್ಯಾಕೇಜ್ ಅನುಷ್ಠಾನ ವಿಚಾರದಲ್ಲಿ ಸರ್ಕಾರ ಎಷ್ಟು ಗಂಭೀರವಾಗಿದೆ ಎಂಬುದನ್ನು ಅದು ನಿರಂತರವಾಗಿ ಪರಿಶೀಲನೆ ನಡೆಸಿದೆ ಮತ್ತು ಆರ್ಥಿಕ ಪ್ಯಾಕೇಜ್ ನ ಅನುಷ್ಠಾನದ ಮೇಲ್ವಿಚಾರಣೆಯನ್ನು ದಿನವಹಿ ಆಧಾರದ ಮೇಲೆ ನಡೆಸಲಾಗುತ್ತಿದೆ 
ಹಣಕಾಸು ಮತ್ತು ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯದಿಂದ ಆತ್ಮನಿರ್ಭರ ಭಾರತ ಪ್ಯಾಕೇಜ್ ಅಡಿಯಲ್ಲಿ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳ ಈವರೆಗಿನ ಪ್ರಗತಿ ಈ ಕೆಳಗಿನಂತಿದೆ.
ನಬಾರ್ಡ್ ಮೂಲಕ ರೈತರಿಗೆ 30,000 ಕೋಟಿ ರೂ. ಹೆಚ್ಚುವರಿ ತುರ್ತು ದುಡಿಯುವ ಬಂಡವಾಳ ಲಭ್ಯವಾಗುವಂತೆ ಮಾಡಿರುವುದು – 2020ರ ಆಗಸ್ಟ್ 28ರ ವೇಳೆಗೆ 25,000 ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಲಾಗಿದೆ. ಉಳಿದ ಮೊತ್ತ 5,000 ಕೋಟಿ ರೂ.ಗಳನ್ನು ವಿಶೇಷ ನಗದು ಸೌಲಭ್ಯ(ಎಸ್ಎಲ್ಎಫ್) ಅಡಿಯಲ್ಲಿ ಸಣ್ಣ ಎನ್ ಬಿ ಎಫ್ ಸಿಗಳು ಮತ್ತು ಎನ್ ಬಿ ಎಫ್ ಸಿ-ಎಂಎಫ್ಐಗಳಿಗೆ ನೀಡಲು ಆರ್ ಬಿ ಐ, ನಬಾರ್ಡ್ ಗೆ ಹಂಚಿಕೆ ಮಾಡಿದೆ. ನಬಾರ್ಡ್ ಕಾರ್ಯಾಚರಣೆ ಮಾರ್ಗಸೂಚಿಗಳನ್ನು ಅಂತಿಮಗೊಳಿಸಿ ಸದ್ಯದಲ್ಲೇ ಬಿಡುಗಡೆ ಮಾಡಲಿದೆ. 
ಅಲ್ಲದೆ ನಬಾರ್ಡ್ ಕೂಡ ವ್ಯವಸ್ಥಿತ ಹಣಕಾಸು ಮತ್ತು ಭಾಗಶಃ ಖಾತ್ರಿ ಯೋಜನೆಯನ್ನು ಎರಡು ಸಂಸ್ಥೆಗಳು ಮತ್ತು ಇತರ ಬ್ಯಾಂಕುಗಳ ಸಹಭಾಗಿತ್ವದಲ್ಲಿ ಹಾಗೂ ಶ್ರೇಯಾಂಕವಿಲ್ಲದ ಎನ್ ಬಿ ಎಫ್ ಸಿ-ಎಂಎಫ್ಐಗಳ ಸಹಾಯದಿಂದ ಪಾವತಿದಾರರಿಂದ ಸಾಲ ಕೊಡಿಸಲು ಯೋಜನೆಯನ್ನು ಆರಂಭಿಸಲಿದೆ. 
ಈ ಕಾರ್ಯತಂತ್ರ ಅಂತಹ ಎರಡು ಏಜೆನ್ಸಿ ಮತ್ತು ಬ್ಯಾಂಕ್ ಗಳ ಜೊತೆ ಕಾರ್ಯಸಾಧುವಾಗಲಿದ್ದು, ಶ್ರೇಯಾಂಕವಿಲ್ಲದ ಸಣ್ಣ ಎಂಎಫ್ ಐಗಳಿಂದ ಐದಾರು ಪಟ್ಟು ಹೆಚ್ಚು ಸಾಲದ ಅರ್ಹತೆಯನ್ನು ವೃದ್ಧಿಗೊಳಿಸಲಾಗುವುದು. ಒಮ್ಮೆ ನಿಗದಿಪಡಿಸಿದ 500 ಕೋಟಿ ರೂ.ಗಳ ಯೋಜನೆಯನ್ನು ಆರಂಭಿಸಿದರೆ ಸಣ್ಣ ಎನ್ ಬಿ ಎಫ್ ಸಿ-ಎಂಎಫ್ಐಗಳಿಗೆ ಸುಮಾರು 2,500 ದಿಂದ 3,000 ಕೋಟಿ ರೂ.ವರೆಗೆ ಲಭ್ಯವಾಗಲಿದೆ. ಇದು ಈವರೆಗೂ ಸಾಲ ದೊರಕದ ದೂರದ ಪ್ರದೇಶಗಳಿಗೆ ಹಾಗೂ ವಿಶೇಷವಾಗಿ ಮಹಿಳೆಯರಿಗೆ ಈ ಸೌಲಭ್ಯ ದೊರಕಲಿದ್ದು, ಇದು ಇಡೀ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳನ್ನು ತರಲಿದೆ. 
ಎಂಎಸ್ಎಂಇ ಮತ್ತು ಸಾರ್ವಜನಿಕರಿಗೆ ಹೊಸದಾಗಿ ಸಾಲ ನೀಡಲು ಎನ್ ಬಿ ಎಫ್ ಸಿಗಳು, ಎಚ್ಎಫ್ ಸಿಗಳು ಮತ್ತು ಎಂಎಫ್ಐಗಳಿಗೆ ಭಾಗಶಃ ಸಾಲ ಖಾತ್ರಿ ಯೋಜನೆ 2.0ಗೆ 45,000 ಕೋಟಿ ರೂ. – 2020ರ ಆಗಸ್ಟ್ 28ರ ವರೆಗೆ ಬ್ಯಾಂಕ್ ಗಳು 25,055.5 ಕೋಟಿ ರೂ. ಬಂಡವಾಳ ಖರೀದಿಗೆ ಅನುಮೋದನೆ ನೀಡಿವೆ ಮತ್ತು ಹೆಚ್ಚುವರಿಯಾಗಿ 4,367 ಕೋಟಿ ರೂ. ಅನುಮೋದನೆಗೆ ಸದ್ಯ ಸಮಾಲೋಚನಾ ಪ್ರಕ್ರಿಯೆ ನಡೆದಿದೆ.  
ಎನ್ ಬಿ ಎಫ್ ಸಿ/ಎಚ್ಎಫ್ ಸಿ/ಎಂಎಫ್ಐಗಳಿಗೆ 30,000 ಕೋಟಿ ರೂ.ಗಳ ವಿಶೇಷ ನಗದು ಯೋಜನೆ ಕೂಡ ಅತ್ಯುತ್ತಮ ರೀತಿಯಲ್ಲಿ ಜಾರಿಯಾಗುತ್ತಿದೆ – ಎಸ್ ಬಿಐಸಿಎಪಿ ಈ ಯೋಜನೆ ಜಾರಿಗೆ ವಿಶೇಷ ಉದ್ದೇಶದ ಕಾರ್ಯಪಡೆಯನ್ನು(ಎಸ್ ಪಿವಿ) ಸ್ಥಾಪಿಸಲು ನಿಯೋಜಿಸಲಾಗಿದೆ ಈ ಯೋಜನೆಯನ್ನು 2020ರ ಜುಲೈ 1 ರಂದು ಹೊರಡಿಸಿದ ಪತ್ರಿಕಾ ಪ್ರಕಟಣೆಯ ಮೂಲಕ ಚಾಲನೆ ನೀಡಲಾಗಿದೆ. ಅದೇ ದಿನ ಆರ್ ಬಿಐ, ಯೋಜನೆಯ ಕುರಿತಂತೆ ಎನ್ ಬಿ ಎಫ್ ಸಿ ಮತ್ತು ಎಚ್ಎಫ್ ಸಿಗಳಿಗೆ ಸುತ್ತೋಲೆಯನ್ನು ಹೊರಡಿಸಿದೆ. 

2020ರ ಸೆಪ್ಟೆಂಬರ್ 11ರ ವರೆಗೆ 10590 ಕೋಟಿ ರೂ. ಮೌಲ್ಯ ಒಳಗೊಂಡಿರುವ 37 ಪ್ರಸ್ತಾವಗಳಿಗೆ ಅನುಮೋದನೆ ನೀಡಲಾಗಿದೆ. ಅವುಗಳಲ್ಲಿ ಆರು ಅರ್ಜಿಗಳಿಗೆ 783.5 ಕೋಟಿ ರೂ. ಆರ್ಥಿಕ ನೆರವು ಕೋರಲಾಗಿದ್ದು, ಆ ಬಗ್ಗೆ ಪ್ರಕ್ರಿಯೆ ಚಾಲ್ತಿಯಲ್ಲಿದೆ. 
 4. ಎಂಎಸ್ಎಂಇಗಳು ಸೇರಿದಂತೆ ವಾಣಿಜ್ಯ ಚಟುವಟಿಕೆಗಳಿಗೆ ಮೂರು ಲಕ್ಷ ಕೋಟಿ ರೂ. ಖಾತ್ರಿ ರಹಿತ ಸ್ವಯಂ ಸಾಲ – ವಾಣಿಜ್ಯೋದ್ಯಮಿಗಳಿಗೆ ನೆರವು ನೀಡುವ ಉದ್ದೇಶದಿಂದ 2020ರ ಫೆಬ್ರವರಿ 29ಕ್ಕೆ ಬಾಕಿ ಇದ್ದ ಸಾಲಕ್ಕೆ ಹೆಚ್ಚುವರಿಯಾಗಿ ಶೇ.20ರಷ್ಟು ದುಡಿಯುವ ಬಂಡವಾಳವನ್ನು ರಿಯಾಯಿತಿಯ ಬಡ್ಡಿ ದರದೊಂದಿಗೆ ಅವಧಿ ಸಾಲದ ರೂಪದಲ್ಲಿ ನೀಡಲಾಗುವುದು. ವಾರ್ಷಿಕ 25 ಕೋಟಿ ರೂ.ಗಳಿಂದ 100 ಕೋಟಿ ರೂ.ಗಳ ವರೆಗೆ ವಹಿವಾಟು ನಡೆಸುವಂತಹ ಘಟಕಗಳಿಗೆ ಇದು ಲಭ್ಯವಾಗಲಿದೆ. ಈ ಸೌಲಭ್ಯಕ್ಕಾಗಿ ಘಟಕಗಳು ಯಾವುದೇ ರೀತಿಯ ಗ್ಯಾರಂಟಿ ಅಥವಾ ಖಾತ್ರಿಯನ್ನು ಒದಗಿಸಬೇಕಿಲ್ಲ. ಈ ಮೊತ್ತಕ್ಕೆ ಶೇಕಡ 100ರಷ್ಟು ಖಾತ್ರಿಯನ್ನು ಭಾರತ ಸರ್ಕಾರ ಒದಗಿಸಲಿದ್ದು, 45 ಲಕ್ಷಕ್ಕೂ ಹೆಚ್ಚು ಎಂಎಸ್ಎಂಇಗಳಿಗೆ 3 ಲಕ್ಷ ಕೋಟಿ ರೂ.ಗಳವರೆಗೆ ಒಟ್ಟು ನಗದು ಸೌಲಭ್ಯ ನೀಡಲಾಗುವುದು.  
2020ರ ಮೇ 20 ರಂದು ಸಚಿವ ಸಂಪುಟದ ಅನುಮೋದನೆ ಪಡೆದ ನಂತರ ಹಣಕಾಸು ಸೇವೆಗಳ ಇಲಾಖೆ 23.05.2020ಕ್ಕೆ ಯೋಜನೆಯ ಕಾರ್ಯಾಚರಣೆಯ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ ಮತ್ತು 26.05.2020ಕ್ಕೆ ತುರ್ತು ಸಾಲ ಖಾತ್ರಿ ಯೋಜನೆ(ಇಸಿಎಲ್ ಜಿಎಸ್) ನಿಧಿಯನ್ನು ನೋಂದಾಯಿಸಿದೆ. 2020ರ ಆಗಸ್ಟ್ 4ರಂದು ಮಾರ್ಗಸೂಚಿಯನ್ನು ತಿದ್ದುಪಡಿ ಮಾಡಿ, ವಾಣಿಜ್ಯ ಉದ್ದೇಶಗಳಿಗೆ ಪಡೆಯುವ ವೈಯಕ್ತಿಕ ಸಾಲಗಳನ್ನೂ ಸಹ ಸೇರಿಸಲಾಗಿದೆ ಮತ್ತು ಸಾಲದ ಮಿತಿಯನ್ನು 50 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ ಹಾಗೂ ವಾರ್ಷಿಕ ವಹಿವಾಟಿನ ಮಿತಿಯನ್ನೂ ಸಹ 250 ಕೋಟಿ ರೂ.ಗೆ ಹೆಚ್ಚಳ ಮಾಡಲಾಗಿದೆ.  

2020ರ ಸೆಪ್ಟೆಂಬರ್ 10ರ ವರೆಗೆ ಸಾರ್ವಜನಿಕ ವಲಯದ ಬ್ಯಾಂಕ್ ಗಳು ಮತ್ತು ಅಗ್ರ 23 ಖಾಸಗಿ ಬ್ಯಾಂಕ್ ಗಳು ವರದಿ ಮಾಡಿರುವಂತೆ 42,01,576 ಸಾಲಗಾರರಿಗೆ 1,63,226.49 ಕೋಟಿ ರೂ.ಗಳನ್ನು ಅನುಮೋದಿಸಲಾಗಿದೆ. 2020ರ ಸೆಪ್ಟೆಂಬರ್ 10ರ ವರೆಗೆ 25,01,999 ಸಾಲಗಾರರಿಗೆ 1,18,138.64 ಕೋಟಿ ರೂ.  ಸಾಲ ವಿತರಿಸಲಾಗಿದೆ. 

 
ಆದಾಯ ತೆರಿಗೆ ಮರುಪಾವತಿ – 2020ರ ಏಪ್ರಿಲ್ 1 ರಿಂದ 2020ರ ಸೆಪ್ಟೆಂಬರ್ 8ರ ನಡುವಿನ ಅವಧಿಯಲ್ಲಿ  27.55 ಲಕ್ಷಕ್ಕೂ ಅಧಿಕ ತೆರಿಗೆ ಪಾವತಿದಾರರಿಗೆ 1,01,308 ಕೋಟಿ ರೂ. ಹಣವನ್ನು ಮರುಪಾವತಿ ಮಾಡಲಾಗಿದೆ. 25,83,507 ಪ್ರಕರಣಗಳಲ್ಲಿ 30,768 ಕೋಟಿ ರೂ. ಆದಾಯ ತೆರಿಗೆ ಮರುಪಾವತಿ ಮತ್ತು 1,71,155 ಪ್ರಕರಣಗಳಲ್ಲಿ 70,540 ಕೋಟಿ ರೂ. ಕಾರ್ಪೊರೇಟ್ ತೆರಿಗೆ ಮರುಪಾವತಿ ಮಾಡಲಾಗಿದೆ. ಒಟ್ಟಾರೆ 50 ಕೋಟಿ ರೂ.ಗಳವರೆಗೆ ಎಲ್ಲ ಬಾಕಿ ಇದ್ದ ಕಾರ್ಪೊರೇಟ್ ತೆರಿಗೆ ಮರುಪಾವತಿಗಳಲ್ಲಿ ಬಹುತೇಕ ಪ್ರಕರಣಗಳಲ್ಲಿ ಪಾವತಿಸಲಾಗಿದೆ. ಇತರೆ ಮರುಪಾವತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. 
**********

 



(Release ID: 1653811) Visitor Counter : 3430