ರೈಲ್ವೇ ಸಚಿವಾಲಯ

ಕಿಸಾನ್ ರೈಲು ಸ್ವಾಗತಕ್ಕೆ ನವದೆಹಲಿ ಸಜ್ಜು


ಆಂಧ್ರಪ್ರದೇಶದ ಅನಂತಪುರದಿಂದ ನವದೆಹಲಿಯ ಆದರ್ಶ ನಗರಕ್ಕೆ ಸಂಚರಿಸುವ ದಕ್ಷಿಣ ಭಾರತದ ಮೊದಲ “ಕಿಸಾನ್ ರೈಲಿಗೆ”ಹಸಿರು ನಿಶಾನೆ

“ಕೃಷಿ ಉತ್ಪನ್ನಗಳಿಗೆ ಸಾಧ್ಯವಾದಷ್ಟು ಉತ್ತಮವಾದ ವಿತರಣೆ ಮತ್ತು ಆದಾಯದ ಅಗತ್ಯವಿದೆ.  ಯಾವುದೇ ವಿಪತ್ತು ಅಥವಾ ಸವಾಲುಗಳಿಗೆ ಎದೆಗುಂದುವುದಿಲ್ಲ ಎಂದು ಭಾರತದ ರೈತರು ಸಾಬೀತುಪಡಿಸಿದ್ದಾರೆ.  ಕೃಷಿ ಉತ್ಪನ್ನಗಳು ದೇಶದ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ತಲುಪುವುದನ್ನು ಕಿಸಾನ್ ರೈಲು ಖಚಿತಪಡಿಸುತ್ತದೆ”- ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್

"ರೈತರ ಉತ್ಪನ್ನಗಳ ಮಾರುಕಟ್ಟೆಗೆ ನೆರವು ನೀಡಲು ಭಾರತೀಯ ರೈಲ್ವೆ ಬದ್ಧ" - ರೈಲ್ವೆ ಖಾತೆ ರಾಜ್ಯ ಸಚಿವ ಶ್ರೀ ಸುರೇಶ್ ಸಿ. ಅಂಗಡಿ

ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್ ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿ ಶ್ರೀ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರಿಂದ ಇಂದು ಅನಂತಪುರ - ನವದೆಹಲಿ ಕಿಸಾನ್ ರೈಲಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಸಿರು ನಿಶಾನೆ

ರೈಲ್ವೆ ಖಾತೆ ರಾಜ್ಯ ಸಚಿವ ಶ್ರೀ ಸುರೇಶ್ ಸಿ. ಅಂಗಡಿ ಅವರಿಂದ ಕಾರ್ಯಕ್ರಮದ ಅಧ್ಯಕ್ಷತೆ

Posted On: 09 SEP 2020 3:09PM by PIB Bengaluru

ಆಂಧ್ರಪ್ರದೇಶದ ಅನಂತಪುರದಿಂದ ನವದೆಹಲಿಯ ಆದರ್ಶ ನಗರಕ್ಕೆ ಸಂಚರಿಸುವ ದಕ್ಷಿಣ ಭಾರತದ ಮೊದಲಕಿಸಾನ್ ರೈಲಿಗೆಸೆಪ್ಟೆಂಬರ್ 9, 2020 ರಂದು ಹಸಿರು ನಿಶಾನೆ ತೋರಿಸಲಾಯಿತು.

ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್ ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿ ಶ್ರೀ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅನಂತಪು- ನವದೆಹಲಿ ಕಿಸಾನ್ ರೈಲಿಗೆ ಹಸಿರು ನಿಶಾನೆ ತೋರಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೈಲ್ವೆ ಖಾತೆ ರಾಜ್ಯ ಸಚಿವ ಶ್ರೀ ಸುರೇಶ್ ಸಿ.ಅಂಗಡಿ ವಹಿಸಿದ್ದರು.

ಸಂದರ್ಭದಲ್ಲಿ ಮಾತನಾಡಿದ ಶ್ರೀ ನರೇಂದ್ರ ಸಿಂಗ್ ತೋಮರ್, ಇದು ದಕ್ಷಿಣ ಭಾರತದ ಮೊದಲ ಕಿಸಾನ್ ರೈಲು ರೈತರ ಅನುಕೂಲಕ್ಕಾಗಿ ರಾಷ್ಟ್ರ ರಾಜಧಾನಿಗೆ ಸಂಪರ್ಕ ಕಲ್ಪಿಸುತ್ತದೆ. ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಮಾರ್ಗದರ್ಶನ ಮತ್ತು ಪ್ರೇರಣೆಯಿಂದಾಗಿ ಹಳ್ಳಿಗಳು ಮತ್ತು ರೈತರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಭಾರತೀಯ ರೈಲ್ವೆಯು ಕಿಸಾನ್ ರೈಲು ಪ್ರಾರಂಭಿಸಿದೆ ಎಂದರು.

 “ಕಿಸಾನ್ ರೈಲನ್ನು ಬಜೆಟ್ ನಲ್ಲಿ ಘೋಷಿಸಲಾಗಿತ್ತು. ಇಂದು ಸಂಚಾರ ಆರಂಭಿಸಿದೆ. ಇಂದು ರೈತರ ಪಾಲಿಗೆ ಒಳ್ಳೆಯ ದಿನ. ಕೃಷಿ ಉತ್ಪನ್ನಗಳಿಗೆ ಸಾಧ್ಯವಾದಷ್ಟು ಉತ್ತಮವಾದ ವಿತರಣೆ ಮತ್ತು ಆದಾಯದ ಅಗತ್ಯವಿದೆ. ಭಾರತದ ರೈತರು ಯಾವುದೇ ವಿಪತ್ತು ಅಥವಾ ಸವಾಲಿಗೆ ಎದೆಗುಂದುವುದಿಲ್ಲ ಎಂದು ಸಾಬೀತುಪಡಿಸಿದ್ದಾರೆ. ಕೃಷಿ ಉತ್ಪನ್ನಗಳು ದೇಶದ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ತಲುಪುವುದನ್ನು ಕಿಸಾನ್ ರೈಲು ಖಚಿತಪಡಿಸುತ್ತದೆಎಂದು ಶ್ರೀ ತೋಮರ್ ಹೇಳಿದರು.

ಪ್ರಧಾನ ಮಂತ್ರಿಯವರ ದೃಷ್ಟಿಕೋನ ಮತ್ತು ರೈತರ ಆದಾಯವನ್ನು ದ್ವಿಗುಣಗೊಳಿಸುವ ಬಜೆಟ್ಘೋಷಣೆಯು ಕಿಸಾನ್ ರೈಲು ಆರಂಭದ ಮೂಲಕ ಕಾರ್ಯರೂಪಕ್ಕೆ ಬಂದಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಶ್ರೀ ಸುರೇಶ್ ಸಿ. ಅಂಗಡಿ ಹೇಳಿದರು. ರಾಷ್ಟ್ರದ ಜೀವಸೆಲೆಯಾದ ಭಾರತೀಯ ರೈಲ್ವೆಯು ರೈತರ ಉತ್ಪನ್ನಗಳನ್ನು ಮಾರಾಟ ಮಾಡಲು ಅನುಕೂಲ ಕಲ್ಪಿಸಲು ಬದ್ಧವಾಗಿದೆ ಎಂದರು. ಆಂಧ್ರಪ್ರದೇಶದಲ್ಲಿ ರೈಲ್ವೆ ಮಾರ್ಗಗಳ ವಿದ್ಯುದ್ದೀಕರಣವನ್ನು ದೊಡ್ಡ ಪ್ರಮಾಣದಲ್ಲಿ ಕೈಗೆತ್ತಿಕೊಳ್ಳಲಾಗಿದೆ, ಇದರ ಪ್ರಯೋಜನವನ್ನು ಆಂಧ್ರಪ್ರದೇಶದ ಜನರು ಪಡೆಯಲಿದ್ದಾರೆ ಎಂದು ಸಚಿವರು ತಿಳಿಸಿದರು.

ದಕ್ಷಿಣ ಭಾರತದ ಮೊದಲ ಕಿಸಾನ್ ರೈಲು:

  • ಹೊಸದಾಗಿ ಆರಂಭಿಸಲಾಗಿರುವ ಕಿಸಾನ್ ರೈಲು ಆಂಧ್ರಪ್ರದೇಶದ ಅನಂತಪುರ ರೈಲ್ವೆ ನಿಲ್ದಾಣದಿಂದ ನವದೆಹಲಿಯ ಆದರ್ಶ ನಗರ ನಿಲ್ದಾಣವನ್ನು ತಲುಪುತ್ತದೆ.
  •  14 ಪಾರ್ಸೆಲ್ ವ್ಯಾನ್ಗಳೊಂದಿಗೆ ಲೋಡ್ ಮಾಡಲಾಗಿದೆ - ನಾಗ್ಪುರಕ್ಕೆ 04 ವ್ಯಾನ್ ಲೋಡ್ ಮತ್ತು 10 ವ್ಯಾನ್ ಲೋಡ್ ಆದರ್ಶ ನಗರಕ್ಕೆ ಮೀಸಲಾಗಿದ್ದು - ಒಟ್ಟು 332 ಟನ್.
  • ಉದ್ಘಾಟನಾ ಕಿಸಾನ್ ರೈಲು ಟೊಮೆಟೊ, ಬಾಳೆಹಣ್ಣು, ಕಿತ್ತಳೆ, ಪಪ್ಪಾಯಿ, ಕರಬೂಜ ಮತ್ತು ಮಾವಿನಹಣ್ಣುಗಳಿಂದ ತುಂಬಿದೆ.
  • ರೈಲು ಅನಂತಪುರದಿಂದ ನವದೆಹಲಿವರೆಗಿನ 2150 ಕಿ.ಮೀ. ದೂರವನ್ನು ಸುಮಾರು 40 ಗಂಟೆಗಳಲ್ಲಿ ಕ್ರಮಿಸಿ ವೇಗದ ಸಾರಿಗೆ ಸಂಪರ್ಕವನ್ನು ಒದಗಿಸುತ್ತದೆ,
  • ಅನಂತಪುರವು ಆಂಧ್ರಪ್ರದೇಶದ ಹಣ್ಣಿನ ಕೇಂದ್ರ ಆಗುತ್ತಿದೆ. ಜಿಲ್ಲೆಯ 58 ಲಕ್ಷ ಮೆ.ಟನ್ ಹಣ್ಣು ಮತ್ತು ತರಕಾರಿಗಳಲ್ಲಿ ಶೇ.80 ಕ್ಕಿಂತ ಹೆಚ್ಚು ರಾಜ್ಯದಿಂದ ಹೊರಗೆ ವಿಶೇಷವಾಗಿ ಉತ್ತರ ಭಾರತದ ರಾಜ್ಯಗಳಾದ ದೆಹಲಿ, ಉತ್ತರ ಪ್ರದೇಶ, ಪಂಜಾಬ್ ಮತ್ತು ಹರಿಯಾಣಗಳಲ್ಲಿ ಮಾರಾಟವಾಗುತ್ತವೆ. ಮೊದಲು ಇದನ್ನು ರಸ್ತೆಮಾರ್ಗಗಳಿಂದ ಸಾಗಿಸಲಾಗುತ್ತಿತ್ತು, ಇದು ಹೆಚ್ಚು ಸಮಯ ತೆಗೆದುಕೊಳ್ಳುವುದಲ್ಲದೆ, ಸಂಚಾರ ಸಮಯದಲಲ್ಇ ಆಗುವ ಹಾನಿಯಿಂದಾಗಿ ರೈತರಿಗೆ ಸೂಕ್ತ ಬೆಲೆ ದೊರೆಯುತ್ತಿರಲಿಲ್ಲ. ರೈಲ್ವೆಯು ಸುರಕ್ಷಿತ, ವಿಶ್ವಾಸಾರ್ಹ ಮತ್ತು ವೇಗದ ಸಾರಿಗೆಯನ್ನು ಒದಗಿಸುತ್ತದೆ, ಇದು ರೈತರಿಗೆ ಉತ್ತಮ ಬೆಲೆ ಪಡೆಯಲು ಸಹಾಯ ಮಾಡುತ್ತದೆ ಮತ್ತು ಮೂಲಕ ರೈತರು ಮತ್ತು ವ್ಯಾಪಾರಿಗಳಿಗೆ ಉತ್ತಮ ಆದಾಯವನ್ನು ನೀಡುತ್ತದೆ.
  • ಗುಂತಕಲ್ ರೈಲ್ವೆ ತಂಡ (ವಿಶೇಷವಾಗಿ ಹೊಸದಾಗಿ ಸ್ಥಾಪಿಸಲಾದ ವ್ಯಾಪಾರ ಅಭಿವೃದ್ಧಿ ಘಟಕ) ಮತ್ತು ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳ ಸಹಕಾರದೊಂದಿಗೆ ರೈಲ್ವೆ ಮೂಲಕ ಲೋಡ್ ಮಾಡುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ರೈತರು/ ವ್ಯಾಪಾರಿಗಳಿಗೆ ಅರಿವು ಮೂಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ. ಇದರಿಂದಾಗಿಯೇ ಇಂದು ಮೊದಲ ರೈಲು ಸಂಚಾರ ಆರಂಭಿಸಿದೆ.

***



(Release ID: 1652673) Visitor Counter : 224