ಗೃಹ ವ್ಯವಹಾರಗಳ ಸಚಿವಾಲಯ
ದೆಹಲಿಯಲ್ಲಿ ಕೋವಿಡ್-19 ಸ್ಥಿತಿಗತಿ ಕುರಿತು ಪರಾಮರ್ಶೆ
Posted On:
14 JUN 2020 8:05PM by PIB Bengaluru
ದೆಹಲಿಯಲ್ಲಿ ಕೋವಿಡ್-19 ಸ್ಥಿತಿಗತಿ ಕುರಿತು ಪರಾಮರ್ಶೆ
ಕೇಂದ್ರ ಗೃಹ ಸಚಿವ ಅಮಿತ್ ಷಾ ಅಧ್ಯಕ್ಷತೆಯ ಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವ . ಡಾ. ಹರ್ಷವರ್ಧನ್, ದೆಹಲಿ ಲೆಫ್ಟಿನೆಂಟ್ ಗೌರ್ನರ್ ಶ್ರೀ ಅನಿಲ್ ಬೈಜಾಲ್, ಮುಖ್ಯಮಂತ್ರಿ ಶ್ರೀ ಅರವಿಂದ ಕೇಜ್ರಿವಾಲ್, ದೆಹಲಿಯ ಮೂರು ಮಹಾನಗರ ಪಾಲಿಕೆಗಳ ಮೇಯರ್ ಮತ್ತು ಹಿರಿಯ ಅಧಿಕಾರಿಗಳು ಭಾಗಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಆದಷ್ಟು ಶೀಘ್ರ ರಾಷ್ಟ್ರವನ್ನು ಮತ್ತು ರಾಜಧಾನಿಯನ್ನು ಕೊರೊನಾ ಮುಕ್ತ, ಆರೋಗ್ಯಕರ ಮತ್ತು ಸಮೃದ್ಧಗೊಳಿಸಲು ಶ್ರೀ ಅಮಿತ್ ಷಾ ಕರೆ
ತಳಮಟ್ಟದಲ್ಲಿ ಮನೆ ಮನೇ ಸರ್ವೇ ನಡೆಸುವುದು, ಕೊರೊನಾ ಪರೀಕ್ಷೆ ನಡೆಸುವುದನ್ನು ಸೂಕ್ತ ರೀತಿಯಲ್ಲಿ ಅನುಷ್ಠಾನಗೊಳಿಸುವಂತೆ ಗೃಹ ಸಚಿವ ಅಮಿತ್ ಷಾ, ಕೇಂದ್ರ ಸರ್ಕಾರ, ದೆಹಲಿ ಸರ್ಕಾರ ಮತ್ತು ಎಲ್ಲಾ ಮೂರು ಮುನಿಸಿಪಲ್ ಕಾರ್ಪೊರೇಷನ್ ಗಳಿಗೆ ನಿರ್ದೇಶನ
ದೆಹಲಿಯ ಸರ್ಕಾರ ಎಲ್ಲಾ ಮೂರು ಮೇಯರ್ ಗಳು ಮತ್ತು ಎಂಸಿಡಿಗಳು ಒಟ್ಟಾಗಿ ಕೆಲಸ ಮಾಡಲು ಕೇಂದ್ರ ಗೃಹ ಸಚಿವರ ಕರೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಆದಷ್ಟು ಶೀಘ್ರ ಇಡೀ ದೇಶವನ್ನು ಮತ್ತು ರಾಷ್ಟ್ರದ ರಾಜಧಾನಿಯನ್ನು ಕೊರೊನಾ ಮುಕ್ತಗೊಳಿಸಲು, ಆರೋಗ್ಯಕರ ಮತ್ತು ಸಮೃದ್ಧಗೊಳಿಸಲು ಕ್ರಮ ಕೈಗೊಳ್ಳಬೇಕಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಕರೆ ನೀಡಿದರು. ಅವರು ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿನ ಕೋವಿಡ್-19 ಸ್ಥಿತಿಗತಿ ಕುರಿತು ಪರಾಮರ್ಶೆಗೆ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವ . ಡಾ. ಹರ್ಷವರ್ಧನ್, ದೆಹಲಿ ಲೆಫ್ಟಿನೆಂಟ್ ಗೌರ್ನರ್ ಶ್ರೀ ಅನಿಲ್ ಬೈಜಾಲ್, ಮುಖ್ಯಮಂತ್ರಿ ಶ್ರೀ ಅರವಿಂದ ಕೇಜ್ರಿವಾಲ್, ದೆಹಲಿಯ ಮೂರು ಮಹಾನಗರ ಪಾಲಿಕೆಗಳ ಮೇಯರ್ ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ತಳಮಟ್ಟದಲ್ಲಿ ಮನೆ ಮನೆ ಸಮೀಕ್ಷೆ, ಕೊರೊನಾ ಪರೀಕ್ಷೆ ಕುರಿತಂತೆ ಇಂದು ಬೆಳಗಿನ ಸಭೆಯಲ್ಲಿ ಕೈಗೊಂಡ ನಿರ್ಧಾರವನ್ನು ಸೂಕ್ತ ರೀತಿಯಲ್ಲಿ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ, ದೆಹಲಿ ಸರ್ಕಾರ ಹಾಗೂ ದೆಹಲಿಯ ಎಲ್ಲಾ ಮೂರು ಮಹಾನಗರ ಪಾಲಿಕೆಗಳು ಕಾರ್ಯೋನ್ಮುಖವಾಗಬೇಕು ಎಂದು ಕೇಂದ್ರ ಗೃಹ ಸಚಿವರು ಕರೆ ನೀಡಿದರು. ಈ ಸಭೆಯ ಮುಖ್ಯ ಉದ್ದೇಶವೆಂದರೆ ಪರಸ್ಪರ ಸಹಕಾರದೊಂದಿಗೆ ಕೊರೊನಾ ವಿರುದ್ಧದ ಸಮರದಲ್ಲಿ ಗೆಲುವು ಸಾಧಿಸುವುದಾಗಿದೆ ಎಂದು ಗೃಹ ಸಚಿವರು ಹೇಳಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಆದಷ್ಟು ಶೀಘ್ರವಾಗಿ ದೇಶವನ್ನು ಮತ್ತು ರಾಷ್ಟ್ರದ ರಾಜಧಾನಿಯನ್ನು ಕೊರೊನಾ ಮುಕ್ತಗೊಳಿಸಿ, ಆರೋಗ್ಯಕರ ಮತ್ತು ಸಮೃದ್ಧಗೊಳಿಸಲು ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಶ್ರೀ ಅಮಿತ್ ಷಾ ಹೇಳಿದರು. ಸಂಬಂಧಿಸಿದ ಎಲ್ಲಾ ಇಲಾಖೆಗಳು ಸಚಿವಾಲಯಗಳ ನಡುವೆ ಸಮನ್ವಯ ಮತ್ತು ಸಹಕಾರದಿಂದ ಮಾತ್ರ ಇದು ಸಾಧ್ಯ ಎಂದು ಹೇಳಿದರು. ಇಂದು ಬೆಳಗಿನ ಸಭೆಯಲ್ಲಿ ಕೈಗೊಂಡ ನಿರ್ಧಾರಗಳನ್ನು ಅನುಷ್ಠಾನಗೊಳಿಸಲು ದೆಹಲಿ ಸರ್ಕಾರ, ಎಲ್ಲಾ ಮೂವರು ಮೇಯರ್ ಗಳು ಮತ್ತು ಎಲ್ಲಾ ಮೂರು ಮಹಾನಗರ ಪಾಲಿಕೆಗಳು ಒಗ್ಗೂಡಿ ಕೆಲಸ ಮಾಡಬೇಕು ಎಂದು ಹೇಳಿದರು. ಎಲ್ಲ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕ್ರಮ ಕೈಗೊಳ್ಳುವಂತೆ ಗೃಹ ಸಚಿವರು ದೆಹಲಿ ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಿದರು.
***
(Release ID: 1631635)
Visitor Counter : 217