ರೈಲ್ವೇ ಸಚಿವಾಲಯ

ಭಾರತೀಯ ರೈಲ್ವೆಯಿಂದ ಐದು ರಾಜ್ಯಗಳಿಗೆ 960 ಕೋವಿಡ್ ಆರೈಕೆ ಬೋಗಿಗಳ ನಿಯೋಜನೆ

Posted On: 17 JUN 2020 5:45PM by PIB Bengaluru

ಭಾರತೀಯ ರೈಲ್ವೆಯಿಂದ ಐದು ರಾಜ್ಯಗಳಿಗೆ 960 ಕೋವಿಡ್ ಆರೈಕೆ ಬೋಗಿಗಳ ನಿಯೋಜನೆ; ದೆಹಲಿಯ 9 ಜಾಗಗಳಿಗೆ 503 ಬೋಗಿಗಳ ನಿಯೋಜನೆ

ರಾಷ್ಟ್ರೀಯ ಹಿತಾಸಕ್ತಿ ಕಾರಣಕ್ಕೆ ಭಾರತೀಯ ರೈಲ್ವೆ ತನ್ನ ರೈಲ್ವೆ ಬೋಗಿಗಳನ್ನು ಕೋವಿಡ್ ಆರೈಕೆ ಕೇಂದ್ರಗಳನ್ನಾಗಿ ಪರಿವರ್ತಿಸುವ ಮೂಲಕ ಮಹತ್ವದ ಕೊಡುಗೆ

ಎಂಒಎಚ್ಎಫ್ ಡಬ್ಲ್ಯೂ 2020 ಮೇ 6ರಂದು ಹೊರಡಿಸಿರುವ ಎಸ್ಒಪಿ ಮಾರ್ಗಸೂಚಿ ಅನ್ವಯ ರಾಜ್ಯ ಸರ್ಕಾರಗಳಿಂದ ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಯ ನಿಯೋಜನೆ

ಬೋಗಿಗಳು ನಿಯೋಜಿಸಿರುವ ಜಾಗಗಳಿಗೆ ರಾಜ್ಯ ಸರ್ಕಾರಿ ಅಧಿಕಾರಿಗಳೊಂದಿಗೆ ಸಮನ್ವಯ ನಡೆಸಲು ಪ್ರತಿ ಜಾಗಕ್ಕೂ ಇಬ್ಬರು ಅಧಿಕಾರಿಗಳ ನಿಯೋಜನೆ

ಹವಾಗುಣವನ್ನು ಆಧರಿಸಿ ಬೋಗಿಗಳೊಳಗೆ ಸೂಕ್ತ ಉಷ್ಣಾಂಶ ಕಾಯ್ದುಕೊಳ್ಳಲು ಎಲ್ಲಾ ಪ್ರಯತ್ನ

ಕೋವಿಡ್ ರೋಗಿಗಳ ಆರೈಕೆಗೆ ರಾಜ್ಯ ಸರ್ಕಾರಗಳಿಗೆ ಸಾಧ್ಯವಾದ ಎಲ್ಲ ರೀತಿಯ ಸಹಕಾರ ನೀಡಲಿರುವ ರೈಲ್ವೆ

 

ಕೋವಿಡ್-19 ವಿರುದ್ಧದ ಸಮರದಲ್ಲಿ ಸುಸ್ಥಿರತೆಯನ್ನು ಕಾಯ್ದುಕೊಳ್ಳಲು ಭಾರತೀಯ ರೈಲ್ವೆ, ರಾಜ್ಯ ಸರ್ಕಾರಗಳ ಆರೋಗ್ಯ ರಕ್ಷಣಾ ಪ್ರಯತ್ನಗಳಿಗೆ ಪೂರಕವಾಗಿ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ. ಭಾರತೀಯ ರೈಲ್ವೆ ತನ್ನ 5231 ಕೋವಿಡ್ ಆರೈಕೆ ಬೋಗಿಗಳನ್ನು ರಾಜ್ಯ ಸರ್ಕಾರಗಳಿಗೆ ನೀಡಲು ಸಜ್ಜಾಗಿದೆ. ವಲಯ ರೈಲ್ವೆಗಳು ಬೋಗಿಗಳನ್ನು ಅಲ್ಪ ಪ್ರಮಾಣದ ಸೋಂಕಿರುವ ಕೋವಿಡ್ ರೋಗಿಗಳ ಆರೈಕೆಗಾಗಿ ಕೋವಿಡ್ ಆರೈಕೆ ಕೇಂದ್ರಗಳನ್ನಾಗಿ ಪರಿವರ್ತಿಸಿದೆ.

ಸದ್ಯ ಭಾರತೀಯ ರೈಲ್ವೆ, ಐದು ರಾಜ್ಯಗಳಿಗೆ ಒಟ್ಟು 960 ಕೋವಿಡ್ ಆರೈಕೆ ಬೋಗಿಗಳನ್ನು ನಿಯೋಜಿಸಿದೆ. ಅವುಗಳೆಂದರೆ ದೆಹಲಿ, ಉತ್ತರಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಧ್ಯಪ್ರದೇಶ. ಒಟ್ಟು 960 ಕೋವಿಡ್ ಆರೈಕೆ ಬೋಗಿಗಳ ಪೈಕಿ 503 ಕೋವಿಡ್ ಆರೈಕೆ ಬೋಗಿಗಳನ್ನು ದೆಹಲಿಗೆ, ಆಂಧ್ರಪ್ರದೇಶಕ್ಕೆ 20, ತೆಲಂಗಾಣಕ್ಕೆ 60, ಉತ್ತರಪ್ರದೇಶಕ್ಕೆ 372, ಮಧ್ಯಪ್ರದೇಶಕ್ಕೆ 5 ಬೋಗಿಗಳನ್ನು ನಿಯೋಜಿಸಲಾಗಿದೆ.

ದೆಹಲಿಯಲ್ಲಿ 503 ಕೋವಿಡ್ ಆರೈಕೆ ಬೋಗಿಗಳನ್ನು 9 ಸ್ಥಳಗಳಿಗೆ ನಿಯೋಜಿಸಲಾಗಿದೆ. 50 ಕೋವಿಡ್ ಆರೈಕೆ ಬೋಗಿಗಳನ್ನು ಶಾಖುರ್ ಬಸ್ತಿಗೆ ನಿಯೋಜಿಸಲಾಗಿದ್ದು, 267ಅನ್ನು ಆನಂದ್ ವಿಹಾರ್, 21ಅನ್ನು ದೆಹಲಿ ಸಫ್ದಾರ್ ಜಂಗ್, 50ಅನ್ನು ದೆಹಲಿ ಸರೈ ರೋಹಿಲಾ, 33ಅನ್ನು ದೆಹಲಿ ಕಂಟೋನ್ ಮೆಂಟ್, 30ಅನ್ನು ಆದರ್ಶನಗರ, 13ಅನ್ನು ದೆಹಲಿ ಶಹಾದ್ರ, 13ಅನ್ನು ತುಘಲಕಾಬಾದ್ ಮತ್ತು 26ಅನ್ನು ಪಟೇಲ್ ನಗರಕ್ಕೆ ನಿಯೋಜಿಸಲಾಗಿದೆ.

ಉತ್ತರ ಪ್ರದೇಶಕ್ಕೆ 23 ನಾನಾ ಸ್ಥಳಗಳಿಗೆ ಒಟ್ಟು 372 ಕೋವಿಡ್ ಆರೈಕೆ ಬೋಗಿಗಳನ್ನು ನಿಯೋಜಿಸಲಾಗಿದೆ. ಸ್ಥಳಗಳೆಂದರೆ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್, ಲಖನೌ, ವಾರಾಣಸಿ, ಭದೋಹಿ, ಫೈಜಾಬಾದ್, ಶಹರಾನ್ ಪುರ್, ಮಿರ್ಜಾಪುರ್, ಸುಬೆದಾರ್ ಗಂಜ್, ಕಾನ್ಪುರ್, ಝಾನ್ಸಿ, ಝಾನ್ಸಿ ವರ್ಕ್ ಶಾಪ್, ಆಗ್ರಾ, ನಾಖ ಜಂಗಲ್, ಗೋಂಡಾ, ನೌತಾನ್ವ, ಬಹರೈಚ್, ವಾರಾಣಸಿ ನಗರ, ಮಂದುದಿಹ್, ಮೌ, ಭಾಟ್ನಿ, ಬರೇಲಿ ನಗರ, ಫರೂಖಾಬಾದ್ ಮತ್ತು ಕಾಸ್ ಗಂಜ್.

ಮಧ್ಯಪ್ರದೇಶಕ್ಕೆ ಒಟ್ಟು 5 ಕೋವಿಡ್ ಆರೈಕೆ ಬೋಗಿಗಳನ್ನು ಗ್ವಾಲಿಯರ್ ನಲ್ಲಿ ನಿಯೋಜಿಸಲಾಗಿದೆ. ಆಂಧ್ರಪ್ರದೇಶಕ್ಕೆ ಒಟ್ಟು 20 ಕೋವಿಡ್ ಆರೈಗೆ ಬೋಗಿಗಳನ್ನು ವಿಜಯವಾಡದಲ್ಲಿ ನಿಯೋಜಿಸಲಾಗಿದೆ. ತೆಲಂಗಾಣಗೆ 60 ಕೋವಿಡ್ ಆರೈಕೆ ಬೋಗಿಗಳನ್ನು ಮೂರು ಜಾಗಗಳಾದ ಸಿಕಂದರಾಬಾದ್, ಕಾಚಿಗುಡ ಮತ್ತು ಅಡಿಲಾಬಾದ್ ಗೆ ನಿಯೋಜಿಸಲಾಗಿದೆ.

ಭಾರತ ಸರ್ಕಾರದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (ಎಂಒಎಚ್ಎಫ್ ಡಬ್ಲ್ಯೂ) ಮಾರ್ಗಸೂಚಿ ಅನ್ವಯ ರಾಜ್ಯಗಳು ಭಾರತೀಯ ರೈಲ್ವೆಗೆ ತಮ್ಮ ಮನವಿಗಳನ್ನು ಸಲ್ಲಿಸಬೇಕು. ನಂತರ ರೈಲ್ವೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಬೋಗಿಗಳನ್ನು ಹಂಚಿಕೆ ಮಾಡಲಿದೆ.

ಭಾರತೀಯ ರೈಲ್ವೆ, ರಾಷ್ಟ್ರೀಯ ಉದ್ದೇಶಕ್ಕಾಗಿ ತನ್ನ ಸೇವಾ ಬೋಗಿಗಳನ್ನು ಕೋವಿಡ್ ಆರೈಕೆ ಕೇಂದ್ರಗಳನ್ನಾಗಿ ಪರಿವರ್ತಿಸಿರುವುದನ್ನು ಇಲ್ಲಿ ಉಲ್ಲೇಖಿಸಲೇಬೇಕಾಗಿದೆ. ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಯನ್ನು ರಾಜ್ಯ ಸರ್ಕಾರಗಳು ಒದಗಿಸಬೇಕು. ಕುರಿತಂತೆ 2020 ಮೇ 6ರಂದು ಎಂಒಎಚ್ಎಫ್ ಡಬ್ಲ್ಯೂ ಮಾರ್ಗಸೂಚಿಗಳನ್ನು ಹೊರಡಿಸಿದೆ.

ರಾಜ್ಯ ಸರ್ಕಾರದ ಅಧಿಕಾರಿಗಳಿಗೆ ನೆರವು ನೀಡಲು ತಾನು ಕೋಚ್ ಗಳನ್ನು ನಿಯೋಜಿಸಿರುವ ಪ್ರತಿ ಜಾಗಗಳಿಗೂ ಇಬ್ಬರು ಸಮನ್ವಯಾಧಿಕಾರಿಗಳನ್ನು ರೈಲ್ವೆ ನಿಯೋಜಿಸಲಿದೆ. ಪ್ರಸಕ್ತ ಹವಾಮಾನದಲ್ಲಿ ಬೋಗಿಗಳೊಳಗೆ ತಾಪಮಾನ ಏರಿಕೆಯಾಗದಂತೆ ತಡೆಯಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕೋವಿಡ್ ರೋಗಿಗಳಿಗೆ ಆರೈಕೆ ನೀಡಲು ರೈಲ್ವೆ ಸಾಧ್ಯವಾದ ಎಲ್ಲಾ ವಿಧದಲ್ಲೂ ರಾಜ್ಯ ಸರ್ಕಾರಗಳಿಗೆ ಸಹಾಯ ನೀಡುತ್ತಿದೆ.

ಎಂಒಎಚ್ಎಫ್ ಡಬ್ಲ್ಯೂ ಹೊರಡಿಸಿರುವ ಮಾರ್ಗಸೂಚಿಯಂತೆ ಅತಿ ಕಡಿಮೆ ಪ್ರಮಾಣದ ಸೋಂಕಿರುವ ಕ್ಲಿನಿಕ್ ಗಳಲ್ಲಿ ಇಡಬಹುದಾದ ರೋಗಿಗಳಿಗಾಗಿ ಕೋವಿಡ್ ಆರೈಕೆ ಕೇಂದ್ರಗಳನ್ನಾಗಿ ರೈಲ್ವೆ ಬೋಗಿಗಳನ್ನು ಸಿದ್ಧಪಡಿಸಲಾಗಿದೆ. ಬೋಗಿಗಳನ್ನು ಯಾವ ರಾಜ್ಯಗಳಲ್ಲಿ ಸೌಕರ್ಯಗಳು ಲಭ್ಯವಿರುವುದಿಲ್ಲವೋ ಮತ್ತು ಎಲ್ಲಿ ಶಂಕಿತ ಮತ್ತು ಖಚಿತಪಟ್ಟ ಕೋವಿಡ್ ಪ್ರಕರಣಗಳಿಗೆ ಐಸೋಲೇಷನ್ ಸಾಮರ್ಥ್ಯ ವೃದ್ಧಿಸುವ ಅಗತ್ಯವಿದೆಯೋ ಅಂತಹ ಕಡೆ ಬಳಕೆ ಮಾಡಬಹುದಾಗಿದೆ. ಸೌಕರ್ಯ ಎಂಒಎಚ್ಎಫ್ ಡಬ್ಲ್ಯೂ ಮತ್ತು ನೀತಿ ಆಯೋಗ ಅಭಿವೃದ್ಧಿಪಡಿಸಿರುವ ಸಮಗ್ರ ಕೋವಿಡ್ ಯೋಜನೆಯ ಭಾಗವಾಗಿದೆ.

***


(Release ID: 1632262) Visitor Counter : 174