ಗೃಹ ವ್ಯವಹಾರಗಳ ಸಚಿವಾಲಯ
ಕೋವಿಡ್-19 ವ್ಯವಸ್ಥೆಗಳನ್ನು ಪರಿಶೀಲಿಸಲು ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರು ಲೋಕ ನಾಯಕ ಜಯ ಪ್ರಕಾಶ್ ನಾರಾಯಣ (ಎಲ್ ಎನ್ ಜೆ ಪಿ) ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡಿದರು
Posted On:
15 JUN 2020 6:59PM by PIB Bengaluru
ಕೋವಿಡ್-19 ವ್ಯವಸ್ಥೆಗಳನ್ನು ಪರಿಶೀಲಿಸಲು
ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರು ಲೋಕ ನಾಯಕ ಜಯ ಪ್ರಕಾಶ್ ನಾರಾಯಣ (ಎಲ್ ಎನ್ ಜೆ ಪಿ) ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡಿದರು
ಕೋವಿಡ್-19 ಕ್ಕೆ ಸಂಬಂಧಿಸಿದ ವ್ಯವಸ್ಥೆಗಳನ್ನು ಪರಿಶೀಲಿಸಲು ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರು ಲೋಕ ನಾಯಕ ಜಯ ಪ್ರಕಾಶ್ ನಾರಾಯಣ (ಎಲ್ ಎನ್ ಜೆ ಪಿ) ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡಿದರು. ಸೂಕ್ತ ನಿಗಾವಹಿಸಲು ಮತ್ತು ರೋಗಿಗಳ ಸಮಸ್ಯೆಗಳನ್ನು ಕೂಡಾ ನಿವಾರಿಸಲು ಅನುಕೂಲವಾಗುವಂತೆ ಪ್ರತಿಯೊಂದು ಕೊರೊನಾ ಆಸ್ಪತ್ರೆಯ ಪ್ರತಿ ವಾರ್ಡ್ ನಲ್ಲಿ ಸಿಸಿಟಿವಿ ಕ್ಯಾಮೇರಾಗಳನ್ನು ಅಳವಡಿಸುವಂತೆ ಶ್ರೀ ಅಮಿತ್ ಶಾ ದೆಹಲಿಯ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶಿಸಿದ್ದಾರೆ.
ಯಾವುದೇ ಒಂದು ಕ್ಯಾಂಟೀನ್ ಸೋಂಕು ಕಂಡುಬಂದರೂ, ರೋಗಿಗಳು ಯಾವುದೇ ಅಡೆತಡೆಯಿಲ್ಲದೆ ಆಹಾರ ಪಡೆಯುವುದನ್ನು ಮುಂದುವರಿಸಲು, ಆಹಾರ ಪೂರೈಕೆ ಕ್ಯಾಂಟೀನ್ ಗಳ ಬ್ಯಾಕ್ ಅಪ್ ವ್ಯವಸ್ಥೆ ಮಾಡುವಂತೆಯೂ ದೆಹಲಿಯ ಮುಖ್ಯ ಕಾರ್ಯದರ್ಶಿಗಳಿಗೆ ಕೇಂದ್ರ ಗೃಹ ಸಚಿವರು ನಿರ್ದೇಶಿಸಿದ್ದಾರೆ.
ಕೊರೊನಾ ರೋಗಿಗಳ ಚಿಕಿತ್ಸೆ ಮೂಲಕ ಮಾನವೀಯತೆಯ ಸೇವೆಯಲ್ಲಿ ತೊಡಗಿರುವ ವೈದ್ಯರು ಮತ್ತು ಸುಶ್ರೂಷಕಿಯರ ಮಾನಸಿಕ-ಸಾಮಾಜಿಕ ಆಪ್ತ ಸಮಾಲೋಚನೆ ಕೂಡ ಕೈಗೊಳ್ಳಬೇಕು ಎಂದು ಶ್ರೀ ಅಮಿತ್ ಶಾ ನಿರ್ದೇಶಿಸಿದ್ದಾರೆ. ಇದು ಅವರು ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಸಶಕ್ತರು ಎಂಬುದನ್ನು ಖಚಿತಪಡಿಸುತ್ತದೆ.
***
(Release ID: 1631854)
Visitor Counter : 251