ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿ ಅಧ್ಯಕ್ಷತೆಯಲ್ಲಿ ಕೋವಿಡ್-19 ಎದುರಿಸಲು ಕೈಗೊಂಡಿರುವ ಸಿದ್ಧತೆಗಳ ಪರಿಶೀಲನಾ ಸಭೆ

Posted On: 11 JUL 2020 1:33PM by PIB Bengaluru

ಪ್ರಧಾನಮಂತ್ರಿ ಅಧ್ಯಕ್ಷತೆಯಲ್ಲಿ ಕೋವಿಡ್-19 ಎದುರಿಸಲು ಕೈಗೊಂಡಿರುವ ಸಿದ್ಧತೆಗಳ ಪರಿಶೀಲನಾ ಸಭೆ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ದೇಶದಲ್ಲಿನ ಕೋವಿಡ್-19 ಸ್ಥಿತಿಗತಿ ಕುರಿತು  ಪರಾಮರ್ಶೆ ನಡೆಸಿದರು. ಈ ಪರಿಶೀಲನಾ ಸಭೆಯಲ್ಲಿ ಗೌರವಾನ್ವಿತ ಕೇಂದ್ರದ ಗೃಹ ಸಚಿವರಾದ ಶ್ರೀ ಅಮಿತ್ ಷಾ, ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್, ನೀತಿ ಆಯೋಗದ ಸದಸ್ಯರು, ಸಂಪುಟ ಕಾರ್ಯದರ್ಶಿಗಳು ಮತ್ತು ಭಾರತ ಸರ್ಕಾರದ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಧಾನಮಂತ್ರಿ ಅವರು, ದೇಶದ ನಾನಾ ಭಾಗಗಳಲ್ಲಿನ ಸ್ಥಿತಿಗತಿಯ ಕುರಿತು ಮತ್ತು ರಾಜ್ಯಗಳು ಕೈಗೊಂಡಿರುವ ಸಿದ್ಧತಾ ಕ್ರಮಗಳ ಬಗ್ಗೆ ಪರಿಶೀಲಿಸಿದರು. ಪ್ರಧಾನಮಂತ್ರಿ ಅವರು  ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಶಿಸ್ತನ್ನು ಕಾಪಾಡಿಕೊಳ್ಳವುದಕ್ಕೆ ಮತ್ತು ವೈಯಕ್ತಿಕ ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಪುನರುಚ್ಛರಿಸಿದರು. ಕೋವಿಡ್-19 ಕುರಿತಂತೆ ಜಾಗೃತಿ ಮಾಹಿತಿಯನ್ನು  ವ್ಯಾಪಕವಾಗಿ ಪ್ರಚುರಪಡಿಸಬೇಕು ಮತ್ತು ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳ ಕುರಿತು ನಿರಂತರ ನಿಗಾ ಇಡಬೇಕು ಎಂದರು. ಈ ಕುರಿತಂತೆ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲ ಎಂದರು.

ದೆಹಲಿಯಲ್ಲಿ ಸೋಂಕು ನಿಯಂತ್ರಣಕ್ಕೆ ಕೇಂದ್ರ, ರಾಜ್ಯ ಹಾಗೂ ಸ್ಥಳೀಯ ಆಡಳಿತ ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರಧಾನಮಂತ್ರಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ ಅವರುಇಡೀ ಎನ್ ಸಿಆರ್ ಪ್ರದೇಶದಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಮಾದರಿಯನ್ನು ಇತರೆ ರಾಜ್ಯಗಳೂ ಸಹ ಅಳವಡಿಸಿಕೊಳ್ಳಬೇಕು ಎಂದು ಅವರು ನಿರ್ದೇಶನ ನೀಡಿದರು.

ಅಹಮದಾಬಾದ್ ನಲ್ಲಿ ಗೃಹ ಆಧರಿತ ಧನ್ವಂತರಿ ರಥಮತ್ತು ತೀವ್ರನಿಗಾ ವ್ಯವಸ್ಥೆಯ ಯಶಸ್ವಿ ಉದಾಹರಣೆಗಳನ್ನು ನೀಡಲಾಯಿತು ಮತ್ತು ಆ ಕ್ರಮಗಳನ್ನು ಇತರೆಡೆಗಳಲ್ಲೂ ಸಹ ಅಳವಡಿಸಿಕೊಳ್ಳಬಹುದೆಂದು ನಿರ್ದೇಶನ ನೀಡಿದರು. ಸೋಂಕು ಪ್ರಮಾಣ ಹೆಚ್ಚಿರುವ ಪ್ರದೇಶಗಳು ಮತ್ತು ಸೋಂಕಿನಿಂದ ತೀವ್ರವಾಗಿ ಬಾಧಿತವಾಗಿರುವ ರಾಜ್ಯಗಳಲ್ಲಿ ರಿಯಲ್ ಟೈಮ್ ರಾಷ್ಟ್ರೀಯ ಮಟ್ಟದ ನಿಗಾವ್ಯವಸ್ಥೆ ಮತ್ತು ಮಾರ್ಗದರ್ಶನ ಒದಗಿಸಬೇಕೆಂದು ಪ್ರಧಾನಮಂತ್ರಿ ನಿರ್ದೇಶನ ನೀಡಿದರು.

***(Release ID: 1638111) Visitor Counter : 19