ಸಂಪುಟ
ಜುಲೈನಿಂದ ನವೆಂಬರ್ 2020ರ ವರೆಗೆ ಐದು ತಿಂಗಳ ಕಾಲ ಆಹಾರಧಾನ್ಯ ವಿತರಣೆಗೆ ಹೆಚ್ಚುವರಿ ಹಂಚಿಕೆ ಮಾಡಲು ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ವಿಸ್ತರಣೆಗೆ ಕೇಂದ್ರ ಸಂಪುಟ ಅನುಮೋದನೆ
Posted On:
08 JUL 2020 4:21PM by PIB Bengaluru
ಜುಲೈನಿಂದ ನವೆಂಬರ್ 2020ರ ವರೆಗೆ ಐದು ತಿಂಗಳ ಕಾಲ ಆಹಾರಧಾನ್ಯ ವಿತರಣೆಗೆ ಹೆಚ್ಚುವರಿ ಹಂಚಿಕೆ ಮಾಡಲು
ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ವಿಸ್ತರಣೆಗೆ ಕೇಂದ್ರ ಸಂಪುಟ ಅನುಮೋದನೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಕೋವಿಡ್-19ನ ಆರ್ಥಿಕ ಪ್ರತಿಸ್ಪಂದನಾ ಭಾಗವಾಗಿ 2020ರ ಜುಲೈನಿಂದ ನವೆಂಬರ್ ವರೆಗೆ ಐದು ತಿಂಗಳ ಕಾಲ ಹೆಚ್ಚುವರಿ ಆಹಾರಧಾನ್ಯ ವಿತರಣೆಗೆ ಹಂಚಿಕೆ ಮಾಡಲು ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ವಿಸ್ತರಣೆಗೆ ಅನುಮೋದನೆ ನೀಡಿತು.
ದೇಶದಲ್ಲಿ ಕೋವಿಡ್-19ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಬಡವರ ಕಷ್ಟಗಳನ್ನು ದೂರ ಮಾಡಲು 2020ರಲ್ಲಿ ಮಾರ್ಚ್ ತಿಂಗಳಲ್ಲಿ, ಭಾರತ ಸರ್ಕಾರ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್ (ಪಿಎಂಜಿಕೆಪಿ) ಅನ್ನು ಪ್ರಕಟಿಸಿತ್ತು. ಈ ಪ್ಯಾಕೇಜ್ “ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂ-ಜೆಕೆಎವೈ) ಅಡಿಯಲ್ಲಿ ಜಾರಿಗೊಳಿಸಲಾಗುತ್ತಿದ್ದು, ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ 2013 (ಎನ್ ಎಫ್ ಎಸ್ ಎ) ವ್ಯಾಪ್ತಿಯಲ್ಲಿ ಸುಮಾರು 81 ಕೋಟಿ ಫಲಾನುಭವಿಗಳಿಗೆ ಪ್ರತಿ ವ್ಯಕ್ತಿಗೆ ಹೆಚ್ಚುವರಿಯಾಗಿ ತಿಂಗಳಿಗೆ ತಲಾ 5 ಕೆಜಿ (ಅಕ್ಕಿ/ಗೋಧಿ) ಆಹಾರ ಧಾನ್ಯಗಳನ್ನು ಹೆಚ್ಚುವರಿಯಾಗಿ ವಿತರಿಸಲಾಗುತ್ತಿದೆ. ಆ ಮೂಲಕ ಬಡ ಹಾಗೂ ದುರ್ಬಲ ಕುಟುಂಬಗಳು/ಫಲಾನುಭವಿಗಳು ಯಾವುದೇ ಆರ್ಥಿಕ ಸಂಕಷ್ಟಕ್ಕೆ ಒಳಗಾಗದೆ ಆಹಾರ ಧಾನ್ಯಗಳನ್ನು ಪೂರೈಸಲಾಗುವುದು. ಈ ಕಾರ್ಯಕ್ರಮದಲ್ಲಿ ಆರಂಭಿಕವಾಗಿ, ಮೂರು ತಿಂಗಳ ಅವಧಿಗೆ ಅಂದರೆ ಏಪ್ರಿಲ್, ಮೇ ಮತ್ತು ಜೂನ್ ತಿಂಗಳಿಗೆ ಉಚಿತ ಆಹಾರ ಧಾನ್ಯಗಳನ್ನು ವಿತರಿಸಲಾಗಿದೆ.
ಬಡವರು ಮತ್ತು ಅಗತ್ಯವಿರುವರಿಗೆ ನಿರಂತರ ಬೆಂಬಲದ ಅಗತ್ಯತೆಯನ್ನು ಮನಗಂಡು, ಪಿಎಂ-ಜಿಕೆಎವೈ ಯೋಜನೆಯನ್ನು ಮುಂದಿನ ಐದು ತಿಂಗಳ ಕಾಲ ಅಂದರೆ 2020ರವರೆಗೆ ಜುಲೈ-ನವೆಂಬರ್ ವರೆಗೆ ವಿಸ್ತರಣೆ ಮಾಡಲಾಗಿದೆ.
ಇದಕ್ಕೂ ಮುನ್ನ, ಪಿಎಂಜಿಕೆಎವೈ ಅಡಿಯಲ್ಲಿ 30/03/2020ರಂದು ಇಲಾಖೆ (2020ರ ಏಪ್ರಿಲ್-ಜೂನ್ ಅವಧಿಗೆ) ಮೂರು ತಿಂಗಳಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಿತರಿಸಲು ಒಟ್ಟು 120 ಲಕ್ಷ ಮೆಟ್ರಿಕ್ ಟನ್ (ಎಲ್ ಎಂಟಿ) ಆಹಾರ ಧಾನ್ಯಗಳನ್ನು ಹಂಚಿಕೆ ಮಾಡಲಾಗಿದೆ. ಅದರಂತೆ, ಎಫ್ ಸಿಐ ಮತ್ತು ಇತರೆ ರಾಜ್ಯದ ಏಜೆನ್ಸಿಗಳು ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಶೇಷ ಯೋಜನೆಗಳಡಿಯಲ್ಲಿ ಬಿಡುಗಡೆ ಮಾಡಲಾಗಿದ್ದ 120 ಲಕ್ಷ ಮೆಟ್ರಿಕ್ ಟನ್ ಗಳ ಪೈಕಿ 116.5 ಎಲ್ ಎಂಟಿ (ಶೇ.97ರಷ್ಟು ) ಫಲಾನುಭವಿಗಳಿಗೆ ವಿತರಣೆ ಮಾಡಿವೆ.2020ರ ಏಪ್ರಿಲ್-ಜೂನ್ ಅವಧಿಯಲ್ಲಿ ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು 107 ಎಲ್ ಎಂಟಿ (ಹಂಚಿಕೆ ಮಾಡಲಾದ ಶೇ.89ರಷ್ಟು ಆಹಾರ ಧಾನ್ಯ) ಯನ್ನು ವಿತರಣೆ ಮಾಡಿವೆ. ಈವರೆಗೆ ಏಪ್ರಿಲ್ ತಿಂಗಳಲ್ಲಿ 74.3 ಕೋಟಿ ಫಲಾನುಭವಿಗಳಿಗೆ ಮತ್ತು ಮೇ ತಿಂಗಳಲ್ಲಿ 74.75ಕೋಟಿ ಫಲಾನುಭವಿಗಳಿಗೆ ಹಾಗೂ ಜೂನ್ ತಿಂಗಳಲ್ಲಿ 64.72 ಕೋಟಿ ಫಲಾನುಭವಿಗಳಿಗೆ ಹೆಚ್ಚುವರಿ ಉಚಿತ ಆಹಾರ ಧಾನ್ಯ ವಿತರಣೆಯ ಪ್ರಯೋಜನವನ್ನು ಪಡೆದಿದ್ದಾರೆ. ಇದು ಮಾಮೂಲಿಯಾಗಿ ಎನ್ಎಫ್ ಎಸ್ ಎ ಅಡಿಯಲ್ಲಿ ವಿತರಿಸಿದ ಆಹಾರ ಧಾನ್ಯಕ್ಕಿಂತ ಹೆಚ್ಚುವರಿಯಾಗಿ ನೀಡಲಾಗಿದೆ. ಆಹಾರ ಧಾನ್ಯ ವಿತರಣೆ ಮುಂದುವರಿದಿದೆ ಮತ್ತು ವಿತರಣೆ ಪೂರ್ಣಗೊಂಡ ನಂತರ ಅದರ ಅಂಕಿ ಅಂಶಗಳನ್ನು ಅಪ್ ಡೇಟ್ ಮಾಡಲಾಗುವುದು. ಕೆಲವು ರಾಜ್ಯಗಳು ತಮ್ಮ ಅನುಕೂಲಕಕ್ಕೆ ತಕ್ಕಂತೆ ಪಿಎಂ-ಜಿಕೆಎವೈ ಆಹಾರ ಧಾನ್ಯಗಳನ್ನು ಎರಡು ಅಥವಾ ಮೂರು ತಿಂಗಳದ್ದು ಸೇರಿಸಿ ಒಟ್ಟಿಗೆ ವಿತರಿಸಲಾಗಿದೆ.
2020ರ ಏಪ್ರಿಲ್, ಮೇ ಮತ್ತು ಜೂನ್ ತಿಂಗಳಲ್ಲಿ ಮಾಮೂಲಿ ಎನ್ ಎಫ್ ಎಸ್ ಎ ವಿತರಣೆಯಲ್ಲಿ ಸುಮಾರು 252 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯಗಳನ್ನು ವಿತರಿಸಲಾಗಿದೆ ಮತ್ತು ಪಿಎಂ-ಜಿಕೆಎವೈ ಅಡಿಯಲ್ಲಿ ಆಹಾರ ಧಾನ್ಯಗಳನ್ನು ಎಫ್ ಸಿಐ ಮೂಲಕ ದೇಶಾದ್ಯಂತ ಇರುವ ಪೂರೈಕೆ ಜಾಲದಿಂದ ಪೂರೈಸಲಾಗಿದೆ. ದೂರದ ಗುಡ್ಡಗಾಡು ಮತ್ತು ಸಂಪರ್ಕ ರಹಿತ ಪ್ರದೇಶಗಳಿಗೆ ವಾಯು ಮತ್ತು ಜಲ ಮಾರ್ಗದ ಮೂಲಕ ಸಕಾಲಕ್ಕೆ ಆಹಾರ ಧಾನ್ಯಗಳನ್ನು ಫಲಾನುಭವಿಗಳಿಗೆ ಲಭ್ಯವಾಗುವಂತೆ ಮಾಡಲಾಗಿದೆ. ಸಂಪೂರ್ಣ ಲಾಕ್ ಡೌನ್ ಸಮಯದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಪೂರೈಕೆ ಸರಣಿಯನ್ನು ಅತ್ಯಂತ ಪರಿಣಾಮಕಾರಿಯಾಗಿ ಕಾಯ್ದುಕೊಳ್ಳಲಾಯಿತು ಎಂಬುದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ. ಎಫ್ ಸಿಐ ಮತ್ತು ಇತರೆ ಇಲಾಖೆಗಳು ಎನ್ ಎಫ್ ಎಸ್ ಎ ಮತ್ತು ಪಿಎಂ-ಜಿಕೆಎವೈ ಯೋಜನೆಯಡಿ ಫಲಾನುಭವಿಗಳಿಗೆ ಯಾವುದೇ ಅಡೆತಡೆ ಇಲ್ಲದೆ ಆಹಾರ ಧಾನ್ಯಗಳನ್ನು ವಿತರಣೆಯನ್ನು ಖಾತ್ರಿಪಡಿಸಿವೆ. ಅಲ್ಲದೆ, ಐಟಿ ಆಧಾರಿತ ಪಿಡಿಎಸ್ ವ್ಯವಸ್ಥೆ ಅಂದರೆ ಡಿಜಿಟಲ್ ಇಪಿಒಎಸ್ ಯಂತ್ರಗಳ ಜಾಲ ಬಲಿಷ್ಠವಾಗಿದೆ, ಒಟ್ಟು 5.4 ಲಕ್ಷ ನ್ಯಾಯಬೆಲೆ ಅಂಗಡಿಗಳು(ಎಫ್ ಪಿಎಸ್ ಎಸ್ )ಗಳಿದ್ದು, ಅವುಗಳಲ್ಲಿ ಸುಮಾರು 4.88 ಲಕ್ಷ (ಶೇ.90.3) ಡಿಜಿಟಲ್ ಆಗಿವೆ. ಸಾರ್ವಜನಿಕ ಪಡಿತರ ವ್ಯವಸ್ಥೆ ಮೊದಲಿನಿಂದ ಕೊನೆಯವರೆಗೆ ಕಂಪ್ಯೂಟರೀಕರಣ ಮಾಡಲಾಗಿದೆ ಮತ್ತು ಪೂರೈಕೆ ಸರಣಿ ನಿರ್ವಹಣೆಯೂ ಉತ್ತಮವಾಗಿದೆ, ಇದರಿಂದಾಗಿ ಸಂಕಷ್ಟದ ಸಮಯದಲ್ಲಿ ಕೆಲವು ರಾಜ್ಯಗಳಲ್ಲಿ ಬಯೋಮೆಟ್ರಿಕ್ ಸ್ಥಗಿತಗೊಳಿಸಿ ಆಹಾರ ಧಾನ್ಯಗಳನ್ನು ವಿತರಿಸಲಾಗಿದೆ.
ಕಳೆದ ವರ್ಷ 2019ರ ಏಪ್ರಿಲ್-ಮೇ-ಜೂನ್ ತಿಂಗಳಲ್ಲಿ ಇಲಾಖೆ ಎನ್ ಎಫ್ ಎಸ್ ಎ ಅಡಿಯಲ್ಲಿ ಒಟ್ಟು 130.2 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯಗಳನ್ನು ಹಂಚಿಕೆ ಮಾಡಿತ್ತು,
ಆ ಪೈಕಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು 123 ಲಕ್ಷ ಮೆಟ್ರಿಕ್ ಟನ್ (ಶೇ 95ರಷ್ಟು ) ಎತ್ತುವಳಿ ಮಾಡಿದ್ದವು. ಆದರೆ 2020ರ ಏಪ್ರಿಲ್ –ಮೇ –ಜೂನ್ ತಿಂಗಳಲ್ಲಿ ಒಟ್ಟು 252 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯವನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿತ್ತು, (ಎನ್ ಎಫ್ ಎಸ್ ಎ ಅಡಿಯಲ್ಲಿ 132 ಮತ್ತು ಪಿಎಂಜಿಕೆಎವೈ ಅಡಿಯಲ್ಲಿ 120 ಲಕ್ಷ ಮೆಟ್ರಿಕ್ ಟನ್ ) ಆ ಪೈಕಿ 247 ಲಕ್ಷ ಮೆಟ್ರಿಕ್ ಟನ್ ಅನ್ನು ಎತ್ತುವಳಿ ಮಾಡಲಾಗಿದೆ ಮತ್ತು 226 ಲಕ್ಷ ಮೆಟ್ರಿಕ್ ಟನ್ ಈವರೆಗೆ ವಿತರಿಸಲಾಗಿದೆ. ಕಳೆದ ಮೂರು ತಿಂಗಳಲ್ಲಿ ಜನರಿಗೆ ಅಗತ್ಯಕ್ಕಿಂತ ಹೆಚ್ಚಿನ ಆಹಾರ ಧಾನ್ಯಗಳನ್ನು ವಿತರಿಸಲಾಗಿದೆ.
ಇದೀಗ ಪಿಎಂಜಿಕೆಎವೈ ಅನ್ನು 2020ರ ನವೆಂಬರ್ ವರೆಗೆ ವಿಸ್ತರಣೆ ಮಾಡಿರುವುದರಿಂದ ಆಹಾರ ಧಾನ್ಯಗಳನ್ನು ಮೊದಲಿನಂತೆ ಸುಸ್ಥಿರ ಹಾಗೂ ಶೀಘ್ರ ಗತಿಯಲ್ಲಿ ಪೂರೈಕೆ ಮತ್ತು ವಿತರಣೆ ಮಾಡಲಾಗುವುದು. ಇದರಿಂದ ಕೇಂದ್ರ ಸರ್ಕಾರಕ್ಕೆ ಹೆಚ್ಚುವರಿಯಾಗಿ 76,062 ಕೋಟಿ ವೆಚ್ಚ ತಗುಲಲಿದೆ.
***
(Release ID: 1637303)
Visitor Counter : 240
Read this release in:
Punjabi
,
Assamese
,
English
,
Urdu
,
Hindi
,
Marathi
,
Manipuri
,
Bengali
,
Gujarati
,
Odia
,
Tamil
,
Telugu
,
Malayalam