ಪ್ರಧಾನ ಮಂತ್ರಿಯವರ ಕಛೇರಿ

ಭಾರತ- ಚೀನಾ ಗಡಿ ಪ್ರದೇಶದ ಪರಿಸ್ಥಿತಿ ಕುರಿತು ಪ್ರಧಾನ ಮಂತ್ರಿಯವರ ಹೇಳಿಕೆ

Posted On: 17 JUN 2020 3:35PM by PIB Bengaluru

ಭಾರತಚೀನಾ ಗಡಿ ಪ್ರದೇಶದ ಪರಿಸ್ಥಿತಿ ಕುರಿತು ಪ್ರಧಾನ ಮಂತ್ರಿಯವರ ಹೇಳಿಕೆ

 

ಸ್ನೇಹಿತರೇ,

ಭಾರತ ಮಾತೆಯ ಧೈರ್ಯಶಾಲಿ ಪುತ್ರರು ತಾಯ್ನಾಡಿನ ರಕ್ಷಣೆಯಲ್ಲಿದ್ದಾಗ ಗಾಲ್ವಾನ್ ಕಣಿವೆಯಲ್ಲಿ ಪರಮೋಚ್ಛ ತ್ಯಾಗ ಮಾಡಿದ್ದಾರೆ.

ರಾಷ್ಟ್ರಕ್ಕೆ ಅವರು ಮಾಡಿದ ಸೇವೆಗಾಗಿ ಅವರು ಮಾಡಿದ ದೊಡ್ಡ ತ್ಯಾಗಕ್ಕಾಗಿ ನಾನು ಅವರಿಗೆ ವಂದಿಸುತ್ತೇನೆಹೃತ್ಪೂರ್ವಕ ಕೃತಜ್ಞತೆಯಿಂದ ಅವರಿಗೆ ಗೌರವ ಸಲ್ಲಿಸುತ್ತೇನೆ.

ದುಃಖಭರಿತವಾದ  ಕಷ್ಟದ ಸಮಯದಲ್ಲಿ ಹುತಾತ್ಮರ ಕುಟುಂಬಗಳಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ.

ಇಂದು ಇಡೀ ರಾಷ್ಟ್ರವು ನಿಮ್ಮೊಂದಿಗಿದೆದೇಶದ ಸಹಾನುಭೂತಿ ನಿಮ್ಮೊಂದಿಗಿದೆ.

ನಮ್ಮ ಹುತಾತ್ಮರ  ಪರಮೋಚ್ಚ ತ್ಯಾಗವು ವ್ಯರ್ಥವಾಗುವುದಿಲ್ಲ.

ಪರಿಸ್ಥಿತಿ ಮತ್ತು ಸಂದರ್ಭಗಳು ಏನೇ ಇರಲಿದೇಶದ ಭೂಮಿಯ ಪ್ರತಿ ಅಂಗುಲವನ್ನೂ ಮತ್ತು ಅದರ ಸ್ವಾಭಿಮಾನವನ್ನು ಭಾರತ ಬಲವಾಗಿ ರಕ್ಷಿಸುತ್ತದೆ.

ಭಾರತ ಸಾಂಸ್ಕೃತಿಕವಾಗಿ ಶಾಂತಿ ಪ್ರಿಯ ದೇಶಶಾಂತಿ ಪ್ರಿಯ ದೇಶದ ಇತಿಹಾಸ ನಮ್ಮದು.

ಭಾರತದ ಸೈದ್ಧಾಂತಿಕ ಮಂತ್ರವೆಂದರೆ - लोकाः समस्ताः सुखिनों भवन्तु।

ಪ್ರತಿ ಯುಗದಲ್ಲೂಇಡೀ ಜಗತ್ತು ಮತ್ತು ಮನುಕುಲದ ಶಾಂತಿ ಮತ್ತು ಕಲ್ಯಾಣಕ್ಕಾಗಿ ನಾವು ಹಾರೈಸಿದ್ದೇವೆ.

ನಾವು ಯಾವಾಗಲೂ ನಮ್ಮ ನೆರೆಹೊರೆಯವರೊಂದಿಗೆ ಸಹಕಾರಿಯಾಗಿ ಮತ್ತು ಸ್ನೇಹಪರವಾಗಿ ನಿಕಟವಾಗಿ ಕೆಲಸ ಮಾಡಿದ್ದೇವೆಅವರ ಅಭಿವೃದ್ಧಿ ಮತ್ತು ಕಲ್ಯಾಣಕ್ಕಾಗಿ ನಾವು ಯಾವಾಗಲೂ ಹಾರೈಸುತ್ತೇವೆ.

ಭಿನ್ನಾಭಿಪ್ರಾಯಗಳು ಎಂದಿಗೂ ವಿವಾದವಾಗಿ ಬದಲಾಗದಂತೆ ನೋಡಿಕೊಳ್ಳಲು ನಾವು ಯಾವಾಗಲೂ ಪ್ರಯತ್ನಿಸಿದ್ದೇವೆ.

ನಾವು ಯಾರನ್ನೂ ಪ್ರಚೋದಿಸುವುದಿಲ್ಲಆದರೆ ನಮ್ಮ ದೇಶದ ಸಮಗ್ರತೆ ಮತ್ತು ಸಾರ್ವಭೌಮತ್ವದೊಂದಿಗೆ ನಾವು ರಾಜಿ ಮಾಡಿಕೊಳ್ಳುವುದಿಲ್ಲಅಗತ್ಯಬಿದ್ದಾಗನಾವು ನಮ್ಮ ಶಕ್ತಿಯನ್ನು ಪ್ರದರ್ಶಿಸಿದ್ದೇವೆದೇಶದ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ಕಾಪಾಡಲು ಮತ್ತು ರಕ್ಷಿಸಲು ನಮ್ಮ ಸಾಮರ್ಥ್ಯಗಳನ್ನು ಸಾಬೀತುಪಡಿಸುತ್ತೇವೆ.

ತ್ಯಾಗ ಮತ್ತು ಸಹಿಷ್ಣುತೆ ನಮ್ಮ ರಾಷ್ಟ್ರೀಯ ಗುಣದ ಭಾಗವಾಗಿದೆಹಾಗೆಯೇ ಧೈರ್ಯ ಮತ್ತು ಶೌರ್ಯವೂ ಸಹ ಅದರ ಒಂದು ಭಾಗವಾಗಿದೆ.

ನಮ್ಮ ಸೈನಿಕರು ಮಾಡಿದ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ ಎಂದು ನಾನು ದೇಶಕ್ಕೆ ಭರವಸೆ ನೀಡುತ್ತೇನೆ.

ಭಾರತದ ಸಮಗ್ರತೆ ಮತ್ತು ಸಾರ್ವಭೌಮತ್ವವೇ ನಮಗೆ ಪರಮೋಚ್ಛವಾದುದುಅದನ್ನು ರಕ್ಷಿಸುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ.

ಇದರ ಬಗ್ಗೆ ಯಾರಿಗೂ ಯಾವುದೇ ಅನುಮಾನವೂ ಬೇಡ.

ಭಾರತವು ಶಾಂತಿ ಬಯಸುತ್ತದೆಆದರೆ ಪ್ರಚೋದನೆಗೆ ಸೂಕ್ತ ಉತ್ತರವನ್ನು ನೀಡುತ್ತದೆ.

ನಮ್ಮ ಸೈನಿಕರು ಹೋರಾಡುವಾಗ ಹುತಾತ್ಮರಾಗಿದ್ದಾರೆ ಎಂಬ ಬಗ್ಗೆ ದೇಶವು ಹೆಮ್ಮೆಪಡುತ್ತದೆಎರಡು ನಿಮಿಷಗಳ ಮೌನವನ್ನು ಆಚರಿಸುವ ಮೂಲಕ  ಹೆಮ್ಮೆಯ ಪುತ್ರರಿಗೆ ಗೌರವ ಸಲ್ಲಿಸಬೇಕೆಂದು ನಾನು ನಿಮ್ಮೆಲ್ಲರನ್ನೂ ಕೋರುತ್ತೇನೆ.

***



(Release ID: 1632302) Visitor Counter : 244