ರಕ್ಷಣಾ ಸಚಿವಾಲಯ

ಕೋವಿಡ್ -19 ಪರಿಸ್ಥಿತಿ ಹಿನ್ನೆಲೆ ದೇಶೀಯ ಉತ್ಪಾದಕರ ಬಂಡವಾಳ ಸ್ವಾಧೀನ ವಿತರಣೆಯನ್ನು ನಾಲ್ಕು ತಿಂಗಳವರೆಗೆ ವಿಸ್ತರಿಸಿದ ರಕ್ಷಣಾ ಸಚಿವಾಲಯ

प्रविष्टि तिथि: 12 JUN 2020 12:36PM by PIB Bengaluru

ಕೋವಿಡ್ -19 ಪರಿಸ್ಥಿತಿ ಹಿನ್ನೆಲೆ ದೇಶೀಯ ಉತ್ಪಾದಕರ ಬಂಡವಾಳ ಸ್ವಾಧೀನ ವಿತರಣೆಯನ್ನು ನಾಲ್ಕು ತಿಂಗಳವರೆಗೆ ವಿಸ್ತರಿಸಿದ ರಕ್ಷಣಾ ಸಚಿವಾಲಯ

 

ಕೋವಿಡ್ -19 ಸಾಂಕ್ರಾಮಿಕದಿಂದಾಗಿ ಪೂರೈಕೆ ಸರಪಳಿಯಲ್ಲಿ ಆಗಿರುವ ಅಡ್ಡಿಯ ಹಿನ್ನೆಲೆಯಲ್ಲಿ ರಕ್ಷಣಾ ಸಚಿವಾಲಯ (ಎಂ..ಡಿ.) ಭಾರತೀಯ ಮಾರಾಟಗಾರರುಗಳೊಂದಿಗಿನ ಎಲ್ಲ ಬಂಡವಾಳ ಸ್ವಾಧೀನ ಒಪ್ಪಂದಕ್ಕೆ ಸಂಬಂಧಿಸಿದಂತೆ ಪೂರೈಕೆಯ ಅವಧಿಯನ್ನು ನಾಲ್ಕು ತಿಂಗಳು ವಿಸ್ತರಿಸಿದೆ.

ಸಂಬಂಧ ಸಚಿವಾಲಯದ ಸ್ವಾಧೀನ ವಿಭಾಗ ರಕ್ಷಣಾ ಸಚಿವ ಶ್ರೀ ರಾಜನಾಥ ಸಿಂಗ್ ಅವರ ಸೂಕ್ತ ಅನುಮೋದನೆಯೊಂದಿಗೆ ಆದೇಶವೊಂದನ್ನು ಇಂದು ಹೊರಡಿಸಿದೆ. "ಫೋರ್ಸ್ ಮಜೂರ್ (ಒಪ್ಪಂದದ ಪಕ್ಷಕಾರರನ್ನು ಹೊಣೆಗಾರಿಕೆಯಿಂದ ಮುಕ್ತಗೊಳಿಸುವುದು) ನಾಲ್ಕು ತಿಂಗಳ ಅವಧಿಗೆ, ಅಂದರೆ 2020 ಮಾರ್ಚ್ 25 ರಿಂದ 2020 ಜುಲೈ 24ರವರೆಗೆ ಇದಕ್ಕೆ ಅನ್ವಯವಾಗುತ್ತದೆ " ಎಂದು ಅದು ತಿಳಿಸಿದೆ.

ಕ್ರಮವು ಕೋವಿಡ್ -19 ಪರಿಸ್ಥಿತಿಯಿಂದ ತಮ್ಮ ಉತ್ಪಾದನಾ ವೇಳಾಪಟ್ಟಿಯಲ್ಲಿ ಪ್ರತೀಕೂಲ ಪರಿಣಾಮ ಎದುರಿಸಿದ ದೇಶೀಯ ರಕ್ಷಣಾ ಕೈಗಾರಿಕೆಗಳಿಗೆ ದೊಡ್ಡ ನಿರಾಳ ತರಲಿದೆ.

ಆದಾಗ್ಯೂ ರಕ್ಷಣಾ ಸಚಿವಾಲಯದ ಆದೇಶವು ಭಾರತೀಯ ಮಾರಾಟಗಾರರಿಗೆ ಒಪ್ಪಂದದ ವಸ್ತುಗಳನ್ನು ವಿಸ್ತರಿತ ಪೂರೈಕೆ ಅವಧಿಯ ಒಳಗಾಗಿ ವಿತರಿಸಲು ಮುಕ್ತಗೊಳಿಸುತ್ತದೆ.

ಜೊತಗೆ, ಆದೇಶದ ರೀತ್ಯ, ನಿರ್ಧಾರದ ಜಾರಿಗೆ ಯಾವುದೇ ಪ್ರತ್ಯೇಕ ಒಪ್ಪಂದ ನಿರ್ದಿಷ್ಟ ತಿದ್ದುಪಡಿಗಳ ಅಗತ್ಯ ಇರುವುದಿಲ್ಲ.

ವಿದೇಶೀ ಮಾರಾಟಗಾರರ ವಿಚಾರದಲ್ಲಿ ಅವರು ರಕ್ಷಣಾ ಸಚಿವಾಲಯವನ್ನು ಸಂಪರ್ಕಿಸಬಹುದು, ಮತ್ತು ಅದು ಪ್ರತಿ ಪ್ರಕರಣದ ಆಧಾರದಲ್ಲಿ ಆಯಾ ದೇಶಗಳಲ್ಲಿನ ಪರಿಸ್ಥಿತಿಗನುಗುಣವಾಗಿ ಪರಿಗಣಿಸಲಿದೆ.

***


(रिलीज़ आईडी: 1631120) आगंतुक पटल : 288
इस विज्ञप्ति को इन भाषाओं में पढ़ें: Telugu , English , Urdu , हिन्दी , Marathi , Assamese , Manipuri , Punjabi , Tamil , Malayalam