ಪ್ರಧಾನ ಮಂತ್ರಿಯವರ ಕಛೇರಿ
ನಿಮಗೆ ನಾಯಿ ಸಾಕುವ ಆಲೋಚನೆ ಇದ್ದರೆ, ಭಾರತೀಯ ತಳಿಯನ್ನು ಮನೆಗೆ ತನ್ನಿ: ಮನ್ ಕಿ ಬಾತ್‌ನಲ್ಲಿ ಪ್ರಧಾನಿ
प्रविष्टि तिथि:
30 AUG 2020 3:14PM by PIB Bengaluru
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಇತ್ತೀಚಿನ ಮನ್ ಕಿ ಬಾತ್ ನಲ್ಲಿ, ಸೇನಾ ಮುಖ್ಯಸ್ಥರ 'ಪ್ರಶಂಸಾ ಪತ್ರ' ಪಡೆದಿರುವ ಭಾರತೀಯ ಸೇನೆಯ ನಾಯಿಗಳಾದ ಸೋಫಿ ಮತ್ತು ವಿದಾ ಕುರಿತು ಮಾತನಾಡಿದರು. ಹಲವಾರು ಬಾಂಬ್ ಸ್ಫೋಟಗಳು ಮತ್ತು ಭಯೋತ್ಪಾದಕ ಪಿತೂರಿಗಳನ್ನು ತಡೆಯುವಲ್ಲಿ ಸಶಸ್ತ್ರ ಪಡೆಗಳು ಮತ್ತು ಭದ್ರತಾ ಪಡೆಗಳು ಇಂತಹ ಅನೇಕ ಕೆಚ್ಚೆದೆಯ ನಾಯಿಗಳನ್ನು ಹೊಂದಿವೆ ಎಂದು ಅವರು ಹೇಳಿದರು. ಅವುಗಳು ಮದ್ದುಗುಂಡುಗಳನ್ನು ಮತ್ತು ಸ್ಫೋಟಕಗಳನ್ನು ಪತ್ತೆಹಚ್ಚಲು ಸಹಾಯ ಮಾಡುವ ಹಲವು ಉದಾಹರಣೆಗಳನ್ನು ನೀಡಿದರು. ಇತ್ತೀಚೆಗೆ ಬೀಡ್ ಪೊಲೀಸರು 300 ಕ್ಕೂ ಹೆಚ್ಚು ಪ್ರಕರಣಗಳನ್ನು ಭೇದಿಸುವಲ್ಲಿ ಪೊಲೀಸರಿಗೆ ಸಹಾಯ ಮಾಡಿದ ತಮ್ಮ ಸಹೋದ್ಯೋಗಿ ನಾಯಿ ರಾಕಿಗೆ ಸಕಲ ಗೌರವಗಳೊಂದಿಗೆ ನೀಡಿದ ಅಂತಿಮ ವಿದಾಯ ಬಗ್ಗೆಯೂ ಉಲ್ಲೇಖಿಸಿದರು.
ಭಾರತೀಯ ನಾಯಿ ತಳಿಗಳ ಬಗ್ಗೆ ಮಾತನಾಡಿದ ಪ್ರಧಾನಿ, ಅವುಗಳನ್ನು ಸಾಕಲು ಕಡಿಮೆ ವೆಚ್ಚ ತಗಲುತ್ತದೆ ಮತ್ತು ಇವು ಭಾರತೀಯ ಪರಿಸರ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಉತ್ತಮವಾಗಿ ಹೊಂದಿಕೊಳ್ಳುತ್ತವೆ ಮತ್ತು ನಮ್ಮ ಭದ್ರತಾ ಸಂಸ್ಥೆಗಳು ಈ ಭಾರತೀಯ ತಳಿ ನಾಯಿಗಳನ್ನು ತಮ್ಮ ಭದ್ರತಾ ದಳದ ಭಾಗವಾಗಿ ಸೇರಿಸಿಕೊಳ್ಳುತ್ತಿವೆ ಎಂದು ಹೇಳಿದರು. ಭಾರತೀಯ ತಳಿ ನಾಯಿಗಳ ಬಗ್ಗೆ ಸಂಶೋಧನೆಗಳನ್ನು ಭಾರತೀಯ ಕೃಷಿ ಸಂಶೋಧನಾ ಮಂಡಳಿಯು ನಡೆಸುತ್ತಿದೆ ಎಂದು ಅವರು ಹೇಳಿದರು. ನಾಯಿಯನ್ನು ಸಾಕಲು ಆಲೋಚಿಸುತ್ತಿರುವವರು ಭಾರತೀಯ ತಳಿಗಳಲ್ಲಿ ಒಂದನ್ನು ಸಾಕುವಂತೆ ಅವರು ಕೇಳುಗರಿಗೆ ಸಲಹೆ ನೀಡಿದರು.
***
(रिलीज़ आईडी: 1649831)
आगंतुक पटल : 210
इस विज्ञप्ति को इन भाषाओं में पढ़ें:
Bengali
,
Tamil
,
Urdu
,
English
,
हिन्दी
,
Marathi
,
Manipuri
,
Assamese
,
Punjabi
,
Gujarati
,
Odia
,
Telugu
,
Malayalam