ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ

2020ರ ಸೆಪ್ಟೆಂಬರ್ 7ರಿಂದ ಹಂತ ಹಂತವಾಗಿ ಮೆಟ್ರೋ ಸೇವೆ ಪುನರಾರಂಭ


ಎಸ್.ಓ.ಪಿ. ಮಾರ್ಗಸೂಚಿ ಪ್ರಕಟಿಸಿದ ಶ್ರೀ ಹರ್ದೀಪ್ ಸಿಂಗ್ ಪುರಿ

ಮೆಟ್ರೋ ಪ್ರಯಾಣಿಕರಿಗೆ ಮತ್ತು ಸಿಬ್ಬಂದಿಗೆ ಮಾಸ್ಕ್ ಕಡ್ಡಾಯ

ರೋಗಲಕ್ಷಣವಿಲ್ಲದ ಪ್ರಯಾಣಿಕರಿಗೆ ಮಾತ್ರವೇ ಅವಕಾಶ

ತಾಪನ, ವಾತಾಯನ ಮತ್ತು ಹವಾನಿಯಂತ್ರಣ (ಎಚ್‌.ವಿಎಸಿ) ವ್ಯವಸ್ಥೆಯ ಬಳಕೆ

Posted On: 02 SEP 2020 6:56PM by PIB Bengaluru

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ (ಸ್ವತಂತ್ರ ನಿರ್ವಹಣೆ) ರಾಜ್ಯ ಸಚಿವ ಶ್ರೀ ಹರ್ದೀಪ್ ಎಸ್. ಪುರಿ ಅವರಿಂದು ಮಾಧ್ಯಮ ಗೋಷ್ಠಿಯಲ್ಲಿ ಮೆಟ್ರೋ ರೈಲುಗಳ ಕಾರ್ಯಾಚರಣೆ ಕುರಿತ ಎಸ್..ಪಿ. ಮಾರ್ಗಸೂಚಿಗಳನ್ನು ಪ್ರಕಟಿಸಿದರು.

ಗೃಹ ವ್ಯವಹಾರಗಳ ಸಚಿವಾಲಯದ ದಿನಾಂಕ 29.8.2020 ಆದೇಶ ಸಂಖ್ಯೆ40-3/2020-ಡಿಎಂ-I() ರೀತ್ಯ, ಮೆಟ್ರೋ ಸೇವೆಗಳು 2020 ಸೆಪ್ಟೆಂಬರ್ 7ರಿಂದ ಹಂತ ಹಂತವಾಗಿ ಆರಂಭವಾಗಲಿವೆ. ಉದ್ದೇಶಕ್ಕಾಗಿ ಎಸ್..ಪಿ. ಮಾರ್ಗಸೂಚಿಗಳನ್ನು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಸಿದ್ಧಪಡಿಸಿದ್ದು, ಅದಕ್ಕೆ ಗೃಹ ವ್ಯವಹಾರಗಳ ಸಚಿವಾಲಯ ಸಮ್ಮತಿಸಿದೆ ಎಂದರು.

ಅದರ ವಿಸ್ತೃತ ಲಕ್ಷಣಗಳು ಕೆಳಗಿನಂತಿವೆ: -

. ಮೆಟ್ರೋ ಸೇವೆ ಹಂತಹಂತವಾಗಿ ಪುನಾರಂಭಗೊಳ್ಳಲಿವೆ. ಒಂದಕ್ಕಿಂತ ಹೆಚ್ಚು ಮಾರ್ಗ ಹೊಂದಿರುವ ಮೆಟ್ರೋಗಳು 2020 ಸೆಪ್ಟೆಂಬರ್ 7ರಿಂದ ವಿವಿಧ ಮಾರ್ಗಗಳನ್ನು ಹಂತಹಂತವಾಗಿ ಆರಂಭಿಸಬೇಕು, ಮೂಲಕ ಎಲ್ಲ ಕಾರಿಡಾರ್ ಗಳೂ 2020 ಸೆಪ್ಟೆಂಬರ್ 12ರೊಳಗೆ ಕಾರ್ಯಾರಂಭಿಸಬೇಕು. ದೈನಂದಿನ ಕಾರ್ಯಾಚರಣೆಗಳಿಗೆ ಆರಂಭದಲ್ಲಿ ಅಡ್ಡಿಯಾಗಬಹುದು, ಇದನ್ನು 2020 ಸೆಪ್ಟೆಂಬರ್ 12 ರೊಳಗೆ ಪೂರ್ಣ ಆದಾಯ ಸೇವೆಯಾಗಿ ಪುನರಾರಂಭಿಸುವುದರೊಂದಿಗೆ ಕ್ರಮೇಣ ಹೆಚ್ಚಿಸಬೇಕಾಗಿದೆ. ನಿಲ್ದಾಣಗಳಲ್ಲಿ ಮತ್ತು ರೈಲುಗಳಲ್ಲಿ ಪ್ರಯಾಣಿಕರ ದಟ್ಟಣೆ ತಪ್ಪಿಸಲು ರೈಲುಗಳ ಸಂಚಾರದ ಆವರ್ತನೆಗಳನ್ನು ನಿಯಂತ್ರಿಸಬೇಕು.

ಬಿ. ನಿಲ್ದಾಣಗಳು/ಪ್ರವೇಶ ನಿರ್ಗಮನದ ಬಾಗಿಲುಗಳನ್ನು ಕಂಟೈನ್ಮೆಂಟ್ ವಲಯದಲ್ಲಿ ಮುಚ್ಚಲಾಗುತ್ತದೆ.

ಸಿ. ವ್ಯಕ್ತಿಗತ ಅಂತರ ಖಾತ್ರಿಪಡಿಸುವ ನಿಟ್ಟಿನಲ್ಲಿ, ನಿಲ್ದಾಣಗಳಲ್ಲಿ ಮತ್ತು ರೈಲಿನ ಒಳಗೆ ಸೂಕ್ತ ಗುರುತುಗಳನ್ನು ಮಾಡಲಾಗುವುದು.

ಡಿ. ಎಲ್ಲ ಪ್ರಯಾಣಿಕರಿಗೆ ಮತ್ತು ಸಿಬ್ಬಂದಿಗೆ ಮಾಸ್ಕ್ ಧಾರಣೆ ಕಡ್ಡಾಯವಾಗಿರುತ್ತದೆ. ಮೆಟ್ರೋ ರೈಲು ನಿಗಮ ಮಾಸ್ಕ್ ಇಲ್ಲದೆ ಆಗಮಿಸುವ ಪ್ರಯಾಣಿಕರಿಗೆ ಹಣ ಪಾವತಿಯ ಆಧಾರದ ಮೇಲೆ ಮಾಸ್ಕ್ ಒದಗಿಸುವ ವ್ಯವಸ್ಥೆ ಮಾಡಬೇಕು.

. ಥರ್ಮಲ್ ಸ್ಕ್ಯಾನಿಂಗ್ ನಂತರ ಕೇವಲ ರೋಗ ಲಕ್ಷಣ ಇಲ್ಲದವರಿಗೆ ಮಾತ್ರ ನಿಲ್ದಾಣ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ. ರೋಗಲಕ್ಷಣ ಕಂಡುಬಂದ ಪ್ರಯಾಣಿಕರಿಗೆ ಹತ್ತಿರದ ಕೋವಿಡ್ ಚಿಕಿತ್ಸಾ ಕೇಂದ್ರ/ಆಸ್ಪತ್ರೆಗೆ ಪರೀಕ್ಷೆ/ವೈದ್ಯಕೀಯ ನಿಗಾಕ್ಕೆ ಸಲಹೆ ಮಾಡಲಾಗುವುದು. ಆರೋಗ್ಯ ಸೇತು ಆಪ್ ಪ್ರೋತ್ಸಾಹಿಸಲಾಗುವುದು.

ಎಫ್. ನಿಲ್ದಾಣದ ಪ್ರವೇಶಗಳಲ್ಲಿ ಕರ ನೈರ್ಮಲ್ಯಕಗಳ ವ್ಯವಸ್ಥೆಯನ್ನು ಪ್ರಯಾಣಿಕರ ಬಳಕೆಗೆ ಒದಗಿಸಲಾಗುವುದು. ಮಾನವರ ಸಂಪರ್ಕಕ್ಕೆ ಬರುವ ಎಲ್ಲ ಪ್ರದೇಶಗಳನ್ನು ಅಂದರೆ ಸಾಧನಗಳು, ರೈಲು, ಕಾರ್ಯಕ್ಷೇತ್ರ, ಲಿಫ್ಟ್, ಎಸ್ಕಲೇಟರ್ ಗಳು, ಕೈಹಿಡಿಗಳು, .ಎಫ್.ಸಿ. ಗೇಟ್ ಗಳು, ಶೌಚಾಲಯ ಇತ್ಯಾದಿಗಳನ್ನು ನಿಯಮಿತ ಸಮಯಗಳಲ್ಲಿ ನೈರ್ಮಲ್ಯ ನಿರ್ವಹಿಸಲಾಗುವುದು.

ಜಿ. ಸ್ಮಾರ್ಟ್ ಕಾರ್ಡ್ ಬಳಕೆ ಮತ್ತು ನಗದು ರಹಿತ/ಆನ್ ಲೈನ್ ವಹಿವಾಟಿಗೆ ಉತ್ತೇಜನ ನೀಡಲಾಗುವುದು. ಟೋಕನ್ ಗಳು ಮತ್ತು ಕಾಗದದ ಚೀಟಿ/ಟಿಕೆಟ್ ಗಳನ್ನು ಸೂಕ್ತ ನೈಮರ್ಲ್ಯದೊಂದಿಗೆ ಬಳಸಲಾಗುವುದು.

ಎಚ್. ವ್ಯಕ್ತಿಗತ ಅಂತರ ಕಾಯ್ದುಕೊಳ್ಳಲು ಸುಗಮವಾಗಿ ರೈಲು ಹತ್ತುಲು/ಇಳಿಯಲು ನಿಲ್ದಾಣಗಳಲ್ಲಿ ಸೂಕ್ತ ಸಮಯಾವಕಾಶ ನೀಡಲಾಗುವುದು. ಮೆಟ್ರೋ ರೈಲು ನಿಗಮ ಸೂಕ್ತ ವ್ಯಕ್ತಿಗತ ಅಂತರದ ಖಾತ್ರಿಗೆ ಯಾವುದೇ ನಿಲ್ದಾಣದ ನಿಲುಗಡೆ ಕೈಬಿಡಬಹುದು.

. ಪ್ರಯಾಣಿಕರಿಗೆ ಆದಷ್ಟೂ ಕಡಿಮೆ ಸರಂಜಾಮಿನೊಂದಿಗೆ ಪ್ರಯಾಣಿಸುವಂತೆಹಾಗೂ ಸುಗಮ ಮತ್ತು ತ್ವರಿತ ಸ್ಕ್ಯಾನಿಂಗ್ ಗಾಗಿ ಲೋಹದ ವಸ್ತುಗಳನ್ನು ಜೊತೆಯಲ್ಲಿ ತರದಂತೆ ಸಲಹೆ ಮಾಡಲಾಗಿದೆ.

ಜೆ. ಕೇಂದ್ರ ಲೋಕೋಪಯೋಗಿ ಇಲಾಖೆ (ಸಿಪಿಡಬ್ಲ್ಯುಡಿ) ಮತ್ತು ಭಾರತೀಯ ತಾಪನ ಮತ್ತು ರೆಫ್ರಿಜರೇಟಿಂಗ್ ಹಾಗೂ ಹವಾನಿಯಂತ್ರಣ ಎಂಜಿನಿಯರಿಂಗ್ (.ಎಸ್.ಎಚ್.ಆಆರ್...) ಮಾರ್ಗಸೂಚಿಯಂತೆ ತಾಪನ, ವಾತಾಯನ ಮತ್ತು ಹವಾನಿಯಂತ್ರಣ (ಎಚ್.ವಿ..ಸಿ.) ವ್ಯವಸ್ಥೆಯನ್ನು ಮಾಡಲಾಗುವುದು.

ಕೆ. ವಿದ್ಯುನ್ಮಾನ/ಮುದ್ರಣ/ಸಾಮಾಜಿಕ ಮಾಧ್ಯಮ, ಬಿತ್ತಿಪತ್ರ, ಬ್ಯಾನರ್, ಫಲಕ, ಅಂತರ್ಜಾಲತಾಣ ಇತ್ಯಾದಿಗಳ ಮೂಲಕ ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐಇಸಿ) ಅಭಿಯಾನವನ್ನು ಆರಂಭಿಸಲಾಗುವುದು.

. ಮೆಟ್ರೋ ರೈಲು ನಿಗಮ ನಿಲ್ದಾಣದ ಹೊರಗಿನ ಜನಸಂದಣಿಯನ್ನು ನಿಯಂತ್ರಿಸಲು ಮತ್ತು ಆಕಸ್ಮಿಕಗಳನ್ನು ಎದುರಿಸಲು ರಾಜ್ಯ ಪೊಲೀಸ್ ಮತ್ತು ಸ್ಥಳೀಯ ಆಡಳಿತದೊಂದಿಗೆ ನಿಕಟ ಸಂಬಂಧವನ್ನು ಇಟ್ಟುಕೊಳ್ಳಲಿದೆ.

ಮೇಲಿನ ಮಾರ್ಗಸೂಚಿಗಳ ಆಧಾರದ ಮೇಲೆ ದೆಹಲಿ, ನೋಯಿಡಾ, ಚೆನ್ನೈ, ಕೊಚ್ಚಿ, ಬೆಂಗಳೂರು, ಮುಂಬೈ, ಮಾರ್ಗ 1, ಜೈಪುರ, ಹೈದ್ರಾಬಾದ್, ಮಹಾ ಮೆಟ್ರೋ (ನಾಗಪುರ), ಕೋಲ್ಕತ್ತಾ, ಗುಜರಾತ್ ಮತ್ತು ಯುಪಿ ಮೆಟ್ರೋ (ಲಖನೌ) ಗಳು ತಮ್ಮ ಎಸ್..ಪಿ.ಗಳನ್ನು ಸಿದ್ದಪಡಿಸಿವೆ. ಮಹಾರಾಷ್ಟ್ರ ಸರ್ಕಾರ ಸೆಪ್ಟೆಂಬರ್ 2020ರಲ್ಲಿ ಮೆಟ್ರೋ ರೈಲು ಸೇವೆ ಪುನಾರಂಭಿಸದಿರಲು ನಿರ್ಧರಿಸಿದ್ದಾರೆ. ಹೀಗಾಗಿ ಮುಂಬೈ ಮಾರ್ಗ 1, ಮಹಾ ಮೆಟ್ರೋ ಕಾರ್ಯಾಚರಣೆ ಅಕ್ಟೋಬರ್ 2020ರಿಂದ ಅಥವಾ ಸರ್ಕಾರದ ಮುಂದೆ ನಿರ್ಧರಿಸಿದಾಗ ಆರಂಭಗೊಳ್ಳಲಿದೆ.

Click Here To See PPT

***


(Release ID: 1650915) Visitor Counter : 256