PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ

Posted On: 29 JUN 2020 6:53PM by PIB Bengaluru

ಕೋವಿಡ್-19: ಪಿ ಬಿ ದೈನಿಕ ವರದಿ

https://static.pib.gov.in/WriteReadData/userfiles/image/image001ODWN.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು

ಪಿಐಬಿ ವಾಸ್ತವದ ಪರಿಶೀಲನೆ- FACT CHECK- ಯನ್ನು ಒಳಗೊಂಡಿದೆ)           

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ಕೋವಿಡ್ -19 ಕುರಿತು ಹೊಸ ಮಾಹಿತಿ

ಚೇತರಿಕೆಯ ಪ್ರಮಾಣವು 58.67% ಕ್ಕೆ ಮತ್ತಷ್ಟು ಸುಧಾರಿಸಿದೆ, ಚೇತರಿಸಿಕೊಂಡ ಮತ್ತು ಸಕ್ರಿಯ ಪ್ರಕರಣಗಳ ನಡುವಿನ ವ್ಯತ್ಯಾಸವು 1,11,602 ರಷ್ಟು ಮತ್ತಷ್ಟು ಹೆಚ್ಚಾಗಿದೆ.    ಇಲ್ಲಿಯವರೆಗೆ, 3,21,722 ರೋಗಿಗಳನ್ನು ಕೋವಿಡ್ -19ರಿಂದ ಗುಣಪಡಿಸಲಾಗಿದೆ. ಚೇತರಿಕೆಯ ಪ್ರಮಾಣವು ಸ್ಥಿರವಾಗಿ ಸುಧಾರಿಸುತ್ತಿದೆ. ಇದು ಇಂದು ಕೋವಿಡ್ -19 ರೋಗಿಗಳಲ್ಲಿ 58.67% ಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 12,010 ಕೋವಿಡ್ -19 ರೋಗಿಗಳನ್ನು ಗುಣಪಡಿಸಲಾಗಿದೆ. ಪ್ರಸ್ತುತ, 2,10,120 ಸಕ್ರಿಯ ಪ್ರಕರಣಗಳಿವೆ ಮತ್ತು ಎಲ್ಲವೂ ಸಕ್ರಿಯ ವೈದ್ಯಕೀಯ ಮೇಲ್ವಿಚಾರಣೆಯಲ್ಲಿದೆ. ಭಾರತದಲ್ಲಿ ಈಗ  ಕೋವಿಡ್ -19 ಕ್ಕೆ  ಮೀಸಲಾಗಿರುವ 1047 ಪರೀಕ್ಷಾ ಪ್ರಯೋಗಾಲಯಗಳಿವೆ . ಇದರಲ್ಲಿ ಸರ್ಕಾರಿ ವಲಯದಲ್ಲಿ 760 ಮತ್ತು 287 ಖಾಸಗಿ ಪ್ರಯೋಗಾಲಯಗಳಿವೆ. ಕಳೆದ 24 ಗಂಟೆಗಳಲ್ಲಿ ಸೇರ್ಪಡೆಗೊಂಡ 11 ಲ್ಯಾಬ್‌ಗಳೆಲ್ಲವೂ ಸರ್ಕಾರದಿಂದ ನಿರ್ವಹಿಸಲ್ಪಡುತ್ತವೆ. ಪರೀಕ್ಷಿಸಿದ ಒಟ್ಟು ಮಾದರಿಗಳ ಸಂಖ್ಯೆಯು ಏರುವಿಕೆಯ ಪ್ರವೃತ್ತಿಯನ್ನು ತೋರಿಸುತ್ತಿದೆ ಮತ್ತು 83,98,362 ಅನ್ನು ಮುಟ್ಟಿದೆ. ನಿನ್ನೆ 1,70,560 ಮಾದರಿಗಳನ್ನು ಪರೀಕ್ಷಿಸಲಾಯಿತು.

ವಿವರಗಳಿಗಾಗಿ : https://www.pib.gov.in/PressReleseDetail.aspx?PRID=1635085

ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಹೇಳುತ್ತಾರೆ, “ಕೊರೊನಾ ವಿರುದ್ಧದ ಹೋರಾಟದಲ್ಲಿ ಇಡೀ ರಾಷ್ಟ್ರವು ಪ್ರಧಾನಮಂತ್ರಿಯ ವರಿಗೆ ಬೆಂಬಲಿಸುತ್ತಿದೆ

ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರು "ಮೋದಿ ಸರ್ಕಾರ ಕೋವಿಡ್ ಪರಿಸ್ಥಿತಿಯನ್ನು ಬಹಳ ಸೂಕ್ತವಾಗಿ ನಿಭಾಯಿಸುತ್ತಿದೆ ಮತ್ತು ದೆಹಲಿಯ ಪರಿಸ್ಥಿತಿ ನಿಯಂತ್ರಣದಲ್ಲಿದೆ" ಎಂದು ಹೇಳಿದ್ದಾರೆ. ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಶ್ರೀ ಅಮಿತ್ ಶಾ ಅವರು "ದೆಹಲಿಯಲ್ಲಿ ಯಾವುದೇ ಸಮುದಾಯ ಹಂತಕ್ಕೆ ಸೋಂಕು ಹರಡಿಲ್ಲ ಮತ್ತು ಚಿಂತೆ ಮಾಡಲು ಯಾವುದೇ ಕಾರಣವಿಲ್ಲ" ಎಂದು ಹೇಳಿದರು. ಕೋವಿಡ್ ಪರಿಸ್ಥಿತಿಯನ್ನು ನಿಭಾಯಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು ಸಾಮಾನ್ಯವಾಗಿ ದೆಹಲಿ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು, ಆದರೆ ದೆಹಲಿಯ ಪರಿಸ್ಥಿತಿ ಕೆಟ್ಟದಾಗಿದೆ ಮತ್ತು ಜುಲೈ ಅಂತ್ಯದ ವೇಳೆಗೆ ರಾಜಧಾನಿ ದೆಹಲಿಯ ಕೋವಿಡ್ ಸೋಂಕಿತರ ಸಂಖ್ಯೆ 5.5 ಲಕ್ಷಕ್ಕೆ ಏರುತ್ತದೆ ಎಂದು ದೆಹಲಿಯ ಉಪ ಮುಖ್ಯಮಂತ್ರಿಯವರು ನೀಡಿದ ಹೇಳಿಕೆಯ ನಂತರ  ಕೇಂದ್ರ ಸರ್ಕಾರವು ಕಾರ್ಯಗಳನ್ನು ಸಮನ್ವಯಗೊಳಿಸಲು ಮುಂದಾಯಿತು. ಈಗ ಹೆಚ್ಚಿನ ಪರೀಕ್ಷೆಯಿಂದಾಗಿ, ಸೋಂಕಿನ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ, ಆದರೆ ಮತ್ತೊಂದು ರೀತಿಯಲ್ಲಿ ನೋಡಿದಾಗ ಪರೀಕ್ಷಿಸಲ್ಪಟ್ಟ ಮತ್ತು ಸೋಂಕು ದೃಢಪಟ್ಟವರನ್ನು ಪ್ರತ್ಯೇಕವಾಗಿರಿಸುವ ಪ್ರಯೋಜನವಿದೆ ಎಂದು ಅವರು ಹೇಳಿದರು. ಪರೀಕ್ಷೆಯಲ್ಲಿ ಅನೇಕ ಪಟ್ಟು ಹೆಚ್ಚಳವಾಗಿದೆ ಎಂದು ಅವರು ಹೇಳಿದರು. ಜೂನ್ 14 ರ ವೇಳೆಗೆ 9,937 ಹಾಸಿಗೆಗಳಿಗೆ ಹೋಲಿಸಿದರೆ 30,000 ಹಾಸಿಗೆಗಳು ಇಂದು ಲಭ್ಯವಿವೆ ಎಂದು ಶ್ರೀ ಅಮಿತ್ ಶಾ ಮಾಹಿತಿ ನೀಡಿದರು. "ದೆಹಲಿಯ ಎಲ್ಲಾ ನಿಯಂತ್ರಣ ವಲಯಗಳಲ್ಲಿ ಮನೆ ಮನೆ ಸಮೀಕ್ಷೆ ಜೂನ್ 30 ರೊಳಗೆ ಪೂರ್ಣಗೊಳ್ಳುತ್ತದೆ. ಅಲ್ಲದೆ, ಸಿರೊಲಾಜಿಕಲ್ ಸಮೀಕ್ಷೆಯನ್ನು ಸಹ ಪ್ರಾರಂಭಿಸಲಾಗಿದೆ.

ವಿವರಗಳಿಗಾಗಿ : https://www.pib.gov.in/PressReleseDetail.aspx?PRID=1635061

ಭಾರತೀಯ ಆಹಾರ ನಿಗಮ (ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ) ದಲ್ಲಿ ಸಾಕಷ್ಟು ಆಹಾರ ಧಾನ್ಯಗಳು ಲಭ್ಯವಿದೆ;  ಎಫ್ಸಿಐ ಜೂನ್ ವರೆಗೆ ಒಟ್ಟು 388.34 ಎಲ್ಎಂಟಿ ಗೋಧಿ ಮತ್ತು 745.66 ಎಲ್ಎಂಟಿ ಅಕ್ಕಿಯನ್ನು ಸಂಗ್ರಹಿಸಿದೆ

28.06.2020 ರ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ ವರದಿಯ ಪ್ರಕಾರ, ಎಫ್‌ಸಿಐ ಪ್ರಸ್ತುತ 266.29 ಎಲ್‌ಎಂಟಿ ಅಕ್ಕಿ ಮತ್ತು 550.31 ಎಲ್‌ಎಂಟಿ ಗೋಧಿಯನ್ನು ಹೊಂದಿದೆ. ಆದ್ದರಿಂದ, ಒಟ್ಟು 816.60 ಎಲ್‌ಎಮ್‌ಟಿ ಆಹಾರ ಧಾನ್ಯದ ಸಂಗ್ರಹ ಲಭ್ಯವಿದೆ (ಇನ್ನೂ ಗೋಡೌನ್‌ಗೆ ತಲುಪಬೇಕಾದ  ಗೋಧಿ ಮತ್ತು ಭತ್ತದ ಖರೀದಿಯನ್ನು ಹೊರತುಪಡಿಸಿ,). ಎನ್‌ಎಫ್‌ಎಸ್‌ಎ ಮತ್ತು ಇತರ ಕಲ್ಯಾಣ ಯೋಜನೆಗಳ ಅಡಿಯಲ್ಲಿ ತಿಂಗಳಿಗೆ ಸುಮಾರು 55 ಎಲ್‌ಎಂಟಿ ಆಹಾರ ಧಾನ್ಯಗಳು ಬೇಕಾಗುತ್ತವೆ. ಲಾಕ್ ಡೌನ್ ಆದ ನಂತರ, ಸುಮಾರು 138.43 ಎಲ್ಎಂಟಿ ಆಹಾರ ಧಾನ್ಯಗಳನ್ನು 4944 ರೈಲು ಬೊಗಿಗಳ ಮೂಲಕ ಸಾಗಿಸಲಾಗಿದೆ. ರೈಲು ಮಾರ್ಗದ ಹೊರತಾಗಿ ರಸ್ತೆಗಳು ಮತ್ತು ಜಲಮಾರ್ಗಗಳ ಮೂಲಕವೂ ಸಾರಿಗೆ ವ್ಯವಸ್ಥೆ ಮಾಡಲಾಯಿತು. ಒಟ್ಟು 277.73 ಎಲ್‌ಎಂಟಿ ಸಾಗಿಸಲಾಗಿದೆ. 14 ಹಡಗುಗಳ ಮೂಲಕ 21,724 ಮೆ.ಟನ್ ಧಾನ್ಯಗಳನ್ನು ಸಾಗಿಸಲಾಯಿತು. ಒಟ್ಟು 13.47 ಎಲ್ಎಂಟಿ ಆಹಾರ ಧಾನ್ಯಗಳನ್ನು ಈಶಾನ್ಯ ರಾಜ್ಯಗಳಿಗೆ ಸಾಗಿಸಲಾಗಿದೆ.

ವಿವರಗಳಿಗಾಗಿ: https://www.pib.gov.in/PressReleseDetail.aspx?PRID=1635131

ಪಿಎಂ ಎಫ್ಎಂಇ ಯೋಜನೆಯು  ಒಟ್ಟು 35,000 ಕೋಟಿ ರೂ. ಮತ್ತು 9 ಲಕ್ಷ ನುರಿತ ಮತ್ತು ಅರೆ-ನುರಿತ ಉದ್ಯೋಗವನ್ನು ಸೃಷ್ಟಿಸಲಿದೆ: ಹರ್ ಸಿಮ್ರತ್  ಕೌರ್ ಬಾದಲ್

ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವರಾದ  ಶ್ರೀಮತಿ. ಹರ್ ಸಿಮ್ರತ್ ಕೌರ್ ಬಾದಲ್ ಅವರು “ಆತ್ಮನಿರ್ಭರ ಭಾರತ್ ಅಭಿಯಾನ್” ನ ಅಂಗವಾಗಿ ಮೈಕ್ರೋ ಫುಡ್ ಪ್ರೊಸೆಸಿಂಗ್ ಎಂಟರ್‌ಪ್ರೈಸಸ್ (ಪಿಎಂ ಎಫ್‌ಎಂಇ) ಯೋಜನೆಯನ್ನು ನಿನ್ನೆ ಪ್ರಾರಂಭಿಸಿದರು. ಈ ಯೋಜನೆಯು ಒಟ್ಟು 35,000 ಕೋಟಿ ರೂ.ಗಳ ಹೂಡಿಕೆಯನ್ನು ಮತ್ತು 9 ಲಕ್ಷ ನುರಿತ ಮತ್ತು ಅರೆ ನುರಿತ ಉದ್ಯೋಗವನ್ನು ಸೃಷ್ಟಿಸುತ್ತದೆ ಮತ್ತು ಮಾಹಿತಿ, ತರಬೇತಿ, ಉತ್ತಮ ಅವಕಾಶಗಳಿಂದ ಮತ್ತು ಸಕ್ರಮಗೊಳಿಸುವ ಮೂಲಕ 8 ಲಕ್ಷ ಘಟಕಗಳಿಗೆ ಪ್ರಯೋಜನವಾಗಲಿದೆ ಎಂದು ಸಚಿವರು ಹೇಳಿದರು.  ಈ ಸಂದರ್ಭದಲ್ಲಿ ಯೋಜನೆಯ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಯಿತು. ಸುಮಾರು 25 ಲಕ್ಷ ಘಟಕಗಳನ್ನು ಒಳಗೊಂಡಿರುವ ಅಸಂಘಟಿತ ಆಹಾರ ಸಂಸ್ಕರಣಾ ಕ್ಷೇತ್ರವು ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ 74% ಉದ್ಯೋಗಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು. ಈ ಘಟಕಗಳಲ್ಲಿ ಸುಮಾರು 66% ಭಾಗ ಗ್ರಾಮೀಣ ಪ್ರದೇಶಗಳಲ್ಲಿವೆ ಮತ್ತು ಅವುಗಳಲ್ಲಿ 80%ರಷ್ಟು ಕುಟುಂಬ ಆಧಾರಿತ ಉದ್ಯಮಗಳು ಜೀವನೋಪಾಯದ ಗ್ರಾಮೀಣ ಕುಟುಂಬಕ್ಕೆ ನೆರವಾಗುತ್ತವೆ ಮತ್ತು ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ಕಡಿಮೆ ಮಾಡುತ್ತವೆ. ಈ ಘಟಕಗಳು ಹೆಚ್ಚಾಗಿ ಕಿರು ಉದ್ಯಮಗಳ ವರ್ಗಕ್ಕೆ ಸೇರುತ್ತವೆ.

ವಿವರಗಳಿಗಾಗಿ : https://www.pib.gov.in/PressReleseDetail.aspx?PRID=1635088

ಭಾರತದ ಮೊದಲ ಮಾನವ ಬಾಹ್ಯಾಕಾಶ ಯಾನಗಗನ ಯಾನ್” ಕೋವಿಡ್ ಸಾಂಕ್ರಾಮಿಕದಿಂದ ಪ್ರಭಾವಿತವಾಗುವುದಿಲ್ಲ: ಡಾ.ಜಿತೇಂದ್ರ ಸಿಂಗ್

ಭಾರತದ ಮೊದಲ ಮಾನವ ಬಾಹ್ಯಾಕಾಶ ಯಾನ “ಗಗನ ಯಾನ್” ಉಡಾವಣೆಯು ಕೋವಿಡ್ ಸಾಂಕ್ರಾಮಿಕದಿಂದ ಪ್ರಭಾವಿತವಾಗುವುದಿಲ್ಲ ಮತ್ತು ಸಿದ್ಧತೆಯು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ಹೇಳಿದ್ದಾರೆ. ಕಳೆದ ಒಂದು ವರ್ಷದಿಂದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತು ಬಾಹ್ಯಾಕಾಶ ಇಲಾಖೆಯ ಪ್ರಮುಖ ಸಾಧನೆಗಳು ಮತ್ತು ಭವಿಷ್ಯಕ್ಕಾಗಿ ಯೋಜಿಸಲಾಗಿರುವ ಕೆಲವು ಪ್ರಮುಖ ಕಾರ್ಯಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದ ಡಾ.ಜಿತೇಂದ್ರ ಸಿಂಗ್ ರವರು, ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ, ರಷ್ಯಾದಲ್ಲಿ ನಾಲ್ಕು ಭಾರತೀಯ ಗಗನಯಾತ್ರಿಗಳ ತರಬೇತಿಯನ್ನು ನಿಲ್ಲಿಸಬೇಕಾಗಿತ್ತು, ಆದರೆ ತರಬೇತಿ ಕಾರ್ಯಕ್ರಮ ಮತ್ತು ಉಡಾವಣಾ ಗಡುವನ್ನು ಎರಡಕ್ಕೂ ಸಾಕಷ್ಟು ಕಾಲವಕಾಶವನ್ನು ಇರಿಸಲಾಗಿತ್ತು ಎಂದು ಇಸ್ರೋ ಅಧ್ಯಕ್ಷರು ಮತ್ತು ವೈಜ್ಞಾನಿಕ ತಂಡದ ಅಭಿಪ್ರಾಯವಾಗಿದೆ

ವಿವರಗಳಿಗಾಗಿ : https://www.pib.gov.in/PressReleseDetail.aspx?PRID=1635154

ಮಿಷನ್ ಸಾಗರ್: ಐಎನ್ಎಸ್ ನೌಕೆಯು ಕೇಸರಿ ಕೊಚ್ಚಿಗೆ ಆಗಮಿಸಿತು

‘ಮಿಷನ್ ಸಾಗರ್’ ಅಂಗವಾಗಿ ದಕ್ಷಿಣ ಹಿಂದೂ ಮಹಾಸಾಗರ ಪ್ರದೇಶಕ್ಕೆ 55 ದಿನಗಳ ನಿಯೋಜನೆಯ ನಂತರ ಭಾರತೀಯ ನೌಕಾ ಹಡಗು ಕೇಸರಿ ನಿನ್ನೆ ಕೊಚ್ಚಿಯನ್ನು ತಲುಪಿತು. ಈ ಹಡಗನ್ನು ವಿಶೇಷ 'ಕೋವಿಡ್ ರಿಲೀಫ್ ಮಿಷನ್'ನಲ್ಲಿ ನಿಯೋಜಿಸಲಾಗಿತ್ತು ಮತ್ತು ಮಾಲೆ (ಮಾಲ್ಡೀವ್ಸ್), ಪೋರ್ಟ್ ಲೂಯಿಸ್ (ಮಾರಿಷಸ್), ಆಂಟಿರಾನಾನಾ (ಮಡಗಾಸ್ಕರ್), ಮೊರೊನಿ (ಕೊಮೊರೊಸ್ ದ್ವೀಪಗಳು) ಮತ್ತು ಪೋರ್ಟ್ ವಿಕ್ಟೋರಿಯಾ (ಸೀಶೆಲ್ಸ್)ದಲ್ಲಿ 580 ಟನ್ ಆಹಾರ ವಿತರಣೆಗಾಗಿ ಬಳಸಲಾಯಿತು. ಸ್ಥಳೀಯ ಅಧಿಕಾರಿಗಳಿಗೆ ಆಹಾರ ನೆರವು ಮತ್ತು ಅಗತ್ಯ ವೈದ್ಯಕೀಯ ವಸ್ತುಗಳು. 14 ಸದಸ್ಯರ ನೌಕಾ ವೈದ್ಯಕೀಯ ಸಹಾಯ ತಂಡವನ್ನು ಮಾರಿಷಸ್ ಮತ್ತು ಕೊಮೊರೊಸ್‌ಗೆ ತಲಾ 20 ದಿನಗಳ ಕಾಲ ನಿಯೋಜಿಸಲಾಯಿತು ಮತ್ತು ಪರಸ್ಪರ ಅನುಭವಗಳ ಹಂಚಿಕೆಯ ಮೂಲಕ ಕೋವಿಡ್-19 ಅನ್ನು ಎದುರಿಸಲು ದೀರ್ಘಾವಧಿಯ ಕಾರ್ಯತಂತ್ರವನ್ನು ರೂಪಿಸಲು ಸ್ಥಳೀಯ ಸರ್ಕಾರಗಳಿಗೆ ಸಹಾಯ ಮಾಡಿತು.

ವಿವರಗಳಿಗಾಗಿ : https://www.pib.gov.in/PressReleseDetail.aspx?PRID=1635090

ಪ್ರವಾಸೋದ್ಯಮ ಸಚಿವಾಲಯವು 39 ನೇ ವೆಬಿನಾರನ್ನು ಕೋವಿಡ್ ಸಮಯದಲ್ಲಿ ಪ್ರಯಾಣ ಮತ್ತು ಪ್ರವಾಸೋದ್ಯಮವನ್ನು ಸುರಕ್ಷಿತವಾಗಿ ಮತ್ತು ಜವಾಬ್ದಾರಿಯುತವಾಗಿ ಅನ್ಲಾಕ್ ಮಾಡುವುದುಎಂಬ ಶೀರ್ಷಿಕೆಯಲ್ಲಿ ಪ್ರಸ್ತುತ ಪಡಿಸಿತು ಆರೋಗ್ಯ ರಕ್ಷಣೆಯ ದೃಷ್ಟಿಕೋನಡೆಖೋ ಅಪ್ನಾ ದೇಶ್ ಸರಣಿಯಡಿಯಲ್ಲಿ

ಡೆಖೋ ಅಪ್ನಾ ದೇಶ್ ವೆವಿನಾರ್ ಸರಣಿಯ ಮುಂದುವರಿಕೆಯ ಭಾಗವಾಗಿ ಪ್ರವಾಸೋದ್ಯಮ ಸಚಿವಾಲಯವು 2020 ರ ಜೂನ್ 27 ರಂದು ಕೋವಿಡ್ ಸಮಯದಲ್ಲಿ ಪ್ರಯಾಣ ಮತ್ತು ಪ್ರವಾಸೋದ್ಯಮವನ್ನು ಸುರಕ್ಷಿತವಾಗಿ ಮತ್ತು ಜವಾಬ್ದಾರಿಯುತವಾಗಿ ಅನ್ಲಾಕ್ ಮಾಡುವ ಸರಣಿಯಲ್ಲಿ ಇತ್ತೀಚಿನ ಅಧಿವೇಶನವನ್ನು ಪರಿಚಯಿಸಿತು. ಏಕ್  ಭಾರತ್ ಶ್ರೇಷ್ಟ ಭಾರತ್ ಅಡಿಯಲ್ಲಿ ದೇಖೋ ಅಪ್ನಾ ದೇಶ್  ಸರಣಿಯು ಭಾರತದ ಶ್ರೀಮಂತ ವೈವಿಧ್ಯತೆಯನ್ನು ಪ್ರದರ್ಶಿಸುವ ಪ್ರಯತ್ನವಾಗಿದೆ.

ವಿವರಗಳಿಗಾಗಿ : https://www.pib.gov.in/PressReleseDetail.aspx?PRID=1635108

ಪಿ ಬಿ ಕ್ಷೇತ್ರೀಯ ಕಚೇರಿಗಳ ವರದಿ

  • ಪಂಜಾಬ್: ಕೊರೊನಾ ವೈರಸ್ ವಿರುದ್ಧದ ಯುದ್ಧವನ್ನು ವ್ಯವಸ್ಥಿತ ಮತ್ತು ಯೋಜಿತ ರೀತಿಯಲ್ಲಿ ಪಂಜಾಬ್ ಸರ್ಕಾರ ನಡೆಸುತ್ತಿದೆ ಮತ್ತು ಕೊರೊನಾ ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ಎದುರಿಸಲು ಆರೋಗ್ಯ ಮೂಲಸೌಕರ್ಯಗಳ ಬಲವರ್ಧನೆಗೆ ಇದರ ಒತ್ತು ನೀಡಲಾಗಿದೆ ಎಂದು ಪಂಜಾಬ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹೇಳಿದರು. ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ರಾಜ್ಯ ಸರ್ಕಾರ ಶ್ರಮಿಸುತ್ತಿದೆ ಮತ್ತು ಪರಿಸ್ಥಿತಿಯ ತೀವ್ರತೆಯನ್ನು ನೋಡಿದ ನಂತರ ಕರ್ಫ್ಯೂ ವಿಧಿಸಿದ ದೇಶದ ಮೊದಲ ರಾಜ್ಯ ಪಂಜಾಬ್ ಆಗಿದೆ ಎಂದು ಅವರು ಹೇಳಿದರು.
  • ಹಿಮಾಚಲ ಪ್ರದೇಶ: ರಾಜ್ಯದಲ್ಲಿ ಕೊರೊನಾವೈರಸ್ ಅನ್ನು ನಿಯಂತ್ರಿಸುವುದರಲ್ಲಿ ಆಶಾ ಕಾರ್ಯಕರ್ತರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು. ಐಎಲ್ ರೋಗಲಕ್ಷಣಗಳನ್ನು ಹೊಂದಿರುವ ಜನರನ್ನು ಗುರುತಿಸುವ ಮೂಲಕ ಆಶಾ ಕಾರ್ಯಕರ್ತರು ಆಕ್ಟಿವ್ ಕೇಸ್ ಫೈಂಡಿಂಗ್ ಅಭಿಯಾನದಲ್ಲಿ ಶ್ಲಾಘನೀಯ ಕಾರ್ಯವನ್ನು ಮಾಡಿದ್ದಾರೆ ಎಂದು ಅವರು ಹೇಳಿದರು. ಮಾರ್ಚ್ನಿಂದ ಜೂನ್ ವರೆಗೆ ಪ್ರತಿ ಆಶಾ ಕಾರ್ಯಕರ್ತರಿಗೆ ರಾಜ್ಯ ಸರ್ಕಾರ ತಿಂಗಳಿಗೆ 1000 ರೂ. ಹೆಚ್ಚುವರಿ ಪ್ರೋತ್ಸಾಹ ಧನ ನೀಡಿದೆ ಎಂದು ಅವರು ಹೇಳಿದರು. ಈಗ ಆಶಾ ಕಾರ್ಯಕರ್ತರಿಗೆ ಜುಲೈ ಮತ್ತು ಆಗಸ್ಟ್ ತಿಂಗಳಿಗೆ ತಿಂಗಳಿಗೆ 2000 ರೂ.ಗಳ ಪ್ರೋತ್ಸಾಹ ಧನ ನೀಡಲಾಗುವುದು ಎಂದು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಅವರು ಹೇಳಿದರು.
  • ಮಹಾರಾಷ್ಟ್ರ: ರಾಜ್ಯದಲ್ಲಿ ಪ್ರಸ್ತುತ ಕೋವಿಡ್-19 ರೋಗಿಗಳ ಸಂಖ್ಯೆ 1,64,626 ಇದೆ. 5,493 ಹೊಸ ರೋಗಿಗಳನ್ನು ಭಾನುವಾರ ಸೋಂಕಿತರು ಎಂದು ಗುರುತಿಸಲಾಗಿದೆ. 2,330 ರೋಗಿಗಳನ್ನು ಗುಣಪಡಿಸಲಾಗಿದೆ, ಮೂಲಕ ಒಟ್ಟು ಚೇತರಿಕೆಯ ಸಂಖ್ಯೆ 86,575 ರೋಗಿಗಳಿಗೆ ಏರಿದೆ.  ಒಟ್ಟು ಸಕ್ರಿಯ ರೋಗಿಗಳು 70,607. ಭಾನುವಾರದಂದು ರಾಜ್ಯದಲ್ಲಿ ಒಟ್ಟು ಸಾವುಗಳು 7429 ಆಗಿದ್ದು, ಸಾವಿನ ಪ್ರಮಾಣ 4.51% ಆಗಿದೆ. ರಾಜ್ಯದಲ್ಲಿ ಈವರೆಗೆ ಪರೀಕ್ಷಿಸಿದ ಒಟ್ಟು  ಕೋವಿಡ್-19 ಮಾದರಿಗಳ ಸಂಖ್ಯೆ 9,23,502. ಮುಂಬೈ ಪೊಲೀಸರು ತಮ್ಮ ಮನೆಗಳ 2 ಕಿ.ಮೀ ವ್ಯಾಪ್ತಿಯಲ್ಲಿ ಚಟುವಟಿಕೆಗಳನ್ನು ನಿರ್ಬಂಧಿಸುವಂತೆ ನಿವಾಸಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಸರಿಯಾದ ಕಾರಣವಿಲ್ಲದೆ ಅವರ ನಿವಾಸಗಳಿಂದ 2 ಕಿ.ಮೀ ಗಿಂತ ಹೆಚ್ಚು ದೂರದಲ್ಲಿ ಕಂಡುಬಂದರೆ, ಅವರ ವಾಹನಗಳನ್ನು ಜಪ್ತಿಮಾಡಲಾಗುತ್ತದೆ. ಏತನ್ಮಧ್ಯೆ, ಮಹಾರಾಷ್ಟ್ರ ಸರ್ಕಾರ ಇಂದು ಕೋವಿಡ್ -19ಕ್ಕಾಗಿ ಅತಿದೊಡ್ಡ ಪ್ಲಾಸ್ಮಾ ಥೆರಪಿ ಪ್ರಯೋಗವನ್ನು ಪ್ರಾರಂಭಿಸಿದೆ. ಸಾಂಕ್ರಾಮಿಕ ಪ್ಲಾಸ್ಮಾ ಚಿಕಿತ್ಸೆಯ ಬಗ್ಗೆ ಹೆಚ್ಚಿನ ಪ್ರಯೋಗ ನಡೆಸಿದ ದೇಶದ ಮೊದಲ ರಾಜ್ಯ ಮಹಾರಾಷ್ಟ್ರವಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. ವರ್ಷದ ಏಪ್ರಿಲ್ನಲ್ಲಿ ಮೊದಲ ಪ್ಲಾಸ್ಮಾ ಥೆರಪಿ ಪ್ರಯೋಗವನ್ನು ನಡೆಸಲಾಯಿತು, ನಂತರ ಹೆಚ್ಚಿನ ಪ್ರಯೋಗಗಳನ್ನು ಕೈಗೊಳ್ಳಲು ಕೇಂದ್ರದಿಂದ ಅನುಮತಿ ಪಡೆಯಲಾಯಿತು.
  • ಗುಜರಾತ್: ಕಳೆದ 24 ಗಂಟೆಗಳಲ್ಲಿ ಗುಜರಾತ್ನಲ್ಲಿ 624 ಹೊಸ ಸೋಂಕು ಪ್ರಕರಣಗಳು ದೃಢಪಟ್ಟಿದ್ದು ಮತ್ತು 19 ಸಾವುಗಳು ವರದಿಯಾಗಿವೆ. 22,808 ಪ್ರಕರಣಗಳು ಗುಣಮುಖ / ಬಿಡುಗಡೆಯಾಗಿವೆ ಮತ್ತು 1,809 ಸಾವುಗಳು ಸೇರಿದಂತೆ ರಾಜ್ಯದ ಸಂಖ್ಯೆ 31,397 ಕ್ಕೆ ಏರಿದೆ. ಇದು, ರಾಜ್ಯವು 600 ಕ್ಕೂ ಹೆಚ್ಚು ಹೊಸ ಪ್ರಕರಣಗಳನ್ನು ವರದಿ ಮಾಡಿದ ಸತತ ಎರಡನೇ ದಿನವಾಗಿದೆ. ಅಹಮದಾಬಾದ್ನಲ್ಲಿ 170 ಹೊಸ ಪ್ರಕರಣಗಳು ದಾಖಲಾಗಿದ್ದರೆ, ಸೂರತ್ನಲ್ಲಿ 141 ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ 6,780 ಸಕ್ರಿಯ ಪ್ರಕರಣಗಳಲ್ಲಿ 71 ರೋಗಿಗಳ ಸ್ಥಿತಿ ಗಂಭೀರವಾಗಿದೆ ಮತ್ತು ಅವರು ವೆಂಟಿಲೇಟರ್ನಲ್ಲಿರುವರು. ಗುಜರಾತ್ ಇದುವರೆಗೆ ಸುಮಾರು 3.63 ಲಕ್ಷ ಪರೀಕ್ಷೆಗಳನ್ನು ನಡೆಸಿದೆ.
  •  ರಾಜಸ್ಥಾನ: ಕೋವಿಡ್-19 ಸೋಂಕಿನ 121 ಹೊಸ ಪ್ರಕರಣಗಳು ಇಂದು ವರದಿಯಾಗಿವೆ. ಇದು ರಾಜ್ಯದ ಕೋವಿಡ್-19 ಸಂಖ್ಯೆಯನ್ನು 17,392 ಕ್ಕೆ ಏರಿಸಿದೆ. ಸಕ್ರಿಯ ರೋಗಿಗಳ ಸಂಖ್ಯೆ 3,372 ಕ್ಕೆ ಏರಿದೆ. ಇಲ್ಲಿಯವರೆಗೆ ಚೇತರಿಸಿಕೊಂಡವರ ಸಂಖ್ಯೆ 13,618 ಆಗಿದೆ. ಇಲ್ಲಿಯವರೆಗೆ ಒಟ್ಟು ಸಾವುಗಳು 402 ಆಗಿದೆ. ಇದುವರೆಗೆ ಒಟ್ಟು 8 ಲಕ್ಷ ಮಾದರಿಗಳನ್ನು ಪರೀಕ್ಷಿಸಲಾಗಿದೆ.
  • ಮಧ್ಯಪ್ರದೇಶ: ಭಾನುವಾರ 7795 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಅದರಲ್ಲಿ ದೃಢಪಟ್ಟ 221 ಪ್ರಕರಣಗಳು ವರದಿಯಾಗಿವೆ, ಇದರಿಂದಾಗಿ ರಾಜ್ಯದ ಕೋವಿಡ್-19 ಸೋಂಕಿತರ ಸಂಖ್ಯೆ 13,186 ಆಗಿದೆ. ಇದುವರೆಗೆ 10,084 ಚೇತರಿಸಿಕೊಂಡವರು  ಮತ್ತು 557 ಸಾವುಗಳು ವರದಿಯಾಗಿದ್ದರೆ, ರಾಜ್ಯದಲ್ಲಿ 13,186 ಸಕ್ರಿಯ ಪ್ರಕರಣಗಳಿವೆ ಎಂದು ಇತ್ತೀಚಿನ ವರದಿಯಲ್ಲಿ ತಿಳಿಸಲಾಗಿದೆ. ಇಂದೋರ್, ಭೋಪಾಲ್, ಗ್ವಾಲಿಯರ್ ಮತ್ತು ಮೊರೆನಾದಿಂದ ಹೆಚ್ಚಿನ ಹೊಸ ಪ್ರಕರಣಗಳು ವರದಿಯಾಗಿವೆ. ಇಂದೋರ್ನಲ್ಲಿ ಈವರೆಗೆ ಒಟ್ಟು 4615 ಪ್ರಕರಣಗಳು ಮತ್ತು 222 ಸಾವುಗಳು ವರದಿಯಾಗಿವೆ. ಭೋಪಾಲ್,  ಒಟ್ಟು 2740 ಪ್ರಕರಣಗಳು ಮತ್ತು 94 ಸಾವುಗಳಿಂದ ಇಂದೋರನ್ನು ಹಿಂದಿಕ್ಕಿದೆ.
  • ಛತ್ತೀಸ್ಗಢ್: 84 ಹೊಸ ಕೋವಿಡ್-19 ಪ್ರಕರಣಗಳನ್ನು ಭಾನುವಾರ ಪತ್ತೆ ಹಚ್ಚಲಾಗಿದೆ. ರಾಜ್ಯದ ಒಟ್ಟು ಕೊರೊನಾವೈರಸ್ ಸಂಖ್ಯೆ 2694 ಆಗಿದ್ದು, ಪೈಕಿ 619 ಸಕ್ರಿಯ ಪ್ರಕರಣಗಳಾಗಿವೆ. 118 ರೋಗಿಗಳು ಗುಣಮುಖರಾಗಿದ್ದು ಭಾನುವಾರ ಬಿಡುಗಡೆ ಮಾಡಲಾಗಿದ್ದು, ಇದು ಒಟ್ಟು ಚೇತರಿಕೆಯ ಸಂಖ್ಯೆ 2062 ಆಗಿದೆ
  • ಗೋವಾ: 70 ಹೊಸ ಕೋವಿಡ್ ದೃಢಪಟ್ಟ ಪ್ರಕರಣಗಳನ್ನು ಭಾನುವಾರ ಗುರುತಿಸಲಾಗಿದೆ. ಇದು ಕೊರೊನಾ ವೈರಸ್ ರೋಗಿಗಳ ಸಂಖ್ಯೆಯು 1,198 ಆಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 717. ಭಾನುವಾರ 58 ರೋಗಿಗಳ ಚೇತರಿಕೆಯೊಂದಿಗೆ, ಒಟ್ಟು ಚೇತರಿಕೆಯ ಸಂಖ್ಯೆ 478 ಕ್ಕೆ ಏರಿದೆ. ಇಲ್ಲಿಯವರೆಗೆ ಒಟ್ಟು 3 ಸಾವುಗಳು ಸಂಭವಿಸಿವೆ.
  • ಕೇರಳ: ಅಪರಿಚಿತ ಮೂಲದ ಕೋವಿಡ್ ಪ್ರಕರಣಗಳು ಹೆಚ್ಚಾದ ನಂತರ, ಇಂದು ಸಂಜೆಯಿಂದ ಜುಲೈ 6ರವರೆಗೆ ಮಲಪ್ಪುರಂ ಜಿಲ್ಲೆಯ ಸಂಪೂರ್ಣ ಪೊನ್ನಾನಿ ತಾಲ್ಲೂಕಿನಲ್ಲಿ ಟ್ರಿಪಲ್ ಲಾಕ್ಡೌನ್ ಅನ್ನು ವಿಧಿಸಲಾಗಿದೆ. ಅಧಿಕಾರಿಗಳ ಪ್ರಕಾರ, ನವಜಾತ ಶಿಶುಗಳು ಸೇರಿದಂತೆ 20,000 ಕ್ಕೂ ಹೆಚ್ಚು ಜನರು ಸಂಪರ್ಕ ಪಟ್ಟಿಯಲ್ಲಿದ್ದಾರೆ. ಜಿಲ್ಲೆಯ ಎಡಪ್ಪಲ್ನಲ್ಲಿ ಇಬ್ಬರು ವೈದ್ಯರಿಗೆ ಕೋವಿಡ್ -19 ದೃಢಪಟ್ಟಿದೆ.  ರೋಗ ಹರಡಿದ ನಂತರ ಎಡಪ್ಪಲ್ನಲ್ಲಿ ನಾಲ್ಕು ಪಂಚಾಯಿತಿಗಳನ್ನು ಈಗಾಗಲೇ ನಿಯಂತ್ರಣ ವಲಯಗಳನ್ನಾಗಿ ಮಾಡಲಾಗಿದೆ. 1,500 ಜನರ ಯಾದೃಚ್ಛಿಕ ಪರೀಕ್ಷೆಯನ್ನು ನಡೆಸಲಾಗುವುದು. ತಿರುವಾಂಕೂರು ದೇವಸ್ವಂ ಮಂಡಳಿಯ ಅಧೀನದಲ್ಲಿರುವ ದೇವಾಲಯಗಳಿಗೆ ಭಕ್ತರ ಭೇಟಿಗೆ ವಿಧಿಸಲಾದ ನಿರ್ಬಂಧಗಳು ಜೂನ್ 30 ನಂತರವೂ ಮುಂದುವರಿಯುತ್ತದೆ. ಕೊವಿಡ್ -19 ನಿಂದ ಇನ್ನೂ ಇಬ್ಬರು ಸಾವನ್ನಪ್ಪಿದರು. 118 ಕೋವಿಡ್ ಪಾಸಿಟಿವ್ ಪ್ರಕರಣಗಳು ನಿನ್ನೆ ವರದಿಯಾಗಿದ್ದು, 2,015 ರೋಗಿಗಳು ಇನ್ನೂ ವಿವಿಧ ಜಿಲ್ಲೆಗಳಲ್ಲಿ ಚಿಕಿತ್ಸೆಯಲ್ಲಿದ್ದಾರೆ.
  • ತಮಿಳುನಾಡು: ತಮಿಳುನಾಡು ಆರೋಗ್ಯ ತಜ್ಞರ ಸಮಿತಿಯು ಮುಖ್ಯಮಂತ್ರಿಯವರೊಂದಿಗಿನ ಸಭೆಯಲ್ಲಿ ಲಾಕ್ ಡೌನ್ ವಿಸ್ತರಣೆಯನ್ನು ಶಿಫಾರಸು ಮಾಡಿಲ್ಲ ಆದರೆ ತೀವ್ರ ಪೀಡಿತ ಪ್ರದೇಶಗಳಲ್ಲಿ ಮಾತ್ರ ನಿರ್ಬಂಧಗಳನ್ನು ಹೆಚ್ಚಿಸುವಂತೆ ಸರ್ಕಾರವನ್ನು ಒತ್ತಾಯಿಸಿತು. ರಕ್ಷಣಾ ಹಡಗು ಐಎನ್ಎಸ್ ಜಲಾಶ್ವದಲ್ಲಿ ಸ್ಥಳಾವಕಾಶದ ಕೊರತೆಯಿಂದಾಗಿ ತಮಿಳು ನಾಡಿನ 44 ಮಂದಿ ಸೇರಿದಂತೆ 63 ಭಾರತೀಯ ಮೀನುಗಾರರು ಇರಾನ್ನಲ್ಲಿ ಇನ್ನೂ ಸಿಲುಕಿಕೊಂಡಿದ್ದಾರೆ. ವೆಲ್ಲೂರಿನಲ್ಲಿ ಕೋವಿಡ್ -19ಕ್ಕೆ ಮೂವರು ನ್ಯಾಯಾಂಗ ಅಧಿಕಾರಿಗಳು ಮತ್ತು ಇಬ್ಬರು ಪೊಲೀಸರಿಗೆ ನಡೆಸಿದ    ಪರೀಯಲ್ಲಿ ಸೋಂಕು ದೃಢಪಟ್ಟಿದೆ. 3940 ಹೊಸ ಪ್ರಕರಣಗಳು, 1443 ಚೇತರಿಕೆ ಮತ್ತು 54 ಸಾವುಗಳು ನಿನ್ನೆ ವರದಿಯಾಗಿವೆ. ಒಟ್ಟು ಪ್ರಕರಣಗಳು: 82275, ಸಕ್ರಿಯ ಪ್ರಕರಣಗಳು: 35656, ಸಾವುಗಳು: 1079, ಚೆನ್ನೈನಲ್ಲಿ ಸಕ್ರಿಯ ಪ್ರಕರಣಗಳು: 19877.
  • ಕರ್ನಾಟಕ: ಕ್ಯಾರೆಂಟೈನ್ ನಿಯಮಗಳನ್ನು ಉಲ್ಲಂಘಿಸುವ ಹೆಚ್ಚಿನ ಸಂಖ್ಯೆಯ ಜನರಿಂದಾಗಿ, ರಾಜ್ಯ ಸರ್ಕಾರವು ಆ್ಯಪ್ ಒಂದನ್ನು ಅಭಿವೃದ್ಧಿಪಡಿಸುವಲ್ಲಿ ಕಾರ್ಯನಿರ್ವಹಿಸುತ್ತಿದೆ, ಇದು ಮನೆ ಸಂಪರ್ಕತಡೆಯನ್ನು ಹೊಂದಿರುವವರ ಚಲನವಲನವನ್ನು ಟ್ಯಾಗ್ ಮಾಡುತ್ತದೆ. 1600 ಹಾಸಿಗೆ ಸಾಮರ್ಥ್ಯ ಹೊಂದಿರುವ ಇನ್ನೂ ಐದು ಕೋವಿಡ್ ಆರೈಕೆ ಕೇಂದ್ರಗಳನ್ನು ಬಿಬಿಎಂಪಿ ಗುರುತಿಸಿದೆ. ವಿದ್ಯಾರ್ಥಿಗಳಿಗೆ ಆನ್ಲೈನ್ ಶಿಕ್ಷಣವನ್ನು ನೀಡುವ ಕುರಿತು ರಾಜ್ಯ ಸರ್ಕಾರವು ಹೊಸ ತಾತ್ಕಾಲಿಕ ಮಾರ್ಗಸೂಚಿಗಳನ್ನು ಹೊರತಂದಿದೆ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕರ್ನಾಟಕದ ಕೋವಿಡ್ -19 ವೆಚ್ಚಗಳ ಬಗ್ಗೆ ಶ್ವೇತಪತ್ರವನ್ನು ಕೋರಿದ್ದಾರೆ. 1267 ಹೊಸ ಪ್ರಕರಣಗಳು, 220 ಜನ ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುವವರು ಮತ್ತು 16 ಸಾವುಗಳು ನಿನ್ನೆ ವರದಿಯಾಗಿವೆ. ಒಟ್ಟು ದೃಢಪಟ್ಟ ಪ್ರಕರಣಗಳು: 13190, ಸಕ್ರಿಯ ಪ್ರಕರಣಗಳು: 5472, ಸಾವುಗಳು: 207,  ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರು: 7507.
  •  ಆಂಧ್ರಪ್ರದೇಶ: ಕೋವಿಡ್-19 ಬಿಕ್ಕಟ್ಟಿನ ಸಂದರ್ಭದಲ್ಲಿ ರಾಜ್ಯದ ಎಂಎಸ್ಎಂಇಗಳನ್ನು ಬೆಂಬಲಿಸಲು ಮುಖ್ಯಮಂತ್ರಿಯವರು ಎರಡನೇ ಹಣಕಾಸು ಪ್ರೋತ್ಸಾಹಕವಾಗಿ 512 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿರುವರು;  ಏಪ್ರಿಲ್ ನಿಂದ ಜೂನ್ ವರೆಗೆ ಸ್ಥಿರ ವಿದ್ಯುತ್ ಶುಲ್ಕವನ್ನು ಮನ್ನಾ ಮಾಡುವುದಾಗಿ ಪ್ರಕಟಿಸಲಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಅಗತ್ಯ ವೈದ್ಯಕೀಯ ಸೇವೆಗಳನ್ನು ಒದಗಿಸಲು ರಾಜ್ಯವು 108 ಮತ್ತು 104 ಆಂಬ್ಯುಲೆನ್ಸ್ ವಾಹನಗಳ ಸೇವೆಯಲ್ಲಿ ಜುಲೈ 1 ರಿಂದ ಅತ್ಯಾಧುನಿಕ ಸೌಕರ್ಯಗಳೊಂದಿಗೆ 1,060 ವಾಹನಗಳನ್ನು ಸೇರಿಸಲಿದೆ.  793 ಹೊಸ ಪ್ರಕರಣಗಳು, 302 ಆಸ್ಪತ್ತೆಯಿಂದ ಬಿಡುಗಡೆಯಾದವರ ಮತ್ತು 11 ಸಾವುಗಳು ಕಳೆದ 24 ಗಂಟೆಗಳಲ್ಲಿ ವರದಿಯಾಗಿದೆ 30,216 ಮಾದರಿಗಳನ್ನು ಪರೀಕ್ಷಿಸಿದ ನಂತರ. 793 ಪ್ರಕರಣಗಳಲ್ಲಿ 81 ಅಂತರರಾಜ್ಯ ಪ್ರಕರಣಗಳು ಮತ್ತು ಆರು ಪ್ರಕರಣಗಳು ವಿದೇಶದಿಂದ ಬಂದವರಿಂದ ಆಗಿವೆ. ಒಟ್ಟು ಪ್ರಕರಣಗಳು: 13,891, ಸಕ್ರಿಯ ಪ್ರಕರಣಗಳು: 7479, ಆಸ್ಪತ್ತೆಯಿಂದ ಬಿಡುಗಡೆಯಾದವರು: 6232, ಸಾವು: 180.
  • ತೆಲಂಗಾಣ: ಹೈದರಾಬಾದ್ ಕಾಸ್ಮೋಪಾಲಿಟನ್ ನಗರ ಎಂದು ಆರೋಗ್ಯ ಸಚಿವ ಇಟಾಲಾ ರಾಜೇಂದರ್ ಹೇಳಿದ್ದಾರೆ, ಆದ್ದರಿಂದ ದೆಹಲಿ ಮತ್ತು ಮುಂಬೈನಂತೆ ಇಲ್ಲಿ ಕೂಡ ಪ್ರಕರಣಗಳು ಹೆಚ್ಚುತ್ತಿವೆ; ಅಗತ್ಯವಿದ್ದರೆ ಕೆಲವು ಸ್ಥಳಗಳಲ್ಲಿ ಲಾಕ್ಡೌನ್ ವಿಧಿಸಲಾಗುತ್ತದೆ. ಪ್ರಕರಣಗಳು ಹೆಚ್ಚುತ್ತಿರುವ ಪ್ರದೇಶಗಳ ಬಗ್ಗೆ ಹೆಚ್ಚು ಗಮನಹರಿಸಬೇಕೆಂದು ತೆಲಂಗಾಣ ಮುಖ್ಯಮಂತ್ರಿ ಸಲಹೆ ನೀಡಿದರು. ಪ್ರದೇಶಗಳಲ್ಲಿ ಹೆಚ್ಚಿನ ಪರೀಕ್ಷೆಗಳನ್ನು ನಡೆಸಲಾಗುವುದು. ತೆಲಂಗಾಣ ಗೃಹ ಸಚಿವ ಮೊಹಮದ್ ಅಲಿ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಒಟ್ಟು 14419 ಪ್ರಕರಣಗಳು ವರದಿಯಾಗಿವೆ,  ಸಕ್ರಿಯ ಪ್ರಕರಣಗಳು: 9000,  ಸಾವುಗಳು: 247, ಆಸ್ಪತ್ರೆಯಿಂದ ಬಿಡುಗಡೆಯಾದವರು: 5172.
  • ಅರುಣಾಚಲ ಪ್ರದೇಶ: ಸೈನಿಕ್ ಸ್ಕೂಲ್ ಈಸ್ಟ್ ಸಿಯಾಂಗ್ಗೆ 2021-22 ಶೈಕ್ಷಣಿಕ ಅಧಿವೇಶನದಿಂದ ಬಾಲಕಿಯರ ಕೆಡೆಟ್ಗಳ ಪ್ರವೇಶಾತಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಟ್ವೀಟ್ ಮಾಡಿದ್ದಾರೆ.
  • ಅಸ್ಸಾಂ: ಗುವಾಹಟಿ ನಗರದಾದ್ಯಂತ 31 ಕೋವಿಡ್ ಆರೈಕೆ ಕೇಂದ್ರಗಳು ಮತ್ತು 12 ಆಸ್ಪತ್ರೆಗಳಲ್ಲಿ ಸ್ವ್ಯಾಬ್ ಸಂಗ್ರಹಕ್ಕೆ ರಾಜ್ಯ ಸರ್ಕಾರ ಸೌಲಭ್ಯಗಳನ್ನು ಸ್ಥಾಪಿಸಿದೆ ಎಂದು ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ ಟ್ವೀಟ್ ಮಾಡಿದ್ದಾರೆ.
  • ಮಣಿಪುರ: ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ (ಯುಎನ್ಡಿಪಿ) ಸಹಭಾಗಿತ್ವದಲ್ಲಿ ಪರಿಸರ ಮತ್ತು ಹವಾಮಾನ ಬದಲಾವಣೆಯ ನಿರ್ದೇಶನಾಲಯ ಇಂಫಾಲ್ ಮಣಿಪುರ ಪ್ರೆಸ್ ಕ್ಲಬ್ನಲ್ಲಿ ಮಾಧ್ಯಮದವರಿಗೆ ಮುಖಗವಸುಗಳನ್ನು ವಿತರಿಸಲಾಯಿತು.
  • ಮೇಘಾಲಯ: ಅಸ್ಸಾಂನಲ್ಲಿ ಕೋವಿಡ್ 19 ಪ್ರಕರಣಗಳ ಉಲ್ಬಣದಿಂದಾಗಿ ಮೇಘಾಲಯ ಸರ್ಕಾರವು ಗುವಾಹಟಿಯ ಗಡಿಯಲ್ಲಿರುವ ಮೇಘಾಲಯದ ಸ್ಥಳಗಳು, ಅಂದರೆ ಬೈರನಿಹತ್, ಜೋರಬತ್, ಖಾನಾಪರ ತನಕ ಲಾಕ್ ಡೌನ್ ಆಗಲಿದೆ ಎಂದು ಮೇಘಾಲಯ ಸರ್ಕಾರ ನಿರ್ಧರಿಸಿದೆ. ಅಂತರ ರಾಜ್ಯ ಸಾರಿಗೆಯನ್ನು ನಿರ್ಬಂಧಿಸಲಾಗಿದೆ. ಜಿಲ್ಲಾಧಿಕಾರಿಯವರು  ಅದಕ್ಕೆ ತಕ್ಕಂತೆ ಅಗತ್ಯ ಆದೇಶಗಳನ್ನು ನೀಡಲಿದೆ.
  • ಮಿಜೋರಾಂ: ಮಿಜೋರಾಂನಲ್ಲಿ ಚೇತರಿಸಿಕೊಂಡ ಆರು ಕೋವಿಡ್-19 ರೋಗಿಗಳನ್ನು ಬಿಡುಗಡೆ ಮಾಡಲಾಗಿದೆ. ಒಟ್ಟು ಸಕ್ರಿಯ ಪ್ರಕರಣಗಳು ಈಗ 90 ರಷ್ಟಿದ್ದರೆ, 61 ಜನರು ಬಿಡುಗಡೆಯಾಗಿದ್ದಾರೆ.
  •  ನಾಗಾಲ್ಯಾಂಡ್: ನಾಗಾಲ್ಯಾಂಡ್ನಲ್ಲಿ ಇನ್ನೂ 4 ಕೋವಿಡ್-19 ರೋಗಿಗಳು ಚೇತರಿಸಿಕೊಂಡಿದ್ದಾರೆ. ಅವರಲ್ಲಿ ಮೂವರು ದಿಮಾಪುರದವರು ಮತ್ತು ಒಬ್ಬರು ಕೊಹಿಮಾದವರು. ನಾಗಾಲ್ಯಾಂಡ್ನಲ್ಲಿ ಚೇತರಿಕೆಯ ಪ್ರಮಾಣ 168 ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳು 266 ರಷ್ಟಿವೆ.

***

 


(Release ID: 1636016) Visitor Counter : 262