ಪ್ರಧಾನ ಮಂತ್ರಿಯವರ ಕಛೇರಿ
ಆತ್ಮನಿರ್ಭರ ಭಾರತ ಆ್ಯಪ್ ಇನ್ನೋವೇಶನ್ ಚಾಲೆಂಜ್ ಅಡಿಯಲ್ಲಿ ಅಭಿವೃದ್ಧಿಪಡಿಸಿದ ಅಪ್ಲಿಕೇಶನ್‌ಗಳನ್ನು ಶ್ಲಾಘಿಸಿದ ಪ್ರಧಾನಿ
Posted On:
30 AUG 2020 3:11PM by PIB Bengaluru
ಆತ್ಮನಿರ್ಭರ ಭಾರತ ಆಪ್ ಇನ್ನೋವೇಶನ್ ಚಾಲೆಂಜ್ ನಲ್ಲಿ ಯುವಕರು ಉತ್ಸಾಹದಿಂದ ಭಾಗವಹಿಸಿದ್ದರು ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಇತ್ತೀಚಿನ ಮನ್ ಕಿ ಬಾತ್ ನಲ್ಲಿ ಹೇಳಿದ್ದಾರೆ. ಸುಮಾರು ಮೂರನೇ ಎರಡರಷ್ಟು ಅರ್ಜಿಗಳನ್ನು ಎರಡನೇ ಶ್ರೇಣಿ ಮತ್ತು ಮೂರನೇ ಶ್ರೇಣಿ ನಗರಗಳ ಯುವಕರು ಸಲ್ಲಿಸಿದ್ದರು ಎಂದು ಅವರು ಹೇಳಿದರು. ವಿವಿಧ ವಿಭಾಗಗಳಲ್ಲಿ ಸುಮಾರು ಎರಡು ಡಜನ್ ಅಪ್ಲಿಕೇಶನ್ಗಳಿಗೆ ಪ್ರಶಸ್ತಿಗಳನ್ನು ನೀಡಲಾಗಿದೆ ಎಂದರು. ಈ ಅಪ್ಲಿಕೇಶನ್‌ಗಳನ್ನು ಪರಿಚಯ ಮಾಡಿಕೊಳ್ಳುವಂತೆ ಮತ್ತು ಅವುಗಳೊಂದಿಗೆ ಸಂಪರ್ಕ ಸಾಧಿಸುವಂತೆ ಅವರು ಕೇಳುಗರಿಗೆ ಕರೆ ನೀಡಿದರು.
ಮಕ್ಕಳಿಗಾಗಿ ಸಂವಾದಾತ್ಮಕ ಅಪ್ಲಿಕೇಶನ್ ಕುಟುಕಿ ಕಿಡ್ಸ್ ಲರ್ನಿಂಗ್ ಅಪ್ಲಿಕೇಶನ್ ಸೇರಿದಂತೆ ಹಲವಾರು ಅಪ್ಲಿಕೇಶನ್ಗಳ ಬಗ್ಗೆ ಪ್ರಧಾನಿ ಮಾತನಾಡಿದರು; ಕು ಕೂ ಕು ಎಂಬ ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಅಪ್ಲಿಕೇಶನ್; ಯುವಕರಲ್ಲಿ ಜನಪ್ರಿಯವಾಗುತ್ತಿರುವ ಚಿಂಗಾರಿ ಆ್ಯಪ್; ಯಾವುದೇ ಸರ್ಕಾರಿ ಯೋಜನೆಯ ಬಗ್ಗೆ ಸರಿಯಾದ ಮಾಹಿತಿ ನೀಡುವ ಸರ್ಕಾರ್ ಅಪ್ಲಿಕೇಶನ್ ; ಫಿಟ್ನೆಸ್ ಅಪ್ಲಿಕೇಶನ್ ಸ್ಟೆಪ್ ಸೆಟ್ ಗೋ ಇತ್ಯಾದಿಗಳ ಬಗ್ಗೆ ಅವರು ಮಾತನಾಡಿದರು.
ಇಂದಿನ ಸಣ್ಣ ಸ್ಟಾರ್ಟ್ ಅಪ್ ಗಳು ನಾಳೆ ದೊಡ್ಡ ಕಂಪನಿಗಳಾಗಿ ಬೆಳೆಯುತ್ತವೆ ಮತ್ತು ವಿಶ್ವದಲ್ಲಿ ಭಾರತದ ಗುರುತಗಳಾಗುತ್ತವೆ ಎಂದು ಪ್ರಧಾನಿ ಹೇಳಿದರು, ಇಂದು ಜಗತ್ತಿನಲ್ಲಿ ಅಸ್ತಿತ್ವದಲ್ಲಿರುವ ದೊಡ್ಡ ಕಂಪನಿಗಳು ಸಹ ಒಮ್ಮೆ ಸ್ಟಾರ್ಟ್ ಅಪ್ ಗಳಾಗಿದ್ದವು ಎಂಬುದನ್ನು ಮರೆಯಬಾರದು ಎಂದು ಪ್ರಧಾನಿ ಹೇಳಿದರು.
***
(Release ID: 1649832)
Visitor Counter : 204
Read this release in:
Hindi
,
Assamese
,
Punjabi
,
English
,
Urdu
,
Marathi
,
Bengali
,
Manipuri
,
Gujarati
,
Odia
,
Tamil
,
Telugu
,
Malayalam