ಸಂಪುಟ

ಭಾರತದಲ್ಲಿ ಬಂಡವಾಳ ಆಕರ್ಷಣೆಗೆ ಇಲಾಖೆಗಳು/ಸಚಿವಾಲಯಗಳಲ್ಲಿ “ಕಾರ್ಯದರ್ಶಿಗಳ ಉನ್ನತಾಧಿಕಾರ ಸಮಿತಿ((ಇಜಿಒಎಸ್) ಮತ್ತು ಯೋಜನಾ ಅಭಿವೃದ್ಧಿ ಕೋಶಗಳ(ಪಿಡಿಸಿಎಸ್)” ಸ್ಥಾಪನೆಗೆ ಸರ್ಕಾರ ಅನುಮೋದನೆ ಭಾರತದಲ್ಲಿ ಬಂಡವಾಳ ಹೂಡಿಕೆ ಹೆಚ್ಚಳಕ್ಕೆ ಪ್ರಸ್ತಾವಗಳು

Posted On: 03 JUN 2020 5:08PM by PIB Bengaluru

ಭಾರತದಲ್ಲಿ ಬಂಡವಾಳ ಆಕರ್ಷಣೆಗೆ ಇಲಾಖೆಗಳು/ಸಚಿವಾಲಯಗಳಲ್ಲಿ ಕಾರ್ಯದರ್ಶಿಗಳ ಉನ್ನತಾಧಿಕಾರ ಸಮಿತಿ((ಇಜಿಒಎಸ್) ಮತ್ತು ಯೋಜನಾ ಅಭಿವೃದ್ಧಿ ಕೋಶಗಳ(ಪಿಡಿಸಿಎಸ್)” ಸ್ಥಾಪನೆಗೆ ಸರ್ಕಾರ ಅನುಮೋದನೆ
ಭಾರತದಲ್ಲಿ ಬಂಡವಾಳ ಹೂಡಿಕೆ ಹೆಚ್ಚಳಕ್ಕೆ ಪ್ರಸ್ತಾವಗಳು

ಭಾರತ ಹೂಡಿಕೆದಾರರ ಸ್ನೇಹಿಯಾಗಲಿದ್ದು ಬಂಡವಾಳ ಹರಿವಿಗೆ ದಾರಿ ಸುಗಮ;

ದೇಶೀಯ ಉದ್ದಿಮೆಗಳಿಗೆ ಹೆಚ್ಚಿನ ಪ್ರೋತ್ಸಾಹ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಟ್ರಿಲಿಯನ್ ಆರ್ಥಿಕತೆಯ ಕನಸು ನನಸಾಗಿಸಲು ಇಜಿಒಎಸ್ ಮತ್ತು ಪಿಡಿಸಿ ಅತ್ಯಂತ ಪ್ರಮುಖ ಹೆಜ್ಜೆ

ಹೂಡಿಕೆ ಮತ್ತು ಅದರ ಸಂಬಂಧಿ ಪ್ರೋತ್ಸಾಹಕರ ನೀತಿಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಚಿವಾಲಯಗಳು ಮತ್ತು ಇಲಾಖೆಗಳ ನಡುವೆ ಸಮನ್ವಯ

ಆರ್ಥಿಕತೆಗೆ ಉತ್ತೇಜನ ನೀಡುವ ಮೂಲಕ ನಾನಾ ವಲಯಗಳಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಾವಕಾಶ ಸೃಷ್ಟಿಯ ಸಂಭವನೀಯತೆ ಭಾರೀ ಹೆಚ್ಚಳ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಭಾರತದಲ್ಲಿ ಬಂಡವಾಳ ಆಕರ್ಷಣೆಗೆ ಭಾರತ ಸರ್ಕಾರದ ಸಚಿವಾಲಯಗಳು/ಇಲಾಖೆಗಳಲ್ಲಿ ಕಾರ್ಯದರ್ಶಿಗಳ ಉನ್ನತಾಧಿಕಾರ ಸಮಿತಿ (ಇಜಿಒಎಸ್) ಮತ್ತು ಯೋಜನಾ ಅಭಿವೃದ್ಧಿ ಕೋಶ(ಪಿಡಿಸಿಎಸ್)ಗಳನ್ನು ಸ್ಥಾಪಿಸಲು ಅನುಮೋದನೆ ನೀಡಿದೆ ಹೊಸ ಕಾರ್ಯತಂತ್ರ 2024-25 ವೇಳೆಗೆ ಭಾರತ ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧಿಸುವ ಕನಸನ್ನುನನಸು ಮಾಡುವುದನ್ನು ಪುನಃ ಪ್ರತಿಪಾದಿಸಲಿದೆ.

ಸರ್ಕಾರದೇಶೀಯ ಹೂಡಿಕೆದಾರರು ಮತ್ತು ಎಫ್ ಡಿಐಅನ್ನು ಬಲವಾಗಿ ಬೆಂಬಲಿಸಲು ಹೂಡಿಕೆ ಸ್ನೇಹಿ ವ್ಯವಸ್ಥೆ ಸ್ಥಾಪಿಸಲು ಬದ್ಧವಾಗಿದೆಇದರಿಂದ ಆರ್ಥಿಕತೆ ಉತ್ತೇಜನಕ್ಕೆ ಹೆಚ್ಚಿನ ಒತ್ತು ಸಿಗಲಿದೆಡಿಪಿಐಐಟಿ ನಮ್ಮ ಹೂಡಿಕೆ ಮತ್ತು ಅದರ ಸಂಬಂಧಿ ನೀತಿಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಚಿವಾಲಯಗಳು/ಇಲಾಖೆಗಳ ನಡುವೆ ಸಮನ್ವಯ ಮೂಡಿಸಲು ಸಮಗ್ರ ಕಾರ್ಯತಂತ್ರವನ್ನು ಅಳವಡಿಸಲು ಉದ್ದೇಶಿಸಿದೆ.

ಪ್ರಸಕ್ತ ಕೋವಿಡ್-19 ಸಾಂಕ್ರಾಮಿಕ ಬಿಕ್ಕಟ್ಟಿನ ಮಧ್ಯೆಯೇ ಭಾರತದೇಶದೊಳಗೆ ಎಫ್ ಡಿಐ ಆಕರ್ಷಿಸಲು ವಿಶೇಷವಾಗಿ ಬೃಹತ್ ಕಂಪನಿಗಳನ್ನು ಬಂಡವಾಳ ಹೂಡಿಕೆಗೆ ಆಕರ್ಷಿಸಲು ಅವಕಾಶವನ್ನು ಒದಗಿಸುತ್ತಿದೆಬೃಹತ್ ಕಂಪನಿಗಳು ತಮ್ಮ ಹೂಡಿಕೆಗಳನ್ನು ಭಿನ್ನ ವಲಯಗಳಲ್ಲಿ ತೊಡಗಿಸಬಹುದು ಮತ್ತು ಅಪಾಯಗಳನ್ನು ತಪ್ಪಿಸಿಕೊಳ್ಳಬಹುದುಅಲ್ಲದೆ, ಅಮೆರಿಕಐರೋಪ್ಯ ಒಕ್ಕೂಟಚೀನಾ ಮತ್ತಿತರ ದೊಡ್ಡ ಮಾರುಕಟ್ಟೆಗಳಿಗೆ ಉತ್ಪನ್ನಗಳ ಪೂರೈಕೆಗೆ ನೆರವಾಗಲು ಹೆಚ್ಚಿನ ಒತ್ತು ನೀಡುತ್ತಿದೆಪ್ರಸಕ್ತ ಜಾಗತಿಕ ಆರ್ಥಿಕ ಪರಿಸ್ಥಿತಿಯ ಸಂದರ್ಭದಲ್ಲಿ ಲಭ್ಯವಿರುವ ಅವಕಾಶಗಳನ್ನು ಬಳಸಿಕೊಳ್ಳಲು ಉದ್ದೇಶಿಸಿದ್ದು ಮೂಲಕ ಭಾರತವನ್ನು ಜಾಗತಿಕ ಮೌಲ್ಯ ಸರಣಿಯ ಪ್ರಮುಖ ಪಾಲುದಾರರನ್ನಾಗಿ ಮಾಡಲು ಉದ್ದೇಶಿಸಲಾಗಿದೆ.

ಭಾರತದಲ್ಲಿ ಬಂಡವಾಳ ತೊಡಗಿಸುವ ಹೂಡಿದಾರರಿಗೆ ಉತ್ತೇಜನ ಮತ್ತು ನೆರವು ನೀಡುವ ಉದ್ದೇಶದಿಂದ ಆರ್ಥಿಕತೆಯ ಪ್ರಮುಖ ವಲಯಗಳ ಪ್ರಗತಿಗೆ ಉತ್ತೇಜನ ನೀಡಲಾಗುತ್ತಿದೆಅದಕ್ಕಾಗಿ  ಕೆಳಗಿನ ವ್ಯವಸ್ಥೆ ಮತ್ತು ಧ್ಯೇಯಗಳಡಿ ಕಾರ್ಯದರ್ಶಿಗಳನ್ನೊಳಗೊಂಡ ಉನ್ನತಾಧಿಕಾರ ಸಮಿತಿ(ಇಜಿಒಎಸ್)ಗಳನ್ನು ರಚಿಸಲು ಅನುಮೋದಿಸಲಾಗಿದೆ.  

·         ಸಂಪುಟ ಕಾರ್ಯದರ್ಶಿ(ಅಧ್ಯಕ್ಷರು)

·         ಸಿಇಒನೀತಿ ಆಯೋಗ(ಸದಸ್ಯರು)

·         ಕಾರ್ಯದರ್ಶಿಕೈಗಾರಿಕಾ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ(ಸದಸ್ಯ ಸಂಚಾಲಕ)

·         ಕಾರ್ಯದರ್ಶಿವಾಣಿಜ್ಯ ಇಲಾಖೆ(ಸದಸ್ಯರು)

·         ಕಾರ್ಯದರ್ಶಿಕಂದಾಯ ಇಲಾಖೆ(ಸದಸ್ಯರು)

·         ಕಾರ್ಯದರ್ಶಿ, ಆರ್ಥಿಕ ವ್ಯವಹಾರಗಳ ಇಲಾಖೆ(ಸದಸ್ಯರು)

·         ಸಂಬಂಧಿಸಿದ ಇಲಾಖೆಯ ಕಾರ್ಯದರ್ಶಿಸಹ ನಾಮ ನಿರ್ದೇಶನ ಮಾಡಿಕೊಳ್ಳಬಹುದು

ಇಜಿಒಎಸ್  ಧ್ಯೇಯೋದ್ದೇಶಗಳು

·         ನಾನಾ ಸಚಿವಾಲಯಗಳು ಮತ್ತು ಇಲಾಖೆಗಳ ನಡುವೆ ಸಮನ್ವಯ ಮೂಡಿಸುವುದು ಮತ್ತು ಸಕಾಲಕ್ಕೆ ಅನುಮತಿಗಳನ್ನು ನೀಡುವುದು.

·         ಭಾರತಕ್ಕೆ ಹೂಡಿಕೆಗಳನ್ನು ಹೆಚ್ಚಾಗಿ ಆಕರ್ಷಿಸುವುದು ಮತ್ತು ಜಾಗತಿಕ ಹೂಡಿಕೆದಾರರಿಗೆ ಉತ್ತೇಜನ ನೀಡಿಹೂಡಿಕೆಗೆ ಬೆಂಬಲ ಒದಗಿಸುವುದು.

·         ಅಗ್ರ ಹೂಡಿಕೆದಾರರಿಗೆ ನಿಗದಿತ ರೀತಿಯಲ್ಲಿ ಹೂಡಿಕೆಗೆ ನೆರವು ನೀಡುವುದು ಮತ್ತು ನೀತಿ ಸುಭದ್ರತೆ ಮತ್ತು ಸ್ಥಿರತೆ ಮೂಲಕ ಒಟ್ಟಾರೆ ಹೂಡಿಕೆ ವಾತಾವರಣವನ್ನು ಸೃಷ್ಟಿಸುವುದು.

·         ಇಲಾಖೆಗಳು ಮುಂದಿಡುವ ಹೂಡಿಕೆಗಳನ್ನು  ಕೆಳಗಿನವುಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗುವುದು. (i) ಯೋಜನೆ ಸೃಷ್ಟಿ (ii) ಬರುವ ವಾಸ್ತವ ಹೂಡಿಕೆಅಲ್ಲದೆ  ಇಲಾಖೆಗಳಿಗೆ ಉನ್ನತಾಧಿಕಾರ ಸಮಿತಿ ಹಲವು ಹಂತಗಳನ್ನು ಪೂರ್ಣಗೊಳಿಸಲು ನಿಗದಿತ ಗುರಿಗಳನ್ನು ನೀಡಲಿದೆ.

ಯೋಜನಾ ಅಭಿವೃದ್ಧಿ ಕೋಶ(ಪಿಡಿಸಿ), ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಸಮನ್ವಯದೊಂದಿಗೆ ಹೂಡಿಕೆ ಮಾಡಬಹುದಾದ ಯೋಜನೆಗಳನ್ನು ಅಭಿವೃದ್ಧಿಪಡಿಸಲು  ಕೋಶಗಳನ್ನು ರಚಿಸಲು ಅನುಮೋದಿಸಲಾಗಿದೆ ಮೂಲಕ ಭಾರತದಲ್ಲಿ ಹೂಡಿಕೆ ಮಾಡಬಹುದಾದ ಯೋಜನೆಗಳ ಪಟ್ಟಿಯನ್ನು ಸಿದ್ಧಪಡಿಸಲು ಮತ್ತು ಎಫ್ ಡಿ  ಹರಿವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದುಕಾರ್ಯದರ್ಶಿ ಅವರ ಮಾರ್ಗದರ್ಶನದಲ್ಲಿ ಸಂಬಂಧಿಸಿದ ಎಲ್ಲ ಕೇಂದ್ರ ಸಚಿವಾಲಯಗಳ ಜಂಟಿ ಕಾರ್ಯದರ್ಶಿ ಶ್ರೇಣಿಗಿಂತ ಕೆಳಗಿರದ ಅಧಿಕಾರಿಗಳು ಪಿಡಿಸಿಯ ಉಸ್ತುವಾರಿ ಹೊತ್ತಿರುತ್ತಾರೆಅವರು ಹೂಡಿಕೆ ಮಾಡಬಹುದಾದ ಯೋಜನೆಗಳನ್ನು ರೂಪಿಸಿಕಾರ್ಯತಂತ್ರ ಸಿದ್ಧಪಡಿಸಿಅನುಷ್ಠಾನಗೊಳಿಸುವುದು ಮತ್ತು ವಿವರಗಳನ್ನು ಹಂಚಿಕೊಳ್ಳುವ ಜವಾಬ್ದಾರಿ ನಿರ್ವಹಿಸಬೇಕಿದೆ.

 ಪಿಡಿಸಿಗಳಿಗೆ  ಕೆಳಗಿನ ಧ್ಯೇಯಗಳಿರುತ್ತವೆ.

·         ಎಲ್ಲ ಅನುಮೋದನೆಗಳೊಂದಿಗೆ ಹಂಚಿಕೆಗೆ ಲಭ್ಯವಿರುವ ಭೂಮಿಯೊಂದಿಗೆ ಯೋಜನೆಯನ್ನು ಸಿದ್ಧಪಡಿಸುವುದುಜೊತೆಗೆ ಹೂಡಿಕೆದಾರರಿಗೆ ಹೂಡಿಕೆ ಮಾಡಲು ಅಥವಾ ಒಪ್ಪಿಕೊಳ್ಳಲು ಸಮಗ್ರ ವಿಸ್ತೃತ ಯೋಜನಾ ವರದಿಗಳನ್ನು ಸಿದ್ಧಪಡಿಸುವುದು.

·         ಬಂಡವಾಳ ಹೂಡಿಕೆಗಳನ್ನು ಅಂತಿಮಗೊಳಿಸಲು ಮತ್ತು ಆಕರ್ಷಿಸುವಲ್ಲಿ ಎದುರಾಗುವ ಸಮಸ್ಯೆಗಳನ್ನು ನಿವಾರಿಸುವ ಅಗತ್ಯವಿದೆ ಮತ್ತು ಅವುಗಳನ್ನು ಉನ್ನತಾಧಿಕಾರ ಸಮಿತಿ ಮುಂದೆ ಮಂಡಿಸಬೇಕು.

ಗೌರವಾನ್ವಿತ ಪ್ರಧಾನಮಂತ್ರಿ ಅವರ ಕಲ್ಪನೆಯ ಆತ್ಮನಿರ್ಭರ ಭಾರತ್ ಮಿಷನ್ ಗುರಿ ಸಾಧನೆಗೆ ಮತ್ತು ಭಾರತವನ್ನು ಹೂಡಿಕೆದಾರ ಸ್ನೇಹಿ ತಾಣವನ್ನಾಗಿ ಮಾಡುವ ನಿರ್ಧಾರಕ್ಕೆ ಇದು ಬೆಂಬಲ ನೀಡುವುದಲ್ಲದೆದೇಶದಲ್ಲಿ ಬಂಡವಾಳ ಹರಿವಿಗೆ ದಾರಿ ಸುಗಮವಾಗಲಿದೆಇದರಿಂದ ಆರ್ಥಿಕತೆಗೆ ಇನ್ನಷ್ಟು ಉತ್ತೇಜನ ಸಿಗುವುದಲ್ಲದೆನಾನಾ ವಲಯಗಳಲ್ಲಿ ವಿಫುಲ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಾವಕಾಶಗಳ ಸೃಷ್ಟಿಯ ಸಂಭವನೀಯತೆ ಹೆಚ್ಚುತ್ತದೆ.

***



(Release ID: 1629328) Visitor Counter : 260