ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ
ಜೂನ್ 30, 2020ರ ಒಂದೇ ದಿನ ದಾಖಲೆಯ 73 ರಸಗೊಬ್ಬರ ರೇಖ್ ಗಳ ಸಂಚಾರ
Posted On:
02 JUL 2020 4:12PM by PIB Bengaluru
ಜೂನ್ 30, 2020ರ ಒಂದೇ ದಿನ ದಾಖಲೆಯ 73 ರಸಗೊಬ್ಬರ ರೇಖ್ ಗಳ ಸಂಚಾರ
ಈ ಮಹತ್ವದ ಸಾಧನೆಗೆ ರಸಗೊಬ್ಬರ ಇಲಾಖೆಗೆ ಅಭಿನಂದನೆ
ಮತ್ತು ರೈಲ್ವೆಗೆ ಕೃತಜ್ಞತೆ ಸಲ್ಲಿಸಿದ ಕೇಂದ್ರ ಸಚಿವ ಶ್ರೀ ಡಿ.ವಿ. ಸದಾನಂದ ಗೌಡ
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಶ್ರೀ ಡಿ.ವಿ. ಸದಾನಂದ ಗೌಡ ಅವರು, ಜೂನ್ 30, 2020ರ ಒಂದೇ ದಿನ ದಾಖಲೆಯ 73 ರಸಗೊಬ್ಬರ ರೇಖ್ ಗಳ ಸಂಚಾರಕ್ಕೆ ನೆರವು ನೀಡಿದ್ದಕ್ಕಾಗಿ ಇಂದು ರೈಲ್ವೆ ಸಚಿವಾಲಯಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ ಮತ್ತು ರಸಗೊಬ್ಬರ ಇಲಾಖೆಯ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. “ಈವರೆಗೆ ಸಾಗಾಣೆಯಾಗಿರುವ ರಸಗೊಬ್ಬರ ರೇಖ್ ಗಳ ಪೈಕಿ, ಒಂದೇ ದಿನ ದಾಖಲೆಯ ಸಂಖ್ಯೆಯ ರಸಗೊಬ್ಬರ ರೇಖ್ ಗಳು ಸಂಚಾರವಾಗಿವೆ.” ಎಂದು ಹೇಳಿದ್ದಾರೆ.
ಈ ವರ್ಷದ ಜೂನ್ ತಿಂಗಳಲ್ಲಿ ಸರಾಸರಿ ಪ್ರತಿ ದಿನ 56.5 ರಸಗೊಬ್ಬರ ರೇಖ್ ಗಳು ಸಂಚರಿಸಿವೆ. ಜೂನ್ ತಿಂಗಳಲ್ಲಿ ಇದು ಐತಿಹಾಸಿಕ ಸಾಧನೆಯಾಗಿದೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕೇಂದ್ರ ಸರ್ಕಾರ ರೈತರಿಗೆ ಸಕಾಲದಲ್ಲಿ ರಸಗೊಬ್ಬರವನ್ನು ಲಭ್ಯವಾಗುವಂತೆ ಮಾಡಲು ಬದ್ಧವಾಗಿದೆ ಎಂದು ಅವರು ಹೇಳಿದರು. ಈವರೆಗೆ ಪ್ರಸಕ್ತ ಮುಂಗಾರು ಹಂಗಾಮಿಗೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳ ಸಮನ್ವಯದೊಂದಿಗೆ ದೇಶಾದ್ಯಂತ ರೈತರಿಗೆ ಅಗತ್ಯವಿರುವಷ್ಟು ರಸಗೊಬ್ಬರವನ್ನು ಸ್ಥಿರವಾಗಿ ಪೂರೈಸುವುದನ್ನು ಖಾತ್ರಿಪಡಿಸಿದೆ.
***
(Release ID: 1635965)
Visitor Counter : 215