ಪ್ರಧಾನ ಮಂತ್ರಿಯವರ ಕಛೇರಿ

2020ರ ಜುಲೈ 17ರಂದು ಇಕೊಸೊಕ್ ಉನ್ನತ ಮಟ್ಟದ ಸಭೆಯನ್ನುದ್ದೇಶಿಸಿ ಮಾತನಾಡಲಿರುವ ಪ್ರಧಾನಮಂತ್ರಿ

Posted On: 16 JUL 2020 11:26AM by PIB Bengaluru

2020 ಜುಲೈ 17ರಂದು ಇಕೊಸೊಕ್ ಉನ್ನತ ಮಟ್ಟದ ಸಭೆಯನ್ನುದ್ದೇಶಿಸಿ ಮಾತನಾಡಲಿರುವ ಪ್ರಧಾನಮಂತ್ರಿ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 2020 ಜುಲೈ 17ರಂದು ಬೆಳಗ್ಗೆ 9.30 ರಿಂದ 11.30 (ಸ್ಥಳೀಯ ಕಾಲಮಾನ)  ನ್ಯೂಯಾರ್ಕ್ ನಲ್ಲಿನ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿ ಅಧಿವೇಶನದ ವರ್ಷದ ಉನ್ನತಮಟ್ಟದ ಸಭೆಯನ್ನುದ್ದೇಶಿಸಿ ವರ್ಚುಯಲ್ ರೂಪದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಪ್ರಧಾನಮಂತ್ರಿ ಅವರು, ನಾರ್ವೆಯ ಪ್ರಧಾನಮಂತ್ರಿ ಮತ್ತು ವಿಶ್ವ ಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರಸ್ ಅವರೊಂದಿಗೆ ಸಮಾರೋಪ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುವರು.

ವಾರ್ಷಿಕ ಉನ್ನತ ಮಟ್ಟದ ಅಧಿವೇಶನ ಸರ್ಕಾರಿ, ಖಾಸಗಿ ವಲಯ, ನಾಗರಿಕ ಸಮಾಜ ಮತ್ತು ಶೈಕ್ಷಣಿಕ ವಲಯ ಸೇರಿದಂತೆ ವಿಭಿನ್ನ ಗುಂಪುಟಗಳ ಉನ್ನತ ಮಟ್ಟದ ಪ್ರತಿನಿಧಿಗಳನ್ನು ಒಳಗೊಂಡಿದೆ. ವರ್ಷದ ಉನ್ನತ ಮಟ್ಟದ ಸಭೆಯ ಘೋಷವಾಕ್ಯ ಕೋವಿಡ್ ನಂತರದ ಬಹುಮುಖದ ಬದಲಾವಣೆ: 75ನೇ ವಾರ್ಷಿಕೋತ್ಸವದ ವೇಳೆಗೆ ನಮಗೆ ಎಂತಹ ವಿಶ್ವಸಂಸ್ಥೆ ಬೇಕುಎಂಬುದಾಗಿದೆ.

ಬದಲಾಗುತ್ತಿರುವ ಅಂತಾರಾಷ್ಟ್ರೀಯ ಪರಿಸರ ಮತ್ತು ಕೋವಿಡ್-19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಅಧಿವೇಶನದಲ್ಲಿ ಬಹುವಿಧದ ಮಾರ್ಗದಲ್ಲಿ ಗಂಭೀರ ಶಕ್ತಿಗಳು ರೂಪ ಪಡೆಯುತ್ತಿರುವುದಕ್ಕೆ ಒತ್ತು ನೀಡಲಾಗುವುದು ಮತ್ತು ಬಲಿಷ್ಠ ನಾಯಕತ್ವ, ಪರಿಣಾಮಕಾರಿ ಅಂತಾರಾಷ್ಟ್ರೀಯ ಸಂಸ್ಥೆಗಳು, ಜಾಗತಿಕ ಸಾರ್ವತ್ರಿಕ ಸರಕುಗಳ ಮಹತ್ವವೃದ್ಧಿ ಮತ್ತು ಪಾಲುದಾರಿಕೆ ವಿಸ್ತರಣೆ ಮತ್ತಿತರ ಜಾಗತಿಕ ವಿಷಯಗಳ ಕುರಿತಂತೆ ಚರ್ಚಿಸಲಾಗುವುದು.

ಕಳೆದ ಜೂನ್ 17ರಂದು, 2020-22ನೇ ಸಾಲಿಗೆ ಭಾರತ ಭದ್ರತಾ ಮಂಡಳಿಯ ಕಾಯಂಯೇತರ ಸದಸ್ಯ ರಾಷ್ಟ್ರವಾಗಿ ಭಾರೀ ಬಹುಮತದೊಂದಿಗೆ ಆಯ್ಕೆಯಾದ ನಂತರ ವಿಶ್ವಸಂಸ್ಥೆಯ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಲು ಪ್ರಧಾನಮಂತ್ರಿ ಅವರಿಗೆ ದೊರೆತಿರುವ ಮೊದಲ ಅವಕಾಶ ಇದಾಗಿದೆ. ಇಕೊಸೊಕ್ ಉನ್ನತಮಟ್ಟದ ಸಭೆಯಲ್ಲಿ ವಿಶ್ವಸಂಸ್ಥೆಯ 75ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಭದ್ರತಾ ಮಂಡಳಿಯಲ್ಲಿ ಭಾರತದ ಆದ್ಯತೆಗಳನ್ನು ಮಾರ್ದನಿಗೊಳಿಸಲು ಮತ್ತು ಕೋವಿಡ್ ನಂತರದ ಜಗತ್ತಿನಲ್ಲಿ ಬಹುವಿಧದ ಸುಧಾರಣೆಗಳನ್ನು ಕೈಗೊಗೊಳ್ಳುವುದನ್ನು ಪ್ರಸ್ತಾಪಿಸಬಹುದಾಗಿದೆ. ಅಲ್ಲದೆ ಇದು ಇಕೊಸೊಕ್ ಆರಂಭದಲ್ಲಿ ಅಧ್ಯಕ್ಷೀಯ ಸ್ಥಾನವಹಿಸಿದ್ದ (1946ರಲ್ಲಿ ಶ್ರೀ ರಾಮಸ್ವಾಮಿ ಮೊದಲಿಯಾರ್), ಭಾರತದ ಪಾತ್ರವನ್ನು ಇಲ್ಲಿ ಸ್ಮರಿಸಬಹುದಾಗಿದೆ. ಪ್ರಧಾನಮಂತ್ರಿ ಅವರು ಮೊದಲು 2016 ಜನವರಿಯಲ್ಲಿ ಇಕೊಸೊಕ್ 70ನೇ ವಾರ್ಷಿಕೋತ್ಸವದಲ್ಲಿ ವರ್ಚುಯಲ್ ರೂಪದಲ್ಲಿ ಪ್ರಾಸ್ತಾವಿಕ ಭಾಷಣವನ್ನು ಮಾಡಿದ್ದರು.

***



(Release ID: 1639053) Visitor Counter : 221