ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್ -19 ಹೊಸ ಮಾಹಿತಿಚೇತರಿಕೆಯ ಪ್ರಮಾಣವು 48.19%ರಷ್ಟು ಹೆಚ್ಚಳ

Posted On: 01 JUN 2020 3:28PM by PIB Bengaluru

ಶ್ರೇಣೀಕೃತ, ಪೂರ್ವಭಾವಿ ಮತ್ತು ಸಕ್ರಿಯ ವಿಧಾನದ ಮೂಲಕ, ಕೋವಿಡ್-19 ತಡೆಗಟ್ಟುವಿಕೆ, ನಿಯಂತ್ರಣ ಮತ್ತು ನಿರ್ವಹಣೆಗಾಗಿ ಭಾರತ ಸರ್ಕಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇವುಗಳನ್ನು ನಿಯಮಿತವಾಗಿ ಉನ್ನತ ಮಟ್ಟದಲ್ಲಿ ಪರಿಶೀಲಿಸಲಾಗುತ್ತಿದೆ ಮತ್ತು ಮೇಲ್ವಿಚಾರಣೆ ಮಾಡಲಾಗುತ್ತಿದೆ.

ಕಳೆದ 24 ಗಂಟೆಗಳಲ್ಲಿ 4,835 ಕೋವಿಡ್-19 ರೋಗಿಗಳನ್ನು ಗುಣಪಡಿಸಲಾಗಿದೆ. ಈವರೆಗೆ ಒಟ್ಟು 91,818 ರೋಗಿಗಳನ್ನು ಕೋವಿಡ್-19ರಿಂದ ಗುಣಪಡಿಸಲಾಗಿದೆ. ದೇಶದಲ್ಲಿ ಚೇತರಿಕೆಯ ಪ್ರಮಾಣವು ಕ್ರಮೇಣವಾಗಿ ಹೆಚ್ಚುತ್ತಿದೆ ಮತ್ತು ಕೋವಿಡ್-19 ರೋಗಿಗಳಲ್ಲಿ 48.19%ಕ್ಕೆ ತಲುಪಿದೆ. ಮೇ 18 ರಂದು ಚೇತರಿಕೆಯ ಪ್ರಮಾಣವು 38.29% ಆಗಿದೆ. ಮೇ 3 ರಂದು ಅದು 26.59% ಆಗಿತ್ತು ಮತ್ತು ಏಪ್ರಿಲ್ 15 ರಂದು ಅದು 11.42% ಆಗಿತ್ತು.

ಪ್ರಸ್ತುತ ದೇಶದಲ್ಲಿ 93,322 ಸಕ್ರಿಯ ಪ್ರಕರಣಗಳು ಸಕ್ರಿಯ ವೈದ್ಯಕೀಯ ಮೇಲ್ವಿಚಾರಣೆಯಲ್ಲಿವೆ. ಪ್ರಕರಣದ ಸಾವಿನ ಪ್ರಮಾಣ 2.83%. ಮೇ 18 ರಂದು, ಪ್ರಕರಣದ ಸಾವಿನ ಪ್ರಮಾಣ 3.15% ಆಗಿತ್ತು. ಮೇ 3 ರಂದು ಅದು 3.25% ಆಗಿತ್ತು. ಏಪ್ರಿಲ್ 15 ರಂದು ಅದು 3.30% ಆಗಿತ್ತು. ದೇಶದಲ್ಲಿ ಸಾವಿನ ಪ್ರಮಾಣವು ಸ್ಥಿರವಾದ ಕುಸಿತವನ್ನು ಕಾಣಬಹುದು. ಕಣ್ಗಾವಲು, ಸಮಯೋಚಿತ ಪ್ರಕರಣಗಳ ಗುರುತಿಸುವಿಕೆ ಮತ್ತು ಪ್ರಕರಣಗಳ ಕ್ಲಿನಿಕಲ್ ನಿರ್ವಹಣೆಯ ಮೇಲೆ ನಿರಂತರವಾಗಿ ಗಮನಹರಿಸುವುದರಿಂದಾಗಿ ತುಲನಾತ್ಮಕವಾಗಿ ಸಾವಿನ ಪ್ರಮಾಣವು ಕಡಿಮೆಯಾಗಿದೆ.

ಎರಡು ನಿರ್ದಿಷ್ಟ ಪ್ರವೃತ್ತಿಗಳನ್ನು ಗಮನಿಸಲಾಗಿದೆ, ಒಂದು ಕಡೆ ಚೇತರಿಕೆಯ ಪ್ರಮಾಣ ಹೆಚ್ಚಾಗುತ್ತಿದ್ದರೆ, ಮತ್ತೊಂದೆಡೆ ಸಾವಿನ ಪ್ರಮಾಣ ಕಡಿಮೆಯಾಗುತ್ತಿದೆ.

472 ಸರ್ಕಾರಿ ಮತ್ತು 204 ಖಾಸಗಿ ಪ್ರಯೋಗಾಲಯಗಳ (ಒಟ್ಟು 676 ಪ್ರಯೋಗಾಲಯಗಳು) ಮೂಲಕ ಪರೀಕ್ಷಾ ಸಾಮರ್ಥ್ಯ ದೇಶದಲ್ಲಿ ಹೆಚ್ಚಾಗಿದೆ. ಒಟ್ಟಾರೆಯಾಗಿ, ಕೋವಿಡ್-19ಕ್ಕಾಗಿ ಇದುವರೆಗೆ 38,37,207 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, 1,00,180 ಮಾದರಿಗಳನ್ನು ನಿನ್ನೆ ಪರೀಕ್ಷಿಸಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್) ಬಿಡುಗಡೆ ಮಾಡಿರುವ ಮೇ 31 ಪರಿಸ್ಥಿತಿಯ ವರದಿ-132 ಪ್ರಕಾರ ಹೆಚ್ಚಿನ ಸಂಖ್ಯೆಯ ಸಾವುಗಳಾಗಿರುವ ದೇಶಗಳಲ್ಲಿನ ಸಾವಿನ ಪ್ರಮಾಣ ಕೆಳಗಿನಂತೆ ಇವೆ,:

ದೇಶಗಳು

ಒಟ್ಟು ಸಾವು

ಪ್ರಕರಣದ ಸಾವಿನ ಪ್ರಮಾಣ

ವಿಶ್ವ

367,166

6.19%

ಅಮೆರಿಕ ಸಂಯುಕ್ತ ಸಂಸ್ಥಾನ

1,01,567

5.92%

ಯುನೈಟೆಡ್ ಕಿಂಗ್ ಡಮ್

38,376

14.07%

ಇಟಲಿ

33,340

14.33%

ಸ್ಪೇನ್

29,043

12.12%

ಫ್ರಾನ್ಸ್

28,717

19.35%

ಬ್ರೆಜಿಲ್

27,878

5.99%

ಬೆಲ್ಜಿಯಂ

9,453

16.25%

ಮೆಕ್ಸಿಕೊ

9,415

11.13%

ಜರ್ಮನಿ

8,500

4.68%

ಇರಾನ್

7,734

5.19%

ಕೆನಡಾ

6,996

7.80%

ನೆದರ್ ಲ್ಯಾಂಡ್ಡ್ಸ್

5,951

12.87%

 

ಕೋವಿಡ್-19ಕ್ಕೆ ಸಂಬಂಧಿತ ತಾಂತ್ರಿಕ ಸಮಸ್ಯೆಗಳು, ಮಾರ್ಗಸೂಚಿಗಳು ಮತ್ತು ಸಲಹೆಗಳ ಎಲ್ಲಾ ಅಧಿಕೃತ ಮತ್ತು ಹೊಸ ಮಾಹಿತಿಗಾಗಿ ದಯವಿಟ್ಟು ಇಲಾಖೆಯ ಜಾಲತಾಣಕ್ಕೆ ನಿಯಮಿತವಾಗಿ ಭೇಟಿ ನೀಡಿರಿ: https://www.mohfw.gov.in

ಕೋವಿಡ್-19ಕ್ಕೆ ಸಂಬಂಧಿಸಿದ ತಾಂತ್ರಿಕ ಪ್ರಶ್ನೆಗಳನ್ನು technquery.covid19[at]gov[dot]in , ಇತರ ಪ್ರಶ್ನೆಗಳನ್ನು ಕೇಳಲು ncov2019[at]gov[dot]in ಗೆ ಇಮೇಲ್ ಮಾಡಬಹುದು ಮತ್ರು @CovidIndiaSeva ಗೆ ಟ್ವೀಟ್ ಮಾಡಬಹುದು.

ಕೋವಿಡ್-19 ಬಗ್ಗೆ ಯಾವುದೇ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಾಯವಾಣಿ ಸಂಖ್ಯೆ.: +91-11-23978046 ಅಥವಾ 1075 (ಟೋಲ್-ಫ್ರೀ). ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕೋವಿಡ್-19ಕ್ಕೆ ಸಂಬಂಧಿಸಿದ ಸಹಾಯವಾಣಿ ಸಂಖ್ಯೆಗಳ ಪಟ್ಟಿ https://www.mohfw.gov.in/pdf/coronvavirushelplinenumber.pdf ನಲ್ಲಿಯೂ ಲಭ್ಯವಿದೆ.

***

 


(Release ID: 1628908) Visitor Counter : 216