ಪ್ರಧಾನ ಮಂತ್ರಿಯವರ ಕಛೇರಿ

ಸ್ವಚ್ಛ ಸರ್ವೇಕ್ಷಣಾ-2020ಯಲ್ಲಿ ಅಗ್ರ ಸ್ಥಾನಗಳಿಸಿರುವ ನಗರಗಳಿಗೆ ಪ್ರಧಾನಮಂತ್ರಿ ಅಭಿನಂದನೆ

प्रविष्टि तिथि: 20 AUG 2020 8:32PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ವಚ್ಛ ಸರ್ವೇಕ್ಷಣಾ-2020ಯಲ್ಲಿ ಅಗ್ರ ಸ್ಥಾನ ಗಳಿಸಿರುವ ನಗರಗಳನ್ನು ಅಭಿನಂದಿಸಿದ್ದಾರೆ.

ಪ್ರಧಾನಿ ಅವರು ತಮ್ಮ ಸಂದೇಶದಲ್ಲಿ “ ಸ್ವಚ್ಛ ಸರ್ವೇಕ್ಷಣಾ-2020ರಲ್ಲಿ ಅಗ್ರ ಸ್ಥಾನ ಗಳಿಸಿರುವ ಎಲ್ಲ ನಗರಗಳಿಗೆ ನನ್ನ ಅಭಿನಂದನೆಗಳು. ಸ್ವಚ್ಛತೆಯನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಇತರೆ ನಗರಗಳೂ ಸಹ ಸ್ಪೂರ್ತಿ ಪಡೆದು ತಮ್ಮ ಪ್ರಯತ್ನಗಳನ್ನು ಚುರುಕುಗೊಳಿಸಲಿ. ಅಂತಹ ಸ್ಪರ್ಧಾತ್ಮಕ ಮನೋಭಾವ ಸ್ವಚ್ಛ ಭಾರತ್ ಮಿಷನ್ ಅನ್ನು ಬಲವರ್ಧನೆಗೊಳಿಸುತ್ತದೆ ಮತ್ತು ಕೋಟ್ಯಂತರ ಜನರಿಗೆ ಅನುಕೂಲವಾಗಲಿದೆ’’ ಎಂದು ಹೇಳಿದ್ದಾರೆ

***


(रिलीज़ आईडी: 1647817) आगंतुक पटल : 221
इस विज्ञप्ति को इन भाषाओं में पढ़ें: English , Urdu , Marathi , हिन्दी , Manipuri , Bengali , Assamese , Punjabi , Gujarati , Odia , Tamil , Telugu , Malayalam