PIB Headquarters

 ಕೋವಿಡ್-19 ಪಿ ಐ ಬಿ ದೈನಿಕ ವರದಿ

Posted On: 16 JUL 2020 6:21PM by PIB Bengaluru

 ಕೋವಿಡ್-19 ಪಿ ಬಿ ದೈನಿಕ ವರದಿ

https://static.pib.gov.in/WriteReadData/userfiles/image/image001ODWN.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು

ಪಿಐಬಿ ವಾಸ್ತವದ ಪರಿಶೀಲನೆ- FACT CHECK- ಯನ್ನು ಒಳಗೊಂಡಿದೆ)

https://static.pib.gov.in/WriteReadData/userfiles/image/image0059YYH.jpg

https://static.pib.gov.in/WriteReadData/userfiles/image/image006APX6.jpg

ಕೋವಿಡ್ – 19 ಕ್ಕೆ ಸಂಬಂಧಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಪ್ಡೇಟ್:

ದೇಶದಲ್ಲೀಗ ಸಕ್ರಿಯ ಕೋವಿಡ್ -19 ಪ್ರಕರಣಗಳ ಹೊರೆ 3,31,146 ಮಾತ್ರ; ವಾಸ್ತವ  ಪ್ರಕರಣ ಹೊರೆ ಒಟ್ಟು ಪ್ರಕರಣಗಳಿಗೆ ಹೋಲಿಸಿದರೆ ಮೂರನೇ ಒಂದು ಭಾಗ (1/3) ಮಾತ್ರ; ಇದುವರೆಗೆ  6.1 ಲಕ್ಷಕ್ಕೂ ಹೆಚ್ಚು ಮಂದಿ ಗುಣಮುಖರಾಗಿದ್ದಾರೆ

ಇಂದು ದೇಶದಲ್ಲಿ ವಾಸ್ತವದ ಕೋವಿಡ್ -19  ರೋಗಿಗಳ ಪ್ರಕರಣಗಳ ಹೊರೆ 3,31,146 ಮಾತ್ರ. ಇದು ಒಟ್ಟು ಪತ್ತೆಯಾದ ಪ್ರಕರಣಗಳಿಗೆ ಹೋಲಿಸಿದರೆ ಮೂರನೆ ಒಂದಂಶಕ್ಕಿಂತ (34.18 % ) ಸ್ವಲ್ಪ ಹೆಚ್ಚಿದೆ . 2020 ಜೂನ್ ಮಧ್ಯ ಭಾಗದಿಂದ ಗುಣಮುಖ ದರದಲ್ಲಿ 50 % ಗಡಿ ದಾಟಿದ ಬಳಿಕ , ಅಲ್ಲಿ ಗುಣಮುಖರಾದ ಕೋವಿಡ್ -19 ರೋಗಿಗಳ ಸಂಖ್ಯೆಯಲ್ಲಿ ಸತತ ಏರಿಕೆಯಾಗುತ್ತಿದೆ ಮತ್ತು ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದೆ. ಇದುವರೆಗೆ ಕೋವಿಡ್ -19 ರೋಗಿಗಳಲ್ಲಿ 63.25% ಗುಣಮುಖರಾಗಿದ್ದಾರೆ. ಇದೇ ಕಾಲಕ್ಕೆ ಸಕ್ರಿಯ ಪ್ರಕರಣಗಳಲ್ಲಿ ಇಳಿಕೆಯಾಗುತ್ತಿದೆ. 2020 ಜೂನ್ ಮಧ್ಯಭಾಗದಲ್ಲಿದ್ದ 45 % ಈಗ 34.18 % ಗೆ ಇಳಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 20,783 ಜನರು ಕೋವಿಡ್ ನಿಂದ ಗುಣಮುಖರಾಗಿದ್ದು, ಇದರಿಂದ ಒಟ್ಟು ಗುಣಮುಖರಾದ ಕೋವಿಡ್ -19 ರೋಗಿಗಳ ಸಂಖ್ಯೆ 6,12,814 ಕ್ಕೇರಿದೆ. ಗುಣಮುಖರಾದ ರೋಗಿಗಳ ಸಂಖ್ಯೆ  ಮತ್ತು ಸಕ್ರಿಯ ಕೋವಿಡ್ -19 ರೋಗಿಗಳ ಸಂಖ್ಯೆಗೆ ಹೋಲಿಸಿದಾಗ 2,81,668 ರಷ್ಟು ಅಧಿಕವಿದೆ. ಮಹಾರಾಷ್ಟ್ರ ಮತ್ತು ತಮಿಳುನಾಡು ಎರಡು ರಾಜ್ಯಗಳು ದೇಶದ ಒಟ್ಟು ಸಕ್ರಿಯ ಕೋವಿಡ್ -19 ಪ್ರಕರಣಗಳ 48. 15% ಹೊರೆಯನ್ನು ಹೊಂದಿವೆ. ಒಟ್ಟು 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 10 ರಾಜ್ಯಗಳು ಒಟ್ಟು ಸಕ್ರಿಯ ಪ್ರಕರಣಗಳ 84.62% ರಷ್ಟನ್ನು ಹೊಂದಿವೆ.

http://pibcms.nic.in/WriteReadData/userfiles/image/image001GO3V.png 

1234 ಪ್ರಯೋಗಾಲಯಗಳು ತ್ವರಿತ ಆಂಟಿಜೆನ್ ಪರೀಕ್ಷೆಗಳ ಬಳಕೆಯೊಂದಿಗೆ ಮಿಲಿಯನ್ ಜನಸಂಖ್ಯೆಗೆ (ಟಿ.ಪಿ.ಎಂ.) 9231 ಕ್ಕೂ ಅಧಿಕ ಪರೀಕ್ಷೆಗಳನ್ನು ನಡೆಸಿವೆ

ಪರೀಕ್ಷೆ, ಪತ್ತೆ , ಚಿಕಿತ್ಸೆ”  ತಂತ್ರದ  ಅಂಗವಾಗಿ ಕೇಂದ್ರ ಸರಕಾರವು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪರೀಕ್ಷಾ ಉಪಕ್ರಮಗಳನ್ನು ಹೆಚ್ಚಿಸುತ್ತಿದೆ. ಇದರ ಫಲಿತಾಂಶವಾಗಿ ದೇಶಾದ್ಯಂತ ಪರೀಕ್ಷಾ ಪ್ರಯೋಗಾಲಯಗಳ ಸಂಖ್ಯೆಯಲ್ಲಿ ಸತತ ಹೆಚ್ಚಳವಾಗಿದೆ. ಪರೀಕ್ಷಾ ಹೆಚ್ಚಳವನ್ನು .ಸಿ.ಎಂ.ಆರ್. ಮಾರ್ಗದರ್ಶಿಗಳ ಅನ್ವಯ ಮಾಡಲಾಗಿದ್ದು, ಇದರಿಂದ ಪ್ರಕರಣಗಳನ್ನು ಮುಂಚಿತವಾಗಿ ಪತ್ತೆ ಮಾಡುವುದಕ್ಕೆ ಸಾಧ್ಯವಾಗಿದೆ. ಈಗ ನೋಂದಾಯಿಸಲ್ಪಟ್ಟು  ವೈದ್ಯಕೀಯ ವೃತ್ತಿ ನಡೆಸುವ ಎಲ್ಲಾ ವೈದ್ಯರೂ ಪರೀಕ್ಷೆಗೆ ಶಿಫಾರಸು ಮಾಡಬಹುದು. ಇದರಿಂದ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಆರ್.ಟಿ. ಪಿ.ಸಿ.ಆರ್. , ಟ್ರೂನಾಟ್ ಮತ್ತು ಸಿ.ಬಿ.ಎನ್...ಟಿ. ಪ್ರಯೋಗಾಲಯ ಜಾಲಗಳ ಮೂಲಕ ಪರೀಕ್ಷಾ ಸೌಲಭ್ಯಗಳು ಲಭ್ಯವಾಗಿವೆ ಮತ್ತು ಇದರಿಂದ ಸ್ಯಾಂಪಲ್ ಗಳ ಪರೀಕ್ಷಾ  ಪ್ರಮಾಣದಲ್ಲಿಯೂ ಹೆಚ್ಚಳವಾಗಿದೆ. ಕಳೆದ 24 ಗಂಟೆಗಳಲ್ಲಿ 3,26,826 ಸ್ಯಾಂಪಲ್ ಗಳನ್ನು ಪರೀಕ್ಷೆ ಮಾಡಲಾಗಿದೆ. ಇದುವರೆಗೆ ಪರೀಕ್ಷೆ  ಮಾಡಲಾದ ಒಟ್ಟು ಸ್ಯಾಂಪಲ್ ಗಳ ಸಂಖ್ಯೆ 1,27,39,490. ಇದನ್ನು ಅನುಸರಿಸಿ ಲೆಕ್ಕಾಚಾರ ಮಾಡಿದರೆ ಭಾರತದಲ್ಲಿ ಒಂದು ಮಿಲಿಯನ್ ಜನರಲ್ಲಿ 9231.5 ಜನರನ್ನು ಪರೀಕ್ಷೆಗೆ ಗುರಿಮಾಡಲಾಗಿದೆ. ದೇಶದಲ್ಲಿ ಪರೀಕ್ಷಾ ಪ್ರಯೋಗಾಲಯಗಳ ಜಾಲ 1234 ಪ್ರಯೋಗಾಲಯಗಳಿಗೆ ವಿಸ್ತರಿಸಲ್ಪಟ್ಟಿದೆ. ; ಇದರಲ್ಲಿ 874 ಪ್ರಯೋಗಾಲಯಗಳು ಸರಕಾರಿ ವಲಯದಲ್ಲಿವೆ ಮತ್ತು 360 ಖಾಸಗಿ ವಲಯದಲ್ಲಿವೆ.

ಡಾ. ಹರ್ಷವರ್ಧನ್ ಅವರಿಂದ ...ಎಂ.ಎಸ್. ದಿಲ್ಲಿಯಲ್ಲಿ ರಾಜಕುಮಾರಿ ಅಮೃತ್ ಕೌರ್ ಹೊರರೋಗಿಗಳ ವಿಭಾಗ ಉದ್ಘಾಟನೆ

ದೇಶದ ಮೊದಲ ಆರೋಗ್ಯ ಸಚಿವೆ ಮತ್ತು ಪ್ರಖ್ಯಾತ ಸ್ವಾತಂತ್ರ್ಯ ಹೋರಾಟಗಾರ್ತಿ ಶ್ರೀಮತಿ ರಾಜಕುಮಾರಿ ಅಮೃತ್ ಕೌರ್ ಅವರ ಸ್ಮರಣಾರ್ಥ ನಿರ್ಮಿಸಲಾದ ಹೊಸ ಹೊರರೋಗಿಗಳ ವಿಭಾಗ ಕಟ್ಟಡವನ್ನು ಡಾ. ಹರ್ಷವರ್ಧನ್ ಅವರು ಉದ್ಘಾಟಿಸಿ ಹರ್ಷ ವ್ಯಕ್ತಪಡಿಸಿದರು. ಕೋವಿಡ್ -19 ವಿರುದ್ದ ದೇಶದ ಸಾಮೂಹಿಕ ಪ್ರಯತ್ನಗಳನ್ನು ವಿವರಿಸಿದ ಅವರು ನಾವು ಜಾಗತಿಕ ಸಾಂಕ್ರಾಮಿಕದ ವಿರುದ್ದದ ಯುದ್ದವನ್ನು ಗೆಲ್ಲುವ ದಿಕ್ಕಿನತ್ತ ಸಾಗುತ್ತಿದ್ದೇವೆ. ಕೋವಿಡ್ -19  ಸೋಂಕಿತರಾದವರಲ್ಲಿ ಶೇಕಡಾ 2 ಕ್ಕಿಂತ ಕಡಿಮೆ ಸಂಖ್ಯೆಯ ರೋಗಿಗಳು .ಸಿ.ಯು. ಗಳಿಗೆ ದಾಖಲಾಗುತ್ತಿದ್ದಾರೆ. ನಮ್ಮ ಪ್ರಯೋಗಾಲಯ ಜಾಲವನ್ನು ಬಲಪಡಿಸಲಾಗಿದೆ; ನಾವು ಪ್ರಯೋಗಾಲಯಗಳ ಸಂಖ್ಯಾವೃದ್ದಿಯಲ್ಲಿ ಉತ್ತಮ ಮತ್ತು ಭಾರೀ ಬೆಳವಣಿಗೆಯನ್ನು ದಾಖಲಿಸಿದ್ದೇವೆ. 2020 ಜನವರಿಯಲ್ಲಿ ಒಂದು ಪ್ರಯೋಗಾಲಯವಿತ್ತು, ಈಗ ನಾವು 1234 ಪ್ರಯೋಗಾಲಯಗಳನ್ನು ಹೊಂದಿದ್ದೇವೆ. ನಾವು ದಿನಕ್ಕೆ  3.26 ಕೋಟಿ ಸ್ಯಾಂಪಲ್ ಗಳನ್ನು ಪರೀಕ್ಷೆ ಮಾಡುತ್ತಿದ್ದೇವೆಎಂದರು. ಮುಂದಿನ 12 ವಾರಗಳಲ್ಲಿ ದಿನವೊಂದಕ್ಕೆ 10 ಲಕ್ಷ ಪರೀಕ್ಷೆಗಳನ್ನು ನಡೆಸುವ ಸಾಮರ್ಥ್ಯವನ್ನು ಹೊಂದಲಾಗುವುದುಎಂದೂ ಡಾ. ಹರ್ಷವರ್ಧನ್ ತಿಳಿಸಿದರು.

.ಸಿ..ಎಸ್..ಸಿ. ಉನ್ನತ ಮಟ್ಟದ ವಿಭಾಗವನ್ನುದ್ದೇಶಿಸಿ 2020 ಜುಲೈ 17 ರಂದು ಭಾಷಣ ಮಾಡಲಿದ್ದಾರೆ ಪ್ರಧಾನ ಮಂತ್ರಿ

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನ್ಯೂಯಾರ್ಕಿನ ವಿಶ್ವಸಂಸ್ಥೆಯಲ್ಲಿ 2020 ಜುಲೈ 17 ರಂದು ನಡೆಯಲಿರುವ  ವಿಶ್ವ ಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಗಳ ಅಧಿವೇಶನದ ಉನ್ನತ ಮಟ್ಟದ ವಿಭಾಗವನ್ನು ಉದ್ದೇಶಿಸಿ ವರ್ಚುವಲ್ ಮಾಧ್ಯಮದ ಮೂಲಕ ದಿಕ್ಸೂಚಿ ಭಾಷಣ  ಮಾಡಲಿದ್ದಾರೆ. ವಾರ್ಷಿಕ ಉನ್ನತ ಮಟ್ಟದ ವಿಭಾಗದ ಸಭೆ ಸರಕಾರ ಮತ್ತು ಖಾಸಗಿ ವಲಯಗಳು, ನಾಗರಿಕ ಸಮಾಜ ಮತ್ತು ಶೈಕ್ಷಣಿಕ ವಲಯದ ಉನ್ನತ ಮಟ್ಟದ ಪ್ರತಿನಿಧಿಗಳನ್ನು ಒಳಗೊಂಡಂತೆ ವೈವಿಧ್ಯಮಯ ಗುಂಪುಗಳನ್ನು ಹೊಂದಿರುತ್ತದೆ. ಉನ್ನತ ಮಟ್ಟದ ವಿಭಾಗದ ವರ್ಷದ ಶೀರ್ಷಿಕೆ ವಿಷಯ ಕೋವಿಡ್ 19 ಬಳಿಕ ಬಹುಪಕ್ಷೀಯತೆ: 75 ನೇ ವಾರ್ಷಿಕೋತ್ಸವದಲ್ಲಿ ನಮಗೆ ಯಾವ ರೀತಿಯ ವಿಶ್ವ ಸಂಸ್ಥೆ ಬೇಕುಎಂಬುದಾಗಿದೆ. ಬದಲಾಗುತ್ತಿರುವ ಅಂತಾರಾಷ್ಟ್ರೀಯ ಪರಿಸರ ಮತ್ತು ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ನಡೆಯುತ್ತಿರುವ  ಅಧಿವೇಶನವು ಬಹುಪಕ್ಷೀಯತೆಯನ್ನು ರೂಪಿಸುವ ಸಂಕೀರ್ಣ ಶಕ್ತಿಗಳ ಬಗ್ಗೆ ಗಮನ ಹರಿಸಲಿದೆ ಮಾತ್ರವಲ್ಲದೆ ಬಲಿಷ್ಟ ನಾಯಕತ್ವ , ಸಮರ್ಪಕ ಮತ್ತು ದಕ್ಷ ಅಂತಾರಾಷ್ಟ್ರೀಯ ಸಂಸ್ಥೆಗಳು , ಭಾಗವಹಿಸುವಿಕೆಯನ್ನು ವಿಸ್ತರಿಸುವಿಕೆ  ಮತ್ತು ಜಾಗತಿಕ ಸಾರ್ವಜನಿಕ ಒಳಿತಿಗೆ ಹೆಚ್ಚಿನ ಮಹತ್ವದಂತಹ ಜಾಗತಿಕ ಕಾರ್ಯ ಕಲಾಪ ಪಟ್ಟಿಯನ್ನು ಅನುಷ್ಟಾನಿಸಲು ಸಾಧ್ಯತೆಗಳನ್ನು ಅನ್ವೇಷಿಸಲಿದೆ.

ಆದಾಯ ಹೆಚ್ಚಳ , ವೆಚ್ಚ ಕಡಿತ, ಕಾರ್ಯಾಚರಣೆಗಳಲ್ಲಿ ಸುರಕ್ಷೆಯ ಹೆಚ್ಚಳ ಮತ್ತು ಹಾಲಿ ಇರುವ ಸಿಬ್ಬಂದಿಗಳ ಕಲ್ಯಾಣಕ್ಕೆ ರೈಲ್ವೇಯು ಸಾಮೂಹಿಕ ಗಮನ ಕೊಡಬೇಕು ಶ್ರೀ ಪಿಯೂಷ್ ಗೋಯಲ್

ರೈಲ್ವೇ ಸಚಿವಾಲಯವು ಇದೇ ಮೊದಲ ಬಾರಿಗೆ ಆನ್ ಲೈನ್ ಮೂಲಕ ಕಾರ್ಮಿಕರ ಸಂಗೋಷ್ಟಿಯನ್ನು ಆಯೋಜಿಸಿತ್ತು. ದೇಶಾದ್ಯಂತ ರೈಲ್ವೇ ಕಾರ್ಮಿಕರ ಸಂಘಟನೆಗಳ ಪ್ರತಿನಿಧಿಗಳು ಇದರಲ್ಲಿ ಪಾಲ್ಗೊಂಡಿದ್ದರು. ಸಂಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಸಚಿವ ಶ್ರೀ ಪಿಯೂಶ್ ಗೋಯಲ್ ಅವರು ಲಾಕ್ ಡೌನ್ ಅವಧಿಯಲ್ಲಿ ಅವಿಶ್ರಾಂತವಾಗಿ ಕರ್ತವ್ಯ ನಿರ್ವಹಿಸಿದುದಕ್ಕಾಗಿ ರೈಲ್ವೇ ಕಾರ್ಮಿಕರಿಗೆ ಕೃತಜ್ಞತೆ ವ್ಯಕ್ತಪಡಿಸಿದರು. ಉನ್ನತ ಮಟ್ಟದಿಂದ ಹಿಡಿದು ತಳಮಟ್ಟದವರೆಗೆ , ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪ್ರಾಮಾಣಿಕವಾಗಿ ಲಾಕ್ ಡೌನ್ ಅವಧಿಯಲ್ಲಿ ತಮ್ಮ ಕರ್ತವ್ಯಗಳನ್ನು ನಿಭಾಯಿಸಿದ್ದಾರೆ. ಪ್ರಸ್ತುತ ಭಾರತೀಯ ರೈಲ್ವೇಯು ಜಾಗತಿಕ ಸಾಂಕ್ರಾಮಿಕದಿಂದಾಗಿ ಸಂಕೀರ್ಣ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂದು ಸಚಿವರು ಹೇಳಿದರು. ಜಾಗತಿಕ ಸಾಂಕ್ರಾಮಿಕದಿಂದಾಗಿರುವ ಬಿಕ್ಕಟ್ಟನ್ನು ಹೇಗೆ ನಿಭಾಯಿಸಬೇಕು ಎಂಬ ಬಗ್ಗೆ ಕಾರ್ಮಿಕರ ಒಕ್ಕೂಟಗಳ ನಾಯಕರು ವಿವೇಚನೆ ಮಾಡಬೇಕು ಎಂದು ಮನವಿ ಮಾಡಿದ ಸಚಿವರು ರೈಲ್ವೇ ಆದಾಯವನ್ನು ಹೇಗೆ ಹೆಚ್ಚಿಸಬಹುದು ಎಂಬ ಬಗ್ಗೆ , ವೆಚ್ಚವನ್ನು ಹೇಗೆ ಕಡಿಮೆ ಮಾಡಬಹುದು. ಸರಕು ಸಾಗಾಣಿಕೆ ಪಾಲನ್ನು ಹೇಗೆ ಹೆಚ್ಚಿಸಬಹುದು ಮತ್ತು ರೈಲ್ವೇಯು ಹೇಗೆ ತ್ವರಿತವಾಗಿ  ಮುನ್ನಡೆ ಸಾಧಿಸಬಹುದು ಎಂಬ ಬಗ್ಗೆ ವಿಶಿಷ್ಟ ಚಿಂತನೆಗಳೊಂದಿಗೆ ಮುಂದೆ ಬರುವಂತೆಯೂ ರೈಲ್ವೇ ಒಕ್ಕೂಟಗಳಿಗೆ ಮನವಿ ಮಾಡಿದರು.

ಜೈವಿಕ ತಂತ್ರಜ್ಞಾನ ಇಲಾಖೆ ಬೆಂಬಲಿತ ಕೋವಿಡ್ -19 ಲಸಿಕೆ- ಝೈಕೋವ್ ಡಿ ಹೊಂದಾಣಿಕೆಯ ಹಂತ I/II ಕ್ಲಿನಿಕಲ್ ಪರೀಕ್ಷೆ ಆರಂಭ

ಝೈಡುಸ್ ವಿನ್ಯಾಸಿತ ಮತ್ತು ಅಭಿವೃದ್ದಿಪಡಿಸಿದ ಮತ್ತು ಭಾರತ ಸರಕಾರದ ಜೈವಿಕ ತಂತ್ರಜ್ಞಾನ ಇಲಾಖೆಯ ಆಂಶಿಕ ಹಣಕಾಸು ನೆರವಿನ ಪ್ಲಾಸ್ಮಾಯುಕ್ತ ಡಿ.ಎನ್.. ಲಸಿಕೆಯನ್ನು ಆರೋಗ್ಯವಂತರ  ಮೇಲೆ ಬಳಸುವ ಹಂತ I/II  ಕ್ಲಿನಿಕಲ್ ಪ್ರಯೋಗವನ್ನು ಆರಂಭಿಸಿರುವುದಾಗಿ ಜೈವಿಕತಂತ್ರಜ್ಞಾನ ಕೈಗಾರಿಕಾ ಸಂಶೋಧನಾ ಸಹಾಯ ಮಂಡಳಿ (ಬಿ..ಆರ್..ಸಿ.)ಘೋಷಿಸಿದೆ. ಮೂಲಕ ಕೋವಿಡ್ -19 ಕ್ಕಾಗಿ ದೇಶೀಯವಾಗಿ ಅಭಿವೃದ್ದಿ ಮಾಡಿದ ಮೊದಲ ಲಸಿಕೆ ಭಾರತದಲ್ಲಿ ಮಾನವನ ಮೇಲೆ ಪ್ರಯೋಗಿಸಲ್ಪಡುತ್ತಿದೆ. ಹೊಂದಾಣಿಕೆ ಹಂತದ I/II ಕ್ಲಿನಿಕಲ್ ಪ್ರಯೋಗದಲ್ಲಿ  ಡೋಸ್ ಹೆಚ್ಚಳ, ಬಹು ಕೇಂದ್ರಿತ ಅಧ್ಯಯನಗಳು ಲಸಿಕೆಯ  ಸುರಕ್ಷೆ, ಸಹನಾಶಕ್ತಿ ಮತ್ತು ರೋಗನಿರೋಧಕ ಶಕ್ತಿಯ ಮೌಲ್ಯಮಾಪನವನ್ನು ನಡೆಯಲಿದೆ. ಜೈವಿಕ ತಂತ್ರಜ್ಞಾನ ಇಲಾಖೆಯು ಕೋವಿಡ್ -19 ಕ್ಕಾಗಿ ದೇಶೀಯ ಲಸಿಕೆಯನ್ನು ತ್ವರಿತವಾಗಿ ಅಭಿವೃದ್ದಿಪಡಿಸಲು  ಝೈಡುಸ್ ಜೊತೆ ರಾಷ್ಟ್ರೀಯ ಬಯೋಫಾರ್ಮಾ ಮಿಷನ್ನಿನಡಿಯಲ್ಲಿ ಸಹಭಾಗಿತ್ವ ಮಾಡಿಕೊಂಡಿತ್ತು ಎಂದು  ಡಿ.ಬಿ.ಟಿ. ಕಾರ್ಯದರ್ಶಿ ಮತ್ತು ಬಿ..ಆರ್..ಸಿ. ಅಧ್ಯಕ್ಷರಾಗಿರುವ ಡಾ. ರೇಣು ಸ್ವರೂಪ ಅವರು ಹೇಳಿದ್ದಾರೆ.

ಭಾರತದ ಬೆಳವಣಿಗೆ ಕಥಾನಕದಲ್ಲಿಯ ಭಾರೀ ಅವಕಾಶಗಳನ್ನು ಬಳಸಿಕೊಳ್ಳಲು ಅಮೆರಿಕಾದ ಹೂಡಿಕೆದಾರರಿಗೆ ಶ್ರೀ ಧರ್ಮೇಂದ್ರ ಪ್ರಧಾನ್ ಆಹ್ವಾನ

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಹಾಗು ಉಕ್ಕು ಖಾತೆ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಅಮೆರಿಕ ಇಂಧನ ಕಾರ್ಯದರ್ಶಿ ಗೌರವಾನ್ವಿತ ಡ್ಯಾನ್ ಬ್ರೌಲಿಟ್ಟೆ ಅವರೊಂದಿಗೆ ಸಹ ಅಧ್ಯಕ್ಷತೆ ವಹಿಸಿ ಕೈಗಾರಿಕಾ ಮಟ್ಟದ ಸಂವಾದದಲ್ಲಿ ಪಾಲ್ಗೊಂಡರು. ಅಮೆರಿಕ-ಭಾರತ ವ್ಯಾಪಾರೋದ್ಯಮ ಮಂಡಳಿ ( ಯು.ಎಸ್..ಬಿ.ಸಿ.) ಇದನ್ನು ಆಯೋಜಿಸಿತ್ತು. ಅಮೆರಿಕಾ-ಭಾರತ ವ್ಯೂಹಾತ್ಮಕ ಇಂಧನ ಸಹಭಾಗಿತ್ವ (ಯು.ಎಸ್..ಎಸ್. ಪಿ.ಎಫ್. ) ಮಂಗಳವಾರದಂದು ಆಯೋಜಿಸಿದ್ದ ಕೈಗಾರಿಕಾ ಮಟ್ಟದ ಪ್ರತ್ಯೇಕ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಚಿವರು ವಹಿಸಿದ್ದರು. ಸಂವಾದಗಳಲ್ಲಿ ಸಚಿವ ಪ್ರಧಾನ್ ಅವರು ಭಾರತದಲ್ಲಿ ಹೊಸ ಅವಕಾಶಗಳಲ್ಲಿ ಹೂಡಿಕೆ ಮಾಡುವಂತೆ ಅಮೆರಿಕದ ಕಂಪೆನಿಗಳಿಗೆ  ಮತ್ತು ಹೂಡಿಕೆದಾರರಿಗೆ ಆಹ್ವಾನವಿತ್ತರು. ಸವಾಲಿನ ಸಮಯದಲ್ಲಿಯೂ ಕೂಡಾ ಭಾರತ ಮತ್ತು ಅಮೆರಿಕಾಗಳು ನಿಕಟ ಸಹಯೋಗದಲ್ಲಿ ಕಾರ್ಯ ನಿರ್ವಹಿಸುತ್ತಿವೆ , ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ  ಸ್ಥಿರತೆ ತರುವುದಿರಲಿ ಅಥವಾ ಕೋವಿಡ್ -19 ನಿಭಾಯಿಸಲು ಸಹಯೋಗದಲ್ಲಿ ಕೆಲಸ ಮಾಡುವುದಿರಲಿ ಭಾರತ ಮತ್ತು ಅಮೆರಿಕಾಗಳು ನಿಕಟವಾಗಿ ಮಾಡುತ್ತಿವೆ ಎಂದೂ ಪ್ರಧಾನ್ ಹೇಳಿದರು. ಇಂದಿನ ಸಂಕಷ್ಟಮಯ , ಪ್ರಕ್ಷುಬ್ದ ಜಗತ್ತಿನಲ್ಲಿ ಸ್ಥಿರವಾಗಿರುವ ಒಂದು ಸಂಗತಿ ಮತ್ತು ಸದಾ ಸ್ಥಿರವಾಗುಳಿಯುವ ಸಂಗತಿ ಎಂದರೆ ನಮ್ಮ ದ್ವಿಪಕ್ಷೀಯ ಸಹಭಾಗಿತ್ವದ ಶಕ್ತಿಎಂದೂ ಅವರು ನುಡಿದರು.

ಕೋವಿಡ್ -19 ವಿರುದ್ದ  ಭಾರತದ ಹೋರಾಟಕ್ಕೆ ಸಹಾಯ ಮಾಡಲು 1 ಕೋಟಿ ಸ್ವಯಂಸೇವಕರನ್ನು ಒಟ್ಟುಗೂಡಿಸಲು ಕೇಂದ್ರ ಮತ್ತು ರಾಜ್ಯಗಳ ಸಾಮೂಹಿಕ ಪ್ರಯತ್ನ : ಶ್ರೀ ಕಿರಣ್ ರಿಜಿಜು

ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವರಾದ ಶ್ರೀ ಕಿರಣ್ ರಿಜಿಜು ಅವರು ಎಲ್ಲಾ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಯುವ ಜನ ವ್ಯವಹಾರಗಳು ಮತ್ತು ಕ್ರೀಡಾ ಇಲಾಖೆಯ ಸಚಿವರು ಮತ್ತು ಹಿರಿಯ ಅಧಿಕಾರಿಗಳಿಗೆ ಯುವ ಜನ ಸಚಿವಾಲಯದ ಪ್ರಮುಖ ಕಾರ್ಯಕ್ರಮಗಳ ಅಂಗವಾಗಿ ದೊಡ್ದ ಪ್ರಮಾಣದಲ್ಲಿ ಸ್ವಯಂ ಸೇವಕರನ್ನು ಒಗ್ಗೂಡಿಸುವಂತೆ ಕರೆ ನೀಡಿದ್ದಾರೆ. ನೆಹರೂ ಯುವ ಕೇಂದ್ರ ಸಂಘಟನಾ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಭಾರತ್ ಸ್ಕೌಟ್ಸ್ ಹಾಗು ಗೈಡ್ಸ್ ಗಳ ಮೂಲಕ ಇದನ್ನು ನಿಭಾಯಿಸುವಂತೆ ಅವರು ಸಲಹೆ ಮಾಡಿದ್ದಾರೆ. ಕೋವಿಡ್ -19 ವಿರುದ್ದ ಭಾರತದ ಹೋರಾಟವನ್ನು ತೀವ್ರಗೊಳಿಸುವಂತೆ , ಆತ್ಮನಿರ್ಭರ ಭಾರತದ ಬಗ್ಗೆ ಸಮಾಜದ ಕೆಳ ಸ್ತರದಲ್ಲಿ ಇರುವವರಲ್ಲಿಯೂ ಅರಿವು ಮೂಡಿಸುವಂತೆ ಅವರು ಕೋರಿದ್ದಾರೆ. ಕ್ರೀಡೆ ಮತ್ತು ಯುವ ವ್ಯವಹಾರಗಳಿಗೆ ಸಂಬಂಧಿಸಿ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲು ಸಚಿವರು ಎರಡು ದಿನಗಳ ಅವಧಿಯ ವೀಡಿಯೋ ಸಮ್ಮೇಳನವನ್ನು ಎಲ್ಲಾ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಜೊತೆ ನಡೆಸಿದ್ದಾರೆ. ಎಲ್ಲಾ ರಾಜ್ಯಗಳು ಕೋವಿಡ್ ಅವಧಿಯಲ್ಲಿ ಫಿಟ್ ಇಂಡಿಯಾ ಕಾರ್ಯ ಚಟುವಟಿಕೆಗಳನ್ನು ಆನ್ ಲೈನ್ ಮೂಲಕ ಮುಂದುವರೆಸಿಕೊಂಡು ಹೋಗುವಂತೆ ಕೋರಿದ್ದಾರೆ. ಮತ್ತು ಜನಸಾಮಾನ್ಯರನ್ನು ಫಿಟ್ನೆಸ್ ಸಂಬಂಧಿತ ಕಾರ್ಯಚಟುವಟಿಕೆಗಳಲ್ಲಿ ಸೇರಿಸಿಕೊಳ್ಳುವಂತೆಯೂ ಅವರು ಹೇಳಿದ್ದಾರೆ.

ಏರೋಸ್ಪೇಸ್ ಮತ್ತು ರಕ್ಷಣಾ ಉತ್ಪಾದನಾ ತಂತ್ರಜ್ಞಾನಗಳ ವಿಚಾರ ಸಂಕಿರಣಕ್ಕೆ ರಕ್ಷಣಾ ಖಾತೆ ಸಹಾಯಕ ಸಚಿವ ಶ್ರೀ ಶ್ರೀಪಾದ್ ನಾಯ್ಕ್ ಚಾಲನೆ

ಭಾರತೀಯ ರಕ್ಷಣಾ ಮತ್ತು ಏರೋಸ್ಪೇಸ್ ಉದ್ಯಮ ಇಂದು ಪರಿವರ್ತನೆಯ ಹಾದಿಯಲ್ಲಿದೆ ಎಂದು ರಕ್ಷಣಾ ಖಾತೆ ಸಹಾಯಕ ಸಚಿವ ಶ್ರೀ ಶ್ರೀಪಾದ್ ನಾಯ್ಕ್ ಅಭಿಪ್ರಾಯಪಟ್ಟಿದ್ದಾರೆ. ಮೇಕ್ ಇನ್ ಇಂಡಿಯಾಮತ್ತು ಆತ್ಮನಿರ್ಭರ ಭಾರತ ಅಭಿಯಾನದಂತಹ ಭಾರತ ಸರಕಾರದ ಹಲವಾರು ಉಪಕ್ರಮಗಳು ನಿಟ್ಟಿನಲ್ಲಿ ಕಾಣಿಕೆ ನೀಡಿವೆ ಎಂದವರು ಹೇಳಿದರು. ನಿನ್ನೆ ಏರೋಸ್ಪೇಸ್ ಮತ್ತು ರಕ್ಷಣಾ ಉತ್ಪಾದನೆ ತಂತ್ರಜ್ಞಾನಗಳನ್ನು ಕುರಿತ 5 ನೇ ಆವೃತ್ತಿಯ ಸಮ್ಮೇಳನದಲ್ಲಿ ಪಾಲ್ಗೊಂಡು ಉದ್ಘಾಟನಾ ಭಾಷಣ ಮಾಡಿದ ಶ್ರೀ ನಾಯ್ಕ್ ಅವರು ಭಾರತೀಯ ಮತ್ತು ಡಿ ಉದ್ಯಮ ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ಹೊಣೆಗಾರಿಕೆಯೊಂದಿಗೆ ಸಮಯಕ್ಕೆ ತಕ್ಕಂತೆ ಎದ್ದು ನಿಲ್ಲಬೇಕು  ಮತ್ತು 2025 ರೊಳಗೆ  26 ಬಿಲಿಯನ್ ಅಮೆರಿಕನ್ ಡಾಲರ್ ದೇಶೀಯ ಉತ್ಪಾದನೆಯನ್ನು ಸಾಧಿಸಬೇಕು, ಇದನ್ನು ರಕ್ಷಣಾ ಉತ್ಪಾದನಾ ನೀತಿಯ ಉದ್ದೇಶದಲ್ಲಿಯೂ ಉಲ್ಲೇಖಿಸಲಾಗಿದೆ   ಎಂದರು. ಇಡೀ ಜಗತ್ತನ್ನು ಕೋವಿಡ್ ಬಾಧಿಸಿದೆ, ಗಂಭೀರ ಆರ್ಥಿಕ ಮತ್ತು ಸಾಮಾಜಿಕ ಸವಾಲುಗಳನ್ನು ಒಡ್ಡಿದೆ . ಕಳೆದ ನಾಲ್ಕು ತಿಂಗಳಲ್ಲಿ ನಮ್ಮ ರಾಷ್ಟ್ರೀಯ ಪ್ರಯತ್ನಗಳ ಮೂಲಕ ನಾವು ನಮ್ಮ ಬೃಹತ್ ಜನಸಂಖ್ಯೆಯಲ್ಲಿ ಜಾಗೃತಿಯನ್ನು ಮೂಡಿಸುವಲ್ಲಿ ಯಶಸ್ವಿಯಾಗಿದ್ದೇವೆ, ಪರೀಕ್ಷೆಗೆ ಸಾಕಷ್ಟು ಸಾಮರ್ಥ್ಯವನ್ನು ಗಳಿಸಿಕೊಳ್ಳುವಲ್ಲಿ ಮತ್ತು ಆರೋಗ್ಯ ಸೌಲಭ್ಯಗಳನ್ನು ಒದಗಿಸುವಲ್ಲಿ ಹಾಗು ವೈರಸ್ ಹರಡುವಿಕೆ ದರವನ್ನು ನಿಭಾಯಿಸುವಲ್ಲಿ ಯಶಸ್ಸು ಸಾಧಿಸಿದ್ದೇವೆ ಎಂದೂ ಅವರು ಹೇಳಿದರು.

ಸಕ್ರಿಯ ಔಷಧಶಾಸ್ತ್ರೀಯ ಘಟಕಾಂಶಗಳು-ಸ್ಥಿತಿ ಗತಿ, ವಿಷಯಗಳು, ತಾಂತ್ರಿಕ ಸಿದ್ದತಾ ಸ್ಥಿತಿ ಮತ್ತು ಸವಾಲುಗಳುಕುರಿತ ಟಿ..ಎಫ್..ಸಿ. ವರದಿ ಬಿಡುಗಡೆ

ಆರ್ಥಿಕವಾಗಿ ಲಾಭದಾಯಕವಾಗುವ ಮಟ್ಟದವರೆಗೆ ಸಕ್ರಿಯ ಔಷಧಶಾಸ್ತ್ರೀಯ ಘಟಕಾಂಶಗಳ (.ಪಿ..) ದೇಶೀಯ ಉತ್ಪಾದನೆಯನ್ನು ಹೆಚ್ಚಿಸಬೇಕಾದ ಆವಶ್ಯಕತೆ ಇದೆ ಎಂದು ಆದ್ಯತಾ ಉತ್ಪಾದನೆ ಹಾಗು ಸಂಬಂಧಿತ ಪ್ರಯೋಜನಗಳಿಗಾಗಿ .ಪಿ..ಗಳನ್ನು ಗುರುತಿಸಿ  ಪಟ್ಟಿಯನ್ನು ತಯಾರಿಸಿರುವ ವರದಿಯೊಂದು ಹೇಳಿದೆ. ಸಕ್ರಿಯ ಔಷಧಶಾಸ್ತ್ರೀಯ ಘಟಕಾಂಶಗಳು-ಸ್ಥಿತಿ ಗತಿ, ವಿಷಯಗಳು, ತಾಂತ್ರಿಕ ಸಿದ್ದತಾ ಸ್ಥಿತಿ ಮತ್ತು ಸವಾಲುಗಳುಕುರಿತ ವರದಿಯನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಸ್ವಾಯತ್ತ ಸಂಸ್ಥೆಯಾದ ತಂತ್ರಜ್ಞಾನ ಮಾಹಿತಿ ಮುನ್ಸೂಚನೆ ಮತ್ತು ಮೌಲ್ಯಮಾಪನ ಮಂಡಳಿ ( ಟಿ..ಎಫ್..ಸಿ.) ಇತ್ತೀಚೆಗೆ ಹೊರತಂದಿದ್ದು, ಅದರಲ್ಲಿ ಪ್ರಮುಖ ಶಿಫಾರಸುಗಳನ್ನು ಮಾಡಲಾಗಿದೆ. ಇಂಜಿನಿಯರಿಂಗ್ ಗೆ ಗಮನ ಕೇಂದ್ರೀಕರಿಸಬೇಕು, ತಂತ್ರಜ್ಞಾನ ಅಭಿವೃದ್ದಿಯನ್ನು ವಿಸ್ತರಿಸಬೇಕು , ಮಾಲಿಕ್ಯೂಲ್ ಗಳ ಅಡೆ ತಡೆ ರಹಿತ ತಯಾರಿಕೆಗಾಗಿ ನಿರ್ದಿಷ್ಟಪಡಿಸಿದ ಗುರಿಗಳನ್ನು ಸಾಧಿಸಲು ಮಿಶನ್ ಮಾದರಿಯಲ್ಲಿ ರಾಸಾಯನಿಕ ಇಂಜಿನಿಯರಿಂಗ್ ನತ್ತ ಗಮನ ಕೇಂದ್ರೀಕರಣ , ಮತ್ತು ಭಾರತದಲ್ಲಿ ಸಾಮಾನ್ಯ ಮೂಲಸೌಕರ್ಯಗಳೊಂದಿಗೆ ಮೆಗಾ ಔಷಧಿ ತಯಾರಿಕಾ ಗುಚ್ಚಗಳ ರಚನೆಯನ್ನು ಅದರಲ್ಲಿ  ಪ್ರತಿಪಾದಿಸಿದೆ. ಕೋವಿಡ್ -19 ಜಾಗತಿಕ ಸಾಂಕ್ರಾಮಿಕವು ನಮ್ಮ ದೇಶದ ಗಮನ  ಆತ್ಮನಿರ್ಭರವಾಗುವತ್ತ ಕೇಂದ್ರೀಕರಣಗೊಳ್ಳುವಂತೆ ಮಾಡಿದೆ.

ಮೀನುಗಾರಿಕೆ, ಪಶು ಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಶ್ರೀ ಗಿರಿರಾಜ್ ಸಿಂಗ್ ಅವರಿಂದ ಪಶು ಸಂಗೋಪನೆ ಮೂಲಸೌಕರ್ಯ ಅಭಿವೃದ್ದಿ ನಿಧಿ ಅನುಷ್ಟಾನ ಮಾರ್ಗದರ್ಶಿಗಳ ಬಿಡುಗಡೆ

ಆತ್ಮ ನಿರ್ಭರ ಭಾರತ್ ಅಭಿಯಾನದಡಿಯಲ್ಲಿ ಹಲವಾರು ರಂಗಗಳಲ್ಲಿ ಬೆಳವಣಿಗೆಯನ್ನು ಖಾತ್ರಿಪಡಿಸಲು ಒದಗಿಸಲಾದ ಉತ್ತೇಜನ ಪ್ಯಾಕೇಜಿನಡಿಯಲ್ಲಿ 24.06.2020 ರಂದು ಕೇಂದ್ರ ಸಂಪುಟವು ಅನುಮೋದನೆ ನೀಡಿರುವ 15,000  ಕೋ.ರೂ. ಗಳ ಮೊತ್ತದ ಪಶುಸಂಗೋಪನಾ ಮೂಲಸೌಕರ್ಯ ಅಭಿವೃದ್ದಿ ನಿಧಿ ( .ಎಚ್..ಡಿ.ಎಫ್.) ಅನುಷ್ಟಾನಕ್ಕೆ ಮಾರ್ಗದರ್ಶಿಗಳನ್ನು ಕೇಂದ್ರ ಮೀನುಗಾರಿಕೆ, ಪಶು ಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಶ್ರೀ ಗಿರಿರಾಜ್ ಸಿಂಗ್ ಅವರಿಂದು ಬಿಡುಗಡೆ ಮಾಡಿದರು. ಹೈನುಗಾರಿಕೆ ಸಂಸ್ಕರಣಾ ಮೂಲಸೌಕರ್ಯ ಅಭಿವೃದ್ದಿ ನಿಧಿ (ಡಿ..ಡಿ.ಎಫ್.) ಯನ್ನು ಸಹಕಾರಿ ವಲಯದಲ್ಲಿ ಮೂಲಸೌಕರ್ಯ ಅಭಿವೃದ್ದಿಗಾಗಿ ಅನುಷ್ಟಾನಿಸಲಾಗುವುದು ಮತ್ತು .ಎಚ್..ಡಿ.ಎಫ್. ಖಾಸಗಿ ವಲಯಕ್ಕಾಗಿರುವ ಮೊದಲ ಮಾದರಿಯ ಯೋಜನೆಯಾಗಿದೆ ಎಂದು ಅವರು ತಿಳಿಸಿದರು. ಒಂದೊಮ್ಮೆ ಮೂಲಸೌಕರ್ಯ ಒದಗಣೆಯಾದರೆ ಮಿಲಿಯಾಂತರ ರೈತರಿಗೆ ಪ್ರಯೋಜನವಾಗಲಿದೆ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಹಾಲು ಸಂಸ್ಕರಣೆ ಸಾಧ್ಯವಾಗಲಿದೆ ಎಂದೂ ಅವರು ಹೇಳಿದರು. ಇದರಿಂದ ಪ್ರಸ್ತುತ ಕನಿಷ್ಟ ಪ್ರಮಾಣದಲ್ಲಿರುವ ಹೈನು ಉತ್ಪನ್ನಗಳ ರಫ್ತು ಹೆಚ್ಚಳ ಸಾಧ್ಯವಾಗಲಿದೆ. ಭಾರತವು ಹೈನು ವಲಯದಲ್ಲಿ ನ್ಯೂಜಿಲ್ಯಾಂಡ್  ನಂತಹ ದೇಶಗಳ ಗುಣಮಟ್ಟಕ್ಕೆ ಹೋಗಬೇಕಾಗಿದೆ ಎಂದೂ ಅವರು  ಹೇಳಿದರು. ಕೋವಿಡ್ -19 ಲಾಕ್ ಡೌನ್ ಸಂದರ್ಭದಲ್ಲಿ ಹೈನುಗಾರರು ದೇಶದ ಬಳಕೆದಾರರಿಗೆ ನಿರಂತರ ಹಾಲು ಪೂರೈಕೆ ಮಾಡಿರುವುದಕ್ಕೆ ಸಚಿವರು ತೃಪ್ತಿ ವ್ಯಕ್ತಪಡಿಸಿದರು.

ಪಿ ಬಿ ಕ್ಷೇತ್ರೀಯ ಕಚೇರಿಗಳ ವರದಿ

  • ಚಂಡೀಗಢ: ಭೌತಿಕ ಪತ್ರಿಕಾಗೋಷ್ಟಿಗಳ ಮೇಲೆ ಕೇಂದ್ರಾಡಳಿತ ಪ್ರದೇಶವಾದ  ಚಂಡೀಗಢದ ಆಡಳಿತಾಧಿಕಾರಿಗಳು ಸಂಪೂರ್ಣ ನಿಷೇಧ ಜಾರಿ ಮಾಡಿ ಆದೇಶ ನೀಡಿದ್ದಾರೆ. ಬಹಳ ಮಂದಿ ಸೇರುವುದರಿಂದ ಅಲ್ಲಿ ಸೋಂಕಿನ ಅಪಾಯ ಇರುವುದರಿಂದಾಗಿ ಆದೇಶ ಜಾರಿ ಮಾಡಲಾಗಿದೆ. ಮದುವೆ ಮತ್ತು ಅಂತ್ಯಸಂಸ್ಕಾರಗಳನ್ನು ಹೊರತುಪಡಿಸಿ ಉಳಿದೆಲ್ಲ ಸಭೆ , ಸಮಾರಂಭಗಳನ್ನು  ನಿಷೇಧಿಸುವ ಗೃಹ ವ್ಯವಹಾರಗಳ ಸಚಿವಾಲಯದ ಮಾರ್ಗದರ್ಶಿಗಳನ್ನು ಉಲ್ಲಂಘಿಸಿದಂತಾಗುವುದರಿಂದ  ಯಾವುದೇ ಸಭೆ ಸಮಾರಂಭ ನಡೆಸದಂತೆ ರಾಜಕೀಯ ಪಕ್ಷಗಳಿಗೆ ಅವರು ಮನವಿ ಮಾಡಿದ್ದಾರೆ. ನಗರದಲ್ಲಿ ಯಾವುದೇ ಅಕ್ರಮ ಸಭೆ ಸಮಾರಂಭಗಳು ನಡೆದರೆ ಎಫ್..ಆರ್. ದಾಖಲಿಸುವಂತೆ ಹಿರಿಯ ಪೊಲೀಸ್ ಸುಪರಿಂಟೆಂಡೆಂಟರಿಗೆ ಸೂಚಿಸಲಾಗಿದೆ.
  • ಪಂಜಾಬ್: ಕೋವಿಡ್ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ಸಾಮಾಜಿಕ ಮಾಧ್ಯಮಗಳ ಜಾಗತಿಕ ಪ್ರಾಮುಖ್ಯತೆ ಹೆಚ್ಚುತ್ತಿರುವ ಬೆನ್ನಲ್ಲೇ , ಪಂಜಾಬ್ ಸರಕಾರವು 15 ತಜ್ಞ ಸಾಮಾಜಿಕ ಮಾಧ್ಯಮ ತಂಡಗಳನ್ನು ಹೊರಗುತ್ತಿಗೆ  ಮಾದರಿಯಲ್ಲಿ ರಚಿಸುವ ಮೂಲಕ ಮಾಹಿತಿ ವಿಸ್ತರಣಾ ಜಾಲವನ್ನು ರೂಪಿಸಲು ಮುಂದಾಗಿದೆ. ನೊವೆಲ್ ಕೊರೊನಾವೈರಸ್ ಜಾಗತಿಕ ಸಾಂಕ್ರಾಮಿಕದ ಕುರಿತಂತೆ ಸಮರ್ಪಕವಾಗಿ ಮತ್ತು ಫಲಿತಾಂಶ ಆಧಾರಿತವಾಗಿ ವಿವಿಧ ವಿಷಯಗಳ ಬಗ್ಗೆ ಮಾಹಿತಿ ಪ್ರಸಾರ ಮಾಡುವ ಪ್ರಯತ್ನಗಳನ್ನು ಇನ್ನಷ್ಟು ಬಲಿಷ್ಟಗೊಳಿಸಲು ಮತ್ತು ಮಾಹಿತಿ ಪ್ರಸಾರ ಜಾಲವನ್ನು ವಿಸ್ತರಿಸುವ ಪ್ರಮುಖ ಪ್ರಯತ್ನ ಇದೆಂದು ಮುಖ್ಯಮಂತ್ರಿಗಳು ಬಣ್ಣಿಸಿದ್ದಾರೆ. ಜಾಗತಿಕ ಸಾಂಕ್ರಾಮಿಕದ ಬಗ್ಗೆ ಜನತೆಯಲ್ಲಿ ಜಾಗೃತಿ ಮೂಡಿಸುವುದು, ಮುನ್ನೆಚ್ಚರಿಕಾ ಕ್ರಮಗಳು ಮತ್ತು ಮಾನದಂಡಗಳ ಬಗ್ಗೆ ಮಾಹಿತಿ ನೀಡುವುದಲ್ಲದೆ ತಂಡಗಳು ನಿಯಮಿತವಾಗಿ ವಿಶ್ವಾಸಾರ್ಹ ಮಾಹಿತಿಗಳನ್ನು ನೀಡುವ ಮೂಲಕ ಸುಳ್ಳು  ಮಾಹಿತಿ  ಹರಡುವುದನ್ನು ತಡೆಯಲು ಸಹಾಯ ಮಾಡಲಿವೆ.
  • ರಿಯಾ: ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಬಗ್ಗೆ ಕೈಗೊಳ್ಳಬೇಕಾಗಿರುವ ಮುಂಜಾಗರೂಕತಾ ಕ್ರಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಹರ್ಯಾಣಾ ಮುಖ್ಯಮಂತ್ರಿ ಅವರು ವಿಶೇಷ ಮಾಸಿಕ ಮ್ಯಾಗಸಿನ್ ಹರಿಗಂಧವನ್ನು ಬಿಡುಗಡೆ ಮಾಡಿದರು. ಇದನ್ನು ಹರ್ಯಾಣಾ ಸಾಹಿತ್ಯ ಅಕಾಡೆಮಿಯು ಪ್ರಕಟಿಸಿದೆ. ವಿಶೇಷ ಸಂಚಿಕೆ ಹರಿಗಂಧ ಪ್ರಾಮುಖ್ಯತೆಯನ್ನು ಪ್ರಸ್ತಾಪಿಸಿದ ಮುಖ್ಯಮಂತ್ರಿ ಅವರು ಇದರಲ್ಲಿ ಜಾಗತಿಕ ಸಾಂಕ್ರಾಮಿಕದ ಸಮಗ್ರ ಮಾಹಿತಿಯನ್ನು ನೀಡಲಾಗಿದೆ ಎಂದರು. ವಿಶೇಷ ಸಂಚಿಕೆಯ ಮೂಲಕ ಜನರು ಕೊರೊನಾ ತಡೆಯುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮತ್ತು ಅವಶ್ಯ ಇತರ ಮಾಹಿತಿ ತಿಳಿದುಕೊಳ್ಳಲು ಶಕ್ತರಾಗಲಿದ್ದಾರೆ ಎಂದು ಅವರು ಹೇಳಿದರು
  • ಹಿಮಾಚಲ ಪ್ರದೇಶ: ರಾಜ್ಯದಲ್ಲಿ ಆಶಾ ಕಾರ್ಯಕರ್ತೆಯರ ಸಮರ್ಪಕ ಮತ್ತು ಸುಲಲಿತ ಕಾರ್ಯನಿರ್ವಹಣೆಗಾಗಿ ಮತ್ತು ಅವರ ಕರ್ತವ್ಯ ದಕ್ಷತೆ ಸಾಧನೆಗಾಗಿ ಮುಖ್ಯಮಂತ್ರಿಗಳು ರಾಜ್ಯದ ಆಶಾ ಕಾರ್ಯಕರ್ತೆಯರಿಗೆ ಉಚಿತ ಸ್ಮಾರ್ಟ್ ಫೋನ್ ಗಳನ್ನು ವಿತರಿಸಿದ್ದಾರೆ. ಕೊರೊನಾ ಜಾಗತಿಕ ಸಾಂಕ್ರಾಮಿಕವು ಇಡೀ ವಿಶ್ವವನ್ನು ಅಚ್ಚರಿಯಲ್ಲಿ ಕೆಡವಿದೆ ಮತ್ತು ವೈದ್ಯಕೀಯ ವಲಯ ಕೂಡಾ ಇದಕ್ಕೆ ಯಾವುದೇ ತಯಾರಿಯನ್ನು ಹೊಂದಿರದಿರುವುದನ್ನೂ ತೋರಿಸಿದೆ. ಎಂದವರು ಹೇಳಿದರು. ಹಿಮಾಚಲ ಪ್ರದೇಶವು ವೈರಸ್ ವಿರುದ್ದ ಸಮರ್ಪಕ ಹೋರಾಟ ಮಾಡುತ್ತಿದೆ ಎಂದ ಅವರು ರಾಜ್ಯದಲ್ಲಿ ವೈರಸನ್ನು ನಿಯಂತ್ರಿಸುವಲ್ಲಿ ಆಶಾ ಕಾರ್ಯಕರ್ತೆಯರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದೂ ಹೇಳಿದರು. .ಎಲ್.. ಲಕ್ಷಣಗಳಿರುವ ಜನರನ್ನು ಪತ್ತೆ ಹಚ್ಚಲು ಸಹಾಯ ಮಾಡಿರುವುದಲ್ಲದೆ ಕ್ವಾರಂಟೈನ್ ಮಾನದಂಡಗಳನ್ನು ಕಟ್ಟು ನಿಟ್ಟಾಗಿ ಅನುಸರಿಸುವಂತೆ   ಮಾಡಲು ಜನರಿಗೆ ಉತ್ತೇಜನ ನೀಡುವಲ್ಲಿಯೂ ಆಶಾ ಕಾರ್ಯಕರ್ತೆಯರು ಸಹಾಯ ಮಾಡಿದ್ದಾರೆ ಎಂದೂ  ಅವರು ಹೇಳಿದರು.
  • ಮಹಾರಾಷ್ಟ್ರ: ಕಳೆದ 24 ಗಂಟೆಗಳಲ್ಲಿ 7,975 ಹೊಸ ಸೋಂಕುಗಳು ವರದಿಯಾಗುವುದರೊಂದಿಗೆ ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 2,75,640 ಕ್ಕೇರಿದೆ. ಆದಾಗ್ಯೂ ಪ್ರಸ್ತುತ ಸಕ್ರಿಯ ಪ್ರಕರಣಗಳ ಹೊರೆ 1,11,801 ಮಾತ್ರ. ಮುಂಬಯಿಯ ಸಕ್ರಿಯ ಪ್ರಕರಣಗಳ ಹೊರೆ 22,959. ಮಹಾರಾಷ್ಟ್ರದಲ್ಲಿ ಗುಣಮುಖ ದರ 55.37%. ಮರಣ ದರ 3.96%. ನಾಸಿಕ್ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳಿಂದಾಗಿ ರಾಜ್ಯ ಸರಕಾರ ಮತ್ತು ಜಿಲ್ಲಾ ಆಡಳಿತಗಳು ನಿಮ್ಮ ಮನೆ ಬಾಗಿಲಿಗೆ ವೈದ್ಯಕೀಯ ಸೇವೆಯನ್ನು ಆರಂಭಿಸಿವೆ. 556 ದಳಗಳನ್ನು ರಚಿಸಲಾಗಿದ್ದು, ಅವರನ್ನು ಕೋವಿಡ್ ಪಾಸಿಟಿವ್ ರೋಗಿಗಳ ಪತ್ತೆಗಾಗಿ ನಿಯೋಜಿಸಲಾಗಿದೆ. .  
  • ಗುಜರಾತ್: ಬುಧವಾರದಂದು ಗುಜರಾತಿನಲ್ಲಿ 925 ಹೊಸ ಕೋವಿಡ್ -19 ಪ್ರಕರಣಗಳು ಮತ್ತು 10 ಸಾವುಗಳು ವರದಿಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 44,648 ಕ್ಕೇರಿದೆ. 31,346 ಮಂದಿ ಬಿಡುಗಡೆಯಾಗಿದ್ದಾರೆ. ಮತ್ತು 2,081 ಮಂದಿ ಮೃತಪಟ್ಟಿದ್ದಾರೆ. ರಾಜ್ಯ ಸರಕಾರವು ಕೋವಿಡ್ -19 ಕ್ಕಾಗಿರುವ ಪರೀಕ್ಷಾ ನೀತಿಯನ್ನು ಬುಧವಾರದಂದು ಪರಿಷ್ಕರಿಸಿದೆ. ಹೊಸ ನೀತಿಯನ್ವಯ ಕೋವಿಡ್ ಪರೀಕ್ಷೆಯನ್ನು ಯಾವುದೇ ಎಂ.ಬಿ.ಬಿ.ಎಸ್. ವೈದ್ಯರ ಪ್ರಿಸ್ಕ್ರಿಪ್ಷನ್ ಅನ್ವಯ ನಡೆಸಬಹುದಾಗಿದೆ.
  • ರಾಜಸ್ಥಾನ: ರಾಜಸ್ಥಾನದಲ್ಲಿ ಇಂದು ಬೆಳಿಗ್ಗೆ 143 ಹೊಸ ಪಾಸಿಟಿವ್ ಪ್ರಕರಣಗಳು ಮತ್ತು 4 ಸಾವುಗಳು ವರದಿಯಾಗಿವೆ. ಬುಧವಾರದಂದು ರಾಜ್ಯದಲ್ಲಿ ದಾಖಲೆ ಪ್ರಮಾಣದಲ್ಲಿ, ಅಂದರೆ 866 ಮಂದಿ ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಆಗಿದ್ದಾರೆ. ರಾಜ್ಯದಲ್ಲಿ ಒಟ್ಟು ಕೋವಿಡ್ -19 ಪ್ರಕರಣಗಳ ಸಂಖ್ಯೆ 26,580 ಕ್ಕೇರಿದೆ. ಸಕ್ರಿಯ ಪ್ರಕರಣಗಳ ಹೊರೆ 6,459.
  • ಮಧ್ಯಪ್ರದೇಶ: ರಾಜ್ಯದಲ್ಲಿ 638 ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುವುದರೊಂದಿಗೆ ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 19,643 ಕ್ಕೇರಿದೆ. ಸಕ್ರಿಯ ಪ್ರಕರಣಗಳ ಹೊರೆ 5,053. ಗುಣಮುಖರಾದವರು 13,908. ರಾಜ್ಯದಲ್ಲಿ ಇದುವರೆಗೆ ರೋಗಕ್ಕೆ 682 ಮಂದಿ ಬಲಿಯಾಗಿದ್ದಾರೆ.
  • ಛತ್ತೀಸ್ ಗಢ: ಛತ್ತೀಸ್ ಗಢದಲ್ಲಿ 154 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರಿಂದ ರಾಜ್ಯದ ಒಟ್ಟು ಕೋವಿಡ್ -19 ಪ್ರಕರಣಗಳ ಸಂಖ್ಯೆ 4,556 ಕ್ಕೇರಿದೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಹೊರೆ 1,212.
  • ಗೋವಾ: ಬುಧವಾರದಂದು ಒಂದೇ ದಿನದಲ್ಲಿ 198 ಪಾಸಿಟಿವ್ ಪ್ರಕರಣಗಳನ್ನು ಗೋವಾ ದಾಖಲಿಸಿದೆ. ರಾಜ್ಯದಲ್ಲಿ ಒಂದೇ ದಿನದಲ್ಲಿ ಆಗಿರುವ ಇದುವರೆಗಿನ ಭಾರೀ ಪ್ರಮಾಣದ ಹೆಚ್ಚಳ ಇದಾಗಿದೆ. ರಾಜ್ಯದಲ್ಲಿ ಕೊರೊನಾವೈರಸ್ ಸೋಂಕಿನ ಒಟ್ಟು ಪ್ರಕರಣಗಳ ಸಂಖ್ಯೆ 2,951 ಕ್ಕೇರಿದೆ. , ಪ್ರಸ್ತುತ ಇರುವ ಸಕ್ರಿಯ ಪ್ರಕರಣಗಳ ಹೊರೆ 1259.
  • ಕೇರಳ: ರಾಜ್ಯದಲ್ಲಿ ಇಂದು ಇನ್ನೊಂದು ಕೋವಿಡ್ ಸಾವು ಸಂಭವಿಸುವುದರೊಂದಿಗೆ ಒಟ್ಟು ಮೃತರ ಸಂಖ್ಯೆ 36 ಕ್ಕೇರಿದೆ. ಮೃತಪಟ್ಟ ಯುವಕ ಕಣ್ಣೂರಿಗೆ ಸೇರಿದವರೆಂದು ಗುರುತಿಸಲಾಗಿದೆ. ಇಡುಕ್ಕಿಯಲ್ಲಿ ಕೋವಿಡ್ -19 ಕ್ಕಾಗಿ ನಿಗಾದಲ್ಲಿದ್ದ ವ್ಯಕ್ತಿ ಇಂದು ಮೃತಪಟ್ಟಿದ್ದಾರೆ. ; ಆದರೆ ಇವರು ಕೋವಿಡ್ ನಿಂದಾಗಿ ಮೃತಪಟ್ಟಿರುವರೇ ಎಂಬುದು ಇನ್ನಷ್ಟೇ ದೃಢಪಡಬೇಕಿದೆ. ತಿರುವನಂತಪುರಂ ವೈದ್ಯಕೀಯ ಕಾಲೇಜಿನ ನಾಲ್ಕು ಮಂದಿ ವೈದ್ಯರು ಕೋವಿಡ್ -19 ಪರೀಕ್ಷೆಯಲ್ಲಿ ಪಾಸಿಟಿವ್ ಆಗಿದ್ದಾರೆ. ಮುಂಜಾಗರೂಕತಾ ಕ್ರಮವಾಗಿ ಶಸ್ತ್ರಚಿಕಿತ್ಸಾ ಘಟಕದ 30 ವೈದ್ಯರನ್ನು ಕ್ವಾರಂಟೈನ್ ಮಾಡಲಾಗಿದೆ ಮತ್ತು ಶಸ್ತ್ರಚಿಕಿತ್ಸಾ ಘಟಕವನ್ನು ಮುಚ್ಚಲಾಗಿದೆ. ಮುಂದಿನ ತಿಂಗಳು ಕೋವಿಡ್ ಪ್ರಕರಣಗಳ ಸಖ್ಯೆಯಲ್ಲಿ ಭಾರೀ ಹೆಚ್ಚಳ ಆಗುವ ಸಂಭಾವ್ಯತೆ ಇರುವುದರಿಂದ , ಅದನ್ನು ನಿಭಾಯಿಸಲು ಪ್ರತೀ ಜಿಲ್ಲೆಯಲ್ಲೂ ಪ್ರಥಮ ಹಂತದ ಚಿಕಿತ್ಸಾ ಕೇಂದ್ರಗಳಲ್ಲಿ 5,000 ಹಾಸಿಗೆಗಳ ಸಾಮರ್ಥ್ಯವನ್ನು ಖಾತ್ರಿಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ನಿನ್ನೆ 623 ಹೊಸ ಕೋವಿಡ್ -19 ಪ್ರಕರಣಗಳು ದೃಢಪಟ್ಟಿವೆ. ಇವುಗಳಲ್ಲಿ 450 ಸ್ಥಳೀಯವಾಗಿ ಪ್ರಸರಣವಾದವುಗಳು ಮತ್ತು 37 ಪ್ರಕರಣಗಳಲ್ಲಿ ಸೋಂಕಿನ ಸಂಪರ್ಕ ಪತ್ತೆಯಾಗಿಲ್ಲ. 4,880 ರೋಗಿಗಳು ಈಗಲೂ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು 1,84,601 ಮಂದಿ ವಿವಿಧ ಜಿಲ್ಲೆಗಳಲ್ಲಿ ವೈದ್ಯಕೀಯ ನಿಗಾದಲ್ಲಿದ್ದಾರೆ.
  • ತಮಿಳುನಾಡು: ಪುದುಚೇರಿಯಲ್ಲಿ 9 ತಿಂಗಳ ಮಗು ಕೋವಿಡ್ -19 ಕ್ಕೆ ಬಲಿಯಾಗಿದೆ. ಇದರೊಂದಿಗೆ ಅಲ್ಲಿ ಒಟ್ಟು ಮೃತರ ಸಂಖ್ಯೆ 22 ಕ್ಕೇರಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಇಂದು ಒಂದೇ ದಿನದಲ್ಲಿ 147 ಪ್ರಕರಣಗಳು ವರದಿಯಾಗುವುದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 1,743 ಕ್ಕೇರಿದೆ. ಇರಾನಿನಿಂದ 40 ಮಂದಿ ತಮಿಳುನಾಡು ಮೀನುಗಾರರು ಚೆನ್ನೈಗೆ ಬಂದಿಳಿದಿದ್ದಾರೆ. ಕೊಯಮುತ್ತೂರು ಕಲೆಕ್ಟರ್ ಕೋವಿಡ್ -19 ಪಾಸಿಟಿವ್ ಆಗಿದ್ದಾರೆ. ನಿನ್ನೆ 4496 ಹೊಸ ಪ್ರಕರಣಗಳು ಮತ್ತು 68 ಸಾವುಗಳು ವರದಿಯಾಗಿವೆ. ಚೆನ್ನೈಯಿಂದ 1291 ಪ್ರಕರಣಗಳು ವರದಿಯಾಗಿವೆ. ಒಟ್ಟು ಪ್ರಕರಣಗಳು 1,51,820; ಸಕ್ರಿಯ ಪ್ರಕರಣಗಳು: 47,340; ಮರಣ; 2167; ಚೆನ್ನೈಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ: 15,606.
  • ಕರ್ನಾಟಕ: ಏಳು ದಿನಗಳ ಲಾಕ್ ಡೌನ್ ಎರಡನೆ ದಿನ ಪ್ರವೇಶಿಸಿದೆ. ಪೊಲಿಸರು ಲಾಕ್ ಡೌನ್ ನನ್ನು ಕಟ್ಟು ನಿಟ್ಟಾಗಿ ಅನುಷ್ಟಾನಿಸುತ್ತಿದ್ದಾರೆ. ಇತರರ ಜೀವವನ್ನು ಉಳಿಸಲು ತಮ್ಮ ಪ್ಲಾಸ್ಮಾವನ್ನು ದಾನ ಮಾಡುವಂತೆ ಕೋವಿಡ್ ನಿಂದ ಗುಣಮುಖರಾದ ನಾಗರಿಕರಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಮನವಿ ಮಾಡಿದ್ದಾರೆ. ರಕ್ತದಾನಿಗಳಿಗೆ ಮೆಚ್ಚುಗೆಯ ಪ್ರತೀಕವಾಗಿ 5000 ರೂ.ಗಳ ಬಹುಮಾನ ನೀಡಲಾಗುತ್ತದೆ ಎಂದು ಡಾ. ಕೆ.ಸುಧಾಕರ್ ಹೇಳಿದ್ದಾರೆ. ರಾಜ್ಯ ಮತ್ತು ಬಿ.ಬಿ.ಎಂ.ಪಿ. ಗಳಿಗೆ ನಗರದಲ್ಲಿ ಕೋವಿಡ್ ಜಾಗೃತಿ ಭಿತ್ತಿಪತ್ರ ಮತ್ತು ಹೋರ್ಡಿಂಗ್ ಗಳನ್ನು ಪ್ರದರ್ಶಿಸಲು ಹೈಕೋರ್ಟು ಅನುಮತಿ ನೀಡಿದೆ. ನಡುವೆ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂಗಳ ಸಂಘಟನೆ (ಪಿ.ಎಚ್..ಎನ್..) ತಮ್ಮ ಸಂಸ್ಥೆಗಳು 30% ವೈದ್ಯರು ಮತ್ತು 50% ದಾದಿಯರು ಹಾಗು ವಾರ್ಡ್ ಬಾಯ್ ಗಳೊಂದಿಗೆ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದೆ. 3176 ಹೊಸ ಪ್ರಕರಣಗಳು ಮತ್ತು 87 ಸಾವಿನ ಪ್ರಕರಣಗಳು ನಿನ್ನೆ ವರದಿಯಾಗಿವೆ. ಇದರಲ್ಲಿ 1975 ಪ್ರಕರಣಗಳು ಬೆಂಗಳೂರು ನಗರದವು. ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ: 47,253; ಸಕ್ರಿಯ ಪ್ರಕರಣಗಳು: 27,853; ಸಾವುಗಳು: 928
  • ಆಂಧ್ರ ಪ್ರದೇಶ: ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ 2020 ಜನವರಿ 3 ರಿಂದ ಅನುಷ್ಟಾನಿಸಲಾದ ವೈ.ಎಸ್.ಆರ್. ಆರೋಗ್ಯಸಿರಿ ಪೈಲೆಟ್ ಯೋಜನೆಯನ್ನು ಮುಖ್ಯಮಂತ್ರಿಗಳು ಮತ್ತೆ ಆರು ಜಿಲ್ಲೆಗಳಲ್ಲಿ ವಿಸ್ತರಿಸಿದ್ದಾರೆ. ವಿಜಯನಗರಂ, ವಿಶಾಖಪಟ್ಟಣಂ, ಗುಂಟೂರು, ಪ್ರಕಾಸಂ, ಕಡಪ ಮತ್ತು ಕರ್ನೂಲು ಜಿಲ್ಲೆಗಳಲ್ಲಿ ಯೋಜನೆ ಈಗ ಅನುಷ್ಟಾನಕ್ಕೆ ಬರಲಿದೆ. ಮುಂದಿನ ಏಪ್ರಿಲ್ ತಿಂಗಳೊಳಗೆ ಎಲ್ಲಾ ಪಂಚಾಯತ್ ಗಳಲ್ಲಿ ಗ್ರಾಮ ಕ್ಲಿನಿಕ್ ಗಳನ್ನು ಸ್ಥಾಪಿಸಲು ರಾಜ್ಯ ನಿರ್ಧರಿಸಿದೆ. ಕೃಷ್ಣಾ ಜಿಲ್ಲೆಯ ನಗರ ಪ್ರದೇಶದಲ್ಲಿಯ ಭಿಕ್ಷುಕರಿಗೆ ಆರು ಮುಖಗವಸುಗಳು ಮತ್ತು ಎರಡು ಸಾಬೂನುಗಳುಳ್ಳ ಕೋವಿಡ್ -19 ಕಿಟ್ ಗಳನ್ನು ರಾಜ್ಯವು ವಿತರಿಸಿದೆ. ಚಿತ್ತೂರು ಜಿಲ್ಲೆಯ ಪಿಲೇರು ಉಪ ಕಾರಾಗೃಹವನ್ನು ಜಿಲ್ಲೆಯ ವಿವಿಧ ಜೈಲುಗಳಲ್ಲಿ ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಆಗಿರುವ 138 ಖೈದಿಗಳನ್ನು ಇಡುವುದಕ್ಕಾಗಿ ಕೋವಿಡ್ -19 ಕಾರಾಗೃಹವನ್ನಾಗಿ ಪರಿವರ್ತಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ 2593 ಹೊಸ ಪ್ರಕರಣಗಳು ವರದಿಯಾಗಿವೆ ಮತ್ತು 943 ಮಂದಿ ಬಿಡುಗಡೆಯಾಗಿದ್ದಾರೆ ಮತ್ತು 40 ಮಂದಿ ಮೃತಪಟ್ಟಿದ್ದಾರೆ. ಒಟ್ಟು ಪ್ರಕರಣಗಳ ಸಂಖ್ಯೆ : 38,044, ಸಕ್ರಿಯ ಪ್ರಕರಣಗಳು: 18,159; ಮರಣಗಳು: 492.
  • ತೆಲಂಗಾಣ: ತೆಲಂಗಾಣದ ಸಿದ್ದಿಪೇಟೆ ಜಿಲ್ಲೆಯಲ್ಲಿ .ಸಿ.ಯು. ವಿನಲ್ಲಿ 20 ಹಾಸಿಗೆಗಳು ಸಹಿತ 100 ಹಾಸಿಗೆಗಳ ಕೋವಿಡ್ ಐಸೋಲೇಶನ್ ಬ್ಲಾಕ್ ತೆರೆಯಲಾಗಿದೆ. ನಿನ್ನೆ 1597 ಹೊಸ ಪ್ರಕರಣಗಳು ಮತ್ತು 11 ಸಾವುಗಳು ವರದಿಯಾಗಿವೆ; ಜಿ.ಎಚ್.ಎಂ.ಸಿ.ಯಿಂದ 796 ಪ್ರಕರಣಗಳು ವರದಿಯಾಗಿವೆ. ನಿನ್ನೆಯವರೆಗೆ ವರದಿಯಾದ ಒಟ್ಟು ಪ್ರಕರಣಗಳು : 39,342, ಸಕ್ರಿಯ ಪ್ರಕರಣಗಳು : 12,958, ಮೃತಪಟ್ಟವರು: 386.
  • ಅರುಣಾಚಲ ಪ್ರದೇಶ: ಇಟಾನಗರದ ಚಿಂಪು ಎಂಬಲ್ಲಿ ಹೊಸದಾಗಿ ನಿರ್ಮಿಸಲಾದ ಎಂ.ಎಲ್..ಅಪಾರ್ಟ್ ಮೆಂಟ್ ಗಳಲ್ಲಿ ಕೋವಿಡ್ ಗಾಗಿಯೇ ಆಸ್ಪತ್ರೆಯನ್ನು ತೆರೆಯುವುದಕ್ಕೆ ಅರುಣಾಚಲ ಪ್ರದೇಶ ಸರಕಾರ ಅನುಮೋದನೆ ನೀಡಿದೆ.
  • ಅಸ್ಸಾಂ: ಅಝಾರಾದಲ್ಲಿರುವ ಗಿರಿಜಾನಂದ ಚೌಧುರಿ ಔಷಧ ವಿಜ್ಞಾನ ಸಂಸ್ಥೆಯು ಸದ್ಯದಲ್ಲಿಯೇ 1000 ಹಾಸಿಗೆಗಳನ್ನು ಒಳಗೊಂಡು  ಕೋವಿಡ್ -19 ಶುಶ್ರೂಷಾ ಕೇಂದ್ರವಾಗಿ ಕಾರ್ಯಾಚರಿಸಲಿದೆ ಎಂದು  ಅಸ್ಸಾಂ ಆರೋಗ್ಯ ಸಚಿವ ಹಿಮಂತ ಬಿಸ್ವಾ ಸರ್ಮಾ ಟ್ವೀಟ್ ಮಾಡಿದ್ದಾರೆ.
  • ಮಣಿಪುರ: ಥೌಬಾಲ್ ಜಿಲ್ಲಾ ಮಹಿಳಾ ಅಭಿವೃದ್ದಿ ಸಂಘಟನೆ (ಥೌಬಾಲಿಮಾ), ಲೈರೋಂಗ್ಥಾಲ್ ಮಹಿಳಾ ಅಭಿವೃದ್ದಿ ಸಂಘಟನೆ ಮತ್ತು ಮಾದಕ ದ್ರವ್ಯ ಹಾಗು ಆಲ್ಕೋಹಾಲ್ ವಿರುದ್ದದ ಮಿತ್ರಕೂಟ (ಕಾಡಾ-ಸಿ..ಡಿ..) ಗಳು ಕೋವಿಡ್ -19 ಕುರಿತಂತೆ ಜಾಗೃತಿ ಕಾರ್ಯಕ್ರಮವನ್ನು ಥೌಬಾಲಿನ ಲೈರೋಂಗ್ಥೆಲ್ ಮಾಯೆಲೇಖಿಯಲ್ಲಿ ನಡೆಸಿವೆ. ಮಣಿಪುರ ಬ್ಯಾಪ್ಟಿಸ್ಟ್ ಕನ್ವೆನ್ಷನ್ ಕೋವಿಡ್ -19 ಕುರಿತಂತೆ ಏಕದಿನ ಜಾಗೃತಿ ಕಾರ್ಯಕ್ರಮವನ್ನು ಇಂಫಾಲಾದ ಎಂಬೆಸ್ಸಿ ಕೇಂದ್ರ ಚರ್ಚಿನಲ್ಲಿ ನಡೆಸಿದೆ.
  • ಮಿಜೋರಾಂ: ಮಿಜೋರಾಂನಲ್ಲಿಂದು ಗುಣಮುಖರಾದ ಓರ್ವ ಕೋವಿಡ್ -19 ರೋಗಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಈಗ ರಾಜ್ಯದಲ್ಲಿರುವ ಒಟ್ಟು ಪ್ರಕರಣಗಳ ಸಂಖ್ಯೆ 167.
  • ನಾಗಾಲ್ಯಾಂಡ್ : ನಾಗಾಲ್ಯಾಂಡ್ ಮುಖ್ಯಮಂತ್ರಿ ಅವರು ದಿಲ್ಲಿಯಿಂದ ಮರಳಿದ ಬಳಿಕ ಮುಂಜಾಗರೂಕತಾ ಕ್ರಮವಾಗಿ ಸ್ವಯಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ. ; ಆದರೆ ಅವರು ತಮ್ಮ ಕಾರ್ಯ ಚಟುವಟಿಕೆಗಳನ್ನು ಎಂದಿನಂತೆ ನಡೆಸುವರು.
  • ಸಿಕ್ಕಿಂ : ಸಿಕ್ಕಿಂ ಮುಖ್ಯಮಂತ್ರಿ ಶ್ರೀ ಪ್ರೇಮ್ ಸಿಂಗ್ ತಮಾಂಗ್ ಮತ್ತು ಅವರ ಪತ್ನಿ ಶ್ರೀಮತಿ ಸರ್ದಾ ತಮಾಂಗ್ ಮತ್ತು ಪುತ್ರ , ಶಾಸಕ ಶ್ರೀ ಆದಿತ್ಯ ತಮಾಂಗ್ ಅವರ ಸ್ಯಾಂಪಲ್ ಗಳನ್ನು ಕೋವಿಡ್ -19 ಪರೀಕ್ಷೆಗೆ ಪಡೆದುಕೊಳ್ಳಲಾಗಿದೆ, ಮತ್ತು ಇದನ್ನನುಸರಿಸಿ ಅವರ ಭದ್ರತಾ ಸಿಬ್ಬಂದಿಗಳು ಮತ್ತು ನಿವಾಸದ ಸಿಬ್ಬಂದಿಗಳ ಸ್ಯಾಂಪಲ್ ಗಳನ್ನೂ  ಪಡೆದುಕೊಳ್ಳಲಾಗಿದ್ದು, ಒಟ್ಟು 95 ಸ್ಯಾಂಪಲ್ ಗಳನ್ನು ಸಂಗ್ರಹಿಸಲಾಗಿದೆ.

ವಾಸ್ತವ ಪರಿಶೀಲನೆ

https://static.pib.gov.in/WriteReadData/userfiles/image/image008HOT4.jpg

 

https://static.pib.gov.in/WriteReadData/userfiles/image/image0072MTI.jpg

***



(Release ID: 1639538) Visitor Counter : 307