ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ

ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ಅವರು “ಕೋವಿಡ್‌-19  ಸಾರ್ವಜನಿಕ ಕುಂದುಕೊರತೆಗಳ ಪರಿಹಾರ ಕುರಿತು ಪ್ರತಿಕ್ರಿಯೆ ಕರೆ ಸ್ವೀಕಾರ ಕೇಂದ್ರಗಳನ್ನು ಪ್ರಾರಂಭಿಸಿದರು ಮತ್ತು ನಾಗರಿಕರೊಂದಿಗೆ ನೇರ ಸಂವಹನ ನಡೆಸಿದರು”

Posted On: 15 JUN 2020 4:22PM by PIB Bengaluru

ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ಅವರು

ಕೋವಿಡ್‌-19  ಸಾರ್ವಜನಿಕ ಕುಂದುಕೊರತೆಗಳ ಪರಿಹಾರ ಕುರಿತು ಪ್ರತಿಕ್ರಿಯೆ ಕರೆ ಸ್ವೀಕಾರ ಕೇಂದ್ರಗಳನ್ನು ಪ್ರಾರಂಭಿಸಿದರು ಮತ್ತು ನಾಗರಿಕರೊಂದಿಗೆ ನೇರ ಸಂವಹನ ನಡೆಸಿದರು

ಕೋವಿಡ್‌-19 ಕುರಿತ 1 ಲಕ್ಷ  ಸಾರ್ವಜನಿಕ ಕುಂದುಕೊರತೆಗಳ ಪರಿಹಾರದ ಮೈಲಿಗಲ್ಲು ತಲುಪಿದ ಡಿ..ಆರ್.ಜಿ. ಗೆ ಅಭಿನಂದನೆಗಳು

 

ಕೇಂದ್ರ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳ ಪರಿಹಾರ ಮತ್ತು ಪಿಂಚಣಿ ಖಾತೆ ರಾಜ್ಯ ಸಚಿವ ಡಾ.ಜಿತೇಂದ್ರ ಸಿಂಗ್ ಅವರು ಸಾರ್ವಜನಿಕ ಕುಂದುಕೊರತೆಗಳ ಪರಿಹಾರ ಕುರಿತು ಪ್ರತಿಕ್ರಿಯೆ ಕರೆ ಸ್ವೀಕಾರ ಕೇಂದ್ರಗಳನ್ನುಪ್ರಾರಂಭಿಸಿದರು ಮತ್ತು ಕೋವಿಡ್-19 ಸಾರ್ವಜನಿಕ ಕುಂದುಕೊರತೆಗಳ ಪರಿಹಾರಗಳ ರಾಷ್ಟ್ರೀಯ ಪರಿವೀಕ್ಷಣಾ ಕೇಂದ್ರದಲ್ಲಿ ಯಶಸ್ವಿಯಾಗಿ ಪರಿಹರಿಸಲಾದ ನಾಗರಿಕರೊಂದಿಗೆ ನೇರ ಸಂವಹನ ನಡೆಸಿದರುಇಲ್ಲಿಯವರೆಗೆ ಒಂದು ಲಕ್ಷ ಕೋವಿಡ್ -19 ಸಾರ್ವಜನಿಕ ಕುಂದುಕೊರತೆಗಳನ್ನು ಪರಿಹರಿಸುವ ಮೈಲಿಗಲ್ಲು ತಲುಪಿದ ಬಗ್ಗೆ ಡಿ..ಆರ್.ಪಿ.ಜಿ.ಯನ್ನು ಡಾ.ಜಿತೇಂದ್ರ ಸಿಂಗ್ ಅವರು ಅಭಿನಂದಿಸಿದ್ದಾರೆ. "ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನಾಯಕತ್ವವು ಸಾಮಾನ್ಯ ಮನುಷ್ಯನ ಕುಂದುಕೊರತೆಗಳನ್ನು ಪರಿಹರಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡಲು ಸರ್ಕಾರವನ್ನು ಪ್ರೇರೇಪಿಸಿದೆ" ಎಂದು ಸಚಿವರು ಹೇಳಿದರು.

ಕೋವಿಡ್-19 ಸಮಯದಲ್ಲಿ ಕುಂದುಕೊರತೆಗಳನ್ನು ಸಲ್ಲಿಸಿದ ನಾಗರಿಕರೊಂದಿಗೆ ಸರ್ಕಾರದ ಹಿರಿಯ ಮಂತ್ರಿಯೊಬ್ಬರು ನೇರಪ್ರಸಾರ ನಡೆಸುತ್ತಿರುವುದು ಇದೇ ಮೊದಲು ಮತ್ತು ಇತರ ಸಚಿವಾಲಯಗಳು ನಾಗರಿಕರ ಕುಂದುಕೊರತೆಗಳನ್ನುಪರಿಹರಿಸುವ ನಿಟ್ಟಿನಲ್ಲಿ ಪರಿಣಾಮಕಾರಿಯಾದ ರೀತಿಯಲ್ಲಿ ತೆಗೆದುಕೊಳ್ಳಲು ಸಹಕಾರಿಯಾಗಿದೆ.

ಬಿ.ಎಸ್.ಎನ್.ಎಲ್. ಕಾರ್ಯಾಚರಣೆಯ ಫೀಡ್ ಬ್ಯಾಕ್ ಕಾಲ್ ಕೇಂದ್ರಗಳಸಹಯೋಗದೊಂದಿಗೆ ಭುವನೇಶ್ವರ, ಗುವಾಟಿ, ಜಮ್ಶೆಡ್ಪುರ, ವಡೋದರ, ಅಹಮದಾಬಾದ್, ಲಕ್ನೋ, ಅಜ್ಮೀರ್, ಗುಂಟೂರು, ಕೊಯಮತ್ತೂರು ಮತ್ತು ಗುಂಟಕಲ್ನಲ್ಲಿ ಡಿ..ಆರ್.ಪಿ.ಜಿ 1406 ಕಾಲ್ ಸೆಂಟರ್ ಆಪರೇಟರ್ಗಳೊಂದಿಗೆ  ಕೇಂದ್ರಗಳನ್ನು ಹೊಂದಿದೆ.

ದಿನಾಂಕ 30/3/2020 ರಿಂದ 30/5/2020 ರವರೆಗೆ ಸಿ.ಪಿ.ಜಿ.ಆರ್.‌ .ಎಂ.ಎಸ್.ನಲ್ಲಿ ಸಲ್ಲಿಸಲಾದ 1.28 ಲಕ್ಷ ಕೋವಿಡ್ -19 ಸಾರ್ವಜನಿಕ ಕುಂದುಕೊರತೆಗಳ ಬಗ್ಗೆ ನಾಗರಿಕರಿಂದ ಬರುವ ಪ್ರತಿಕ್ರಿಯೆ ಕರೆಗಳಿಗೆ ಕೇಂದ್ರಗಳ ಸ್ಪಂದನೆ ತೃಪ್ತಿಕರ ಆಗಿರುವ ಕುರಿತು ನಾಗರಿಕರಿಂದ ವೈಯಕ್ತಿಕವಾಗಿ ಉತ್ತಮ ಪ್ರತಿಕ್ರಿಯೆ ಬಂದಿದೆ. ಪ್ರತಿಕ್ರಿಯೆ ಪ್ರಶ್ನಾವಳಿಗಳ ಕುರಿತು ಕಾಲ್ ಸೆಂಟರ್ ಆಪರೇಟರ್ಗಳಿಗೆ ಹಿಂದಿ, ಇಂಗ್ಲಿಷ್, ಗುಜರಾತಿ, ಮರಾಠಿ, ಪಂಜಾಬಿ, ಕನ್ನಡ, ಕೊಂಕಣಿ, ಮಲಯಾಳಂ, ತಮಿಳು, ತೆಲುಗು, ಒರಿಯಾಬಂಗಾಳಿ, ಅಸ್ಸಾಮಿ ಮತ್ತು ರಾಜಸ್ಥಾನಿ ಭಾಷೆಗಳಲ್ಲಿ ನೀಡುವ ಅಗತ್ಯ ತರಬೇತಿಗಳು ಜೂನ್ 9-10, 2020 ರಂದು ಪೂರ್ಣಗೊಂಡಿವೆ.

ಸಂದರ್ಭದಲ್ಲಿ, ಕೋವಿಡ್-19 ರಾಷ್ಟ್ರೀಯಪರಿವೀಕ್ಷಣಾದಲ್ಲಿ 3 ದಿನಗಳ ಅವಧಿಯಲ್ಲಿ ಕಂದುಕೊರತೆಗಳನ್ನು ಕಂದುಕೊರತೆಗಳನ್ನು ಪರಿಹರಿಸಲಾದ 4 ನಾಗರಿಕರೊಂದಿಗೆ ಸಚಿವ ಡಾ. ಜಿತೇಂದ್ರ ಸಿಂಗ್ ಸಂವಹನ ನಡೆಸಿದರುಡಾ.ಜಿತೇಂದ್ರ ಸಿಂಗ್ ಅವರೊಂದಿಗೆ ಸಂವಹನ ನಡೆಸಿದ ನಾಗರಿಕರಲ್ಲಿ (1) ಕರ್ನಾಟಕದ ಬಿಜಾಪುರದ ನಿವಾಸಿ ಶ್ರೀಮತಿರೇಣುಕಾ ವಿ. ಪರಸಪ್ಪಾಗೋಳ್ ಅವರ ಕೆನರಾ ಬ್ಯಾಂಕಿನ ಮರುಪಾವತಿಯ ಕುಂದುಕೊರತೆಯನ್ನು ಹಣಕಾಸು ಸೇವೆಗಳ ಇಲಾಖೆಯಿಂದ ಪರಿಹರಿಸಲಾಗಿದೆ (2) ಗುಜರಾತ್ ವಡೋದರಾ ನಿವಾಸಿ ಶ್ರೀ ಗೋರ್ಧನ್ಭಾಯಿ ಜೆಥಾಭಾಯಿ ಪಟೇಲ್ ಅವರ ಪೋಸ್ಟ್ ಇಲಾಖೆಯ ಎಂ..ಎಸ್ ಹೂಡಿಕೆಯ ಮರುಪಾವತಿಯ ಕುಂದುಕೊರತೆಗಳನ್ನು ಪರಿಹರಿಸಲಾಗಿದೆ ( 3) ದೆಹಲಿಯ ಶ್ರೀ ಲಕ್ಷ್ಮೀನಾರಾಯಣನ್ ಅವರ ಮಗಳಿಗೆ ಎಚ್.ಸಿ.ಕ್ಯು. ಜೊತೆ ಚಿಕಿತ್ಸೆ ನೀಡಿದ್ದಕ್ಕಾಗಿ ಅವರ ಕುಂದುಕೊರತೆಗಳನ್ನು ಏಮ್ಸ್ ನಿಂದ ಪರಿಹರಿಸಲಾಗಿದೆ ಮತ್ತು (4) ತಮಿಳುನಾಡಿನ ಚೆನ್ನೈ ನಿವಾಸಿ ಶ್ರೀ ಮೃತಿಂಜಯನ್ ಅವರ ಮಾಸಿಕ ಕಂತು ಠೇವಣಿಗಳನ್ನು ಸ್ವೀಕರಿಸುವ ಕುಂದುಕೊರತೆಯನ್ನು ಅಂಚೆ ಇಲಾಖೆ ಅನುಮೋದಿಸಿ ಪರಿಹರಿಸಿದೆಸಚಿವರ ಟ್ವೀಟ್ಗಳು ಮತ್ತು ಹೇಳಿಕೆಗಳಿಂದ ಸಾರ್ವಜನಿಕ ಕುಂದುಕೊರತೆಗಳ ಕೋವಿಡ್-19 ರಾಷ್ಟ್ರೀಯ ಪರಿವೀಕ್ಷಣಾ ಬಗ್ಗೆ ನಾಗರಿಕರು ತಿಳಿದುಕೊಂಡಿದ್ದಾರೆ ಎಂದು ನಾಗರಿಕರು ಡಾ.ಜಿತೇಂದ್ರ ಸಿಂಗ್ ಅವರಿಗೆ ಸಂದರ್ಭದಲ್ಲಿ ಮಾಹಿತಿ ನೀಡಿದರು ಮತ್ತು ಅವರ ಕುಂದುಕೊರತೆಗಳನ್ನು ಸಕಾಲಿಕವಾಗಿ ಪರಿಹರಿಸಿದ್ದಕ್ಕಾಗಿ ನಾಗರಿಕರು ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು.

ಸಂದರ್ಭದಲ್ಲಿ ಮಾತನಾಡಿದ ಸಚಿವ ಡಾ.ಜಿತೇಂದ್ರ ಸಿಂಗ್, ಮೋದಿ 2.0 ರಲ್ಲಿ, ಸಿ.ಪಿ.ಜಿ.ಆರ್.‌ .ಎಂ.ಎಸ್. ಆಮೂಲಾಗ್ರ ಸುಧಾರಣೆಗಳು ಮತ್ತು ಪರಿವರ್ತನೆಯ ಆಡಳಿತ ಕಂಡಿದೆ. ಇದರ ಪರಿಣಾಮವಾಗಿ ಭಾರತದಲ್ಲಿ ಕುಂದುಕೊರತೆ ಪರಿಹಾರದ ಸಮಗ್ರ ಕೂಲಂಕಷ ಪರಿಶೀಲನೆ ನಡೆಯುತ್ತಿದೆ20 ಕುಂದುಕೊರತೆ ಸ್ವೀಕರಿಸುವ ನಿಟ್ಟಿನಲ್ಲಿ ಸಚಿವಾಲಯಗಳು/ ಇಲಾಖೆಗಳಲ್ಲಿ ಉತ್ತಮ ಸೇವೆ ಸಲ್ಲಿಸುವ ಕುಂದುಕೊರತೆ ಪರಿಹಾರದ ಅಧಿಕಾರಿಗಳು, ಸಿ.ಪಿ.ಜಿ.ಆರ್.‌ .ಎಂ.ಎಸ್ಸುಧಾರಣೆಗಳ ಅನುಷ್ಠಾನ, ಪ್ರತಿಕ್ರಿಯೆ ಕರೆ ಸ್ವೀಕಾರ ಕೇಂದ್ರಗಳೊಂದಿಗೆ ರಾಜ್ಯ / ಕೇಂದ್ರ ಪ್ರಾಂತ್ಯಗಳ ಕುಂದುಕೊರತೆ ಪೋರ್ಟಲ್ಗಳ ಏಕೀಕರಣಭಾರತದ ನಾಗರಿಕರನ್ನು ಸಬಲೀಕರಣಗೊಳಿಸಲು ಡಿಜಿಟಲ್ ಅವಕಾಶಗಳ ನೂತನ ಜಗತ್ತನ್ನು ಕೋವಿಡ್- 19 ಸಾಂಕ್ರಾಮಿಕವು ಸೃಷ್ಟಿಸಿದೆ ಮತ್ತು ಮುಂಬರುವ ದಿನಗಳಲ್ಲಿ ಬಿಕ್ಕಟ್ಟಿನ ನೇತೃತ್ವದ ಸುಧಾರಣೆಗಳನ್ನು ಡಿ..ಆರ್.‌ ಪಿ.ಜಿ ಉತ್ತಮವಾಗಿ ಬಳಸಿಕೊಳ್ಳಬೇಕು ಎಂದು ಸಚಿವರು ಹೇಳಿದರುಡಾ. ಜಿತೇಂದ್ರ ಸಿಂಗ್ ಅವರು, ಯಶಸ್ವಿಯಾಗಿ ಪರಿಹರಿಸಲ್ಪಟ್ಟ ಸಾರ್ವಜನಿಕ ಕುಂದುಕೊರತೆಗಳ ಕುರಿತು ಡಿ..ಆರ್.‌ ಪಿ.ಜಿ ಯಶಸ್ಸಿನ ಕಥಾ ಸಂಗ್ರಹವನ್ನು ತರಬೇಕು, ಇದು ನಾಗರಿಕರು ತಮ್ಮ ಸಮಸ್ಯೆಗಳಿಗೆ ಸರ್ಕಾರವು ಸರಿಯಾಗಿ ಸ್ಪಂದಿಸುತ್ತಿದೆ ಎಂಬ ವಿಶ್ವಾಸವನ್ನು ಪುನಃಸ್ಥಾಪಿಸಲು ಎಲ್ಲಾ ಕಡೆ ಪ್ರಸಾರವಾಗಬೇಕು ಎಂದು ಹೇಳಿದರು.

ಸಮಾರಂಭದಲ್ಲಿ ಡಾ.ಕೆ.ಶಿವಾಜಿ ಕಾರ್ಯದರ್ಶಿ, ಡಿ..ಆರ್.ಪಿ.ಜಿ, ವಿ.ಶ್ರೀನಿವಾಸ್, ಹೆಚ್ಚುವರಿ ಕಾರ್ಯದರ್ಶಿ ಡಿ..ಆರ್.ಪಿ.ಜಿ, ಶ್ರೀ ಪಿ.ಕೆ.ಪುರ್ವಾರ್, ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್.ಎನ್.ಎಲ್ಶ್ರೀಮತಿ ಜಯಾ ದುಬೆ ಜಂಟಿ ಕಾರ್ಯದರ್ಶಿ ಡಿಎಆರ್ಪಿಜಿ ಮತ್ತು ಏಮ್ಸ್, ಅಂಚೆ, ಡಿಎಆರ್ಪಿಜಿ ಮತ್ತು ಬಿಎಸ್ಎನ್ಎಲ್ನ ಮುಂತಾದ ಹಲವು ಇಲಾಖೆಗಳ ಹಿರಿಯ ಅಧಿಕಾರಿಗಳು, ಬಿಎಸ್ಎನ್ಎಲ್ನ 1500 ಕಾಲ್ ಸೆಂಟರ್ ನಿರ್ವಾಹಕರು ಮತ್ತು ಕುಂದುಕೊರತೆಗಳನ್ನು ಯಶಸ್ವಿಯಾಗಿ ಪರಿಹರಿಸಲ್ಪಟ್ಟ ನಾಗರಿಕರು ಭಾಗವಹಿಸಿದ್ದಾರೆ.

***


(Release ID: 1631858) Visitor Counter : 234