ಪ್ರಧಾನ ಮಂತ್ರಿಯವರ ಕಛೇರಿ

ಶ್ರೀ ಗುರು ಗ್ರಂಥ ಸಾಹೀಬ್ ಜೀ ಅವರ ಪ್ರಕಾಶ ಪರ್ವದಂದು ಜನತೆಗೆ ಶುಭ ಕೋರಿದ ಪ್ರಧಾನಿ

प्रविष्टि तिथि: 19 AUG 2020 7:54PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ರೀ ಗುರು ಗ್ರಂಥ ಸಾಹೀಬ್ ಜೀ ಅವರ ಪ್ರಥಮ ಪ್ರಕಾಶ ಪರ್ವದ ಪವಿತ್ರ ಸಂದರ್ಭದಲ್ಲಿ ಜನತೆಗೆ ಶುಭ ಕೋರಿದ್ದಾರೆ.

ಶ್ರೀ ಗುರು ಗ್ರಂಥ ಸಾಹೀಬ್ ಜೀ ಅವರು ನಮಗೆ ಸೇವೆಸಹಾನುಭೂತಿ ಮತ್ತು ಸಾಮರಸ್ಯ ಕಲಿಸಿದ್ದಾರೆಇದು ನ್ಯಾಯ ಮತ್ತು ಸಮ ಸಮಾಜಕ್ಕೆ ಹಾದಿ ಮಾಡಿಕೊಟ್ಟಿದೆಇದು ಎಂದಿಗೂ ಅನ್ಯಾಯಕ್ಕೆ ತಲೆ ಬಾಗಬೇಡ ಎಂಬುದನ್ನೂ ಕಲಿಸಿದೆಶ್ರೀ ಗುರು ಗ್ರಂಥ ಸಾಹೀಬ್ ಜೀ ಅವರ ಪ್ರಥಮ ಪ್ರಕಾಶ ಪರ್ವದ ಸಂದರ್ಭದಲ್ಲಿ ಶುಭಾಶಯಗಳು.

ಶ್ರೀ ಗುರು ಗ್ರಂಥ ಸಾಹೀಬ್ ಜೀ ಅವರು ತಮ್ಮ ಪರಿಶುದ್ಧ ಬೋಧನೆಯೊಂದಿಗೆ ಇಡೀ ವಿಶ್ವಕ್ಕೇ ಬೆಳಕು ತೋರಿದ್ದಾರೆಇದರಿಂದ ಪ್ರೇರಿತರಾಗಿ ಸಿಖ್ಖರು ಜಾಗತಿಕವಾಗಿ ಹಲವು ಕ್ಷೇತ್ರಗಳಲ್ಲಿ ಪ್ರಗತಿಗಾಮಿ ಸೇವೆ ಮಾಡಿದ್ದಾರೆಅವರ ಧೈರ್ಯ ಮತ್ತು ಕರುಣೆ ಗಣನೀಯ.

ಶ್ರೀ ಗುರು ಗ್ರಂಥ ಸಾಹೀಬ್ ಜೀ ಸದಾ ನಮಗೆ ಮಾನವತೆಯ ಮಾರ್ಗದರ್ಶನ ಮಾಡಲಿ" ಎಂದು ಪ್ರಧಾನಿ ತಿಳಿಸಿದ್ದಾರೆ.

***

(रिलीज़ आईडी: 1647286) आगंतुक पटल : 221
इस विज्ञप्ति को इन भाषाओं में पढ़ें: English , Urdu , हिन्दी , Marathi , Bengali , Manipuri , Assamese , Punjabi , Gujarati , Odia , Tamil , Telugu , Malayalam