ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಕೇಂದ್ರ ಕ್ರೀಡಾ ಸಚಿವಾಲಯವದಿಂದ ಖೇಲೋ ಇಂಡಿಯಾ ರಾಜ್ಯ ಉತ್ಕೃಷ್ಟತಾ ಕೇಂದ್ರಗಳ ಸ್ಥಾಪನೆ

Posted On: 17 JUN 2020 11:06AM by PIB Bengaluru

ಕೇಂದ್ರ ಕ್ರೀಡಾ ಸಚಿವಾಲಯವದಿಂದ ಖೇಲೋ ಇಂಡಿಯಾ ರಾಜ್ಯ ಉತ್ಕೃಷ್ಟತಾ ಕೇಂದ್ರಗಳ ಸ್ಥಾಪನೆ:

ಕೇಂದ್ರ ಯುವಜನ ಮತ್ತು ಕ್ರೀಡಾ ಸಚಿವ ಶ್ರೀ ಕಿರೆನ್ ರಿಜಿಜು

ಮೊದಲ ಹಂತದಲ್ಲಿ ಎಂಟು ರಾಜ್ಯಗಳಲ್ಲಿ ಸರ್ಕಾರಿ ಸ್ವಾಮ್ಯದ ಕ್ರೀಡಾ ಸೌಲಭ್ಯಗಳನ್ನು ಗುರುತಿಸಿದೆ

 

ಕೇಂದ್ರ ಕ್ರೀಡಾ ಸಚಿವಾಲಯದ ಪ್ರಮುಖ ಖೇಲೋ ಇಂಡಿಯಾ ಯೋಜನೆಯಡಿಯಲ್ಲಿ ಖೇಲೋ ಇಂಡಿಯಾ ರಾಜ್ಯ ಉತ್ಕೃಷ್ಟತಾ ಕೇಂದ್ರ (ಖೇಲೋ ಇಂಡಿಯಾ ಸ್ಟೇಟ್ ಸೆಂಟರ್ಸ್ ಆಫ್ ಎಕ್ಸಲೆನ್ಸ್ - ಕೆ..ಎಸ್.ಸಿ.)ಗಳನ್ನು ಕೇಂದ್ರ ಕ್ರೀಡಾ ಸಚಿವಾಲಯ ಸ್ಥಾಪಿಸಲಿದೆ. ಇಡೀ ರಾಜ್ಯದಲ್ಲಿ ದೃಢವಾದ ಕ್ರೀಡಾ ಪರಿಸರ ವ್ಯವಸ್ಥೆಯನ್ನು ರಚಿಸುವ ಪ್ರಯತ್ನದಿಂದ ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಒಂದು ಖೇಲೋ ಇಂಡಿಯಾ ರಾಜ್ಯ ಉತ್ಕೃಷ್ಟತಾ ಕೇಂದ್ರವನ್ನು ಸ್ಥಾಪಿಸಲು ಜಾಗಗಳನ್ನು ಗುರುತಿಸಲಾಗುತ್ತಿದೆ. ಮೊದಲ ಹಂತದಲ್ಲಿ, ಕರ್ನಾಟಕ, ಒಡಿಶಾ, ಕೇರಳ, ತೆಲಂಗಾಣ ಮತ್ತು ಈಶಾನ್ಯ ಪ್ರದೇಶಗಳ ರಾಜ್ಯಗಳಾದ ಅರುಣಾಚಲ ಪ್ರದೇಶ, ಮಣಿಪುರ, ಮಿಜೋರಾಂ ಮತ್ತು ನಾಗಾಲ್ಯಾಂಡ್ ಸೇರಿದಂತೆ ಭಾರತದ ಒಟ್ಟು ಎಂಟು ರಾಜ್ಯಗಳಲ್ಲಿ ಖೇಲೋ ಇಂಡಿಯಾ ರಾಜ್ಯ ಉತ್ಕೃಷ್ಟತಾ ಕೇಂದ್ರ (ಖೇಲೋ ಇಂಡಿಯಾ ಸ್ಟೇಟ್ ಸೆಂಟರ್ಸ್ ಆಫ್ ಎಕ್ಸಲೆನ್ಸ್ ಕೆ..ಎಸ್.ಸಿ.) ಸ್ಥಾಪಿಸಲು ಸರ್ಕಾರಿ ಸ್ವಾಮ್ಯದ ಕ್ರೀಡಾ ಸೌಲಭ್ಯಗಳನ್ನು ಸಚಿವಾಲಯ ಈಗಾಗಲೇ ಗುರುತಿಸಿದೆ.

ರಾಜ್ಯಗಳಲ್ಲಿ ಕ್ರೀಡಾ ಸೌಲಭ್ಯಗಳನ್ನು ಬಲಪಡಿಸುವ ನಿಟ್ಟಿನಲ್ಲಿ ನೂತನ ಉಪಕ್ರಮದ ಕುರಿತು ಮಾತನಾಡಿದ ಕೇಂದ್ರ ಯುವಜನ ಮತ್ತು ಕ್ರೀಡಾ ಸಚಿವ ಶ್ರೀ ಕಿರೆನ್ ರಿಜಿಜು, “ಒಲಿಂಪಿಕ್ಸ್ನಲ್ಲಿ ಶ್ರೇಷ್ಠತೆಗಾಗಿ ಭಾರತದ ಅನ್ವೇಷಣೆಯನ್ನು ಬಲಪಡಿಸಲು ಖೇಲೋ ಇಂಡಿಯಾ ರಾಜ್ಯ ಉತ್ಕೃಷ್ಟತಾ ಕೇಂದ್ರ (ಖೇಲೋ ಇಂಡಿಯಾ ಸ್ಟೇಟ್ ಸೆಂಟರ್ಸ್ ಆಫ್ ಎಕ್ಸಲೆನ್ಸ್ - ಕೆ..ಎಸ್.ಸಿ.) ಸ್ಥಾಪಿಸಲಾಗುತ್ತಿದೆ. ಭಾರತದ ಪ್ರತಿ ರಾಜ್ಯದಲ್ಲಿ ಲಭ್ಯವಿರುವ ಅತ್ಯುತ್ತಮ ಕ್ರೀಡಾ ಸೌಲಭ್ಯಗಳನ್ನು ವಿಶ್ವ ದರ್ಜೆಯ ಅಕಾಡೆಮಿಗಳಾಗಿ ಅಳೆಯುವುದು ನಮ್ಮ ಪ್ರಯತ್ನ, ಅಲ್ಲಿ ದೇಶಾದ್ಯಂತದ ಕ್ರೀಡಾಪಟುಗಳು ತಮ್ಮ ನಿರ್ದಿಷ್ಟ ವಿಭಾಗದಲ್ಲಿ ತರಬೇತಿ ನೀಡಲು ಬಯಸುತ್ತಾರೆ. ಸರ್ಕಾರಿ ಸಮಿತಿಯ ಆಳವಾದ ಪರಿಶೀಲನೆ ಮತ್ತು ವಿಶ್ಲೇಷಣೆಯ ನಂತರ ಕ್ರೀಡಾ ಸೌಲಭ್ಯಗಳನ್ನು ಗುರುತಿಸಲಾಗಿದೆ. ದೇಶಾದ್ಯಂತದ ಪ್ರತಿಭೆಗಳನ್ನು ಗುರುತಿಸಲು, ತಲುಪಲು ಮತ್ತು ಎಲ್ಲಾ ಪ್ರಮುಖ ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಮತ್ತು ನಿರ್ದಿಷ್ಟವಾಗಿ ಒಲಿಂಪಿಕ್ಸ್ನಲ್ಲಿ ದೇಶಕ್ಕಾಗಿ ಪದಕಗಳನ್ನು ಗೆಲ್ಲಬಲ್ಲ ಗಣ್ಯ ಕ್ರೀಡಾಪಟುಗಳಿಗೆ ಸೂಕ್ತ ತರಬೇತಿ ನೀಡಲು ಇದು ಸರಿಯಾದ ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಿದೆ ಎಂದು ನನಗೆ ವಿಶ್ವಾಸವಿದೆ.ಎಂದು ಹೇಳಿದರು

ಕ್ರೀಡಾ ಸೌಲಭ್ಯಗಳ ಆಯ್ಕೆಯ ಪ್ರಕ್ರಿಯೆಯನ್ನು 2019 ಅಕ್ಟೋಬರ್ನಲ್ಲಿ ಪ್ರಾರಂಭಿಸಲಾಯಿತು, ವಿಶ್ವ ದರ್ಜೆಯ ಕ್ರೀಡಾ ಸೌಲಭ್ಯಗಳಾಗಿ ಅಭಿವೃದ್ಧಿಪಡಿಸಲು ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಲಭ್ಯವಿರುವ ಅತ್ಯುತ್ತಮ ಕ್ರೀಡಾ ಮೂಲಸೌಕರ್ಯಗಳನ್ನು ಗುರುತಿಸಲು ಕೇಳಿದಾಗ, ಅವರ ಕ್ರೀಡಾ ಇಲಾಖೆ, ಏಜೆನ್ಸಿಗಳು ಅಥವಾ ಯಾವುದೇ ಅರ್ಹ ಏಜೆನ್ಸಿಗಳನ್ನು ಅವರು ಸೂಚಿಸಲು ತಿಳಿಸಲಾಗಿದೆ. ಈಗಾಗಲೇ ಸ್ವೀಕರಿಸಿದ ಮತ್ತು ಪರಿಶೀಲಿಸಿದ 15 ಪ್ರಸ್ತಾವನೆಗಳ ಪೈಕಿ 8 ಆದ್ಯತೆಯ ಕ್ರೀಡೆ, ಮೂಲಸೌಕರ್ಯ ಸೌಲಭ್ಯಗಳು ಮತ್ತು ಕೇಂದ್ರವು ಸೃಷ್ಠಿಸ ಬಹುದಾದ ಕ್ರೀಡಾ ಚಾಂಪಿಯನ್ನಲ್ಲಿ ಲಭ್ಯವಿರುವ ತರಬೇತಿ ಸೌಲಭ್ಯಗಳ ಆಧಾರದ ಮೇಲೆ ಅಂತಿಮ ಪಟ್ಟಿ ಮಾಡಲಾಗಿದೆ.

ಅಸ್ತಿತ್ವದಲ್ಲಿರುವ ಕೇಂದ್ರವನ್ನು ಖೇಲೋ ಇಂಡಿಯಾ ರಾಜ್ಯ ಉತ್ಕೃಷ್ಟತಾ ಕೇಂದ್ರ (ಖೇಲೋ ಇಂಡಿಯಾ ಸ್ಟೇಟ್ ಸೆಂಟರ್ಸ್ ಆಫ್ ಎಕ್ಸಲೆನ್ಸ್ - ಕೆ..ಎಸ್.ಸಿ.) ಕ್ಕೆ ಉನ್ನತೀಕರಣ ಮಾಡಲು, ಕೇಂದ್ರದಲ್ಲಿ ಅಭ್ಯಾಸ ಮಾಡುವ ಕ್ರೀಡಾ ವಿಭಾಗಗಳಿಗೆ ಕೇಂದ್ರ ಕ್ರೀಡಾ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗಳ ಬೆಂಬಲದಲ್ಲಿ ಸರ್ಕಾರವು 'ಕಾರ್ಯಸಾಧ್ಯತೆಯ ಅಂತರ ನಿಧಿಯನ್ನು' ಹೆಚ್ಚಿಸಿ, ಸಮಯಾವಕಾಶವನ್ನು ವಿಸ್ತರಿಸಲಿದೆ ಮತ್ತು ಕ್ರೀಡಾ ಉಪಕರಣಗಳು, ತಜ್ಞ ತರಬೇತುದಾರರು ಮತ್ತು ಹೆಚ್ಚಿನ ಕಾರ್ಯಕ್ಷಮತೆಯ ಅಗತ್ಯತೆಯ ಮತ್ತು ಕೊರತೆಗಳ ಅಂತರವನ್ನು ಕಡಿಮೆ ಮಾಡಲಿದೆ. ಕ್ರೀಡಾ ವಿಜ್ಞಾನ ಮತ್ತು ಕೇಂದ್ರದಲ್ಲಿ ನಡೆಯುತ್ತಿರುವ ಇತರ ಕ್ರೀಡಾ ವಿಭಾಗಗಳಲ್ಲಿ ಸಂಬಂಧಿತ ಕ್ಷೇತ್ರಗಳಲ್ಲಿ ಬೆಂಬಲವನ್ನು ವಿಸ್ತರಿಸಬಹುದು ಮತ್ತು ಒಲಿಂಪಿಕ್ ಕ್ರೀಡೆಗಳಿಗೆ ಸದಾ ವಿಸ್ತೃತ ಬೆಂಬಲ ನೀಡುತ್ತದೆ.

ರಾಜ್ಯ ಮತ್ತು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಶ್ವ ದರ್ಜೆಯ ಕ್ರೀಡಾ ಸೌಲಭ್ಯವನ್ನಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ನಿರ್ಮಿಸುತ್ತದೆ ಮತ್ತು ಬೋರ್ಡಿಂಗ್, ವಸತಿ ಮತ್ತು ನಿರ್ವಹಣೆ ಸೇರಿದಂತೆ ಕೇಂದ್ರದ ನಿರ್ವಹಣೆಯ ಎಲ್ಲಾ ಅಂಶಗಳಿಗೆ ಸರ್ಕಾರ ಜವಾಬ್ದಾರರಾಗಿರುತ್ತದೆ, ಆದರೆ ತಜ್ಞರಂತಹ ನಿರ್ಣಾಯಕ ಸಂಪನ್ಮೂಲಗಳು, ತರಬೇತುದಾರರು, ಸಹಾಯಕ ಸಿಬ್ಬಂದಿ, ಉಪಕರಣಗಳು, ಮೂಲಸೌಕರ್ಯಗಳನ್ನು ಹೆಚ್ಚಿಸಲು ಖೇಲೋ ಇಂಡಿಯಾ ಯೋಜನೆಯ ಮೂಲಕ ಹಣದ ವ್ಯವಸ್ಥೆಗಳನ್ನು ಹೆಚ್ಚಿಸಿ ವಿಸ್ತರಿಸಲಾಗುವುದು.

ಸಮಗ್ರ ವಿಶ್ಲೇಷಣೆ ಅಧ್ಯಯನದ ನಂತರ ಸೂಚಿಸಲಾದ ಅವಶ್ಯಕತೆಗೆ ಅನುಗುಣವಾಗಿ ಅಂತಿಮ ಮೊತ್ತವನ್ನು ಆಧರಿಸಿ ಎಂಟು ಕೇಂದ್ರಗಳಿಗೆ ಅನುದಾನ ನೀಡಲಾಗುವುದು. ವಿಶಾಲ-ಮೂಲ ಪ್ರತಿಭೆಗಳನ್ನು ಗುರುತಿಸುವ ಪ್ರಯತ್ನದಲ್ಲಿ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪ್ರತಿ ಕ್ರೀಡೆಯಲ್ಲಿ ಪ್ರತಿಭೆಯನ್ನು ಗುರುತಿಸಿ ಅಭಿವೃದ್ಧಿಪಡಿಸುತ್ತವೆ, ಇದಕ್ಕಾಗಿ ಕೇಂದ್ರದ ಹಣವನ್ನು ಪಡೆಯಲಾಗುತ್ತದೆ. ಕ್ರೀಡಾಪಟುಗಳ ಸಾಧನೆಯ ಮಟ್ಟವು ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ಸುಧಾರಿಸುತ್ತದೆ ಎಂದು ಖಚಿತಪಡಿಸಿಕೊಳ್ಳಲು ಭಾರತದ ಕ್ರೀಡಾ ಪ್ರಾಧಿಕಾರವು ಪರಿಣತಿ, ಸಂಪನ್ಮೂಲಗಳು ಮತ್ತು ಮೇಲ್ವಿಚಾರಣಾ ವ್ಯವಸ್ಥೆಯನ್ನು ಹೆಚ್ಚಿಸಿ ವಿಸ್ತರಿಸಲಿದೆ.

ಮೊದಲ ತಂಡದಲ್ಲಿ, ಕೆಳಗಿನ ಕ್ರೀಡಾ ಸೌಲಭ್ಯಗಳನ್ನು ಖೇಲೋ ಇಂಡಿಯಾ ರಾಜ್ಯ ಉತ್ಕೃಷ್ಟತಾ ಕೇಂದ್ರ (ಖೇಲೋ ಇಂಡಿಯಾ ಸ್ಟೇಟ್ ಸೆಂಟರ್ಸ್ ಆಫ್ ಎಕ್ಸಲೆನ್ಸ್ - ಕೆ..ಎಸ್.ಸಿ.)ಕ್ಕೆ ನವೀಕರಿಸಲಾಗುತ್ತದೆ:

· ಸಾಂಗೇ ಲಾಡೆನ್ ಸ್ಪೋರ್ಟ್ಸ್ ಅಕಾಡೆಮಿ, ಇಟಾನಗರ್, ಅರುಣಾಚಲ ಪ್ರದೇಶ

· ಜೈಪ್ರಕಾಶ್ ನಾರಾಯಣ್ ರಾಷ್ಟ್ರೀಯ ಯುವ ಕೇಂದ್ರ, ಬೆಂಗಳೂರು, ಕರ್ನಾಟಕ

· ಜಿ.ವಿ.ರಾಜ ಸೀನಿಯರ್ ಸೆಕೆಂಡರಿ ಸ್ಪೋರ್ಟ್ಸ್ ಸ್ಕೂಲ್, ತಿರುವನಂತಪುರಂ, ಕೇರಳ

· ಖುಮನ್ ಲಂಪಕ್ ಕ್ರೀಡಾ ಸಂಕೀರ್ಣ, ಇಂಫಾಲ್, ಮಣಿಪುರ

· ರಾಜೀವ್ ಗಾಂಧಿ ಕ್ರೀಡಾಂಗಣ, ಐಜಾಲ್, ಮಿಜೋರಾಂ

· ರಾಜ್ಯ ಕ್ರೀಡಾ ಅಕಾಡೆಮಿ, ಐಜಿ ಕ್ರೀಡಾಂಗಣ, ಕೊಹಿಮಾ, ನಾಗಾಲ್ಯಾಂಡ್

· ಕಳಿಂಗ ಕ್ರೀಡಾಂಗಣ, ಭುವನೇಶ್ವರ, ಒಡಿಶಾ

· ಪ್ರಾದೇಶಿಕ ಕ್ರೀಡಾ ಶಾಲೆ, ಹಕಿಂಪೇಟ್, ತೆಲಂಗಾಣ.

***



(Release ID: 1632250) Visitor Counter : 219