ಪ್ರಧಾನ ಮಂತ್ರಿಯವರ ಕಛೇರಿ
ಮಾಜಿ ರಾಷ್ಟ್ರಪತಿ ಭಾರತರತ್ನ ಶ್ರೀ ಪ್ರಣಬ್ ಮುಖರ್ಜಿ ಅವರ ನಿಧನಕ್ಕೆ ಪ್ರಧಾನಿ ಸಂತಾಪ
प्रविष्टि तिथि:
31 AUG 2020 6:45PM by PIB Bengaluru
ಮಾಜಿ ರಾಷ್ಟ್ರಪತಿ ಭಾರತರತ್ನ ಶ್ರೀ ಪ್ರಣಬ್ ಮುಖರ್ಜಿ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಂಬನಿ ಮಿಡಿದಿದ್ದಾರೆ.
"ಭಾರತರತ್ನ ಶ್ರೀ ಪ್ರಣಬ್ ಮುಖರ್ಜಿ ಅವರ ನಿಧನಕ್ಕೆ ಭಾರತ ದುಃಖ ವ್ಯಕ್ತಪಡಿಸುತ್ತದೆ. ನಮ್ಮ ರಾಷ್ಟ್ರದ ಅಭಿವೃದ್ಧಿ ಪಥದಲ್ಲಿ ಅಳಿಸಲಾಗದ ಹೆಜ್ಜೆಗುರುತನ್ನು ಅವರು ಮೂಡಿಸಿದ್ದಾರೆ. ಶ್ರೇಷ್ಠ ಮುತ್ಸದ್ಧಿ, ಅತ್ಯುನ್ನತ ರಾಜಕಾರಣಿಯಾಗಿದ್ದ ಅವರು ರಾಜಕೀಯ ರಂಗದಾದ್ಯಂತ ಮತ್ತು ಸಮಾಜದ ಎಲ್ಲಾ ವರ್ಗದ ಮೆಚ್ಚುಗೆಗೆ ಪಾತ್ರರಾಗಿದ್ದರು.
ಹಲವು ದಶಕಗಳ ತಮ್ಮ ರಾಜಕೀಯ ಜೀವನದಲ್ಲಿ, ಶ್ರೀ ಪ್ರಣಬ್ ಮುಖರ್ಜಿ ಅವರು ಪ್ರಮುಖ ಆರ್ಥಿಕ ಮತ್ತು ವ್ಯೂಹಾತ್ಮಕ ಸಚಿವಾಲಯಗಳಲ್ಲಿ ದೀರ್ಘಕಾಲೀನ ಕೊಡುಗೆ ನೀಡಿದ್ದರು., ಯಾವಾಗಲೂ ಚೆನ್ನಾಗಿ ಸಿದ್ಧರಾಗಿ, ಅತ್ಯಂತ ಸ್ಪಷ್ಟವಾಗಿ ಮತ್ತು ಹಾಸ್ಯಮಯವಾಗಿ ಮಾತನಾಡುತ್ತಿದ್ದ ಅದ್ಭುತ ಸಂಸದೀಯ ಪಟುವಾಗಿದ್ದರು.
ಭಾರತದ ರಾಷ್ಟ್ರಪತಿಗಳಾಗಿ, ಶ್ರೀ ಪ್ರಣಬ್ ಮುಖರ್ಜಿ ಅವರು ರಾಷ್ಟ್ರಪತಿ ಭವನವನ್ನು ಶ್ರೀಸಾಮಾನ್ಯರಿಗೆ ಹೆಚ್ಚು ಸಮೀಪಗೊಳಿಸಿದ್ದರು. ರಾಷ್ಟ್ರಪತಿಗಳ ಭವನವನ್ನು ಕಲಿಕೆ, ನಾವಿನ್ಯತೆ, ಸಂಸ್ಕೃತಿ, ವಿಜ್ಞಾನ ಮತ್ತು ಸಾಹಿತ್ಯ ಕೇಂದ್ರವಾಗಿ ಮಾಡಿದ್ದರು. ಪ್ರಮುಖ ನೀತಿ ನಿರೂಪಣೆಗಳಲ್ಲಿ ಅವರ ಬುದ್ಧಿವಂತಿಕೆಯ ಸಲಹೆಯನ್ನು ನಾನು ಎಂದಿಗೂ ಮರೆಯುವುದಿಲ್ಲ.
2014ರಲ್ಲಿ ನಾನು ದೆಹಲಿಗೆ ಹೊಸಬನಾಗಿದ್ದೆ. ಮೊದಲ ದಿನದಿಂದ, ಶ್ರೀ ಪ್ರಣಬ್ ಮುಖರ್ಜಿ ಅವರ ಮಾರ್ಗದರ್ಶನ, ಬೆಂಬಲ ಮತ್ತು ಆಶೀರ್ವಾದಗಳು ನನಗೆ ಲಭಿಸಿತ್ತು. ಅವರೊಂದಿಗಿನ ನನ್ನ ಸಂವಹನಗಳನ್ನು ನಾನು ಯಾವಾಗಲೂ ಆನಂದಿಸುತ್ತೇನೆ. ಅವರ ಕುಟುಂಬದವರಿಗೆ, ಸ್ನೇಹಿತರು, ಅಭಿಮಾನಿಗಳು ಮತ್ತು ಭಾರತದಾದ್ಯಂತ ಬೆಂಬಲಿಗರಿಗೆ ಸಂತಾಪ ಸೂಚಿಸುತ್ತೇನೆ. ಓಂ ಶಾಂತಿ.
***
(रिलीज़ आईडी: 1650108)
आगंतुक पटल : 263
इस विज्ञप्ति को इन भाषाओं में पढ़ें:
Punjabi
,
English
,
Urdu
,
हिन्दी
,
Marathi
,
Bengali
,
Assamese
,
Manipuri
,
Gujarati
,
Odia
,
Tamil
,
Telugu
,
Malayalam