ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವಾಲಯ

1.5 ಕೋಟಿ ಡೈರಿ ರೈತರಿಗಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ಸ್(ಕೆ.ಸಿ.ಸಿ.) ಅಭಿಯಾನ ಪ್ರಾರಂಭ  ರೈತರಿಗಾಗಿ ಪ್ರಧಾನಮಂತ್ರಿಯವರ ಆತ್ಮನಿರ್ಭಾರ ಭಾರತದಡಿ ವಿಶೇಷ ಕಾರ್ಯಯೋಜನೆ

Posted On: 01 JUN 2020 7:47PM by PIB Bengaluru

ಹಾಲು ಒಕ್ಕೂಟಗಳು ಮತ್ತು ಹಾಲು ಉತ್ಪಾದಿಸುವ ಕಂಪನಿಗಳಿಗೆ ಸೇರಿದ 1.5 ಕೋಟಿ ಡೈರಿ ರೈತರಿಗೆ ಮುಂದಿನ ಎರಡು ತಿಂಗಳಲ್ಲಿ (ಜೂನ್ 1 ರಿಂದ ಜುಲೈ31, 2020 ವರೆಗೆ) ವಿಶೇಷ ಕಾರ್ಯಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರಕಿಸಾನ್ ಕ್ರೆಡಿಟ್ ಕಾರ್ಡ್ (ಕೆ.ಸಿ.ಸಿ.) ನೀಡಲಿದೆ. ಉದ್ಧೇಶಿತ ಗುರಿ ಸಾಧನೆಗಾಗಿ ವಿಶೇಷ ಕಾಳಜಿಯೊಂದಿಗೆ ಕಾರ್ಡನ್ನು ವಿತರಿಸಲೋಸುಗ ರಾಜ್ಯಗಳ ಹಣಕಾಸು ಸೇವೆಗಳ ಇಲಾಖೆಯೊಂದಿನ ಸಹಯೋಗದಲ್ಲಿ ಪಶುಸಂಗೋಪನೆ ಮತ್ತು ಡೈರಿ ಇಲಾಖೆಗಳು, ಇದರ ಸಂಬಂಧಿತ ಸುತ್ತೋಲೆಗಳನ್ನು ಮತ್ತು ಕಿಸಾನ್ ಕ್ರೆಡಿಟ್ ಕಾರ್ಡ್ (ಕೆ.ಸಿ.ಸಿ.) ಅರ್ಜಿ ಮಾದರಿಗಳನ್ನು ಈಗಾಗಲೇ ರಾಜ್ಯಗಳ ಎಲ್ಲಾ ಹಾಲು ಉತ್ಪಾದಕ ರೈತರ ಸಂಘ, ರಾಜ್ಯ ಹಾಲು ಒಕ್ಕೂಟ ಮತ್ತು ಹಾಲು ಸಂಘಗಳಿಗೆ ವಿತರಿಸಿದೆ.

ದೇಶದ ಡೈರಿ ಸಹಕಾರಿ ಆಂದೋಲನದಲ್ಲಿ, ದೇಶದಾದ್ಯಂತ ಒಟ್ಟಾರೆ 230 ಹಾಲು ಸಂಘಗಳ ಮೂಲಕ ಸುಮಾರು 1.7 ಕೋಟಿ ರೈತರು ಭಾಗಿಗಳಾಗಿದ್ದಾರೆ.

ಅಭಿಯಾನದ ಮೊದಲ ಹಂತದಲ್ಲಿ, ಡೈರಿ ಸಹಕಾರಿ ಸಂಘಗಳ ಸದಸ್ಯರಾಗಿರುವ ಮತ್ತು ವಿವಿಧ ಹಾಲು ಸಂಘಗಳೊಂದಿಗೆ ಸಂಬಂಧ ಹೊಂದಿರುವ ಮತ್ತು ಕಿಸಾನ್ ಕ್ರೆಡಿಟ್ ಕಾರ್ಡ್ (ಕೆ.ಸಿ.ಸಿ.) ಹೊಂದಿಲ್ಲದ ಎಲ್ಲಾ ಹಾಲು ಉತ್ಪಾದಕ ರೈತರನ್ನು ಕಾರ್ಡ್ ವಿತರಣೆ ಪ್ರಕ್ರಿಯೆಯಲ್ಲಿ ಒಳಸೇರಿಸಿಕೊಳ್ಳುವ ಗುರಿ ಹೊಂದಿದೆ.

ಈಗಾಗಲೇ ತಮ್ಮ ಭೂ ಮಾಲೀಕತ್ವದ ಆಧಾರದ ಮೇಲೆ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆ.ಸಿ.ಸಿ.) ಹೊಂದಿರುವ ರೈತರು, ತಮ್ಮ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆ.ಸಿ.ಸಿ.) ಸಾಲ ಮಿತಿಯನ್ನು ಹೆಚ್ಚಿಸಬಹುದು, ಆದರೆ ಅವರಿಗೆ ಕೇವಲ ರೂ. 3.00 ಲಕ್ಷ ತನಕಕ್ಕೆ ಮಾತ್ರ ಬಡ್ಡಿ ಅನುದಾನ ಸಿಗಲಿದೆ. ಯಾವುದೇ ಭದ್ರತೆಯ ಮೇಲಾಧಾರವಿಲ್ಲದೆ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆ.ಸಿ.ಸಿ.) ಸಾಲಕ್ಕೆ ಸಾಮಾನ್ಯ ಮಿತಿ ರೂ. 1.60 ಲಕ್ಷವಾಗಿದೆ, ಆದರೆ ಹಾಲು ಒಕ್ಕೂಟಗಳಿಗೆ ನೇರವಾಗಿ ಹಾಲು ನೀಡುವ ರೈತರಲ್ಲಿ ಒಂದುವೇಳೆ ಯಾವುದೇ ಮಧ್ಯವರ್ತಿಗಳಿಲ್ಲದೆ ಉತ್ಪಾದಕರು ಮತ್ತು ಸಂಸ್ಕರಣಾ ಘಟಕಗಳ ನಡುವೆ ಹೊಂದಾಣಿಕೆ ಮಾಡಿಕೊಂಡಿದ್ದಲ್ಲಿ, ಆಗ ರೈತರಿಗೆ ಯಾವುದೇ ಭದ್ರತೆಯ ಮೇಲಾಧಾರವಿಲ್ಲದ ಸಾಲ ಮಿತಿಗಳನ್ನು ರೂ. 3.00 ಲಕ್ಷದವರೆಗೆ ಹೆಚ್ಚಿಸಿಕೊಳ್ಳಬಹುದು. ಹಾಲು ಒಕ್ಕೂಟಗಳಿಗೆ ಸಂಬಂಧಿಸಿದ ಡೈರಿ ರೈತರಿಗೆ ಇದು ಹೆಚ್ಚಿನ ಸಾಲ ಲಭ್ಯತೆಯನ್ನು ಹಾಗೂ ಬ್ಯಾಂಕುಗಳಿಗೆ ಸಾಲ ಮರುಪಾವತಿ ಮಾಡುವ ಭರವಸೆಯನ್ನೂ ಮೂಲಕ ಖಚಿತಪಡಿಸುತ್ತದೆ .

ಕಿಸಾನ್ ಕ್ರೆಡಿಟ್ ಕಾರ್ಡ್ (ಕೆ.ಸಿ.ಸಿ.). ಯೋಜನೆಯಡಿ 2.5 ಕೋಟಿ ಹೊಸ ರೈತರನ್ನು ಒಟ್ಟಾರೆಯಾಗಿ ಸೇರಿಸಲಾಗುವುದು ಕೇಂದ್ರ ಹಣಕಾಸು ಸಚಿವರು ಮೇ 15, 2020 ರಂದು ಹೇಳಿದ್ದರು. ರೈತರಿಗಾಗಿರುವ ಪ್ರಧಾನಮಂತ್ರಿಗಳ ಆತ್ಮ ನಿರ್ಭಾರ ಭಾರತ್ ಪ್ಯಾಕೇಜಿನ ಭಾಗದಲ್ಲಿ 1.5 ಕೋಟಿ ಡೈರಿ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆ.ಸಿ.ಸಿ.).ಯನ್ನು ಒದಗಿಸುವ ಯೋಜನೆ ಈಗಾಗಲೇ ಸಿದ್ದವಾಗಿದೆ. ರೈತರಿಗಾಗಿರುವ ಪ್ರಧಾನಮಂತ್ರಿಗಳ ಆತ್ಮ ನಿರ್ಭಾರ ಭಾರತ್ ಪ್ಯಾಕೇಜಿನ ಭಾಗದಲ್ಲಿ 1.5 ಕೋಟಿ ಡೈರಿ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆ.ಸಿ.ಸಿ.).ಯನ್ನು ಒದಗಿಸುವ ಯೋಜನೆ ಸಿದ್ದವಾಗಿದೆ. ಮೂಲಕ ಇದು ಇತ್ತೀಚಿನ ಆರ್ಥಿಕ ಕುಸಿತದಿಂದ ಬಳಲುತ್ತಿರುವ ರೈತರ ಕೈಯಲ್ಲಿ ಹೆಚ್ಚುವರಿ ರೂ. 5 ಲಕ್ಷ ಕೋಟಿ ದ್ರವ್ಯತೆಯನ್ನು ನೀಡಲಿದೆ.

ಕಳೆದ 5 ವರ್ಷಗಳಲ್ಲಿ 6% ಕ್ಕಿಂತ ಹೆಚ್ಚಿನ ವಾರ್ಷಿಕ ಸರಾಸರಿ ಒಟ್ಟಾರೆ ಅಭಿವೃದ್ಧಿ( ಸಿ..ಜಿ.ಆರ್.) ಹೊಂದಿರುವ ಆರ್ಥಿಕತೆ ಇರುವ ಹಾಗೂ ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರಗಳಲ್ಲಿ ಡೈರಿ ಕ್ಷೇತ್ರ ಕೂಡಾ ಒಂದಾಗಿದೆ. ಹಾಗೂ ಡೈರಿ ಕ್ಷೇತ್ರದ ರೈತರಿಗೆ ಕೆಲಸದ ಬಂಡವಾಳ, ಮಾರ್ಕೆಟಿಂಗ್ ಇತ್ಯಾದಿಗಳ ಅಗತ್ಯತೆಗಳನ್ನು ಪೂರೈಸಲು ಅಲ್ಪಾವಧಿಯ ಸಾಲವನ್ನು ನೀಡುವುದರಿಂದ ಅವರ ಉತ್ಪಾದಕತೆಯನ್ನು ಅತ್ಯತ್ತಮವಾಗಿ ಹೆಚ್ಚಿಸಲು ಸಾಧ್ಯವಾಗುತ್ತದೆ.

***



(Release ID: 1628909) Visitor Counter : 183