ಸಂಪುಟ

ಉಜ್ವಲಾ ಫಲಾನುಭವಿಗಳಿಗೆ “ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನಾ” ದ ಪ್ರಯೋಜನಗಳನ್ನು ಪಡೆಯಲು ಕಾಲಾವಧಿ 01.07.2020 ರಿಂದ ಜಾರಿಗೆ ಬರುವಂತೆ ಮತ್ತೆ ಮೂರು ತಿಂಗಳು ವಿಸ್ತರಣೆಗೆ ಸಂಪುಟ ಅನುಮೋದನೆ

Posted On: 08 JUL 2020 4:27PM by PIB Bengaluru

ಉಜ್ವಲಾ ಫಲಾನುಭವಿಗಳಿಗೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನಾ ಪ್ರಯೋಜನಗಳನ್ನು ಪಡೆಯಲು ಕಾಲಾವಧಿ 01.07.2020 ರಿಂದ ಜಾರಿಗೆ ಬರುವಂತೆ ಮತ್ತೆ ಮೂರು ತಿಂಗಳು ವಿಸ್ತರಣೆಗೆ ಸಂಪುಟ ಅನುಮೋದನೆ

 

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಉಜ್ವಲಾ ಫಲಾನುಭವಿಗಳು  ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನಾ ಪ್ರಯೋಜನಗಳನ್ನು ಪಡೆಯಲು ಕಾಲಾವಧಿಯನ್ನು 01.07.2020 ರಿಂದ ಜಾರಿಗೆ ಬರುವಂತೆ ಮತ್ತೆ ಮೂರು ತಿಂಗಳು ವಿಸ್ತರಿಸುವಂತೆ ಮಂಡಿಸಿದ ಪ್ರಸ್ತಾಪಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ತನ್ನ ಅನುಮೋದನೆ ನೀಡಿತು.

ಜಾಗತಿಕ ಸಾಂಕ್ರಾಮಿಕದ ಕಾರಣದಿಂದ ತೊಂದರೆ ಅನುಭವಿಸುವ ಬಡವರು ಮತ್ತು ಅಪಾಯದಂಚಿನಲ್ಲಿರುವವರಿಗೆ ಸುರಕ್ಷಾ ಜಾಲವನ್ನು ಒದಗಿಸುವ ಉದ್ದೇಶದಿಂದ ಸರಕಾರವು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನಾಎಂಬ ಪರಿಹಾರ ಪ್ಯಾಕೇಜನ್ನು ಘೋಷಿಸಿತ್ತು. ಪ್ಯಾಕೇಜ್ ಪಿ.ಎಂ.ಯು.ವೈ. ಅಡಿಯಲ್ಲಿ ಅಡುಗೆ ಅನಿಲ ಸಂಪರ್ಕ ಪಡೆದುಕೊಂಡ ಬಡ ಕುಟುಂಬಗಳಿಗೆ ಪರಿಹಾರವನ್ನು ಒಳಗೊಂಡಿತ್ತು. ಪಿ.ಎಂ.ಜಿ.ಕೆ.ವೈ- ಉಜ್ವಲಾ ಅಡಿಯಲ್ಲಿ ಪಿ.ಎಂ.ಯು.ವೈ. ಬಳಕೆದಾರರಿಗೆ 01.04.2020 ರಿಂದ ಮೂರು ತಿಂಗಳಿಗೆ ಉಚಿತವಾಗಿ ಅಡುಗೆ ಅನಿಲ ಮರುಪೂರಣವನ್ನು ಒದಗಿಸಲು ನಿರ್ಧರಿಸಲಾಗಿತ್ತು.

ಯೋಜನೆ ಅಡಿಯಲ್ಲಿ , 2020 ಏಪ್ರಿಲ್ ಜೂನ್ ತಿಂಗಳ ಅವಧಿಯಲ್ಲಿ ಉಜ್ವಲ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ 9709.86 ಕೋ.ರೂ. ಗಳನ್ನು ನೇರ ವರ್ಗಾವಣೆ ಮಾಡಲಾಗಿತ್ತು. ಮತ್ತು 11.97 ಕೋಟಿ ಅನಿಲ ಜಾಡಿಗಳನ್ನು ಪಿ.ಎಂ.ಯು.ವೈ. ಫಲಾನುಭವಿಗಳಿಗೆ ಪೂರೈಸಲಾಗಿತ್ತು. ಯೋಜನೆಯು ಕೊರೊನಾವೈರಸ್ ಜಾಗತಿಕ ಸಾಂಕ್ರಾಮಿಕ ಉಂಟು ಮಾಡಿದ ಅವ್ಯವಸ್ಥೆ ಮತ್ತು ಬಾಧೆಗಳನ್ನು ನಿವಾರಣೆ ಮಾಡುವಲ್ಲಿ ಬಹಳ ಪ್ರಮುಖ ಪಾತ್ರವನ್ನು ವಹಿಸಿತ್ತು.

ಯೋಜನೆಯ ಪರಾಮರ್ಶೆ ನಡೆಸಿದಾಗ , ಪಿ.ಎಂ.ಯು.ವೈ. ಕೆಲವು ವರ್ಗದ ಫಲಾನುಭವಿಗಳು ಯೋಜನೆಯ ಅವಧಿಯಲ್ಲಿ ಅವರ ಖಾತೆಗಳಿಗೆ ಜಮಾ ಮಾಡಿದ ಮುಂಗಡವನ್ನು ಮರುಪೂರಣ ಮಾಡಿದ ಅನಿಲ ಜಾಡಿಗಳನ್ನು ಖರೀದಿಸಲು ಇನ್ನಷ್ಟೇ ಬಳಸಬೇಕಾಗಿರುವುದು ಕಂಡುಬಂದಿದೆ. ಆದುದರಿಂದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಅವಧಿಯನ್ನು ಇನ್ನೂ ಮೂರು ತಿಂಗಳು ಕಾಲ ವಿಸ್ತರಿಸುವಂತೆ ಮಾಡಿರುವ ಪ್ರಸ್ತಾಪಕ್ಕೆ ಸಂಪುಟವು ತನ್ನ ಅನುಮೋದನೆ ನೀಡಿದೆ. ಇದರಿಂದ ಅನಿಲ ಜಾಡಿಗಳನ್ನು ಪಡೆಯಲು ಹಣ ಜಮಾ ಆಗಿರುವ ಆದರೆ ಮರುಪೂರಣ ಮಾಡಲಾದ ಅನಿಲ  ಜಾಡಿಗಳನ್ನು ಇನ್ನೂ ಪಡೆಯದಿರುವ ಪಿ.ಎಂ.ಯು.ವೈಫಲಾನುಭವಿಗಳಿಗೆ  ಪ್ರಯೋಜನವಾಗಲಿದೆ. ಇದರಿಂದ ತಮ್ಮ ಖಾತೆಗಳಿಗೆ ಮುಂಗಡ ವರ್ಗಾವಣೆ ಪಡೆದಿರುವ ಫಲಾನುಭವಿಗಳು ಈಗ ಸೆಪ್ಟೆಂಬರ್ 30 ರವರೆಗೆ ಮರುಪೂರಣ ಮಾಡಲಾದ ಅನಿಲ ಜಾಡಿಗಳನ್ನು ಉಚಿತವಾಗಿ ಪಡೆದುಕೊಳ್ಳಬಹುದು.

***



(Release ID: 1637332) Visitor Counter : 211