ಚುನಾವಣಾ ಆಯೋಗ

ಕರ್ನಾಟಕ ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ದ್ವೈವಾರ್ಷಿಕ ಚುನಾವಣೆ

Posted On: 09 JUN 2020 1:47PM by PIB Bengaluru

ಕರ್ನಾಟಕ ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ದ್ವೈವಾರ್ಷಿಕ ಚುನಾವಣೆ

 

ವಿಧಾನಸಭಾ ಸದಸ್ಯರು ಆಯ್ಕೆ ಮಾಡಿದ ಕರ್ನಾಟಕ ವಿಧಾನ ಪರಿಷತ್ತಿನ ಏಳು ಸದಸ್ಯರ ಅವಧಿ ಜೂನ್ 30, 2020 ಮುಕ್ತಾಯಗೊಳ್ಳುತ್ತಿದೆ. ಅವರ ವಿವರಗಳು ಹೀಗಿವೆ:

ಕ್ರ. ಸಂ.

ಸದಸ್ಯರ ಹೆಸರು

ನಿವೃತ್ತಿಯ ದಿನಾಂಕ

1

ನಸೀರ್ ಅಹ್ಮದ್

 

 

 

 

 

30.06.2020

2

ಜಯಮ್ಮ

3

ಎಂ.ಸಿ. ವೇಣುಗೋಪಾಲ್

4

ಎನ್.ಎಸ್. ಬೋಸ್ ರಾಜು

5

ಎಚ್.ಎಂ. ರೇವಣ್ಣ

6

ಟಿ.. ಶರವಣ

7

ಡಿ.ಯು. ಮಲ್ಲಿಕರ್ಜುನ

 

ಚುನಾವಣಾ ಆಯೋಗವು ಕರ್ನಾಟಕ ಮುಖ್ಯ ಚುನಾವಣಾಧಿಕಾರಿಯಿಂದ ಮಾಹಿತಿಗಳನ್ನು ಪಡೆದ ನಂತರ, ವಿಧಾನಸಭಾ ಸದಸ್ಯರಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ಮೇಲೆ ಹೇಳಿದ ದ್ವೈವಾರ್ಷಿಕ ಚುನಾವಣೆಗಳನ್ನು ಕೆಳಗಿನ ಕಾರ್ಯಕ್ರಮಕ್ಕೆ ಅನುಗುಣವಾಗಿ ನಡೆಸಬೇಕೆಂದು ನಿರ್ಧರಿಸಿದೆ:

ಕ್ರ.ಸಂ.

ಘಟನೆ

ದಿನಾಂಕ

1

ಅಧಿಸೂಚನೆಯ ಪ್ರಕಟಣೆ

11.06.2020 (ಗುರುವಾರ)

2

ನಾಮಪತ್ರ ಸಲ್ಲಿಕೆಗೆ ಕೊನೆ ದಿನಾಂಕ

18.06.2020 (ಗುರುವಾರ)

3

ನಾಮಪತ್ರ ಪರಿಶೀಲನೆ

19.06.2020 (ಶುಕ್ರವಾರ)

4

ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ

22.06.2020 (ಸೋಮವಾರ)

5

ಮತದಾನದ ದಿನ

29.06.2020 (ಸೋಮವಾರ)

6

ಮತದಾನದ ಅವಧಿ

ಬೆಳಿಗ್ಗೆ 9 ರಿಂದ ಮಧ್ಯಾಹ್ನ 4 ರವರೆಗೆ

7

ಮತ ಎಣಿಕೆ

29.06.2020

8

ಚುನಾವಣಾ ಪ್ರಕ್ರಿಯೆ ಕೊನೆಗೊಳ್ಳಬೇಕಾದ ದಿನ

30.06.2020 (ಮಂಗಳವಾರ)

 

ಮುಕ್ತ ಮತ್ತು ನ್ಯಾಯಯುತ ಚುನಾವಣೆಯನ್ನು ಖಚಿತಪಡಿಸಿಕೊಳ್ಳಲು ವೀಕ್ಷಕರನ್ನು ನೇಮಿಸುವ ಮೂಲಕ ಚುನಾವಣಾ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ.

ಚುನಾವಣೆ ನಡೆಯುವಾಗ ಕೋವಿಡ್-19 ನಿಗ್ರಹ ಕ್ರಮಗಳನ್ನು ಕುರಿತು ಈಗಿರುವ ಸೂಚನೆಗಳನ್ನು ಪಾಲನೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯದ ಹಿರಿಯ ಅಧಿಕಾರಿಯನ್ನು ನಿಯೋಜಿಸುವಂತೆ ಆಯೋಗವು ರಾಜ್ಯದ ಮುಖ್ಯ ಕಾರ್ಯದರ್ಶಿಯವರಿಗೆ ನಿರ್ದೇಶನ ನೀಡಿದೆ.

***



(Release ID: 1630469) Visitor Counter : 225