ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್-19: ಸಾವಿನ ಪ್ರಮಾಣ ತಗ್ಗುತ್ತಿರುವ ಹಿನ್ನೆಲೆ; ವೆಂಟಿಲೇಟರ್ ಗಳ ರಫ್ತಿಗೆ ಅನುಮತಿ ನೀಡಲು ಕೇಂದ್ರ ಸರ್ಕಾರ ನಿರ್ಧಾರ
Posted On:
01 AUG 2020 4:53PM by PIB Bengaluru
ಕೋವಿಡ್-19 ಕುರಿತ ಸಚಿವರ ಉನ್ನತಾಧಿಕಾರ ಸಮಿತಿ (ಜಿಒಎಂ), ಭಾರತದಲ್ಲಿ ತಯಾರಿಸಿದ ವೆಂಟಿಲೇಟರ್ ಗಳ ರಫ್ತು ಮಾಡಲು ಅವಕಾಶ ಕೋರಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಂಡಿಸಿದ್ದ ಪ್ರಸ್ತಾವಕ್ಕೆ ಅನುಮೋದನೆ ನೀಡಿದೆ. ಈ ನಿರ್ಧಾರವನ್ನು ವಿದೇಶ ವ್ಯಾಪಾರ ಮಹಾನಿರ್ದೇಶಕರು (ಡಿಜಿಎಫ್ ಟಿ) ಅವರಿಗೆ ತಿಳಿಸಲಾಗಿದ್ದು, ದೇಶೀಯವಾಗಿ ತಯಾರಿಸಲಾದ ವೆಂಟಿಲೇಟರ್ ಗಳ ರಫ್ತಿಗೆ ಅಗತ್ಯ ನೆರವು ಹಾಗೂ ಮುಂದಿನ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ದೇಶದಲ್ಲಿ ಕೋವಿಡ್-19 ಸೋಂಕಿತ ರೋಗಿಗಳ ಸಾವಿನ ಪ್ರಮಾಣ ನಿಯಂತ್ರಣದಲ್ಲಿರುವ ಹಿನ್ನೆಲೆಯಲ್ಲಿ ಈ ಮಹತ್ವದ ನಿರ್ಧಾರವನ್ನು ಭಾರತ ಕೈಗೊಂಡಿದೆ. ಸದ್ಯ ಭಾರತದಲ್ಲಿ ಸೋಂಕಿತರ ಸಾವಿನ ಪ್ರಮಾಣ ಶೇ.2.15ರಷ್ಟಿದ್ದು, ಅದರ ಅರ್ಥ ಕೆಲವೇ ಕೆಲವು ಸೋಂಕಿತರು ಮಾತ್ರ ವೆಂಟಿಲೇಟರ್ ಗಳಲ್ಲಿದ್ದಾರೆ ಎಂಬುದು. 2020ರ ಜುಲೈ 31ರ ವರೆಗೆ ದೇಶಾದ್ಯಂತ ಶೇ.0.22ರಷ್ಟು ಸೋಂಕಿತ ರೋಗಿಗಳು ಮಾತ್ರ ವೆಂಟಿಲೇಟರ್ ನಲ್ಲಿದ್ದಾರೆ. ಆದರೆ ದೇಶದಲ್ಲಿ ದೇಶೀಯ ವೆಂಟಿಲೇಟರ್ ಉತ್ಪಾದನಾ ಸಾಮರ್ಥ್ಯ ಗಣನೀಯವಾಗಿ ಏರಿಕೆಯಾಗಿದೆ. 2020ರ ಜನವರಿಗೆ ಹೋಲಿಸಿದರೆ ಪ್ರಸ್ತುತ ದೇಶದಲ್ಲಿ 20ಕ್ಕೂ ಅಧಿಕ ದೇಶೀಯ ವೆಂಟಿಲೇಟರ್ ಉತ್ಪಾದಕರು ಉತ್ಪಾದನಾ ಕಾರ್ಯದಲ್ಲಿ ತೊಡಗಿದ್ದಾರೆ.
ಕಳೆದ ಮಾರ್ಚ್ 2020ರಲ್ಲಿ ಸಮರ್ಪಕವಾಗಿ ಕೋವಿಡ್-19 ಎದುರಿಸಲು ಹಾಗೂ ದೇಶೀಯವಾಗಿ ವೆಂಟಿಲೇಟರ್ ಗಳು ಲಭ್ಯವಾಗುವಂತೆ ಮಾಡಲು ವೆಂಟಿಲೇಟರ್ ಗಳ ರಫ್ತಿಗೆ ನಿಷೇಧ/ ನಿರ್ಬಂಧ ವಿಧಿಸಲಾಗಿತ್ತು. 24.03.2020ರಿಂದ ಜಾರಿಗೆ ಬರುವಂತೆ ಡಿಜಿಎಫ್ ಟಿ ಅಧಿಸೂಚನೆ ಮೂಲಕ ಎಲ್ಲ ಬಗೆಯ ವೆಂಟಿಲೇಟರ್ ಗಳ ರಫ್ತು ನಿಷೇಧಿಸಲಾಗಿತ್ತು. ಇದೀಗ ವೆಂಟಿಲೇಟರ್ ಗಳ ರಫ್ತಿಗೆ ಅನುಮತಿ ನೀಡಿರುವುದರಿಂದ ದೇಶೀಯ ವೆಂಟಿಲೇಟರ್ ಉತ್ಪಾದಕರಿಗೆ ಹೊಸ ಮಾರುಕಟ್ಟೆಗಳನ್ನು ಪಡೆಯುವಂತಹ ಸ್ಥಾನ ತಲುಪಿವೆ ಮತ್ತು ಭಾರತೀಯ ವೆಂಟಿಲೇಟರ್ ಗಳು ವಿದೇಶಗಳಲ್ಲಿ ಬಳಕೆಯಾಗಲಿವೆ.
***
(Release ID: 1642895)
Visitor Counter : 252
Read this release in:
Punjabi
,
English
,
Urdu
,
Hindi
,
Marathi
,
Bengali
,
Manipuri
,
Assamese
,
Odia
,
Tamil
,
Telugu
,
Malayalam