ಆಹಾರ ಸಂಸ್ಕರಣಾ ಉದ್ದಿಮೆಗಳ ಸಚಿವಾಲಯ

ಶ್ರೀಮತಿ ಹರ್ ಸಿಮ್ರತ್ ಕೌರ್ ಬಾದಲ್ ಅವರು ಆಹಾರ ಸಂಸ್ಕರಣೆಯ ಡಿಜಿಟಲ್ ಇಂಡೋ-ಇಟಾಲಿಯನ್ ಬಿಸಿನೆಸ್ ಮಿಷನ್ ಉದ್ದೇಶಿಸಿ ಮಾತನಾಡಿದರು

Posted On: 15 JUL 2020 6:01PM by PIB Bengaluru

ಶ್ರೀಮತಿ ಹರ್ ಸಿಮ್ರತ್ ಕೌರ್ ಬಾದಲ್ ಅವರು ಆಹಾರ ಸಂಸ್ಕರಣೆಯ

ಡಿಜಿಟಲ್ ಇಂಡೋ-ಇಟಾಲಿಯನ್ ಬಿಸಿನೆಸ್ ಮಿಷನ್ ಉದ್ದೇಶಿಸಿ ಮಾತನಾಡಿದರು

ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ ಉದಯೋನ್ಮುಖ ಪ್ರವೃತ್ತಿಗಳು ಮತ್ತು ಬೆಳವಣಿಗೆಯ ಅವಕಾಶಗಳನ್ನು ಚರ್ಚಿಸಿದರು

ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವರು ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ವಿಭಾಗಗಳ ಬಗ್ಗೆ ಉಭಯ ದೇಶಗಳು ಪರಸ್ಪರ ಲಾಭ ಪಡೆಯುವ ಬಗ್ಗೆ ಬೆಳಕು ಚೆಲ್ಲಿದರು

 

ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕಾ ಸಚಿವರಾದ ಶ್ರೀಮತಿ ಹರ್ ಸಿಮ್ರತ್ ಬಾದಲ್ ಅವರು ಇಂದು ನಡೆದ ಡಿಜಿಟಲ್ ಇಂಡೋ-ಇಟಾಲಿಯನ್ ಬಿಸಿನೆಸ್ ಮಿಷನ್ ಆನ್ ಫುಡ್ ಪ್ರೊಸೆಸಿಂಗ್ ಆರಂಭಿಕ ಅಧಿವೇಶನವನ್ನುದ್ದೇಶಿಸಿ ಮಾತನಾಡಿದರು. ಎರಡು ದಿನಗಳ ಅಧಿವೇಶನದಲ್ಲಿ, ಡಿಜಿಟಲ್ ಸಮ್ಮೇಳನಗಳು, ವ್ಯಾಪಾರ ಮೇಳ ಮತ್ತು ಬಿ ಟು ಬಿ ಸಭೆಗಳು ನಡೆಯುತ್ತಿವೆ.

ಪ್ರಸಕ್ತ ಸನ್ನಿವೇಶದಲ್ಲಿ ಆಹಾರ ಸಂಸ್ಕರಣಾ ಕ್ಷೇತ್ರದ ಪಾತ್ರವನ್ನು ಎತ್ತಿ ತೋರಿಸಿದ ಕೇಂದ್ರ ಸಚಿವರು, ಉದ್ಯಮದ ಭೌಗೋಳಿಕ ಬದಲಾವಣೆಯೊಂದಿಗೆ, ಅನೇಕ ಆಹಾರ ಸಂಸ್ಕರಣಾ ಕಂಪನಿಗಳು ತಮ್ಮ ಉತ್ಪನ್ನ ಶ್ರೇಣಿಯನ್ನು ವೈವಿಧ್ಯಗೊಳಿಸಲು ಮತ್ತು ವಿಸ್ತರಿಸಲು ಪ್ರಯತ್ನಿಸುತ್ತಿವೆ ಎಂದು ಹೇಳಿದರು. ಅನೇಕ ವಿಭಿನ್ನ ಉತ್ಪನ್ನ ಪ್ರಕಾರಗಳನ್ನು ಉತ್ಪಾದಿಸಬಲ್ಲ ಬಹುಮುಖ ಸಾಧನಗಳು, ಕಂಪೆನಿಗಳು ತಮ್ಮ ಸೌಲಭ್ಯಗಳಲ್ಲಿ ದೊಡ್ಡ ಬದಲಾವಣೆಗಳಿಲ್ಲದೆ ತಮ್ಮ ಉತ್ಪಾದನೆಯನ್ನು ಹೆಚ್ಚಿಸಲು ಅನುವು ಮಾಡಿಕೊಡುತ್ತವೆ ಎಂದು ಅವರು ಹೇಳಿದರು. ಆದ್ದರಿಂದ ಇಟಾಲಿಯನ್ ಆಹಾರ ಮತ್ತು ಸಲಕರಣೆಗಳಿಗೆ ಸಂಬಂಧಿಸಿದ ಕಂಪನಿಗಳು ತಮ್ಮ ಜಾಗತಿಕ ವ್ಯಾಪ್ತಿಯನ್ನು ವಿಸ್ತರಿಸಲು ಭಾರತೀಯ ಮಾರುಕಟ್ಟೆಗಳನ್ನು ಹೆಚ್ಚಾಗಿ ಗಮನಿಸಬೇಕಾಗಿದೆ ಎಂದು ಅವರು ಒತ್ತಿ ಹೇಳಿದರು. ಭಾರತ ಮತ್ತು ಇಟಲಿ ನೈಸರ್ಗಿಕವಾಗಿಯೇ ಪಾಲುದಾರರು, ಆಹಾರ ಸಂಸ್ಕರಣಾ ಉದ್ಯಮಕ್ಕೆ ಬಂದಾಗ ಮತ್ತು ಯುರೋಪಿಯನ್ ಒಕ್ಕೂಟದಲ್ಲಿ, ಇಟಲಿಯು ಅತಿದೊಡ್ಡ ಭಾರತೀಯ ಮೂಲದವರನ್ನು ಹೊಂದಿದೆ ಎಂದು ಅವರು ಹೇಳಿದರು.

ಶ್ರೀಮತಿ. ಬಾದಲ್ ಅವರು ಸಂಭಾವ್ಯ ಮಾರುಕಟ್ಟೆಯಾಗಿ ಭಾರತದ ಪಾತ್ರವನ್ನು ಒತ್ತಿ ಹೇಳಿದರು. ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ ಅವಕಾಶಗಳ ಹೊಸ ಯುಗದ ಬಗ್ಗೆ ಬೆಳಕು ಚೆಲ್ಲಿದರು. ಸಿದ್ಧಪಡಿಸಿದ ಆಹಾರ, ಹೆಪ್ಪುಗಟ್ಟಿದ ಆಹಾರ, ಸೂಪರ್ಫುಡ್, ನ್ಯೂಟ್ರಾಸ್ಯುಟಿಕಲ್ಸ್ ಮುಂತಾದ ಪ್ರಮುಖ ವಿಭಾಗಗಳಾಗಿ (ಚಾಂಪಿಯನ್ ವಲಯವಾಗಿ) ವಿವಿಧ ವಿಭಾಗಗಳು ಹೊರಹೊಮ್ಮಿವೆ ಎಂದು ಹೇಳಿದರು.

ದೇಶಗಳು ತಮ್ಮ ಸರಬರಾಜು ಸರಪಳಿಗಳನ್ನು ಮರು ಜೋಡಿಸಲು ನೋಡುತ್ತಿವೆ ಮತ್ತು ವಿಶ್ವದ ಹಣ್ಣು ಮತ್ತು ತರಕಾರಿಗಳ ಬುಟ್ಟಿ ಎಂದೂ ಕರೆಯಲ್ಪಡುವ ಭಾರತವು ಕಚ್ಚಾ ವಸ್ತುಗಳನ್ನು ಪಡೆಯಲು ಸಾಕಷ್ಟು ಅವಕಾಶಗಳನ್ನು ನೀಡುತ್ತದೆ ಎನ್ನುವ ವಿಷಯವನ್ನು ಶ್ರೀಮತಿ ಬಾದಲ್ ಹಂಚಿಕೊಂಡರು. ಸಿದ್ಧಪಡಿಸಿದ ಸಂಸ್ಕರಿಸಿದ ಆಹಾರ ಉತ್ಪನ್ನಗಳಿಗಾಗಿ ಭಾರತವು ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಯನ್ನು ಸಹ ನೀಡುತ್ತದೆ. ಸಾಂಕ್ರಾಮಿಕ ರೋಗವನ್ನು ನಿಭಾಯಿಸುವ ನಮ್ಮ ಅನುಭವವು ಆಹಾರ ಸಂಸ್ಕರಣೆಯು ಚಾಂಪಿಯನ್ ವಲಯವಾಗಿ ಹೊರಹೊಮ್ಮಿದೆ ಎನ್ನುವುದನ್ನು ತೋರಿಸುತ್ತದೆ ಎಂದು ಅವರು ಹೇಳಿದರು.

ಡಿಜಿಟಲ್ ವಲಯ ವ್ಯವಹಾರ ಮಿಷನ್ ಬಗ್ಗೆ ಮಾತನಾಡಿದ ಸಚಿವರು, ಡಿಜಿಟಲ್ ಮಿಷನ್ ಭಾಗವಾಗಿರುವ 23 ಇಟಾಲಿಯನ್ ಕಂಪನಿಗಳು ತಮ್ಮ ಉತ್ಪನ್ನಗಳು ಮತ್ತು ಸೇವೆಗಳ ವಾಸ್ತವೋಪಮ ಪ್ರದರ್ಶನವನ್ನು ಹೊಂದಿವೆ ಮತ್ತು ಅಂತಿಮ ಬಳಕೆದಾರರು ಮತ್ತು ಇತರ ಉದ್ಯಮದ ಪಾಲುದಾರರೊಂದಿಗೆ ಭಾರತದಲ್ಲಿ ವ್ಯಾಪಾರ (ಬಿ 2 ಬಿ) ಸಭೆಗಳನ್ನು ನಡೆಸಲಿವೆ ಎಂದು ಹೇಳಿದರು. ಸಭೆಗಳು ಮತ್ತು ವೆವಿನಾರ್ಗಳು ಹಣ್ಣುಗಳು ಮತ್ತು ತರಕಾರಿಗಳು, ಸಿರಿಧಾನ್ಯಗಳು, ಹಾಲು ಮತ್ತು ಡೈರಿ ಸಂಸ್ಕರಣೆ, ಪ್ಯಾಕೇಜಿಂಗ್ ಮತ್ತು ಬಾಟ್ಲಿಂಗ್ಗಳಂಥ ಪ್ರಮುಖ ಕ್ಷೇತ್ರಗಳಲ್ಲಿ ನಡೆಯುತ್ತವೆ ಮತ್ತು ಮೆಗಾ ಫುಡ್ ಪಾರ್ಕ್ಗಳಲ್ಲಿರುವ ಘಟಕಗಳೊಂದಿಗೆ ತಾಂತ್ರಿಕ ಸಹಯೋಗಕ್ಕೆ ಅವಕಾಶಗಳಿವೆ ಎಂದು ಅವರು ಹೇಳಿದರು. ಭಾರತ ಮತ್ತು ಇಟಲಿ ಎರಡೂ ದೇಶಗಳ ಸಹಭಾಗಿತ್ವವು ಸಾಂಸ್ಥಿಕ ಸಂಪರ್ಕವನ್ನು ಖಚಿತಪಡಿಸುತ್ತದೆ ಎಂದು ಅವರು ಹೇಳಿದರು.

ಮೆಗಾ ಫುಡ್ ಪಾರ್ಕ್ಗಳು, ಕೃಷಿ ರಫ್ತು ವಲಯಗಳು ಮತ್ತು ಕೈಗಾರಿಕಾ ಉದ್ಯಾನವನಗಳು / ಎಸ್ಟೇಟ್ಗಳು / ಕ್ಲಸ್ಟರ್ಗಳು / ನೋಡ್ಗಳಂತಹ ಮೂಲಸೌಕರ್ಯಗಳ ರೂಪದಲ್ಲಿ ಸಚಿವಾಲಯವು ನೀಡುವ ವಿವಿಧ ಅವಕಾಶಗಳನ್ನು ಕೇಂದ್ರ ಸಚಿವರು ಎತ್ತಿ ತೋರಿಸಿದರು. ಪಿಎಂಕೆಎಸ್ವೈ, ಪಿಎಂ ಎಫ್ಎಂಇ ಮತ್ತು ಆತ್ಮ ನಿರ್ಭರ್ ಭಾರತ್ ಪ್ಯಾಕೇಜ್ ಅಡಿಯಲ್ಲಿ ಇತ್ತೀಚೆಗೆ ಮಾಡಿದ ಪ್ರಕಟಣೆಗಳ ವಿವರಗಳನ್ನು ಅವರು ಹಂಚಿಕೊಂಡರು.

ಭಾರತ ಮತ್ತು ಇಟಲಿಯಿಂದ ಭಾಗವಹಿಸಿದ ಎಲ್ಲರಿಗೂ ಮತ್ತು ಅಧಿವೇಶನದ ಯಶಸ್ಸಿಗಾಗಿ ಸಚಿವರು ಶುಭಾಶಯಗಳನ್ನು ಕೋರಿದರು. ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ ಭಾರತವು ಇಟಲಿಯೊಂದಿಗೆ ಸಹಭಾಗಿತ್ವವನ್ನು ಎದುರು ನೋಡುತ್ತಿದೆ, ಇದು ನಮ್ಮ ಉಭಯ ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ ಮತ್ತು ಬಲಪಡಿಸುತ್ತದೆ ಎಂದು ಅವರು ಹೇಳಿದರು.

***



(Release ID: 1639515) Visitor Counter : 182