ಗೃಹ ವ್ಯವಹಾರಗಳ ಸಚಿವಾಲಯ
ದೀಕ್ಷಾಂತ ಪೆರೇಡ್ ವೇಳೆ 71 ಆರ್. ಆರ್. (ನಿಯಮಿತ ನೇಮಕಾತಿ, 2018 ತಂಡ) ನ ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿಗಳಿಗೆ ಶುಭ ಕೋರಿದ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ
ಈ ಸಂದರ್ಭದಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಐ.ಪಿ.ಎಸ್. ಅಧಿಕಾರಿಗಳೊಂದಿಗೆ ಸಂವಾದ ನಡೆಸಿದ ಪ್ರಧಾನಿ ಶ್ರೀ ನರೇಂದ್ರ ಮೋದಿ
ಪ್ರಧಾನಿಯವರಿಗೆ ಕೃತಜ್ಞತೆ ಸಲ್ಲಿಸಿದ ಶ್ರೀ ಅಮಿತ್ ಶಾ "ಪ್ರಧಾನಿ ಮೋದಿಯವರ ಸ್ಪೂರ್ತಿದಾಯಕ ಭಾಷಣವು ಖಂಡಿತವಾಗಿಯೂ ನಮ್ಮ ಯುವ ಅಧಿಕಾರಿಗಳ ಸ್ಥೈರ್ಯವನ್ನು ಹೆಚ್ಚಿಸುತ್ತದೆ ಮತ್ತು ಪೊಲೀಸ್ - ಸಾರ್ವಜನಿಕ ಸಂಬಂಧಗಳನ್ನು ಹೇಗೆ ಬಲಪಡಿಸಬೇಕು ಎಂಬುದರ ಕುರಿತು ಅವರಿಗೆ ಮಾರ್ಗದರ್ಶನ ನೀಡುತ್ತದೆ" ಎಂದು ಹೇಳಿದರು
"ರಾಷ್ಟ್ರದ ಸುರಕ್ಷತೆ ಮತ್ತು ಸಮಗ್ರತೆಯನ್ನು ಖಾತರಿಪಡಿಸುವಾಗ ಈ ಐಪಿಎಸ್ ಅಧಿಕಾರಿಗಳು ಅತ್ಯಂತ ಸಮರ್ಪಣೆಯೊಂದಿಗೆ ಸೇವೆ ಸಲ್ಲಿಸಲಿ": ಕೇಂದ್ರ ಗೃಹ ಸಚಿವರು
"ಸೇವೆಯ ಬಗೆಗಿನ ಅವರ ಬದ್ಧತೆಯು ನಮ್ಮ ಯುವಜನರನ್ನು ಭಾರತೀಯ ಪೊಲೀಸ್ ಸೇವೆಗೆ ಸೇರಲು ಪ್ರೇರೇಪಿಸುತ್ತದೆ ಎಂಬ ವಿಶ್ವಾಸ ನನಗಿದೆ": ಕೇಂದ್ರ ಗೃಹ ಸಚಿವರು
ವಿಡಿಯೋ ಕಾನ್ಫರೆನ್ಸ್ ಮೂಲಕ ಪರೇಡ್ ನಲ್ಲಿ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ, ರಾಜ್ಯ ಸಚಿವ ಶ್ರೀ ಜಿ. ಕಿಶನ್ ರೆಡ್ಡಿ ಮತ್ತು ಕೇಂದ್ರ ಗೃಹ ಕಾರ್ಯದರ್ಶಿ ಶ್ರೀ ಅಜಯ್ ಭಲ್ಲಾ ಭಾಗಿ
Posted On:
04 SEP 2020 3:10PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಹೈದ್ರಾಬಾದ್ ನ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡಮಿ (ಎಸ್.ವಿ.ಪಿ.ಎನ್.ಪಿ.ಎ.)ಯಲ್ಲಿ ನಡೆದ 71ನೇ ಆರ್. ಆರ್. (ನಿಯಮಿತ ನೇಮಕಾತಿ, 2018 ತಂಡ) ನ ದೀಕ್ಷಾಂತ ಪರೇಡ್ ವೇಳೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು. ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರು ಕೂಡ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಭಾಗಿಯಾಗಿದ್ದರು.
ಸಮಾರಂಭದಲ್ಲಿ ಪಾಲ್ಗೊಂಡಿದ್ದಕ್ಕಾಗಿ ಪ್ರಧಾನಮಂತ್ರಿಯವರಿಗೆ ಕೃತಜ್ಞತೆ ಸಲ್ಲಿಸಿದ ಶ್ರೀ ಅಮಿತ್ ಶಾ, ಅವರ ಸ್ಫೂರ್ತಿದಾಯಕ ಭಾಷಣ ಖಂಡಿತವಾಗಿ ನಮ್ಮ ಯುವ ಅಧಿಕಾರಿಗಳ ಆತ್ಮಸ್ಥೈರ್ಯ ಹೆಚ್ಚಿಸುತ್ತದೆ ಮತ್ತು ಪೊಲೀಸ್- ಸಾರ್ವಜನಿಕರ ಬಾಂಧವ್ಯ ಹೇಗೆ ಬಲಪಡಿಸಬೇಕು ಎಂಬ ಬಗ್ಗೆ ಮಾರ್ಗದರ್ಶನ ಮಾಡುತ್ತದೆ” ಎಂದರು.
ಯುವ ಐ.ಪಿ.ಎಸ್. ಅಧಿಕಾರಿಗಳಿಗೆ ಅವರ ದೀಕ್ಷಾಂತ ಪರೇಡ್ ಸಂದರ್ಭದಲ್ಲಿ ಶುಭ ಕೋರಿ ಟ್ವೀಟ್ ಮಾಡಿರುವ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ, "ರಾಷ್ಟ್ರದ ಸುರಕ್ಷತೆ ಮತ್ತು ಸಮಗ್ರತೆಯನ್ನು ಖಾತರಿಪಡಿಸುವಾಗ ಅತ್ಯಂತ ಸಮರ್ಪಣೆಯೊಂದಿಗೆ ಅವರು ಸೇವೆ ಸಲ್ಲಿಸಲಿ. ಸೇವೆಯ ಬಗೆಗಿನ ಅವರ ಬದ್ಧತೆಯು ನಮ್ಮ ಯುವಕರಿಗೆ ಭಾರತೀಯ ಪೊಲೀಸ್ ಸೇವೆಗೆ ಸೇರಲು ಪ್ರೇರಣೆ ನೀಡುತ್ತದೆ ಎಂದು ವಿಶ್ವಾಸ ನನಗಿದೆ’ ಎಂದರು.
ಪ್ರಧಾನಮಂತ್ರಿ, ಕೇಂದ್ರ ಗೃಹ ಸಚಿವರೊಂದಿಗೆ, ಕೇಂದ್ರ ಗೃಹ ವ್ಯವಹಾರಗಳ ಖಾತೆ ರಾಜ್ಯ ಸಚಿವ ಶ್ರೀ ಜಿ ಕಿಶನ್ ರೆಡ್ಡಿ ಮತ್ತು ಕೇಂದ್ರ ಗೃಹ ಕಾರ್ಯದರ್ಶಿ ಶ್ರೀ ಅಜಯ್ ಭಲ್ಲಾ ಅವರು ಕೂಡ ಪ್ರತ್ಯೇಕವಾಗಿ ಇಂದಿನ ದೀಕ್ಷಾಂತ ಪರೇಡ್ ನಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪಾಲ್ಗೊಂಡಿದ್ದರು.
ಕಳೆದ ವರ್ಷ ಅಕ್ಟೋಬರ್ 7ರಂದು ಕೇಂದ್ರ ಗೃಹ ಸಚಿವರು ಈ ತಂಡದ ಪ್ರೊಬೆಷನರುಗಳ ಜೊತೆ ದೆಹಲಿಯಲ್ಲಿ ಔಪಚಾರಿಕವಾಗಿ ಸಂವಾದ ನಡೆಸಿದ್ದರು. ಆ ಸಂದರ್ಭದಲ್ಲಿ ಶ್ರೀ ಅಮಿತ್ ಶಾ ಯುವ ಐಪಿಎಸ್ ಪ್ರೊಬೆಷನರಿಗಳಿಗೆ ಜನರ ಸುರಕ್ಷತೆ ಮತ್ತು ಭದ್ರತೆಯ ಖಾತ್ರಿ ಪಡಿಸುವ ನಿರಂತರ ಕಾರ್ಯವಾಗಿದ್ದು, ಹೆಮ್ಮೆ ಪಡುವಂತೆ ತಿಳಿಸಿದ್ದರು. ಪೊಲೀಸರ ಬಗ್ಗೆ ಸಾರ್ವಜನಿಕರ ಅಭಿಪ್ರಾಯವನ್ನು ಧನಾತ್ಮಕವಾಗಿ ಬದಲಾಯಿಸುವ ಅಗತ್ಯವನ್ನು ಪ್ರತಿಪಾದಿಸಿದರು.
28 ಮಹಿಳಾ ಪ್ರೊಬೆಷನರಿಗಳೂ ಸೇರಿದಂತೆ 131 ಐಪಿಎಸ್ ಪ್ರೊಬೆಷನರಿಗಳುತಮ್ಮ 42 ವಾರಗಳ ಆರಂಭಿಕ ಕೋರ್ಸ್ ನ ಮೊದಲ ಹಂತದ ತರಬೇತಿಯನ್ನು ಅಕಾಡಮಿಯಲ್ಲಿ ಪೂರ್ಣಗೊಳಿಸಿದ್ದಾರೆ. ಅವರೆಲ್ಲರೂ 2018ರ ಡಿಸೆಂಬರ್ 17ರಂದು ಇತರ ಸೇವೆಗಳಾದ ಐ.ಎ.ಎಸ್., ಐ.ಎಫ್.ಎಸ್. ಇತ್ಯಾದಿಯಂತೆ ಮಸ್ಸೂರಿಯ ಲಾಲ್ ಬಹಾದ್ದೂರ್ ಶಾಸ್ತ್ರೀ ರಾಷ್ಟ್ರೀಯ ಆಡಳಿತ ಅಕಾಡಮಿ (ಎಲ್.ಬಿ.ಎಸ್. ಎನ್.ಎಎ) ಮತ್ತು ಹೈದ್ರಾಬಾದ್ ನ ತೆಲಂಗಾಣದ ಡಾ. ಮರ್ರಿ ಚೆನ್ನಾ ರೆಡ್ಡಿ ಎಚ್.ಆರ್.ಡಿ. ಸಂಸ್ಥೆಯಲ್ಲಿ ಫೌಂಡೇಷನ್ ಕೋರ್ಸ್ ಪೂರ್ಣಗೊಳಿಸಿದ ತರುವಾಯ ಈ ಅಕಾಡಮಿಗೆ ಸೇರಿದ್ದರು.
ಎಸ್.ವಿ.ಪಿ. ಎನ್.ಪಿ.ಎ.ಯಲ್ಲಿ ಆರಂಭಿಕ ತರಬೇತಿ ಕೋರ್ಸ್ ವೇಳೆ ಪ್ರೊಬೇಷನರ್ ಗಳು ವಿವಿಧ ಒಳಾಂಗಣ ಮತ್ತು ಹೊರಾಂಗಣ ವಿಷಯಗಳಲ್ಲಿ ಅಂದರೆ ಕಾನೂನು, ತನಿಖೆ, ವಿಧಿವಿಜ್ಞಾನ, ನಾಯಕತ್ವ ಮತ್ತು ನಿರ್ವಹಣೆ, ಅಪರಾಧಶಾಸ್ತ್ರ, ಸಾರ್ವಜನಿಕ ವ್ಯವಸ್ಥೆ ಮತ್ತು ಆಂತರಿಕ ಭದ್ರತೆ, ಸಿದ್ಧಾಂತ ಮತ್ತು ಮಾನವ ಹಕ್ಕುಗಳು, ಆಧುನಿಕ ಭಾರತೀಯ ಪೊಲೀಸ್ ವ್ಯವಸ್ಥೆ, ಕ್ಷೇತ್ರ ಕೌಶಲ ಮತ್ತು ತಂತ್ರಗಾರಿಕೆ, ಶಸ್ತ್ರಾಸ್ತ್ರ ತರಬೇತಿ, ಬಂದೂಕು ಚಲಾವಣೆಯಲ್ಲಿ ತರಬೇತಿ ಪಡೆದುಕೊಂಡಿದ್ದರು.
***
(Release ID: 1651365)
Visitor Counter : 205