ಪ್ರಧಾನ ಮಂತ್ರಿಯವರ ಕಛೇರಿ

ಲೇಹ್ ಆಸ್ಪತ್ರೆಯಲ್ಲಿ ಗಾಯಗೊಂಡ ಯೋಧರ ಜೊತೆ ಸಂವಾದ ನಡೆಸಿದ ಪ್ರಧಾನಮಂತ್ರಿಗಳ ಭಾಷಣದ ಪಠ್ಯ

Posted On: 03 JUL 2020 8:23PM by PIB Bengaluru

ಲೇಹ್ ಆಸ್ಪತ್ರೆಯಲ್ಲಿ ಗಾಯಗೊಂಡ ಯೋಧರ ಜೊತೆ ಸಂವಾದ ನಡೆಸಿದ ಪ್ರಧಾನಮಂತ್ರಿಗಳ ಭಾಷಣದ ಪಠ್ಯ

 

ಗೆಳೆಯರೇ,

ನಾನು ಇಂದು ನಿಮಗೆಲ್ಲರಿಗೂ ಗೌರವವಂದನೆ ಸಲ್ಲಿಸಲು ಇಲ್ಲಿ ಬಂದಿದ್ದೇನೆ. ನೀವು ಧೈರ್ಯದಿಂದ ಹೋರಾಡಿದ್ದೀರಿ. ನಾನು ಕೆಲವು ದಿನಗಳ ಹಿಂದೆ ಹೇಳಿದ್ದೇನೆಂದರೆ, ನಮ್ಮನ್ನು ಬಿಟ್ಟು ಹೋಗಿರುವ ಶೌರ್ಯವಂತ ಹೃದಯಗಳು ಯಾವುದೇ ಕಾರಣವಿಲ್ಲದೆ, ನಮ್ಮನ್ನು ಬಿಟ್ಟುಹೋಗಿಲ್ಲ ಎಂದು. ನೀವೆಲ್ಲಾ ತಕ್ಕ ಪ್ರತ್ಯುತ್ತರವನ್ನು ನೀಡಿದ್ದೀರಿ. ನೀವೆಲ್ಲಾ ಆಸ್ಪತ್ರೆಯಲ್ಲಿದ್ದೀರಿ, ನಿಮಗೆಲ್ಲಾ ತಿಳಿದಿರಲಿಕ್ಕಿಲ್ಲ, ದೇಶದ 130 ಕೋಟಿ ಪ್ರಜೆಗಳು ನಿಮ್ಮ ಬಗ್ಗೆ ಎಷ್ಟೊಂದು ಹೆಮ್ಮೆಪಡುತ್ತಿದ್ದಾರೆಂದು, ನಿಮ್ಮ ಧೈರ್ಯ ಮತ್ತು ಸಾಹಸ ಹೊಸ ತಲೆಮಾರಿಗೆ ಸ್ಫೂರ್ತಿಯಾಗಿದೆ. ಆದ್ದರಿಂದ ನಿಮ್ಮ ಶೌರ್ಯ ಮತ್ತು ನಿಮ್ಮ ಸಾಹಸ ದೀರ್ಘಕಾಲ ನಮ್ಮ ದೇಶವಾಸಿಗಳನ್ನು ಮತ್ತು ಯುವಜನತೆಗೆ ನಿರಂತರ ಸ್ಫೂರ್ತಿಯಾಗಿ ಮುಂದುವರಿಯಲಿದೆ. ಜಾಗತಿಕ ಸ್ಥಿತಿಗತಿಯನ್ನು ಪರಿಗಣಿಸಿದರೆ ನಿಮ್ಮಂತಹ ಧೈರ್ಯಶಾಲಿಗಳು ತೋರಿದ ಶೌರ್ಯದ ಸಂದೇಶ ಇಡೀ ಜಗತ್ತಿಗೆ ರವಾನೆಯಾಗಿದೆ. ನೀವು ಹೇಗೆ ಶಕ್ತಿಯನ್ನು ಪಡೆದು ದಿಟ್ಟವಾಗಿ ನಿಂತಿದ್ದೀರಿ, ನಿಮ್ಮಂತಹ ಧೈರ್ಯಶಾಲಿಗಳ ಬಗ್ಗೆ ತಿಳಿಯಲು ಇಡೀ ವಿಶ್ವ ಬಯಸುತ್ತಿದೆ, ನಿಮ್ಮ ತರಬೇತಿ ಎಂತಹುದು ? ನಿಮ್ಮ ಉದಾತ್ತ ತ್ಯಾಗ ಎಂತಹುದು ? ನಿಮ್ಮ ಬದ್ಧತೆ ಎಷ್ಟು ಶ್ಲಾಘನೀಯ ಎಂದು ತಿಳಿಯಲು ಬಯಸುತ್ತಿದೆ ಹಾಗೂ ನಿಮ್ಮ ಶೌರ್ಯವನ್ನು ಇಡೀ ವಿಶ್ವ ವಿಶ್ಲೇಷಿಸುತ್ತಿದೆ.

ನಾನು ಇಂದು ಇಲ್ಲಿಗೆ ಆಗಮಿಸಿರುವುದು ಕೇವಲ ನಿಮಗೆ ಗೌರವ ವಂದನೆ ಸಲ್ಲಿಸಲೆಂದು. ನಿಮ್ಮನ್ನು ಭೇಟಿ ಮಾಡಿ, ನಿಮ್ಮನ್ನು ಕಂಡು ನಾನು ಶಕ್ತಿವಂತನಾಗಿ, ಸ್ಫೂರ್ತಿಯಿಂದ ಹಿಂತಿರುಗುತ್ತಿದ್ದೇನೆ. ಭಾರತ ಸ್ವಾವಲಂಬಿಯಾಗಲಿ. ರಾಷ್ಟ್ರ ಎಂದಿಗೂ ವಿಶ್ವದ ಯಾವುದೇ ಶಕ್ತಿ ಎದುರು ತಲೆಬಾಗಿಲ್ಲ ಮತ್ತು ಭವಿಷ್ಯದಲ್ಲೂ ಕೂಡ ತಲೆತಗ್ಗಿಸುವುದಿಲ್ಲ !

ನಾನು ಏಕೆ ಇದನ್ನು ಹೇಳುತ್ತಿದ್ದೇನೆ ಎಂದರೆ, ನಿಮ್ಮಂತಹ ದಿಟ್ಟ ಶೌರ್ಯಶಾಲಿ ಗೆಳೆಯರು ಇರುವುದರಿಂದ. ನಾನು ನಿಮಗೆ ನಮಿಸುತ್ತೇನೆ ಮತ್ತು ಇದೇ ವೇಳೆ ನಿಮ್ಮಂತಹ ವೀರ ಯೋಧರಿಗೆ ಜನ್ಮ ನೀಡಿ, ಬೆಳೆಸಿ ಮತ್ತು ದೇಶಕ್ಕಾಗಿ ಹೋರಾಡಲು ನಿಮ್ಮನ್ನು ಕಳುಹಿಸಿಕೊಟ್ಟ ಶೌರ್ಯವಂತ ತಾಯಂದಿರಿಗೂ ಸಹ ನಮಿಸುತ್ತೇನೆ. ನಾವು ಅವರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು.

ಗೆಳೆಯರೇ, ನೀವು ಅತಿಶೀಘ್ರ ಗುಣಮುಖರಾಗುತ್ತೀರ ಎಂಬ ಭರವಸೆ ನನಗಿದೆ. ನಾವೆಲ್ಲರೂ ಶಿಸ್ತು ಮತ್ತು ಸಹಕಾರದ ಆದರ್ಶದೊಂದಿಗೆ ಒಟ್ಟಾಗಿ ಮುಂದಡಿ ಇಡೋಣ.

ತುಂಬಾ ಧನ್ಯವಾದಗಳು.

***



(Release ID: 1636726) Visitor Counter : 141