PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ

Posted On: 05 JUL 2020 6:19PM by PIB Bengaluru

ಕೋವಿಡ್-19: ಪಿ ಬಿ ದೈನಿಕ ವರದಿ

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು

ಪಿಐಬಿ ವಾಸ್ತವದ ಪರಿಶೀಲನೆ- FACT CHECK- ಯನ್ನು ಒಳಗೊಂಡಿದೆ)

https://static.pib.gov.in/WriteReadData/userfiles/image/image005YSVL.jpg

https://static.pib.gov.in/WriteReadData/userfiles/image/image006KDLC.jpg

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕೋವಿಡ್-19 ತಾಜಾ ಮಾಹಿತಿ: 4ಲಕ್ಷಕ್ಕೂ ಅಧಿಕ ಮಂದಿ ಗುಣಮುಖ: ಗುಣಮುಖರಾಗಿರುವ ಪ್ರಮಾಣ ಸಕ್ರಿಯ ಪ್ರಕರಣಗಳಿಗಿಂತ ಸುಮಾರು 1.65 ಲಕ್ಷಕ್ಕಿಂತ ಹೆಚ್ಚು

ಕೋವಿಡ್-19 ಸೋಂಕಿತ ರೋಗಿಗಳಲ್ಲಿ ಗುಣಮುಖರಾಗಿರುವವರ ಸಂಖ್ಯೆ ಇಂದು 4.09.082 ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳೀಂದಿಚೆಗೆ ಒಟ್ಟು 14,856 ಕೋವಿಡ್-19 ರೋಗಿಗಳು ಗುಣಮುಖರಾಗಿದ್ದಾರೆ. ಈವರೆಗೆ ಕೋವಿಡ್ -19 ಸಕ್ರಿಯ ರೋಗಿಗಳಿಗಿಂತ ಸುಮಾರು 1,64,268 ರೋಗಿಗಳು ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದರಿಂದಾಗಿ ರಾಷ್ಟ್ರ ಮಟ್ಟದಲ್ಲಿ ಕೋವಿಡ್-19 ನಿಂದ ಗುಣಮುಖರಾದವರ ಪ್ರಮಾಣ ಶೇ.60.77ರಷ್ಟಾಗಿದೆ. ಸದ್ಯ 2,44,814 ಸಕ್ರಿಯ ಪ್ರಕರಣಗಳಿವೆ ಮತ್ತು ಅವುಗಳೆಲ್ಲಾ ಸಕ್ರಿಯ ವೈದ್ಯಕೀಯ ನಿಗಾದಲ್ಲಿವೆ. ದೇಶದಲ್ಲಿ ಸೋಂಕು ಪತ್ತೆ ಪ್ರಯೋಗಾಲಯಗಳ ಜಾಲ ವಿಸ್ತರಣೆಯಾಗುತ್ತಿದೆ. ಸರ್ಕಾರಿ ವಲಯದ 786 ಮತ್ತು ಖಾಸಗಿ ವಲಯದ 314 ಪ್ರಯೋಗಾಲಯ ಸೇರಿ ಒಟ್ಟು 1100 ಪ್ರಯೋಗಾಲಯಗಳಿವೆ. ಪ್ರತಿದಿನ ಸೋಂಕು ಮಾದರಿ ಪರೀಕ್ಷೆಗಳು ಹೆಚ್ಚಾಗುತ್ತಿವೆ, ಕಳೆದ 24 ಗಂಟೆಗಳಲ್ಲಿ 2,48,934 ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ. ದಿನವರೆಗೆ ಒಟ್ಟು 97,89,066 ಸೋಂಕು ಮಾದರಿ ಪರೀಕ್ಷೆಗಳನ್ನು ನಡೆಸಲಾಗಿದೆ.

ರಕ್ಷಣಾ ಸಚಿವ, ಗೃಹ ಸಚಿವ ಮತ್ತು ಆರೋಗ್ಯ ಸಚಿವರು ದೆಹಲಿಯ ಸರ್ದಾರ್ ವಲ್ಲಭಭಾಯ್ ಪಟೇಲ್ ಕೋವಿಡ್ ಆಸ್ಪತ್ರೆಗೆ ಭೇಟಿ

ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಅವರು, ಗೃಹ ಸಚಿವ ಶ್ರೀ ಅಮಿತ್ ಶಾ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀ ಹರ್ಷವರ್ಧನ್ ಅವರು ನವದೆಹಲಿಯಲ್ಲಿಂದು 1000 ಹಾಸಿಗೆಗಳು ಮತ್ತು 250 ಐಸಿಯು ಘಟಕಗಳನ್ನು ಹೊಂದಿರುವ ಸರ್ದಾರ್ ವಲ್ಲಭಭಾಯ್ ಪಟೇಲ್ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿದ್ದರು. ಸೌಕರ್ಯವನ್ನು ದಾಖಲೆಯ 12 ದಿನಗಳಲ್ಲಿ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ, ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್ ), ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (ಎಂಒಎಚ್ ಎಫ್ ಡಬ್ಲೂ), ಸಶಸ್ತ್ರ ಪಡೆಗಳು, ಟಾಟಾ ಸನ್ಸ್ ಮತ್ತು ಇತರೆ ಉದ್ಯಮದವರ ಸಹಕಾರದಿಂದ ನಿರ್ಮಿಸಿತು. ರಕ್ಷಣಾ ಸಚಿವರ ಜೊತೆ ದೆಹಲಿ ಮುಖ್ಯಮಂತ್ರಿ ಶ್ರೀ ಅರವಿಂದ್ ಕೇಜ್ರಿವಾಲ್ ಮತ್ತು ಗೃಹ ಖಾತೆ ರಾಜ್ಯ ಸಚಿವ ಶ್ರೀ ಕಿಶನ್ ರೆಡ್ಡಿ ಅವರೂ ಸಹ  ಇದ್ದರು. ವಿನೂತನ ಸಮಗ್ರ ಹವಾನಿಯಂತ್ರಿತ ವ್ಯವಸ್ಥೆಯ ವೈದ್ಯಕೀಯ ಸೌಕರ್ಯ ಸುಮಾರು 25,000 ಚದರ ಮೀಟರ್ ವ್ಯಾಪ್ತಿಯಲ್ಲಿ ತಲೆ ಎತ್ತಿದ್ದು, ಅಲ್ಲಿ 250 ಐಸಿಯು ಹಾಸಿಗೆಗಳಿವೆ. ಪ್ರತಿಯೊಂದು ಐಸಿಯು ಹಾಸಿಗೆ ನಿಗಾ ಉಪಕರಣ ಮತ್ತು ವೆಂಟಿಲೇಟರ್ ಒಳಗೊಂಡಿದೆ. ಆಸ್ಪತ್ರೆಯನ್ನು ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳ ವೈದ್ಯರು, ನರ್ಸ್ ಗಳು ಮತ್ತು ಪೂರಕ ಸಿಬ್ಬಂದಿಯನ್ನು ಒಳಗೊಂಡ ವೈದ್ಯಕೀಯ ತಂಡವನ್ನು ಹೊಂದಿದೆ, ಘಟಕವನ್ನು ಡಿಆರ್ ಡಿಒ ನಿರ್ವಹಿಸುತ್ತಿದೆ. ಹೆಚ್ಚುವರಿಯಾಗಿ ರೋಗಿಗಳ ಮಾನಸಿಕ ಆರೋಗ್ಯದ ಯೋಗಕ್ಷೇಮ ನೋಡಿಕೊಳ್ಳಲು ಡಿಆರ್ ಡಿಒದಿಂದ ನಿಗದಿತ ಮಾನಸಿಕ ಆಪ್ತ ಸಮಾಲೋಚನಾ ಕೇಂದ್ರವನ್ನು ಆಸ್ಪತ್ರೆಯಲ್ಲಿ ತೆರೆಯಲಾಗಿದೆ.

ರಾಜಸ್ಥಾನದಲ್ಲಿ ಆಶಾ ಕಾರ್ಯಕರ್ತರು: ಕೋವಿಡ್-19 ವಿರುದ್ಧ ಸುದೀರ್ಘ ಹೋರಾಟದಲ್ಲಿ ಜನರಿಗೆ ಸ್ವಾರ್ಥರಹಿತ ಸೇವೆಯ ಬದ್ಧತೆ

ರಾಜಸ್ಥಾನದಲ್ಲಿ ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಆಶಾ ಕಾರ್ಯಕರ್ತೆಯರು ಅವಿಭಾಜ್ಯ ಅಂಗವಾಗಿ ಕೆಲಸ ಮಾಡುತ್ತಿದ್ದು, ಜೈಪುರದಲ್ಲಿ ಕಳೆದ ಮಾರ್ಚ್ ನಲ್ಲಿ ಮೊದಲ ಪ್ರಕರಣ ಪತ್ತೆಯಾದ ತಕ್ಷಣವೇ ಅವರು ಕಾರ್ಯ ಆರಂಭಿಸಿದರು. ರಾಜ್ಯದ ಎಎನ್ಎಂಗಳ ಸಹಭಾಗಿತ್ವದಲ್ಲಿ ಆಶಾ ಕಾರ್ಯಕರ್ತೆಯರು ರಾಜ್ಯದ 8 ಕೋಟಿ ಮನೆಗಳ 39 ಕೋಟಿ ಜನರನ್ನು ಭೇಟಿ ಮಾಡಿ ಸಕ್ರಿಯವಾಗಿ ಅವರ ಆರೋಗ್ಯದ ನಿಗಾವಹಿಸಿ ಮಾಹಿತಿಯನ್ನು ಪ್ರಚುರಪಡಿಸುತ್ತಿದ್ದಾರೆ. ಎಲ್ಲದರ ಮಧ್ಯೆಯೇ ಸೋಂಕುಗಳುಳ್ಳವರ ಬಗ್ಗೆ ಜಾಗೃತಿವಹಿಸಿ ಆಶಾ ಕಾರ್ಯಕರ್ತೆಯರು, ಗರ್ಭಿಣಿಯರು, ನವಜಾತ ಶಿಶುಗಳು ಮತ್ತು ಮಕ್ಕಳ ಆರೈಕೆಯನ್ನೂ ಸಹ ಮುಂದುವರಿಸಿದ್ದಾರೆ. ಆಂಬುಲೆನ್ಸ್ ಗಳು ಲಭ್ಯವಿಲ್ಲದ ಕಡೆ ಇವರು ಆರೋಗ್ಯ ಸೌಕರ್ಯಗಳನ್ನು ಒದಗಿಸಿದ್ದಾರೆ.

ಸ್ಥಳೀಯಭಾರತವನ್ನು ಜಾಗತಿಕಭಾರತವನ್ನಾಗಿ ಪರಿವರ್ತಿಸಲು ಆತ್ಮ ನಿರ್ಭರ ಭಾರತ ಅಭಿಯಾನವನ್ನು ಪ್ರತಿಯೊಬ್ಬ ಭಾರತೀಯರು ಬೆಂಬಲಿಸುವಂತೆ ಉಪರಾಷ್ಟ್ರಪತಿ ಕರೆ:

ಭಾರತದ ಉಪರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯನಾಯ್ಡು ಅವರು, ಉದ್ಯಮಶೀಲತೆ ಮತ್ತು ಆವಿಷ್ಕಾರಿ ವ್ಯವಸ್ಥೆಯನ್ನು ಸೃಷ್ಟಿಸಲು ಹಾಗೂ ಸ್ಥಳೀಯಭಾರತವನ್ನು, ‘ಜಾಗತಿಕಭಾರತವನ್ನಾಗಿ ಪರಿವರ್ತಿಸಲು ದೇಶದ ಪ್ರತಿಯೊಬ್ಬ ಪ್ರಜೆಯೂ ಆತ್ಮ ನಿರ್ಭರ ಭಾರತ ಅಭಿಯಾನವನ್ನು ಬೆಂಬಲಿಸಬೇಕು ಎಂದು ಕರೆ ನೀಡಿದರು. ಎಲಿಮೆಂಟ್ಸ್ ಮೊಬೈಲ್ ಆಪ್ ವರ್ಚ್ಯುಯಲ್ ರೀತಿಯಲ್ಲಿ  ಉದ್ಘಾಟನೆ ವೇಳೆ  ಉಪರಾಷ್ಟ್ರಪತಿಗಳು ಆತ್ಮ ನಿರ್ಭರ ಭಾರತ ಅಭಿಯಾನ, ಮೂಲಸೌಕರ್ಯವೃದ್ಧಿ, ಆಧುನಿಕ ತಂತ್ರಜ್ಞಾನಗಳ ಬಳಕೆ, ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಸಕ್ರಿಯ ಪೂರೈಕೆ ಸರಣಿಯನ್ನು ಸೃಷ್ಟಿಸುವ ಮೂಲಕ ದೇಶದ ಆರ್ಥಿಕ ಸಾಮರ್ಥ್ಯಕ್ಕೆ ಹೊಸ ಉತ್ತೇಜನ ನೀಡಿ, ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಗುರಿ ಹೊಂದಿದೆ ಎಂದರು. ಕೋವಿಡ್-19 ಸಾಂಕ್ರಾಮಿಕ ಸೇರಿದಂತೆ ದೇಶ ಎದುರಿಸುತ್ತಿರುವ ಹಲವು ಆಂತರಿಕ ಮತ್ತು ಬಾಹ್ಯ ಸವಾಲುಗಳು ಕುರಿತಂತೆ ಮಾತನಾಡಿದ ಶ್ರೀ ನಾಯ್ಡು ಅವರು, ಭಾರತ ಇತಿಹಾಸದ ಅತ್ಯಂತ ಕಠಿಣ ಸಮಯವನ್ನು ಹಾದುಹೋಗುತ್ತಿದೆ ಎಂದರು. “ನಮ್ಮೆದುರಿರುವ ಸವಾಲುಗಳನ್ನು ಹತ್ತಿಕ್ಕಲು ನಾವು ದೃಢನಿಶ್ಚಯದಿಂದಿರಬೇಕುಎಂದು ಹೇಳಿದರು.

ಗರೀಬ್ ಕಲ್ಯಾಣ ರೋಜ್ಗಾರ್ ಅಭಿಯಾನದಡಿ ಮರಳಿ ಬಂದಿರುವ ಕಾರ್ಮಿಕರಿಗೆ ಜೀವನೋಪಾಯ ಅವಕಾಶಗಳನ್ನು ಸೃಷ್ಟಿಸಲು ಕುಟುಂಬಗಳಿಗೆ ನಲ್ಲಿ ನೀರಿನ ಸಂಪರ್ಕ ಒದಗಿಸುವುದು

ಇಡೀ ವಿಶ್ವವೇ ಕೊರೊನಾ ಎದುರು ಸೆಣಸುತ್ತಿದೆ, ಕೇಂದ್ರ ಸರ್ಕಾರ ಭಾರೀ ಸವಾಲನ್ನು ಅವಕಾಶವನ್ನಾಗಿ ಪರಿವರ್ತಿಸುತ್ತಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಜೀವನೋಪಾಯ ಅವಕಾಶಗಳ ಸೃಷ್ಟಿ ಜೊತೆಗೆ ಗ್ರಾಮೀಣ ಆರ್ಥಿಕತೆಯನ್ನು ಉತ್ತೇಜಿಸಲು ಕ್ರಮಗಳನ್ನು ಕೈಗೊಂಡಿದೆ. ನಿಟ್ಟಿನಲ್ಲಿ ಗರೀಬ್ ಕಲ್ಯಾಣ್ ರೋಜ್ಗಾರ್ ಅಭಿಯಾನ(ಜಿಕೆಆರ್ ) ಆರಂಭಿಸಲಾಗಿದೆ. ಅದರಡಿ ಮರಳಿ ಬಂದಿರುವ ವಲಸೆ ಕಾರ್ಮಿಕರಿಗೆ ಮತ್ತು ಅದೇ ರೀತಿ ಬಾಧಿತರಾಗಿರುವ ಗ್ರಾಮೀಣ ಜನರಿಗೆ ಸ್ಥಳೀಯವಾಗಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಜೀವನೋಪಾಯಕ್ಕೆ ಅವಶ್ಯಕವಾದ ಭಾರೀ ಪ್ರಮಾಣದ ಸಾರ್ವಜನಿಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಅಭಿಯಾನದ ಭಾಗವಾಗಿ ಜಲಜೀವನ್ ಮಿಷನ್ ಅಡಿಯಲ್ಲಿ ಗ್ರಾಮೀಣ ಪ್ರದೇಶದ ಪ್ರತಿಯೊಂದು ಕುಟುಂಬಗಳಿಗೂ ನಲ್ಲಿ ನೀರಿನ ಸಂಪರ್ಕವನ್ನು ಒದಗಿಸಲಾಗುತ್ತಿದೆ ಮತ್ತು ಕೌಶಲ್ಯ ಹೊಂದಿದ, ಅರೆ ಕೌಶಲ್ಯ ಹೊಂದಿದ ಮತ್ತು ಮರಳಿ ಬಂದಿರುವ ಕಾರ್ಮಿಕರಿಗೆ ಕುಡಿಯುವ ನೀರು ಪೂರೈಕೆ ಸಂಬಂಧಿ ಕಾಮಗಾರಿಗಳಲ್ಲಿ ಭಾರೀ ಅವಕಾಶಗಳನ್ನು ಸೃಷ್ಟಿಸಲಾಗುತ್ತಿದೆ. ರಾಜ್ಯಗಳಿಗೆ ಜಿಲ್ಲೆಗಳ ಗ್ರಾಮಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಸೂಚಿಸಲಾಗಿದೆ. ಇದರಿಂದ ಪ್ರತಿಯೊಂದು ಮನೆಗೂ ಅಗತ್ಯ ಶುದ್ಧ ಕುಡಿಯುವ ನೀರು ಪೂರೈಸಲು ನೆರವಾಗುವುದಲ್ಲದೆ, ಮರಳಿ ಗ್ರಾಮಕ್ಕೆ ಬಂದಿರುವ ಕಾರ್ಮಿಕರಿಗೆ ಉದ್ಯೋಗ ಒದಗಿಸಲು ನೆರವಾಗಲಿದೆ.

ಸಾಂಕ್ರಾಮಿಕ ಕೊನೆಗಾಣಿಸಲು ಸ್ವದೇಶಿ ಭಾರತೀಯ ಕೋವಿಡ್-19 ಲಸಿಕೆ ಜಾಗತಿಕ ಮಟ್ಟದಲ್ಲಿ ಸ್ಪರ್ಧೆ

ಕೋವಿಡ್-19 ವಿರುದ್ಧದ ಕಾರ್ಮೋಡದಲ್ಲಿ  ಭಾರತ ಬಯೋಟೆಕ್ ಕೊವ್ಯಾಕ್ಸಿನ್ ಮತ್ತು ಝೈಡಸ್ ಕಾರ್ಡಿಲಾದ ಝಡ್ ವೈಸಿಒವಿ-ಡಿ ಲಸಿಕೆ ಬೆಳ್ಳಿರೇಖೆಯಂತೆ ಕಾಣಿಸುತ್ತಿವೆ. ಇವುಗಳಿಗೆ ಭಾರತದ ಔಷಧ ಮಹಾನಿಯಂತ್ರಕರು(ದಿ ಸೆಂಟ್ರಲ್ ಡ್ರಗ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಷನ್) ಸಿಡಿಎಸ್ ಸಿಒ, ಲಸಿಕೆಗಳನ್ನು ಮಾನವರ ಮೇಲೆ ಪ್ರಯೋಗಿಸಲು ಅನುಮತಿ ನೀಡಿದೆ. ಇದರಿಂದಾಗಿ  ಸೋಂಕಿನ ಅಂತ್ಯ ಕಾಣಿಸುವ ಪ್ರಯತ್ನ ಆರಂಭವಾಗಿದೆ. ಹಿಂದಿನ ವರ್ಷಗಳಲ್ಲಿ ಭಾರತ ಮಹತ್ವದ ಲಸಿಕೆ ಉತ್ಪಾದನಾ ತಾಣವಾಗಿ ಅಭಿವೃದ್ಧಿ ಹೊಂದಿದೆ. ಭಾರತೀಯ ಉತ್ಪಾದಕರು ಯುನಿಸೆಫ್ ಗೆ ಶೇ.60ರಷ್ಟು ಲಸಿಕೆಯನ್ನು ಪೂರೈಸುತ್ತಿದ್ದಾರೆ. ಮಾರಕ ಕೊರೊನಾ ಸೋಂಕಿಗೆ ಜಗತ್ತಿನ ಯಾವುದೇ ಮೂಲೆಯಲ್ಲಿ ಬೇಕಾದರೂ ಲಸಿಕೆಯನ್ನು ಅಭಿವೃದ್ಧಿಪಡಿಸಬಹುದು, ಆದರೆ ಭಾರತೀಯ ಉತ್ಪಾದಕರ ಒಳಗೊಳ್ಳುವಿಕೆ ಇಲ್ಲದೆ ಅಗತ್ಯ ಪ್ರಮಾಣದಷ್ಟು ಲಸಿಕೆ ಉತ್ಪಾದನೆ ಮಾಡುವುದು ಅಸಾಧ್ಯವಾಗಿದೆ.

ಪಿ ಬಿ ಪ್ರಾದೇಶಿಕ ಕಚೇರಿಗಳ ಮಾಹಿತಿ

  • ಪಂಜಾಬ್: ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪಂಜಾಬ್ ಸರ್ಕಾರ, ಪಂಜಾಬ್ ಗೆ ಆಗಮಿಸುತ್ತಿರುವ ಪ್ರತಿಯೊಬ್ಬ ವ್ಯಕ್ತಿಗೂ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಮಾರ್ಗಸೂಚಿಗಳು ಜುಲೈ 7ರಿಂದ ಅನ್ವಯವಾಗಲಿವೆ. ಅದರಂತೆ ಯಾವುದೇ ವ್ಯಕ್ತಿ ವಯಸ್ಕ ಅಥವಾ ಅಪ್ರಾಪ್ತ ಪಂಜಾಬ್ ಗೆ ಯಾವುದೇ ವಿಧಾನದ ಮೂಲಕ ಅಂದರೆ ರಸ್ತೆ, ರೈಲು ಅಥವಾ ವಿಮಾನದ ಮೂಲಕ ಇನ್ನು ಮುಂದೆ ಪಂಜಾಬ್ ಗೆ ಆಗಮಿಸಿದರೆ ಮುಂದಿನ ಆದೇಶದವರೆಗೆ ಆತ ಅಥವಾ ಆಕೆ ಪಂಜಾಬ್ ಪ್ರವೇಶಿಸಿದ ಕೂಡಲೇ ವೈದ್ಯಕೀಯ ತಪಾಸಣೆಗೆ ಒಳಗಾಗಬೇಕು ಮತ್ತು ಪಂಜಾಬ್ ಗೆ ಪ್ರಯಾಣ ಬೆಳೆಸುವ ಮುನ್ನ ಆತ ಅಥವಾ ಆಕೆ -ನೋಂದಣಿ ಮಾಡಿಕೊಳ್ಳುವುದು ಅತ್ಯಗತ್ಯ. ಪದೇ ಪದೇ ಭೇಟಿ ನೀಡುವ ಪ್ರವಾಸಿಗರನ್ನು ಹೊರತುಪಡಿಸಿ, ಇತರೆ ಎಲ್ಲಾ ವ್ಯಕ್ತಿಗಳು ಪಂಜಾಬ್ ತಲುಪಿದ ಕೂಡಲೇ 14 ದಿನಗಳ ಕಾಲ ಸ್ವಯಂಪ್ರೇರಿತವಾಗಿ ಕ್ವಾರಂಟೈನ್ ಗೆ ಒಳಗಾಗಬೇಕು ಮತ್ತು ಅವಧಿಯಲ್ಲಿ ಅವರು ತಮ್ಮ ಆರೋಗ್ಯ ಸ್ಥಿತಿಗತಿಯನ್ನು ಪ್ರತಿ ದಿನ ಕೋವಾ ಆಪ್ ಅಥವಾ 112ಕ್ಕೆ ಕರೆ ಮಾಡಿ, ಆರೋಗ್ಯ ಸ್ಥಿತಿಗತಿಯ ವಿವರಗಳನ್ನು ಒದಗಿಸಬೇಕು. ಒಂದು ವೇಳೆ ಅವರಿಗೆ ಯಾವುದಾದರೂ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿವೆ ಎಂಬುದು ಕಂಡುಬಂದರೆ ಅವರು ತಕ್ಷಣ 104ಕ್ಕೆ ಕರೆ ಮಾಡಬೇಕು. ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಮೊದಲ 7 ದಿನ ಸಾಂಸ್ಥಿಕ ಕ್ವಾರಂಟೈನ್ ಮತ್ತು ಆನಂತರದ 7 ದಿನ ಗೃಹ ಕ್ವಾರಂಟೈನ್ ಗೆ ಒಳಗಾಗಬೇಕು.
  • ಹರಿಯಾಣ: ಕೋವಿಡ್-19 ಮಧ್ಯೆಯೇ ರಾಜ್ಯದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಚಟುವಟಿಕೆಗಳು ಸಾಮಾನ್ಯ ಸ್ಥಿತಿಗೆ ಮರಳಿವೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಕೊರೊನಾ ಸಮಯದಲ್ಲಿ ಮಕ್ಕಳ ಶಿಕ್ಷಣದ ಮೇಲಾಗುವ ಪರಿಣಾಮಗಳನ್ನು ನಿಯಂತ್ರಿಸಲು ಆನ್ ಲೈನ್ ಮೂಲಕ ಶಿಕ್ಷಣವನ್ನು ನೀಡಲಾಗುತ್ತಿದೆ. ಕೊರೊನಾ ಸಾಂಕ್ರಾಮಿಕದ ಸಮಯದಲ್ಲಿ ಆಹಾರಧಾನ್ಯಗಳ ಖರೀದಿ ಕೂಡ ತೃಪ್ತಿದಾಯಕವಾಗಿದೆ ಎಂದು ಹೇಳಿದ್ದಾರೆ. ಗೋಧಿ ಖರೀದಿಯನ್ನು ಚುರುಕುಗೊಳಿಸಲು ಸರ್ಕಾರ ಪ್ರಸಕ್ತ ಹಂಗಾಮಿಗಾಗಿ 1800ಕ್ಕೂ ಅಧಿಕ ಖರೀದಿ ಕೇಂದ್ರಗಳನ್ನು ತೆರೆದಿದೆ. ಸಾಸಿವೆ, ಗೋಧಿ ಮತ್ತು ಇತರೆ ಬೆಳೆಗಳನ್ನು ದಾಖಲೆ ಪ್ರಮಾಣದಲ್ಲಿ ಖರೀದಿಸಲಾಗಿದೆ. ಮಧ್ಯೆ ರೈತರಿಗೆ ಅವರ ಖಾತೆಗಳಿಗೆ ನೇರವಾಗಿ ಹಣ ಪಾವತಿಸಲಾಗಿದೆ.
  • ಹಿಮಾಚಲಪ್ರದೇಶ: ಮುಖ್ಯಮಂತ್ರಿ ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾಧಿಕಾರಿಗಳು ಮತ್ತು ಕ್ಷೇತ್ರಾಭಿವೃದ್ಧಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಸರ್ಕಾರದ ನಾನಾ ಕಲ್ಯಾಣ ಯೋಜನೆಗಳ ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸುವಂತೆ ಸೂಚಿಸಿದರು. ಇದರಿಂದಾಗಿ ರಾಜ್ಯ ಸರ್ಕಾರ ಫಲಾನುಭವಿಗಳ ಜೊತೆ ಉತ್ತಮ ಸಮನ್ವಯ ಸಾಧಿಸಲು ಸಾಧ್ಯ ಎಂದರು. ಸರ್ಕಾರ ಫಲಾನುಭವಿಗಳ ಜೊತೆ ನಿರಂತರವಾಗಿ ಸಂವಾದ ನಡೆಸುವುದು ಅತ್ಯಗತ್ಯ ಮತ್ತು ಮೂಲಕ ನಾನಾ ಯೋಜನೆಗಳ ಬಗ್ಗೆ ಅವರಿಂದ ಪ್ರತಿಕ್ರಿಯೆ ಪಡೆಯುವ ಕಾರ್ಯತಂತ್ರ ಅಗತ್ಯವಿದೆ ಎಂದರು. ಗರಿಷ್ಠ ಪ್ರಮಾಣದಲ್ಲಿ ತಂತ್ರಜ್ಞಾನವನ್ನು ಬಳಸಿಕೊಳ್ಳುವಂತೆ ಅವರು ಕರೆ ನೀಡಿದರು. ಅಲ್ಲದೆ ಪಂಚಾಯಿತಿ ಮಟ್ಟದಲ್ಲಿ ಫಲಾನುಭವಿಗಳ ಸಮಗ್ರ ದತ್ತಾಂಶಗಳನ್ನು ಬಿಡಿಒಗಳು ಹೊಂದಿರಬೇಕು. ಅದೇ ದತ್ತಾಂಶ ಕೇವಲ ಒಂದು ಗುಂಡಿ ಒತ್ತಿದರೆ ಲಭ್ಯವಾಗುವಂತಿರಬೇಕು ಎಂದರು.
  • ಕೇರಳ: ಮಲ್ಲಪುರಂನ ಮಂಜೇರಿ ವೈದ್ಯಕೀಯ ಕಾಲೇಜಿನಲ್ಲಿ ಗಂಭೀರ ಸ್ಥಿತಿಯಲ್ಲಿದ್ದ 82 ವರ್ಷದ ಕೊಲ್ಲಿಯಿಂದ ಆಗಮಿಸಿದ್ದ ವ್ಯಕ್ತಿ ನಿನ್ನೆ ಸಂಜೆ ಮೃತಪಟ್ಟಿದ್ದಾರೆ, ಇದರೊಂದಿಗೆ ರಾಜ್ಯದಲ್ಲಿ ಕೋವಿಡ್ ನಿಂದ ಸಂಭವಿಸಿದ 26ನೇ ಸಾವು ದಾಖಲಾಗಿದೆ. ಆತನ ಮಾದರಿ ಪರೀಕ್ಷೆಯಲ್ಲಿ ಕೋವಿಡ್ ಪಾಸಿಟಿವ್ ಇದ್ದದು ದೃಢಪಟ್ಟಿದೆ. ಕೋವಿಡ್-19ನಿಂದಾಗಿ ಕ್ವಾರಂಟೈನ್ ನಲ್ಲಿದ್ದ ಇನ್ನೊಬ್ಬ ವ್ಯಕ್ತಿ ಕೊಟ್ಟಾಯಂ ನಲ್ಲಿಂದು ಕುಸಿದುಬಿದ್ದು ಸಾವನ್ನಪ್ಪಿದ್ದಾರೆ. ಆತನ ಗಂಟಲುದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ರಾಜಧಾನಿ ತಿರುವನಂತಪುರದಲ್ಲಿ ತೀವ್ರ ನಿಗಾ ಇರಿಸಲಾಗಿದೆ. ಆದರೂ ಸಂಪರ್ಕಗಳು ಮತ್ತು ಅಪರಿಚಿತ ಮೂಲಗಳಿಂದಾಗಿ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಮತ್ತೆ ನಾಲ್ಕು ವಾರ್ಡ್ ಗಳನ್ನು ನಿರ್ಬಂಧಿತ ವಲಯಗಳನ್ನಾಗಿ ಘೋಷಿಸಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಪರೀಕ್ಷೆಗಳನ್ನು ನಡೆಸಲಾಗುವುದು. ಎರ್ನಾಕುಲಂ ಜಿಲ್ಲೆಯಲ್ಲಿ ಪರಿಸ್ಥಿತಿ ತುಂಬಾ ಗಂಭೀರವಾಗಿದೆ. 8 ಮಂದಿ ಕೇರಳದವರು ಹೊರ ರಾಜ್ಯಗಳಲ್ಲಿ ಕೋವಿಡ್-19ಗೆ ಬಲಿಯಾಗಿದ್ದಾರೆ. ಕೊಲ್ಲಿ ಪ್ರಾಂತ್ಯದಲ್ಲಿ ಆರು ಮಂದಿ ಸೋಂಕಿಗೆ ಬಲಿಯಾಗಿದ್ದು, ಮುಂಬೈ ಮತ್ತು ದೆಹಲಿಯಲ್ಲಿ ತಲಾ ಒಬ್ಬರು ಅಸುನೀಗಿದ್ದಾರೆ. ಕೇರಳದಲ್ಲಿ ಈವರೆಗೆ 240 ಹೊಸ ಪ್ರಕರಣ ನಿನ್ನೆ ಒಂದೇ ದಿನ ದೃಢಪಟ್ಟಿವೆ. ಪ್ರಸ್ತುತ 2,129 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ನಾನಾ ಜಿಲ್ಲೆಗಳಲ್ಲಿ 1.77 ಲಕ್ಷ  ಜನರು ಕ್ವಾರಂಟೈನ್ ನಲ್ಲಿದ್ದಾರೆ.
  • ತಮಿಳುನಾಡು: ಪುದುಚೆರಿಯಲ್ಲಿ 43 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿವೆ. ಒಟ್ಟಾರೆ 448 ರೋಗಿಗಳು ಗುಣಮುಖರಾಗಿದ್ದು, ಇಂದು 43 ಮಂದಿ ಗುಣಮುಖರಾಗಿದ್ದಾರೆ. ಕೇಂದ್ರಾಡಳಿತ ಪ್ರದೇಶದಲ್ಲಿ ಈವರೆಗೆ 14 ರೋಗಿಗಳು ಮೃತಪಟ್ಟಿದ್ದಾರೆ. ಎಐಎಡಿಎಂಕೆ ಪಕ್ಷದ ದಕ್ಷಿಣ ಕೊಯಮತ್ತೂರಿನ ಶಾಸಕ ಅಮ್ಮನ್ ಕೆ. ಅರ್ಜುನನ್(58) ಇಂದು ಕೋವಿಡ್-19 ಚಿಕಿತ್ಸೆಗಾಗಿ ಇಎಸ್ಐ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶನಿವಾರ ತಮಿಳುನಾಡಿನ 37 ಜಿಲ್ಲೆಗಳಲ್ಲಿ 4,280 ಹೊಸ ಕೋವಿಡ್-19 ಪ್ರಕರಣಗಳು ಕಂಡುಬಂದಿದ್ದು, 65 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 1,07,001ಕ್ಕೆ ಏರಿಕೆಯಾಗಿದೆ. ನಿನ್ನೆಯವರೆಗೆ ದಾಖಲಾದ ಸಕ್ರಿಯ ಪ್ರಕರಣಗಳು: 44,956, ಸಾವು: 1450, ಗುಣಮುಖರಾದವರು: 60592, ಚೆನ್ನೈನಲ್ಲಿ ಸಕ್ರಿಯ ಪ್ರಕರಣಗಳು 24,195.
  • ಕರ್ನಾಟಕ: ಆಗಸ್ಟ್ 2 ವರೆಗೆ ರಾಜ್ಯದಲ್ಲಿ ಪ್ರತಿ ಭಾನುವಾರ ಸಂಪೂರ್ಣ ಲಾಕ್ ಡೌನ್ ಘೋಷಿಸಲಾಗಿದೆ. ಹೋಮ್ ಐಸೋಲೇಷನ್(ಮನೆ ಆರೈಕೆ)ಗೆ ವಯಸ್ಸಿನ ಮಿತಿಯನ್ನು 60ಕ್ಕೆ ಏರಿಸಲಾಗಿದೆ. ರೋಗಿಯಿಂದ ಪ್ರತಿ ದಿನ ಆರೋಗ್ಯದ ಮಾಹಿತಿಯನ್ನು ಸಂಗ್ರಹಿಸಲು ನಿಗದಿತ ಟೆಲಿ ಮಾನಿಟರಿಂಗ್ ಲಿಂಕ್ ಅನ್ನು ಒದಗಿಸಲಾಗುವುದು. ಸಾಂಕ್ರಾಮಿಕದ ವಿರುದ್ಧ ಹೋರಾಡಲು ಮುಖ್ಯಮಂತ್ರಿ, ಮತ್ತೆ ಇಬ್ಬರು ಸಚಿವರನ್ನು ತಂಡಕ್ಕೆ ಸೇರಿಸಿಕೊಂಡಿದ್ದಾರೆ. ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವಥ್ ನಾರಾಯಣ, ಕೋವಿಡ್ ಆರೈಕೆ ಕೇಂದ್ರಗಳ (ಸಿಸಿಸಿ) ಮೇಲ್ವಿಚಾರಣೆ ನೋಡಿಕೊಳ್ಳುವರು ಮತ್ತು ಕಂದಾಯ ಸಚಿವ ಆರ್. ಅಶೋಕ  ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಲಭ್ಯತೆ ಬಗ್ಗೆ ಸಮನ್ವಯ ಮಾಡಲಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್, ಕೊರೊನಾ ಸೋಂಕು ನೀತಿ ಮತ್ತು ಪ್ರತಿ ದಿನ ಮಾಧ್ಯಮಗಳಿಗೆ ವಿವರ ನೀಡುವ ಜವಾಬ್ದಾರಿಯನ್ನು ಮುಂದುವರಿಸಲಿದ್ದಾರೆ. ನಿನ್ನೆಯವರೆಗೆ 1839 ಹೊಸ ಪ್ರಕರಣ, 439 ಗುಣಮುಖರಾದವರು ಮತ್ತು 42 ಸಾವುಗಳು ಸಂಭವಿಸಿದೆ. ಒಟ್ಟು ಪಾಸಿಟಿವ್ ಪ್ರಕರಣಗಳು: 21,549, ಸಕ್ರಿಯ ಪ್ರಕರಣಗಳು: 11,966, ಸಾವು: 335, ಗುಣಮುಖರಾದವರು: 9244.
  • ಆಂಧ್ರಪ್ರದೇಶ: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಒಂದೇ ದಿನ ಅತ್ಯಧಿಕ 998 ಪ್ರಕರಣಗಳು ದಾಖಲಾಗಿವೆ. 14 ಮಂದಿ ಸಾವನ್ನಪ್ಪುವುದರೊಂದಿಗೆ ಒಟ್ಟು ಸಾವಿನ ಸಂಖ್ಯೆ 232ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಕೂಡ 10 ಸಾವಿರದಗಡಿ(10.043) ದಾಟಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 18,697 ತಲುಪಿದೆ. ರಾಜ್ಯದಲ್ಲಿ ಈವರೆಗೆ 10,17,140 ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ. 17 ಟಿಟಿಡಿ ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ ಮತ್ತು ಅವರೆಲ್ಲಾ ಚಿಕಿತ್ಸೆ ಪಡೆಯುತ್ತಿದ್ದು, ಅವರ ಕುಟುಂಬದವರೂ ಮತ್ತು ಅವರ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಟಿಟಿಡಿ ಜುಲೈ ಅಂತ್ಯದವರೆಗೆ ಯಾತ್ರಾರ್ಥಿಗಳ ಪ್ರತಿ ದಿನದ ದರ್ಶನದ ಸಂಖ್ಯೆಯನ್ನು ಹೆಚ್ಚಳ ಮಾಡದಿರಲು ನಿರ್ಧರಿಸಿದೆ. ರಾಜ್ಯ ಸರ್ಕಾರ ಸುಮಾರು 1.3 ಕೋಟಿ ಕುಟುಂಬಗಳಿಗೆ ಸೋಂಕು ತಗುಲಿರುವ ಬಗ್ಗೆ ತಪಾಸಣೆ ಮಾಡಲು ಮತ್ತು ಜನರಲ್ಲಿನ ಕೋವಿಡ್ ಸೂಕ್ತ ನಡವಳಿಕೆ ವಿಶ್ಲೇಷಿಸಲು ಯುನಿಸೆಫ್ ಜೊತೆ ಸೇರಿ ಅಪಾಯ ಸಂವಹನ ಮತ್ತು ಸಮುದಾಯ ಒಳಗೊಳ್ಳುವಿಕೆ ಕಾರ್ಯಕ್ರಮ ಆರಂಭಿಸಲಿದೆ.
  • ತೆಲಂಗಾಣ: ನಗರದ ಹಳೆಯ ಕೊಳೆಗೇರಿಗಳಲ್ಲಿ ಕೊರೊನಾ ಸೋಂಕಿನ ವಿರುದ್ಧ ಹೋರಾಟಕ್ಕೆ ಧಾರಾವಿ ಮಾದರಿ ಅನುಸರಿಸಲಾಗುತ್ತಿದೆ. ಕೊರೊನಾ ಸೋಂಕು ನಿರ್ವಹಣೆಯಲ್ಲಿ ರಾಜ್ಯ ಉತ್ತಮ ಸ್ಥಾನದಲ್ಲಿದ್ದು, ಇಲ್ಲಿ ಪಾಸಿಟಿವ್ ದರ ಅಥವಾ ನೂರು ಪರೀಕ್ಷೆಗಳಲ್ಲಿ ಒಟ್ಟು ಖಚಿತವಾದ ಸೋಂಕು ದೃಢಪಟ್ಟ ಪ್ರಕರಣಗಳು ಕಳೆದ ಎರಡು ವಾರಗಳಿಂದೀಚೆಗೆ ಶೇ.25ಕ್ಕೆ ಏರಿಕೆಯಾಗಿದೆ. ಕಳೆದ 15ದಿನಗಳಿಂದೀಚೆಗೆ ಪಾಸಿಟಿವ್ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗಿದೆ. ರಾಜ್ಯದಲ್ಲಿ ಮಹಾರಾಷ್ಟ್ರ ಮತ್ತು ದೆಹಲಿ ಮಾದರಿಯನ್ನು ಪಾಲಿಸಿದ ಮೊದಲ ಸ್ಥಾನದಲ್ಲಿದೆ. ನಿನ್ನೆಯವರೆಗೆ ಒಟ್ಟು ಪ್ರಕರಣಗಳು: 22312, ಸಕ್ರಿಯ ಪ್ರಕರಣಗಳು: 10487, ಸಾವು: 288, ಗುಣಮುಖರಾದವರು: 11537
  • ಅರುಣಾಚಲಪ್ರದೇಶ : ಅರುಣಾಚಲಪ್ರದೇಶದ ಮುಖ್ಯಮಂತ್ರಿ ಮುಂಚೂಣಿ ಕಾರ್ಯಕರ್ತರಾದ ಆರೋಗ್ಯ, ಪೊಲೀಸ್ ಮತ್ತು ಆಸ್ಪತ್ರೆ ಸಿಬ್ಬಂದಿಗಳಿಗೆ ಲಾಕ್ ಡೌನ್ ಅವಧಿಯ 7 ದಿನಗಳಲ್ಲಿ ಸೋಂಕು ಪರೀಕ್ಷೆ ನಡೆಸಲಾಗುವುದು, ಮೂಲಕ ಅವರು ಕೋವಿಡ್-19 ಮುಕ್ತರಾಗಿದ್ದಾರೆ ಎಂಬುದನ್ನು ಖಾತ್ರಿಪಡಿಸಲಾಗುವುದು ಎಂದು ಹೇಳಿದ್ದಾರೆ.
  • ಅಸ್ಸಾಂ: ಅಸ್ಸಾಂನಲ್ಲಿ ಮುಂದಿನ ಕೆಲವೇ ದಿನಗಳಲ್ಲಿ 5 ಲಕ್ಷ ಕೋವಿಡ್-19 ಸೋಂಕು ಪತ್ತೆ ಪರೀಕ್ಷೆಗಳು ಪೂರ್ಣಗೊಳ್ಳಲಿವೆ ಎಂದು ರಾಜ್ಯದ ಆರೋಗ್ಯ ಸಚಿವರು ಟ್ವೀಟ್ ನಲ್ಲಿ ತಿಳಿಸಿದ್ದಾರೆ.
  • ಮಣಿಪುರ: ಮಣಿಪುರ ಸರ್ಕಾರ ಕೋವಿಡ್-19 ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಚಿಕಿತ್ಸೆ ನೀಡಲು ಜಿರಿಬಾಮ್ ನಗರದಲ್ಲಿ ಕೋವಿಡ್ ಆರೈಕೆ ಕೇಂದ್ರವನ್ನು ತೆರೆಯಲು ನಿರ್ಧರಿಸಿದೆ. ಸೋಂಕಿತ ಜನರನ್ನು ಗುರುತಿಸಲು ಸಾಮೂಹಿಕ ಪರೀಕ್ಷೆಯನ್ನು ನಡೆಸಲಾಗುವುದು. ಐಸಿಎಂಆರ್ ಅನುಮೋದನೆ ನಂತರ ಮಣಿಪುರ ಸರ್ಕಾರ 50,000 ರಾಪಿಡ್ ಟೆಸ್ಟಿಂಗ್ ಕಿಟ್ ಗಳಿಗೆ ಆದೇಶಿಸಿದೆ. ಕಿಟ್ ಗಳು ನಾಳೆಯ ವೇಳೆಗೆ ಆಗಮಿಸುವ ಸಾಧ್ಯತೆ ಇದೆ.
  • ಮೇಘಾಲಯ: ಶಿಲ್ಲಾಂಗ್ ನಲ್ಲಿ ಇಂದು ಮತ್ತೊಬ್ಬ ಬಿಎಸ್ಎಫ್ ಯೋಧನಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಿಂದಾಗಿ ಮೇಘಾಲಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳು 27 ಆಗಿದ್ದು, ಸೋಂಕಿನ ಪ್ರಕರಣಗಳು 43 ತಲುಪಿದೆ.
  • ಮಿಝೋರಾಂ: ಮಿಝೋರಾಂನಲ್ಲಿ ಇಂದು ಖಾವ್ಜಾಲ್ ಜಿಲ್ಲಾ ಆಸ್ಪತ್ರೆಯಿಂದ ಇಬ್ಬರು ಕೋವಿಡ್-19 ಸೋಂಕಿತರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಖಾವ್ಜಾಲ್ ಯಾವುದೇ ಸಕ್ರಿಯ ಪ್ರಕರಣವಿಲ್ಲದ ರಾಜ್ಯದ 5ನೇ ಜಿಲ್ಲೆಯಾಗಿದೆ. ಇತರೆ ಶೂನ್ಯ ಪ್ರಕರಣಗಳಿರುವ ಜಿಲ್ಲೆಗಳೆಂದರೆ ಹಾಥ್ನಿಯಲ್ , ಸೈತೌಲ್, ಕೊಲಾಸಿಬ್ ಮತ್ತು ಸರ್ಚಿಪ್.
  • ನಾಗಾಲ್ಯಾಂಡ್: ಕೋವಿಡ್-19 ನಿರ್ಬಂಧಗಳಿಂದಾಗಿ ತೊಂದರೆಗೆ ಸಿಲುಕಿರುವ ವಲಸೆ ಕಾರ್ಮಿಕರಿಗೆ ಆಹಾರ ಮತ್ತು ವಸತಿ ಸೌಕರ್ಯ ಕಲ್ಪಿಸಲು ನಾಗಾಲ್ಯಾಂಡ್ ಸರ್ಕಾರ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸುತ್ತಿದೆ.
  • ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಸುಮಾರು 2 ಲಕ್ಷ ದಾಟಿದೆ.  ಕಳೆದ 24 ಗಂಟೆಗಳಿಂದೀಚೆಗೆ ಹೊಸದಾಗಿ 7,074 ಪ್ರಕರಣಗಳು ದೃಢಪಟ್ಟಿವೆ. ಸರ್ಕಾರದ ಆರೋಗ್ಯ ಬುಲೆಟಿನ್ ಪ್ರಕಾರ ರಾಜ್ಯದಲ್ಲಿ ಶನಿವಾರ 295 ಮಂದಿ ಮೃತಪಟ್ಟಿದ್ದಾರೆ, ಇದರೊಂದಿಗೆ ಸಾವನ್ನಪ್ಪಿರುವವರ ಸಂಖ್ಯೆ 8,671ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳು 83,295 ಇವೆ. ಮುಂಬೈನಲ್ಲಿ 1,180 ಹೊಸ ಪ್ರಕರಣಗಳು ದೃಢಪಟ್ಟಿವೆ. ಕಳೆದ 24 ಗಂಟೆಗಳಿಂದೀಚೆಗೆ 4 ಸಾವು ಮತ್ತು ಮಹಾರಾಷ್ಟ್ರ ಪೊಲೀಸ್ ಸಿಬ್ಬಂದಿಯಲ್ಲಿ 30 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ. ಇದರೊಂದಿಗೆ ಮಹಾರಾಷ್ಟ್ರ ಪೊಲೀಸರಲ್ಲಿ ಕೋವಿಡ್-19 ಸೋಂಕು ಇರುವವರ ಸಂಖ್ಯೆ 5,205ಕ್ಕೆ ಏರಿಕೆಯಾಗಿದೆ. ಅವರಲ್ಲಿ 1,070 ಪ್ರಕರಣಗಳು ಸಕ್ರಿಯವಾಗಿವೆ.
  • ಗುಜರಾತ್: ಗುಜರಾತ್ ನಲ್ಲಿ ಕೋವಿಡ್-19 ಸೋಂಕು ಪ್ರಕರಣಗಳು 35,398ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 712 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಸೂರತ್ ನಲ್ಲಿ 205, ಅಹಮದಾಬಾದ್ ನಲ್ಲಿ 165 ಹೊಸ ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲಿ ಒಟ್ಟು 8,057 ಸಕ್ರಿಯ ಪ್ರಕರಣಗಳು ಇವೆ. ರಾಜ್ಯದಲ್ಲಿ ಈವರೆಗೆ 4.04 ಲಕ್ಷ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ.
  • ರಾಜಸ್ಥಾನ: ರಾಜ್ಯದಲ್ಲಿ ಇಂದು ಬೆಳಗ್ಗೆ 224 ಹೊಸ ಪ್ರಕರಣಗಳು ಮತ್ತು 6 ಸಾವು ಸಂಭವಿಸಿವೆ. ರಾಜ್ಯದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 19,756ಕ್ಕೆ ಏರಿಕೆಯಾಗಿದೆ. ಪೈಕಿ ಸಕ್ರಿಯ ಪ್ರಕರಣಗಳ ಸಂಖ್ಯೆ 3,640.
  • ಮಧ್ಯಪ್ರದೇಶ: ಮಧ್ಯಪ್ರದೇಶದಲ್ಲಿ 307 ಹೊಸ ಪ್ರಕರಣಗಳು ಮತ್ತು 5 ಸಾವುಗಳು ವರದಿಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 14,604ಕ್ಕೆ ಏರಿಕೆಯಾಗಿದೆ. 2,772 ಪ್ರಕರಣಗಳು ರಾಜ್ಯದಲ್ಲಿ ಈವರೆಗೆ ಸಕ್ರಿಯವಾಗಿವೆ. ‘ಕಿಲ್ ಕೊರೊನಾಅಭಿಯಾನದಡಿ ಮಧ್ಯಪ್ರದೇಶದಲ್ಲಿ ಜುಲೈ 1 ರಿಂದ 15 ವರೆಗೆ 61.54 ಲಕ್ಷ ಮಂದಿಯನ್ನು ಸಮೀಕ್ಷೆ ಮಾಡಿ, ಸುಮಾರು 10 ಸಾವಿರ ಮಾದರಿಗಳನ್ನು ಪರೀಕ್ಷೆಗಾಗಿ ಸಂಗ್ರಹಿಸಲಾಗುವುದು. ನಗರ ಪ್ರದೇಶಗಳಲ್ಲಿ 1,776 ಮತ್ತು ಗ್ರಾಮೀಣ ಪ್ರದೇಶದಲ್ಲಿ 8975 ತಂಡಗಳು ಸಮೀಕ್ಷಾ ಕಾರ್ಯದಲ್ಲಿ ತೊಡಗಿವೆ.
  • ಛತ್ತೀಸ್ ಗಢ: ಛತ್ತೀಸ್ ಗಢದಲ್ಲಿ 96 ಹೊಸ ರೋಗಿಗಳನ್ನು ಗುರುತಿಸಲಾಗಿದೆ. ಇದರಿಂದ ರಾಜ್ಯದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಒಟ್ಟು 3,161ಕ್ಕೆ ಏರಿದೆ. ಇತ್ತೀಚಿನ ಮಾಹಿತಿಯಂತೆ ರಾಜ್ಯದಲ್ಲಿ 621 ಸೋಂಕು ಸಕ್ರಿಯ ರೋಗಿಗಳಿದ್ದಾರೆ.
  • ಗೋವಾ: ರಾಜ್ಯದಲ್ಲಿ ಹೊಸದಾಗಿ 108 ಕೋವಿಡ್-19 ಸೋಂಕಿತರು ಪತ್ತೆಯಾಗುವುದರೊಂದಿಗೆ ಸೋಂಕಿತರ ಸಂಖ್ಯೆ 1,684ಕ್ಕೆ ಏರಿಕೆಯಾಗಿದೆ. ಈವರೆಗೆ 825 ಮಂದಿ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ 853 ಪ್ರಕರಣಗಳು ಸಕ್ರಿಯವಾಗಿವೆ. ಗೋವಾ ರಾಜ್ಯದಲ್ಲಿ ಕಾನ್ವಾಲ್ ಸೆಂಟ್ ಪ್ಲಾಸ್ಮಾ ಥೆರಪಿ ನಡೆಸಲು ಐಸಿಎಂಆರ್ ಅನುಮತಿ ಕೋರುವ ಚಿಂತನೆಯಲ್ಲಿ ತೊಡಗಿದೆ.

https://static.pib.gov.in/WriteReadData/userfiles/image/image007PLWZ.jpg

***



(Release ID: 1636917) Visitor Counter : 248