ಸಂಸ್ಕೃತಿ ಸಚಿವಾಲಯ

ಸಂಸ್ಕೃತಿ ಸಚಿವಾಲಯದಿಂದ ಅಂತಾರಾಷ್ಟ್ರೀಯ ಯೋಗ ದಿನ 2020ರ ಆಚರಣೆ

Posted On: 20 JUN 2020 1:50PM by PIB Bengaluru

ಸಂಸ್ಕೃತಿ ಸಚಿವಾಲಯದಿಂದ ಅಂತಾರಾಷ್ಟ್ರೀಯ ಯೋಗ ದಿನ 2020 ಆಚರಣೆ

2020 ಜೂನ್19 ರಿಂದ 21 ರವರೆಗೆ ನಮಸ್ತೆ ಯೋಗ ಆಂದೋಲನ

ಅಂತಾರಾಷ್ಟ್ರೀಯ ಯೋಗ ದಿನ 2020 ರಂದು 10 ಮಿಲಿಯನ್ ಸೂರ್ಯ ನಮಸ್ಕಾರ ಮತ್ತು

ನಮಸ್ತೆ ಯೋಗ (#10MillionSuryaNamaskar and #NamasteYoga) ಬಳಸಿ ಸೂರ್ಯ ನಮಸ್ಕಾರದಲ್ಲಿ ತಮ್ಮ ಜೊತೆಗೂಡಲು ಶ್ರೀ ಪ್ರಹ್ಲಾದ್ ಪಟೇಲ್ ಮನವಿ

 

ಅಂತಾರಾಷ್ತ್ರೀಯ ಯೋಗ ದಿನದಂದು (2020 ಜೂನ್ 21) ತಾವು ಪುರಾನಾ ಖಿಲಾದಲ್ಲಿ ಸೂರ್ಯ ನಮಸ್ಕಾರ ಮಾಡಲಿದ್ದು, ಎಲ್ಲರೂ ತಮ್ಮ ಮನೆಗಳಲ್ಲಿ ಸೂರ್ಯ ನಮಸ್ಕಾರ ಮಾಡುವ ಮೂಲಕ ತಮ್ಮ ಜೊತೆಗೂಡಬೇಕು ಎಂದು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಹಾಯಕ ಸಚಿವರಾದ (ಸ್ವಂತಂತ್ರ ನಿರ್ವಹಣೆ) ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್ ಜನತೆಗೆ ಮನವಿ ಮಾಡಿದ್ದಾರೆ. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಶ್ವಕ್ಕೆ ಯೋಗ ದಿನದ ಕೊಡುಗೆ ನೀಡಿದ್ದಾರೆ ಮತ್ತು ನಾವು ನಮ್ಮ ದೈನಂದಿನ ಬದುಕಿನಲ್ಲಿ ಯೋಗವನ್ನು ಅಳವಡಿಸಿಕೊಳ್ಳಬೇಕು ಎಂದೂ ಶ್ರೀ ಪ್ರಹ್ಲಾದ್ ಸಿಂಗ್ ಹೇಳಿದ್ದಾರೆ.

ಶ್ರೀ ಪಟೇಲ್ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೋ ಸಂದೇಶವನ್ನು ಹಾಕಿದ್ದು, ಎಲ್ಲರಿಗೂ ಅವರವರ  ಸೂರ್ಯ ನಮಸ್ಕಾರ ವೀಡಿಯೋವನ್ನು #10MillionSuryaNamaskar & #NamasteYoga ಬಳಸಿ ಸಾಮಾಜಿಕ ಮಾದ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಇದರಿಂದ ಅದು ಸಾರ್ವಜನಿಕ ಆಂದೋಲನವಾಗುತ್ತದೆ ,ಮತ್ತು  ಇದು ಜೊತೆಗಾರ ನಾಗರಿಕರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುತ್ತದೆ ಎಂದಿದ್ದಾರೆ. ಸಂಸ್ಕೃತಿ ಸಚಿವರ ಸಂದೇಶಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. 2020 ಅಂತಾರಾಷ್ಟ್ರೀಯ ಯೋಗ ದಿನದಂದು ಸೂರ್ಯ ನಮಸ್ಕಾರದಲ್ಲಿ ತಮ್ಮ ಜೊತೆ ಸುಮಾರು 10 ಮಿಲಿಯನ್ ಜನರು ಭಾಗವಹಿಸುವರೆಂಬ ಭರವಸೆಯನ್ನು ಹೊಂದಿದ್ದಾರೆ.

Prahlad Singh Patel@prahladspatel

विश्व योग दिवस पर अपने घर पर योग ज़रूर करें, हमारे साथ सूर्य नमस्कार कर का उपयोग कर video डालकर, आप सभी को शामिल होने के लिए आमंत्रित करता हूँ इसमें @MinOfCultureGoI@BeCureFit@ficci_india शामिल है@PMOIndia

Embedded video

643

7:48 PM - Jun 19, 2020

Twitter Ads info and privacy

195 people are talking about this

ಸಂಸ್ಕೃತಿ ಸಚಿವಾಲಯವು ಅಂತಾರಾಷ್ಟ್ರೀಯ ಯೋಗ ದಿನ 2020 ನ್ನು 2020 ಜೂನ್ 19 ರಿಂದ 21 ರವರೆಗೆ ನಮಸ್ತೆ  ಯೋಗ ಆಂದೋಲನ ಸಂಘಟಿಸುವ ಮೂಲಕ ಆಚರಿಸುತ್ತಿದೆ. ಯೋಗವನ್ನು ಪ್ರತಿಯೊಬ್ಬರ ಜೀವನದಲ್ಲಿಯೂ ಅವಿಭಾಜ್ಯ ಅಂಗವಾಗಿಸುವ ಗುರಿ ಸಾಧಿಸುವುದು ಇದರ ಉದ್ದೇಶ.  

***



(Release ID: 1632958) Visitor Counter : 196