PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ

Posted On: 31 MAY 2020 6:13PM by PIB Bengaluru

ಕೋವಿಡ್-19: ಪಿ ಐ ಬಿ ದೈನಿಕ ವರದಿ

https://static.pib.gov.in/WriteReadData/userfiles/image/image002482A.png

https://static.pib.gov.in/WriteReadData/userfiles/image/image001ZTPU.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು ಪಿಐಬಿ ಮಾಡಿದ ವಾಸ್ತವದ ಪರಿಶೀಲನೆ -Fact check- ಯನ್ನು ಒಳಗೊಂಡಿದೆ)

Image

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ಕೋವಿಡ್ -19 ಅಪ್ಡೇಟ್ಚೇತರಿಕೆ ದರ 47.76% ಗೆ ಏರಿಕೆ

ಕಳೆದ 24 ಗಂಟೆಗಳಲ್ಲಿ, 4,614 ರೋಗಿಗಳು ಗುಣಮುಖರಾಗಿದ್ದಾರೆ. ಒಟ್ಟು 86,983 ಜನರು ಗುಣಮುಖರಾದಂತಾಗಿದೆ. ಇದರಿಂದ ಚೇತರಿಕೆ ದರ 47.76% ಗೇರಿದೆ. ಸಕ್ರಿಯ ವೈದ್ಯಕೀಯ ನಿಗಾದಲ್ಲಿರುವ ಪ್ರಕರಣಗಳ ಸಂಖ್ಯೆ ಇಂದಿನವರೆಗೆ 89,995.

ವಿವರಗಳಿಗೆ: https://pib.gov.in/PressReleseDetail.aspx?PRID=1627908

ಕೋವಿಡ್ -19 ವಿರುದ್ದ ಹೋರಾಟದ ಹೊಸ ಮಾರ್ಗದರ್ಶಿಗಳು 2020 ಜೂನ್ 1 ರಿಂದ ಜಾರಿ

ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ಕೋವಿಡ್ -19 ವಿರುದ್ದ ಹೋರಾಟಕ್ಕೆ ಮತ್ತು ಕಂಟೈನ್ ಮೆಂಟ್ ವಲಯದ ಹೊರಗಿನ ಪ್ರದೇಶಗಳನ್ನು ಹಂತ ಹಂತವಾಗಿ ಮುಕ್ತ ಮಾಡಲು (ಮರು ತೆರೆಯಲು)   ಹೊಸ ಮಾರ್ಗದರ್ಶಿಗಳನ್ನು ಬಿಡುಗಡೆ ಮಾಡಿದೆ. ಮಾರ್ಗದರ್ಶಿಗಳು 2020 ಜೂನ್ 1 ರಿಂದ ಜಾರಿಗೆ ಬರಲಿವೆ. ಮತ್ತು 2020 ಜೂನ್ 30 ರವರೆಗೆ ಜಾರಿಯಲ್ಲಿರುತ್ತವೆ. ಹಾಲಿ ಹಂತದ ಮರುತೆರೆಯುವಿಕೆ , ಅನ್ ಲಾಕ್ 1 , ಆರ್ಥಿಕ ಗಮನವನ್ನು ಒಳಗೊಂಡಿರುತ್ತದೆ. ಹೊಸ ಮಾರ್ಗದರ್ಶಿಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಜೊತೆ ವ್ಯಾಪಕ ಸಮಾಲೋಚನೆಗಳನ್ನು ಆಧರಿಸಿ ಹೊರಡಿಸಲಾಗಿದೆ. ಕಂಟೈನ್ಮೆಂಟ್ ವಲಯಗಳಲ್ಲಿ ಲಾಕ್ ಡೌನ್ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಟಾನಕ್ಕೆ ತರಲಾಗುವುದು. ಇವುಗಳನ್ನು ರಾಜ್ಯಗಳು /ಕೇಂದ್ರಾಡಳಿತ ಪ್ರದೇಶಗಳ ಸರಕಾರಗಳು ಇದನ್ನು ಅರೋಗ್ಯ ಸಚಿವಾಲಯ ನೀಡಿರುವ ಮಾರ್ಗದರ್ಶಿಗಳ ಅನ್ವಯ ವಿಂಗಡಿಸಿ , ಗುರುತಿಸಲಿವೆ. ಕಂಟೈನ್ಮೆಂಟ್ ವಲಯದೊಳಗೆ ಪರಿಧಿ ನಿಯಂತ್ರಣವನ್ನು ಕಟ್ಟು ನಿಟ್ಟಾಗಿ ಅನುಸರಿಸಬೇಕಾಗುತ್ತದೆ ಮತ್ತು ಅತ್ಯಾವಶ್ಯಕ ಕಾರ್ಯಚಟುವಟಿಕೆಗಳಿಗೆ ಮಾತ್ರ ಅವಕಾಶ ಇರುತ್ತದೆ. ಕಂಟೈನ್ಮೆಂಟ್ ವಲಯವನ್ನು ಹೊರತುಪಡಿಸಿ ಮೊದಲು ನಿಷೇಧಿಸಲಾದ ಎಲ್ಲಾ ಕಾರ್ಯಚಟುವಟಿಕೆಗಳಿಗೆ ಹಂತ ಹಂತವಾಗಿ ಅವಕಾಶ ಒದಗಿಸಲಾಗಿದೆ. ಇದಕ್ಕೆ ಗುಣಮಟ್ಟ ಕಾರ್ಯಾಚರಣಾ ಪ್ರಕ್ರಿಯೆಗಳನ್ನು (ಎಸ್..ಪಿ.) ಆರೋಗ್ಯ ಸಚಿವಾಲಯ ಸೂಚಿಸಲಿದೆ.

ವಿವರಗಳಿಗೆ : https://pib.gov.in/PressReleseDetail.aspx?PRID=1627965

ಮನ್ ಕಿ ಬಾತ್ 2.0 12ನೇ ಕಂತಿನಲ್ಲಿ ಪ್ರಧಾನ ಮಂತ್ರಿ ಭಾಷಣ

ಮನ್ ಕಿ ಬಾತ್ 2.0  ನೇ ಕಂತಿನಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದಲ್ಲಿ ಕೊರೊನಾ ವಿರುದ್ದ ಯುದ್ದವನ್ನು ಸಾಮೂಹಿಕ ಪ್ರಯತ್ನಗಳ ಮೂಲಕ ಧೈರ್ಯದಿಂದ ಮಾಡಲಾಗುತ್ತಿದೆ ಎಂದರು. ಆರ್ಥಿಕತೆಯ ಪ್ರಮುಖ ವಿಭಾಗವನ್ನು ತೆರೆಯಲಾಗಿರುವುದರ ನಡುವೆ ಕೋವಿಡ್ ಜಾಗತಿಕ ಸಾಂಕ್ರಾಮಿಕದ ವಿರುದ್ದ ಜನರು ಹೆಚ್ಚು ಜಾಗರೂಕರಾಗಿರಬೇಕು ಮತ್ತು ಎಚ್ಚರಿಕೆಯಿಂದಿರಬೇಕು ಎಂದು ಜನರಲ್ಲಿ ಮನವಿ ಮಾಡಿದರು. ಸೇವೆ ಮತ್ತು ತ್ಯಾಗ ನಮ್ಮ ಆದರ್ಶ ಮಾತ್ರವಲ್ಲಅದು ಜೀವನದ ಹಾದಿ ಎಂಬುದನ್ನು ನಮ್ಮ ಜನ ಸಾಬೀತು ಮಾಡಿದ್ದಾರೆ  ಎಂದು ಹೇಳಿದ ಪ್ರಧಾನ ಮಂತ್ರಿ ಅವರು ಯೋಗವು ಸಮುದಾಯಕ್ಕೆ , ರೋಗ ನಿರೋಧಕ ಶಕ್ತಿಗೆ ಮತ್ತು ಏಕತೆಗೆ ಉತ್ತಮ ಎಂದೂ ಹೇಳಿದರು. ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಆತ್ಮನಿರ್ಭರ ಭಾರತ ಆಂದೋಲಾನದಲ್ಲಿ ಭಾಗವಹಿಸುವಂತೆ ಕರೆ ನೀಡಿದ ಅವರು ಜಲ ಸಂರಕ್ಷಣೆಯಲ್ಲಿ ಈಗಿನ ತಲೆಮಾರು ತನ್ನ ಜವಾಬ್ದಾರಿಯನ್ನು ಅರಿತುಕೊಳ್ಳಬೇಕಾದ ಅಗತ್ಯವನ್ನು ಒತ್ತಿ ಹೇಳಿದರು. ಮಳೆ ನೀರನ್ನು ಹಿಡಿದಿಡಬೇಕಾದ ಅವಶ್ಯಕತೆಯನ್ನು ಪ್ರಧಾನ ಮಂತ್ರಿ ಅವರು ಪ್ರತಿಪಾದಿಸಿದರು ಮತ್ತು ಪ್ರತಿಯೊಬ್ಬರೂ ಜಲ ಸಂರಕ್ಷಣೆಯಲ್ಲಿ ಪಾಲ್ಗೊಳ್ಳಬೇಕು ಎಂದರು. ಪರಿಸರ ದಿನಾಚರಣೆಯಲ್ಲಿ ಗಿಡಗಳನ್ನು ನೆಡುವ ಮೂಲಕ ಮತ್ತು ನಿಸರ್ಗದ ಜೊತೆ ದೈನಂದಿನ ಬಾಂಧವ್ಯ ಬೆಳೆಸುವ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಬೇಕು ಎಂದೂ ದೇಶವಾಸಿಗಳಿಗೆ ಕರೆ ನೀಡಿದರು.

ವಿವರಗಳಿಗೆ: https://pib.gov.in/PressReleseDetail.aspx?PRID=1628127

ಪ್ರಧಾನ ಮಂತ್ರಿ ಅವರ 31.05.2020  “ಮನ್ ಕಿ ಬಾತ್ 2.0”  12 ನೇ ಕಂತಿನ ಭಾಷಣದ ಇಂಗ್ಲೀಷ್ ಅವತರಣಿಕೆ

ಗರಿಷ್ಟ ಮುಂಜಾಗರೂಕತಾ ಕ್ರಮಗಳೊಂದಿಗೆ ವಿಮಾನಗಳ ಹಾರಾಟವನ್ನು ಪುನರಾರಂಭಿಸಲಾಗಿದೆ. ; ಕೈಗಾರಿಕೋದ್ಯಮ ಕೂಡಾ ಸಹಜ ಸ್ಥಿತಿಗೆ ಮರಳುತ್ತಿದೆ. ಹೀಗೆ ಆರ್ಥಿಕತೆಯ ಪ್ರಮುಖ ವಲಯವೊಂದು ತೆರೆಯಲ್ಪಟ್ಟಿದೆ. ಇಂತಹ ಸ್ಥಿತಿಯಲ್ಲಿ ನಾವು ಹೆಚ್ಚು ಜಾಗರೂಕರಾಗಿರಬೇಕಾಗುತ್ತದೆ ಮತ್ತು ಎಚ್ಚರಿಕೆಯಿಂದಿರಬೇಕಾಗುತ್ತದೆ. ಅದು ಎರಡು ಯಾರ್ಡ್ ದೂರ ಸಾಮಾಜಿಕ ಅಂತರವಿರಲಿ, ಮುಖಗವಸು ಹಾಕಿಕೊಳ್ಳುವುದಿರಲಿ, ಅಥವಾ ಮನೆಯಲ್ಲೇ ಇರುವುದಿರಲಿ ಸಾದ್ಯವಾದಷ್ಟು ಮಟ್ಟಿಗೆ ಉತ್ತಮ ವಿಧಾನಗಳು. ಸಂಪೂರ್ಣ ಅನುಸರಣೆಯಲ್ಲಿ ನಮ್ಮಿಂದ ಯಾವುದೇ ಕೊರತೆ ಇರಬಾರದು. ..

“.. ಸ್ನೇಹಿತರೇ , ಕೊರೊನಾ ವಿರುದ್ದ ನಮ್ಮ ಹೋರಾಟದ ಹಾದಿ ಬಹಳ ಧೀರ್ಘ ಹೋಗಲಿದೆ. ಇದು ವಿಕೋಪ, ಅದೊಂದು ಉಪದ್ರವ. ಇಡೀ ವಿಶ್ವದಲ್ಲಿ ಅದಕ್ಕೆ ಇತ್ಯೋಪರಿ ಇಲ್ಲ. ಬಗ್ಗೆ ಹಿಂದಿನ ಅನುಭವ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ , ನಾವು ಹೊಸ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಮತ್ತು ಅದರ ಫಲವಾಗಿ ಕಠಿಣ ಸಂದರ್ಭಗಳನ್ನು ಎದುರಿಸುತ್ತಿದ್ದೇವೆ. . ಇದು ವಿಶ್ವದಲ್ಲಿ ಕೊರೊನಾ ಬಾಧಿತವಾದ ಪ್ರತೀ ದೇಶದ ಸ್ಥಿತಿ . ಭಾರತ ಕೂಡಾ ಅದಕ್ಕೆ ಅತೀತವಲ್ಲ. ಸಂಕಷ್ಟದಿಂದ ತೊಂದರೆಗೀಡಾಗದೆ ಇರುವ ಯಾವುದೇ ವಲಯ ನಮ್ಮ ದೇಶದಲ್ಲಿ ಇಲ್ಲ. ಸಮಾಜದ ಅಂಚಿನಲಿರುವ, ಸವಲತ್ತುಗಳು ಇಲ್ಲದೆ ಇರುವ ಕಾರ್ಮಿಕರು ಇದರಿಂದ ಭಾರೀ ತೊಂದರೆಗೆ ಒಳಗಾಗಿದ್ದಾರೆ. ಅವರ ಕಷ್ಟ; ದುಃಖ, ಅವರ ನೋವು, ಅವರ ಸಂಕಷ್ಟಗಳನ್ನು ಮಾತಿನಲ್ಲಿ ವ್ಯಕ್ತಪಡಿಸಲಾಗದು. ಅವರು ಮತ್ತು ಅವರ ಕುಟುಂಬದವರು ಅನುಭವಿಸಿದ ತೊಂದರೆಗಳ ಬಗ್ಗೆ ಅರಿಯದವರು ನಮ್ಮಲ್ಲಿ ಯಾರೂ ಇಲ್ಲ. ನಾವೆಲ್ಲರೂ ಅವರ ಹತಾಶೆಯನ್ನು , ಹಿಂಸೆಯನ್ನು ಹಂಚಿಕೊಳ್ಳಲು ಪ್ರಯತ್ನಿಸಿದ್ದೇವೆ. ಇಡೀಯ ದೇಶವೂ ಅದನ್ನು ಮಾಡುತ್ತಿದೆ..”

“.. ನನ್ನ ಪ್ರೀತಿಯ ದೇಶವಾಸಿಗಳೇ ಸ್ವಚ್ಚ ಪರಿಸರ ನಮ್ಮ ಜೀವನದ ಸಮಗ್ರ ಭಾಗ. ಮತ್ತು ನಮ್ಮ ಮಕ್ಕಳ ಭವಿಷ್ಯತ್ತು ಕೂಡಾ. ಆದುದರಿಂದ ನಾವು ವಿಷಯದ ಬಗ್ಗೆ ವೈಯಕ್ತಿಕ ಮಟ್ಟದಲ್ಲಿ ಕೂಡಾ ಗಮನ ಹರಿಸಬೇಕಾಗಿದೆ. ಪರಿಸರ ದಿನದಂದು ನೀವೆಲ್ಲ ಗಿಡ ನೆಟ್ಟು ಮತ್ತು ಕೆಲವು ನಿರ್ಧಾರಗಳನ್ನು ಕೈಗೊಂಡು ಪ್ರಕೃತಿಯ ಜೊತೆ ದಿನನಿತ್ಯದ ಬಾಂಧವ್ಯವನ್ನು ಬೆಳೆಸಿಕೊಳ್ಳಲು ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ. ಹೌದು!. ಬೇಸಿಗೆ ಬಿಸಿಲು ಏರುತ್ತಿದೆ, ಆದುದರಿಂದ ಹಕ್ಕಿಗಳಿಗೆ ನೀರಿನ ಅನುಕೂಲ ಮಾಡಿಕೊಡಲು ಮರೆಯಬೇಡಿ...”

ವಿವರಗಳಿಗೆ: https://pib.gov.in/PressReleseDetail.aspx?PRID=1628091

ಮೋದಿ 2.0 ಒಂದು ವರ್ಷ- ಸ್ವಾವಲಂಬಿ ಭಾರತದತ್ತ ಹೆಜ್ಜೆ

ಮೋದಿ 2.0 ಸರಕಾರ ಕಳೆದ ಒಂದು ವರ್ಷದಲ್ಲಿ ಕೈಗೊಂಡ ವಿವಿಧ ನಿರ್ಧಾರಗಳ ಸಂಪೂರ್ಣ ಸಾರಾಂಶ , ಭಾರತೀಯ ಚರಿತ್ರೆಯಲ್ಲಿ ಮತ್ತು ನವಭಾರತದ ಉದಯದಲ್ಲಿ ಒಂದು ನಿರ್ಧಾರಕ ಅವಧಿ.

ವಿವರಗಳಿಗೆ : https://pib.gov.in/PressReleseDetail.aspx?PRID=1627953

ಶ್ರಮಿಕ ರೈಲುಗಳ ಬಗ್ಗೆ ಇನ್ನಷ್ಟು ಯೋಜನಾಬದ್ದವಾಗುವಂತೆ ಮತ್ತು ಸಮನ್ವಯ ಸಾಧಿಸುವಂತೆ ರಾಜ್ಯ ಸರಕಾರಗಳನ್ನು ಕೋರಿದ ರೈಲ್ವೇ ಸಚಿವಾಲಯ

ಶ್ರಮಿಕ ರೈಲುಗಳ ಬಗ್ಗೆ ಸೂಕ್ತ ಯೋಜನೆ ಖಾತ್ರಿಪಡಿಸುವಂತೆ ಮತ್ತು ಸಮನ್ವಯ ಸಾಧಿಸುವಂತೆ ರೈಲ್ವೇ ಸಚಿವಾಲಯವು ರಾಜ್ಯ ಸರಕಾರಗಳನ್ನು ಕೋರಿದೆಯಲ್ಲದೆ, ಸಿಲುಕಿ ಹಾಕಿಕೊಂಡಿರುವ ವ್ಯಕ್ತಿಗಳು ರೈಲು ಮೂಲಕ ಪ್ರಯಾಣಿಸುವ ಬಗ್ಗೆ ಬರಬಹುದಾದ ಬೇಡಿಕೆಯನ್ನು ಸಾಕಷ್ಟು ಮುಂಚಿತವಾಗಿ ಅಂದಾಜು ಮಾಡುವಂತೆಯೂ ಕೋರಿದೆ. “ಶ್ರಮಿಕ ವಿಶೇಷ ರೈಲುಗಳಲ್ಲಿ ರಾಜ್ಯಗಳ ಬೇಡಿಕೆಯನುಸಾರ ರೈಲ್ವೇಯು ರೇಕ್ ಗಳನ್ನು ಜೋಡಿಸುವ ಸಾಮರ್ಥ್ಯ ಹೊಂದಿದೆ. ಪ್ರಯಾಣಿಕರನ್ನು ನಿಲ್ದಾಣಕ್ಕೆ ಕರೆತರದೇ ಇರುವ ಹಲವು ಘಟನೆಗಳು ನಡೆದಿರುವ ಹಿನ್ನೆಲೆಯಲ್ಲಿ , ಅಧಿಸೂಚಿಸಲಾದ ರೈಲುಗಳು ರದ್ದಾಗಿವೆ. ಹಲವು ರಾಜ್ಯಗಳು ಕಾರ್ಮಿಕರನ್ನು ಕಳುಹಿಸಿಕೊಡುವ ರಾಜ್ಯಗಳಿಗೆ ಅನುಮತಿ ಕೊಡದಿರುವುದರಿಂದ ರಾಜ್ಯಗಳಿಗೆ ವಲಸೆ ಕಾರ್ಮಿಕರನ್ನು  ದೊಡ್ಡ ಸಂಖ್ಯೆಯಲ್ಲಿ ಕರೆದೊಯ್ಯುವುದಕ್ಕೆ ಅಡ್ಡಿಯಾಗಿದೆ.

ವಿವರಗಳಿಗೆhttps://pib.gov.in/PressReleseDetail.aspx?PRID=1627937

ಕೋವಿಡ್ ಬಿಕ್ಕಟ್ಟಿನಲ್ಲಿ ಸಂದರ್ಭಕ್ಕೆ ತಕ್ಕಂತೆ ಎದ್ದು ನಿಂತ ಔಷಧಿ ತಯಾರಕ ಉದ್ಯಮವನ್ನು ಶ್ಲಾಘಿಸಿದ ಶ್ರೀ ಪೀಯುಶ್ ಗೋಯಲ್

ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪೀಯುಶ್ ಗೋಯಲ್ ಅವರಿಂದು ಔಷಧಿ ತಯಾರಕಾ ಉದ್ಯಮಗಳ ನೇತಾರರು ಮತ್ತು ಫಾರ್ಮಾ ಸಂಘಟನೆಗಳ ನೇತಾರರ ಜೊತೆ ವೀಡಿಯೋ ಕಾನ್ಫರೆನ್ಸ್ ಸಂವಾದ ನಡೆಸಿದರು. ಸಂವಾದದಲ್ಲಿ ಶ್ರೀ ಗೋಯಲ್ ಅವರು ಕೋವಿಡ್ ಬಿಕ್ಕಟ್ಟಿನಲ್ಲಿ ಸಂದರ್ಭಕ್ಕೆ ತಕ್ಕಂತೆ ಎದ್ದು ನಿಂತು ಫಾರ್ಮಾ ಕೈಗಾರಿಕೋದ್ಯಮವು ಭಾರತವು ಹೆಮ್ಮೆ ಪಡುವಂತೆ ಮಾಡಿದೆ ಎಂದು ಶ್ಲಾಘಿಸಿದರು. ಕಳೆದ ಎರಡು ತಿಂಗಳಲ್ಲಿ 120 ದೇಶಗಳು ಕೆಲವು ಅವಶ್ಯಕ ಔಷಧಿಗಳನ್ನು ಪಡೆದಿವೆ , ಇದರಲ್ಲಿ ಸುಮಾರು 40 ದೇಶಗಳು ಅವುಗಳನ್ನು ದತ್ತಿಯಾಗಿ , ಉಚಿತವಾಗಿ ಪಡೆದಿವೆ . ವಿಶ್ವವು ಭಾರತವನ್ನುವಿಶ್ವದ  ಔಷಧಾಲಯ” (ಫಾರ್ಮಸಿ ಆಫ್ ವರ್ಲ್ಡ್ ) ಎಂದು ಪರಿಗಣಿಸಿದೆ ಎಂದವರು ಹೇಳಿದರು. ಭಾರತದ ನಿಲುವನ್ನು ಇಡೀ ವಿಶ್ವವೇ ಮೆಚ್ಚಿದೆ ಮತ್ತು ಇದರಿಂದ ಭಾರತದ ಪ್ರತಿಷ್ಟೆ ಮತ್ತು ಗೌರವ ಹೆಚ್ಚಿದೆ ಎಂದರು. ಅವಧಿಯಲ್ಲಿ ದೇಶವು ಯಾವುದೇ ರೀತಿಯ ಔಷಧಿಗಳ ಕೊರತೆ ಎದುರಿಸದಂತೆ ಖಾತ್ರಿಪಡಿಸಲು ಅಸಾಮಾನ್ಯ ಸಾಧನೆ ತೋರಿದುದಕ್ಕಾಗಿ ಫಾರ್ಮಾ ಕೈಗಾರಿಕೋದ್ಯಮವು ಸಚಿವರಿಂದ ಭಾರೀ ಮೆಚ್ಚುಗೆಗೆ ಪಾತ್ರವಾಯಿತು.

ವಿವರಗಳಿಗೆ: https://pib.gov.in/PressReleseDetail.aspx?PRID=16278142

ಸಮುದ್ರ ಸೇತುಕಾರ್ಯಾಚರಣೆಯ ಮುಂದಿನ ಹಂತ ಆರಂಭಿಸಿದ ಭಾರತೀಯ ನೌಕಾದಳ

ಸಾಗರೋತ್ತರ ಭಾರತೀಯ ನಾಗರಿಕರನ್ನು ಮರಳಿ ಕರೆತರುವಸಮುದ್ರ ಸೇತುಮುಂದಿನ ಹಂತದ ಕಾರ್ಯಾಚರಣೆ 2020 ಜೂನ್ 1 ರಿಂದ ಆರಂಭಗೊಳ್ಲಲಿದೆ. ಹಂತದಲ್ಲಿ ಭಾರತೀಯ ನೌಕಾದಳದ ಹಡಗು ಜಲಾಶ್ವ ಶ್ರೀಲಂಕಾ ಗಣತಂತ್ರದ  ಕೊಲೊಂಬೋದಿಂದ 700 ಪ್ರಯಾಣಿಕರನ್ನು ತಮಿಳುನಾಡಿನ ಟ್ಯುಟಿಕೋರಿನ್ ಗೆ ಕರೆತರಲಿದೆ. ಮತ್ತು ತದನಂತರ ಮಾಲ್ದೀವ್ಸ್ ಗಣತಂತ್ರ ರಾಷ್ಟ್ರದ ಮಾಲೆಯಿಂದ ಮತ್ತೆ 700 ಮಂದಿಯನ್ನು ಟ್ಯುಟಿಕೋರಿನ್ ಗೆ ಕರೆತರಲಿದೆ. ಭಾರತೀಯ ನೌಕಾದಳವು ಹಿಂದಿನ ಹಂತದ ಕಾರ್ಯಾಚರಣೆಗಳಲ್ಲಿ ಈಗಾಗಲೇ ಮಾಲೆಯಿಂದ 1,488 ಭಾರತೀಯ ನಾಗರಿಕರನ್ನು ಕೊಚ್ಚಿಗೆ ಕರೆತಂದಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1627939

ಮನ್ ಕಿ ಬಾತ್ ನಲ್ಲಿನನ್ನ ಜೀವನ ನನ್ನ ಯೋಗವೀಡಿಯೋ ಬ್ಲಾಗಿಂಗ್ ಸ್ಪರ್ಧೆಯನ್ನು ಘೋಷಿಸಿದ ಪ್ರಧಾನ ಮಂತ್ರಿ

ವಿವರಗಳಿಗೆ : https://pib.gov.in/PressReleseDetail.aspx?PRID=1628152

ಏಕ್ ಭಾರತ್ ಶೇಷ್ಟ ಭಾರತ್ ಸ್ಪೂರ್ತಿಯನ್ನು ಹರಡಲು ಮತ್ತು ಯುವಕರನ್ನು ಮೂಲಭೂತ ಕರ್ತವ್ಯಗಳ ಬಗ್ಗೆ  ಸೂಕ್ಷ್ಮತ್ವ ಬೆಳೆಸಿಕೊಳ್ಳುವಂತೆ ಮಾಡಲು ಪಂಜಾಬಿನ ಕೇಂದ್ರೀಯ ವಿಶ್ವವಿದ್ಯಾಲಯದ .ಬಿ.ಎಸ್.ಬಿ. ಕ್ಲಬ್ ನಿಂದ ಕಿರು ವೀಡಿಯೋ “ “ಮೂಲಭೂತ ಕರ್ತವ್ಯಗಳ ಬಗ್ಗೆ ಒಂದು ನೆನಪು”  ( ರಿಮೈಂಡರ್ ಆನ್ ಫಂಡಮೆಂಟಲ್ ಡ್ಯೂಟೀಸ್ ) ಬಿಡುಗಡೆ

ಯುವಕರಲ್ಲಿ ಮೂಲಭೂತ ಕರ್ತವ್ಯಗಳ ಬಗ್ಗೆ ಸೂಕ್ಷ್ಮತ್ವ ಬೆಳೆಸಲು , ಪಂಜಾಬ್ ಭಟಿಂಡಾದಲ್ಲಿಯ ಕೇಂದ್ರೀಯ ವಿಶ್ವವಿದ್ಯಾಲಯ ರಿಮೈಂಡರ್ ಆನ್ ಫಂಡಮೆಂಟಲ್ ಡ್ಯೂಟೀಸ್ಶೀರ್ಷಿಕೆಯ ಕಿರು ವೀಡಿಯೋವನ್ನು ಬಿಡುಗಡೆ ಮಾಡಿದೆ. ನಮ್ಮ ಶಾಸನಾತ್ಮಕ ಕರ್ತವ್ಯಗಳ ಬಗ್ಗೆ ಬದ್ದರಾಗಿರುವಂತೆ ಪ್ರತಿಯೊಬ್ಬರಿಗೂ ಪ್ರೇರಣೆ ನೀಡುವುದು ಇದರ ಉದ್ದೇಶ. ಕೋವಿಡ್ -19  ಹರಡುವಿಕೆ ನಿಯಂತ್ರಣ ಹೋರಾಟದಲ್ಲಿ ಸರಕಾರ ನೀಡಿರುವ ಪ್ರತಿಬಂಧಕ ಮಾರ್ಗದರ್ಶಿಗಳನ್ನು ಜವಾಬ್ದಾರಿಯುತ ನಾಗರಿಕರಾಗಿ ಅನುಸರಿಸುವಂತೆ ಪ್ರೇರಣೆ ನೀಡುವುದು ಮತ್ತು ಪ್ರತಿಯೊಬ್ಬರೂಸಂಕಲ್ಪ್ ಸೇ ಸಿದ್ದಿ ಕಿ ಔರ್ಆಂದೋಲನದ ಭಾಗವಾಗುವಂತೆ ಮಾಡುವುದು ಉದ್ದೇಶಗಳಲ್ಲಿ ಸೇರಿದೆ. ವೀಡಿಯೋದಲ್ಲಿ ದೇಶದ 28 ವಿವಿಧ ರಾಜ್ಯಗಳನ್ನು ಪ್ರತಿನಿಧಿಸುವ  28 ಸಿ.ಯು.ಪಿ.ಬಿ. .ಬಿ.ಎಸ್.ಬಿ. ಕ್ಲಬ್ ಗಳ ವಿದ್ಯಾರ್ಥಿ ಸ್ವಯಂಸೇವಕರು  ಭಾಗವಹಿಸಿದ್ದಾರೆ ಮತ್ತು ಮೂಲಭೂತ ಕರ್ತವ್ಯಗಳನ್ನು ಅವರವರ ರಾಜ್ಯಗಳ ಪ್ರಾದೇಶಿಕ ಭಾಷೆಗಳಿಗೆ ಅನುವಾದ ಮಾಡಿದ್ದಾರೆ.  

ವಿವರಗಳಿಗೆ: https://pib.gov.in/PressReleseDetail.aspx?PRID=1628097

ಮೋದಿ ಸರಕಾರದ 2.0 ಮೊದಲ ವರ್ಷದ ಸಂದರ್ಭದಲ್ಲಿ ಡಿ..ಆರ್.ಪಿ.ಜಿ. ಸಾಧನೆಗಳನ್ನು ಕುರಿತ -ಕಿರುಹೊತ್ತಿಗೆ ಯನ್ನು ಬಿಡುಗಡೆ ಮಾಡಿದ ಡಾ. ಜಿತೇಂದ್ರ ಸಿಂಗ್

ಸಂದರ್ಭದಲ್ಲಿ ಮಾತನಾಡಿದ ಡಾ. ಜಿತೇಂದ್ರ ಸಿಂಗ್ ಅವರು ಡಿ..ಆರ್.ಪಿ.ಜಿ. ಯು ಪ್ರಧಾನ ಮಂತ್ರಿಗಳ ಉತ್ತಮ ಆಡಳಿತದ ಮುಂಗಾಣ್ಕೆಗೆ ತಕ್ಕಂತೆ ಕೆಲಸ ಮಾಡಿದೆ ಮತ್ತು ಸುಧಾರಣೆ, ಸಾಧನೆ ಮತ್ತು ಸಂಪೂರ್ಣ ಪರಿವರ್ತನೆಯ ಮಂತ್ರವನ್ನು ಅಂಗೀಕರಿಸಿದೆ ಎಂದರು. ಡಿ..ಆರ್.ಪಿ.ಜಿ.ಯು ಕೈಗೊಂಡ ವ್ಯವಸ್ಥಿತ ಸುಧಾರಣೆಗಳ ಯಶಸ್ಸು  ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಅವಧಿಯಲ್ಲಿ ಬೆಳಕಿಗೆ ಬಂದಿತು. ಇದರಲ್ಲಿ ಹಲವು ಸಚಿವಾಲಯಗಳು/ ಇಲಾಖೆಗಳು -ಆಫೀಸ್ ಬಳಸಿ ಯಾವುದೇ ಅಡೆ ತಡೆ ಇಲ್ಲದೆ ಮನೆಯಿಂದಲೇ ಕೆಲಸ ಮಾಡಬಹುದಾದ  ಮತ್ತು ಕೋವಿಡ್ -19 ಕ್ಕೆ ಸಂಬಂಧಿಸಿದ 0.87 ಲಕ್ಷ ಸಾರ್ವಜನಿಕ ಕುಂದುಕೊರತೆಗಳನ್ನು ದಾಖಲೆ ಸರಾಸರಿ ಕಾಲಾವಧಿಯಾದ ಕುಂದುಕೊರತೆಯೊಂದಕ್ಕೆ  1.45 ದಿನಗಳಲ್ಲಿ ಸಕಾಲದಲ್ಲಿ ಪರಿಹಾರ ಮಾಡಲು ಸಾಧ್ಯವಾಯಿತು  ಎಂದೂ ಡಾ. ಜಿತೇಂದ್ರ ಸಿಂಗ್ ಹೇಳಿದರು.

ವಿವರಗಳಿಗೆ: https://pib.gov.in/PressReleseDetail.aspx?PRID=1627953

 

ಪಿ ಐ ಬಿ ಕ್ಷೇತ್ರೀಯ ಕಚೇರಿಗಳ ವರದಿ

  •  ಮಹಾರಾಷ್ಟ್ರ: 2,940 ಹೊಸ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಕೋವಿಡ್ -19 ದೃಢೀಕೃತ ಪ್ರಕರಣಗಳ ಒಟ್ಟು ಸಂಖ್ಯೆ 65,168 ಕ್ಕೇರಿದೆ. ಇದರಲ್ಲಿ 34,881 ಆಕ್ಟಿವ್ ಪ್ರಕರಣಗಳು. ಹಾಟ್ ಸ್ಪಾಟ್ ಮುಂಬಯಿಯಲ್ಲಿ  ಶನಿವಾರದಂದು 1510 ಹೊಸ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಮುಂಬಯಿಯಲ್ಲಿ ಕೋವಿಡ್ ರೋಗಿಗಳನ್ನು ಶುಶ್ರೂಷೆ ಮಾಡಲು ವೈದ್ಯರು ಹಾಗು ದಾದಿಯರನ್ನು ಗೌರವಧನದ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಮಹಾರಾಷ್ಟ್ರ ಸರಕಾರ ನಿರ್ಧರಿಸಿದೆ. ಅವರಿಗೆ ತಿಂಗಳಿಗೆ 80,000 ಗೌರವಧನ ನೀಡಲಾಗುವುದು.
  • ಗುಜರಾತ್: 412 ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ ರಾಜ್ಯದಲ್ಲಿ ಕೋವಿಡ್-19  ಪೀಡಿತರ ಒಟ್ಟು ಸಂಖ್ಯೆ 16356 ಕ್ಕೇರಿದೆ. ಇದರಲ್ಲಿ 6119 ಆಕ್ಟಿವ್ ಪ್ರಕರಣಗಳು, 6052 ಜನರ ಪರಿಸ್ಥಿತಿ ಸ್ಥಿರವಾಗಿದೆ, ರಾಜ್ಯದಲ್ಲಿ 62 ಮಂದಿ ವೆಂಟಿಲೇಟರಿನಲ್ಲಿದ್ದಾರೆ. ಕೋವಿಡ್ -19 ರಿಂದಾಗಿ ಮೃತಪಟ್ತವರ ಸಂಖ್ಯೆ 1000 ಗಡಿ ದಾಟಿದೆ ಕಳೆದ 24 ಗಂಟೆಗಳಲ್ಲಿ 27 ಮಂದಿ ಮೃತಪಟ್ಟಿದ್ದಾರೆ. ಅಹ್ಮದಾಬಾದಿನಲ್ಲಿಯೇ 24 ಮಂದಿ ಮೃತಪಟ್ಟಿದ್ದರೆ , ಗಾಂಧೀನಗರ, ಬನಸ್ಕಾಂತ ಮತ್ತು ಮೆಹ್ಸಾನಾ ಗಳಿಂದ ತಲಾ ಒಂದೊಂದು ಸಾವಿನ ಪ್ರಕರಣ ವರದಿಯಾಗಿದೆ.
  • ಮಧ್ಯ ಪ್ರದೇಶ: 246 ಹೊಸ ಸೋಂಕಿನ ಪ್ರಕರಣಗಳು ವರದಿಯಾಗುವುದರೊಂದಿಗೆ ರಾಜ್ಯದಲಿ ಒಟ್ಟು ಕೋವಿಡ್ -19 ಪ್ರಕರಣಗಳ ಸಂಖ್ಯೆ 7891 ಕ್ಕೇರಿದೆ. ಇದರಲ್ಲಿ 3104 ಆಕ್ಟಿವ್ ಪ್ರಕರಣಗಳು. ಹೆಚ್ಚಿನ ಹೊಸ ಪ್ರಕರಣಗಳು (87) ಹಾಟ್ ಸ್ಪಾಟ್ ಇಂದೋರ್ ನಿಂದ ವರದಿಯಾಗಿವೆ.
  • ರಾಜಸ್ಥಾನ: ಇಂದು 76 ಹೊಸ ಸೋಂಕುಗಳು ವರದಿಯಾಗಿವೆ. ಇದರಿಂದ ರಾಜ್ಯದಲ್ಲಿ ಒಟ್ಟು ಕೋವಿಡ್ -19 ಪಾಸಿಟಿವ್ ಪ್ರಕರಣಗಳ ಸಂಖ್ಯೆ 8693 ಕ್ಕೇರಿದೆ. ಹೊಸ ಸೋಂಕುಗಳು ಜೈಪುರ, ಜಲಾವರ ಗಳಿಂದ ವರದಿಯಾಗಿವೆ. ವಲಸೆಗಾರರ ಆಗಮನದಿಂದಾಗಿ ಹಲವು ಜಿಲ್ಲೆಗಳಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್  ಹೇಳಿದ್ದಾರೆ. ಜೊತೆಗೆ  ಸರಪಂಚರು ಮತ್ತು ಗ್ರಾಮ ಸೇವಕರು ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸುತ್ತಿದ್ದಾರೆ ಎಂದೂ ಅವರು ಹೇಳಿದ್ದಾರೆ.
  • ಛತ್ತೀಸ್ ಗಢ: ಇಂದು ರಾಜ್ಯದಲ್ಲಿ 32 ಹೊಸ ಕೋವಿಡ್ -19 ದೃಢೀಕೃತ  ಪ್ರಕರಣಗಳು ವರದಿಯಾಗಿವೆ. ಇವುಗಳಲ್ಲಿ 16 ಪ್ರಕರಣಗಳು ಜಾಶ್ಪುರ್ ಜಿಲ್ಲೆಯವು ಮತ್ತು 12 ಪ್ರಕರಣಗಳು ಮಹಾಸಮುಂದ್ ಮತ್ತು 2 ಪ್ರಕರಣಗಳು ಕೋರ್ಬಾದವು. ರಾಯ್ಪುರ ಮತ್ತು ಬಿಲಾಸ್ಪುರಗಳಿಂದ ತಲಾ ಒಂದೊಂದು ಪ್ರಕರಣಗಳು ವರದಿಯಾಗಿವೆ. ಇತ್ತೀಚಿನ ಅಪ್ಡೇಟಿನ ಪ್ರಕಾರ ರಾಜ್ಯದಲ್ಲಿ 344 ಆಕ್ಟಿವ್ (ಸಕ್ರಿಯ ) ಪ್ರಕರಣಗಳಿವೆ.
  • ಕೇರಳ: ಲಾಕ್ ಡೌನ್ ವಿಸ್ತರಣೆಯಾಗಿರುವುದರಿಂದ ಅಂತಾರಾಜ್ಯ ಸಂಚಾರಕ್ಕೆ ನೋಂದಣೆ ಮುಂದುವರಿಯುವ ನಿರೀಕ್ಷೆ ಇದೆ.ಕೇಂದ್ರ ಸರಕಾರ ಸಲಹೆ ಮಾಡಿರುವ ಲಾಕ್ ಡೌನ್ ಸಡಿಲಿಕೆಗಳನ್ನು ಸಾರ್ವಜನಿಕರ ಸುರಕ್ಷೆಯನ್ನು ಪರಿಗಣಿಸಿದ ಬಳಿಕವೇ ಅನುಷ್ಟಾನಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವರು ಹೇಳಿದ್ದಾರೆ. ಕೇಂದ್ರವು ಧಾರ್ಮಿಕ ಆರಾಧನಾ ಕೇಂದ್ರಗಳನ್ನು ತೆರೆಯಲು ನಿರ್ಧರಿಸಿದರೆ ರಾಜ್ಯ ಸರಕಾರವು ಸುರಕ್ಷಾ ಶಿಷ್ಟಾಚಾರ ಪಾಲಿಸುವ  ಮೂಲಕ ಅದನ್ನು ಅನುಸರಿಸುತ್ತದೆ ಎಂದೂ ಸಚಿವರು ತಿಳಿಸಿದರು. ಇಂದು ರಾಜ್ಯಾದ್ಯಂತ ಸಂಪೂರ್ಣ ಲಾಕ್ ಡೌನ್ ಜಾರಿಯಲ್ಲಿತ್ತು. ಮುಂಗಾರು ಮಳೆಗೆ ಮೊದಲು ವೈರಲ್ ಖಾಯಿಲೆ ಹರಡುವಿಕೆ ತಡೆಗಟ್ಟಲು ಮುಖ್ಯಮಂತ್ರಿಗಳು ಕರೆ ನೀಡಿದ ಸ್ವಚ್ಚತಾ ಆಂದೋಲನದಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು, ಮತ್ತು ನಿವಾಸೀ ಸಂಘಟನೆಗಳು ಸಕ್ರಿಯವಾಗಿ ಪಾಲ್ಗೊಂಡಿದ್ದವು. ನಿನ್ನೆ 58 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರಿಂದ ಆಕ್ಟಿವ್ ಪ್ರಕರಣಗಳ ಸಂಖ್ಯೆ ಈಗ 624. ಮತ್ತೆ ಐದು ಸ್ಥಳಗಳನ್ನು ಹಾಟ್ ಸ್ಪಾಟ್ ಗಳೆಂದು ಘೋಷಿಸಲಾಗಿದ್ದು, ಒಟ್ಟು ಸಂಖ್ಯೆ 106 ಕ್ಕೇರಿದೆ.
  • ತಮಿಳುನಾಡು: ಚೆನ್ನೈ ನಗರ, ತಿರುವಲ್ಲೂರ್, ಚೆಂಗಲ್ಪಟ್ಟು ಮತ್ತು ಕಾಂಚೀಪುರಂ ಜಿಲ್ಲೆಗಳನ್ನು ಹೊರತುಪಡಿಸಿ ಎರಡು ತಿಂಗಳ ಬಳಿಕ ತಮಿಳುನಾಡಿನಲ್ಲಿ ನಾಳೆ ಸೋಮವಾರದಿಂದ ಸಾರ್ವಜನಿಕ ಸಾರಿಗೆ ಪುನರಾರಂಭಗೊಳ್ಳಲಿದೆ. ರಾಜ್ಯ ಮಾಹಿತಿ ಮತ್ತು ಪ್ರಚಾರ ಸಚಿವರು .ಟಿ.ಟಿ. ವೇದಿಕೆಯಲ್ಲಿ ಚಲನಚಿತ್ರಗಳನ್ನು ಬಿಡುಗಡೆ ಮಾಡುವುದು ಚಲನಚಿತ್ರ ಉದ್ಯಮಕ್ಕೆ ಅನಾರೋಗ್ಯಕಾರಕ  ಎಂದು ಹೇಳಿದ್ದಾರೆ .ತಮಿಳುನಾಡಿನಲ್ಲಿ ಸಹಕಾರಿ ಬ್ಯಾಂಕುಗಳು ಸಣ್ಣ ವ್ಯಾಪಾರೋದ್ಯಮಿಗಳಿಗೆ 50,000 ರೂಪಾಯಿ ಸಾಲ ನೀಡಲಿವೆ. ನಿನ್ನೆ 938 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇದುವರೆಗೆ ದಿನನಿತ್ಯ ವರದಿಯಾಗುತ್ತಿದ್ದ ಪ್ರಕರಣಗಳ ಸಂಖ್ಯೆಗೆ ಹೋಲಿಸಿದರೆ ಇದು ಗರಿಷ್ಟ. ಇದರಲ್ಲಿ 616 ಪ್ರಕರಣಗಳು ಚೆನ್ನೈಯವು. ಇದುವರೆಗೆ ಒಟ್ಟು ಪ್ರಕರಣಗಳು: 21,184 ಆಕ್ಟಿವ್ ಪ್ರಕರಣಗಳು:9021, ಸಾವುಗಳು: 160. ಗುಣಮುಖರಾಗಿ ಬಿಡುಗಡೆಯಾದವರು 12,000 . ಚೆನ್ನೈಯಲ್ಲಿ ಆಕ್ಟಿವ್ ಪ್ರಕರಣಗಳ ಸಂಖ್ಯೆ ;6539
  • ಕರ್ನಾಟಕ: ನಾಳೆಯಿಂದ ವಿದ್ಯಾರ್ಥಿಗಳು ಆನ್ ಲೈನ್ ತರಗತಿಗಳಿಗೆ ಲಾಗಿನ್ ಆಗಬೇಕಾಗಿದೆ. ಹಲವು ಶಾಲೆಗಳು ಮಕ್ಕಳಿಗೆ ಸಮವಸ್ತ್ರ ಧರಿಸಿ ಪೋಷಕರ ಜೊತೆ ಪಾಠ ಪ್ರವಚನಗಳಿಗಾಗಿ ಲಾಗಿನ್ ಆಗುವಂತೆ ಸೂಚಿಸಿವೆ. ರಾಯಚೂರು ಜಿಲ್ಲೆಯಲ್ಲಿ ಭಾರೀ ಮಳೆ ಬೀಳುತ್ತಿರುವುದರಿಂದ ನಿವಾಸಿಗಳು ತೊಂದರೆಗೀಡಾಗಿದ್ದಾರೆ. ಕೇಂದ್ರ ಸರಕಾದ ಮಾರ್ಗದರ್ಶಿಗಳ ಬಳಿಕ ಹೊಸ ಶೈಕ್ಷಣಿಕ ವೇಳಾಪಟ್ಟಿ ಎಂದು ಕರ್ನಾಟಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.ರಾಜ್ಯದಲ್ಲಿ ಆರಾಧನಾ ಸ್ಥಳಗಳಿಗೆ ಸಂಬಂಧಿಸಿ ಹೊಸ ಮಾನದಂಡಗಳನ್ನು ಹೊರಡಿಸಿದೆ. ನ್ಯೂಜಿಲ್ಯಾಂಡಿನಲ್ಲಿ ಸಿಲುಕಿ ಹಾಕಿಕೊಂಡಿರುವ ಇಂಜಿನಿಯರುಗಳನ್ನು ಹಿಂದಕ್ಕೆ ಕರೆತರಲು ಕರ್ನಾಟಕವು ಕೇಂದ್ರದ ನೆರವನ್ನು ಕೋರಿದೆ. ನಿನ್ನೆ 141 ಹೊಸ ಪ್ರಕರಣಗಳು ವರದಿಯಾಗಿವೆ. ಇದುವರೆಗೆ ಒಟ್ಟು ದೃಢೀಕೃತ ಪಾಸಿಟಿವ್ ಪ್ರಕರಣಗಳ ಸಂಖ್ಯೆ 2922 . ಆಕ್ಟಿವ್ ಪ್ರಕರಣಗಳು: 1874. ಸಾವುಗಳು: 49. ಚೇತರಿಸಿಕೊಂಡು ಗುಣಮುಖರಾದವರು 994.
  • ಆಂಧ್ರ ಪ್ರದೇಶ: ಅರ್ಹರಿಗೆ ನೋಂದಣೆ ಮಾಡಿದ ಐದು ದಿನಗಳ ಒಳಗೆ ಪೆನ್ಷನ್ ಮಂಜೂರಾಗಲಿದೆ. ಜೂನ್ 1 ರಿಂದ ಪ್ರಕ್ರಿಯೆ ಆರಂಭಗೊಳ್ಳಲಿದೆ. ದೇವಾಲಯಗಳಲ್ಲಿ ದರ್ಶನಕ್ಕೆ ದತ್ತಿ ಇಲಾಖೆ ಹೊಸ ನಿಯಮಗಳನ್ನು ರೂಪಿಸಿದೆ. ಕಳೆದ 24 ಗಂಟೆಗಳಲ್ಲಿ 98 ಹೊಸ ಪ್ರಕರಣಗಳು , ಎರಡು ಸಾವುಗಳು, ವರದಿಯಾಗಿವೆ. 43 ಮಂದಿ ಬಿಡುಗಡೆಯಾಗಿದ್ದಾರೆ. 9370 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಒಟ್ಟು ಪ್ರಕರಣಗಳು: 3042, ಆಕ್ಟಿವ್ ;845 , ಗುಣಮುಖರಾದವರು : 2135. ಸಾವುಗಳು : 62. ರಾಜ್ಯಕ್ಕೆ ಬಂದ ವಲಸೆಗಾರರಲ್ಲಿ ಪಾಸಿಟಿವ್ ಆದವರು 418, ಇವರಲ್ಲಿ ಆಕ್ಟಿವ್ ಪ್ರಕರಣಗಳ ಸಂಖ್ಯೆ 221. ಕಳೆದ 24 ಗಂಟೆಗಳಲ್ಲಿ 8 ಮಂದಿ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ. ವಿದೇಶಗಳಿಂದ ಬಂದವರಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 111.
  • ತೆಲಂಗಾಣ: ಹೈದರಾಬಾದಿನಲ್ಲಿಯ ಹಲವಾರು ಖಾಸಗಿ ಶಾಲೆಗಳು 2020-21 ಶೈಕ್ಷಣಿಕ ವರ್ಷದಲ್ಲಿ ಆನ್ ಲೈನ್ ತರಗತಿಗಳನ್ನು ಆರಂಭಿಸಲು ಸಿದ್ದತೆಗಳನ್ನು ಮಾಡಿದ್ದು, ಪೋಷಕರು ಇಕ್ಕಟ್ಟಿನಲ್ಲಿದ್ದಾರೆ. ಅವರು ಮಕ್ಕಳ ವಾರ್ಷಿಕ ಟ್ಯೂಶನ್ ಶುಲ್ಕ ಪಾವತಿಸುವುದಲ್ಲದೆ ಹೊಸ ಉಪಕರಣಗಳ ಮೇಲೂ ಹೂಡಿಕೆ ಮಾಡಬೇಕಾಗಿದೆ. ಲಾಕ್ ಡೌನ್ ಆರಂಭಗೊಂಡ ಬಳಿಕ ಹೈದರಾಬಾದಿನಲ್ಲಿ 9 ಮಕ್ಕಳನ್ನು ತ್ಯಜಿಸಲಾಗಿದೆ. ಮೇ 30 ರಂದು ರಾಜ್ಯದಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ 2499. ಇಂದಿನವರೆಗೆ 431 ವಲಸೆಗಾರರು ಮತ್ತು  ವಿದೇಶಗಳಿಂದ ಮರಳಿದವರು ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಆಗಿದ್ದಾರೆ.
  • ಪಂಜಾಬ್: ಮುಖ್ಯಮಂತ್ರಿಗಳು ಪಂಜಾಬಿನಲ್ಲಿ ಲಾಕ್ ಡೌನ್ 4 ವಾರಗಳ ಕಾಲ ವಿಸ್ತರಿಸಿದ್ದಾರೆ. ಹೆಚ್ಚು ಸಡಿಲಿಕೆಗಳೊಂದಿಗೆ , ಕೇಂದ್ರ ಸರಕಾರದ ಮಾರ್ಗದರ್ಶಿಗಳ ಅನ್ವಯ ಇದು ಜೂನ್ 30 ರವರೆಗೆ ಜಾರಿಯಲ್ಲಿರುತ್ತದೆ. ಪಂಜಾಬಿನಲ್ಲಿ ಲಾಕ್ ಡೌನ್ ವಿಸ್ತರಣೆಯು ಶರತ್ತು ಬದ್ದವಾಗಿರುತ್ತದೆ ಎಂದು ಸ್ಪಷ್ಟಪಡಿಸಲಾಗಿದ್ದು, ಸಾಮಾಜಿಕ ಅಂತರ ಪಾಲನೆ, ಮುಖಗವಸು ಧಾರಣೆ ಸಹಿತ ಕೋವಿಡ್ ಸುರಕ್ಷಾ ಶಿಷ್ಟಾಚಾರಗಳಿಗೆ ಬದ್ದವಾಗಿರಬೇಕು ಎಂದು ತಿಳಿಸಲಾಗಿದೆ. ಮುಖ್ಯಮಂತ್ರಿಗಳು ಬಡವರಿಗೆ ಉಚಿತ ಮುಖಗವಸುಗಳನ್ನು ವಿತರಿಸಲು ಆದೇಶಿಸಿದ್ದಾರೆ. ಮುಖಗವಸುಗಳನ್ನು ಖರೀದಿಸಲಾಗದ ಬಡವರಿಗೆ, ,ಆವಶ್ಯಕತೆ ಉಳ್ಳವರಿಗೆ ರೇಶನ್ ಕಿಟ್ ಗಳ ವಿತರಣೆಯ ಭಾಗವಾಗಿ ಮುಖಗವಸುಗಳನ್ನು ವಿತರಿಸಲು ತಕ್ಷಣವೇ ಕ್ರಮಗಳನ್ನು ಖಾತ್ರಿಗೊಳಿಸುವಂತೆ ಅವರು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಿಗೆ ನಿರ್ದೇಶನ ನೀಡಿದ್ದಾರೆ.

.

  • ರಿಯಾ: ಕೋವಿಡ್ -19 ಜಾಗತಿಕ ಸಾಂಕ್ರಾಮಿಕದಲ್ಲಿ ಧನಾತ್ಮಕ ಪಾತ್ರ ವಹಿಸಿರುವ ಹರ್ಯಾಣಾ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ದಿ ನಿಗಮವು ಆರಂಭದಲ್ಲಿ ಅತೀ ಕಡಿಮೆ ಬಂಡವಾಳ ಹೂಡಿಕೆಯಲ್ಲಿ ಹೂಡಿಕೆದಾರರಿಗೆ ಲೀಸ್ ಗೆ ನೀಡಲಾದ ಭೂಮಿಯನ್ನು ಕೆಲವು ಶರತ್ತುಗಳನ್ನು ಈಡೇರಿಸಿದರೆ ಉಚಿತವಾಗಿ ಒದಗಿಸುವ ನೀತಿಯನ್ನು ರೂಪಿಸಿದೆ. ಕೆಲಸಗಾರರನ್ನು ಉಳಿಸಿಕೊಳ್ಳಲು ಅವರಿಗೆ ಕಡಿಮೆ ಖರ್ಚಿನಲ್ಲಿ ವಸತಿ ಸೌಲಭ್ಯವನ್ನು ಒದಗಿಸಲು , ಒಂದು ಎಕರೆ ಅಥವಾ ಅದಕ್ಕಿಂತ ಹೆಚ್ಚಿನ ಕೈಗಾರಿಕಾ ವಸತಿಗಾಗಿ ಎಫ್..ಆರ್. ನಲ್ಲಿ 10 % ಹೆಚ್ಚಳವನ್ನು ಮಾಡುವ ಪ್ರಸ್ತಾಪವನ್ನೂ ಮಾಡಲಾಗಿದೆ. ಎಚ್.ಎಸ್... ಡಿ.ಸಿ. ಯು .ಎಂ.ಟಿ. ಮಾನೇಸರ್  ಮತ್ತು ಸೋನಿಪತ್ ಕುಂಡ್ಲಿಯ ಕೈಗಾರಿಕಾ ಎಸ್ಟೇಟ್ ಗಳಲ್ಲಿ ವಸತಿ ಘಟಕಗಳನ್ನು , ಡಾರ್ಮೆಟ್ರಿಗಳನ್ನು ರೂಪಿಸಿದೆ
  • ಅರುಣಾಚಲ ಪ್ರದೇಶ: ಇತೀಚಿನ ಎರಡನೇ ಕೋವಿಡ್ -19 ಪಾಸಿಟಿವ್ ಪ್ರಕರಣದ ಎಲ್ಲಾ 26 ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಗಳು ಪರೀಕ್ಷೆಯಲ್ಲಿ ನೆಗೆಟಿವ್ ಆಗಿವೆ. ರಾಜ್ಯದಲ್ಲಿ ರೋಗಲಕ್ಷಣ ಇಲ್ಲದ ಪಾಸಿಟಿವ್ ಪ್ರಕರಣ ಪತ್ತೆಯಾಗುವುದರೊಂದಿಗೆ ಆಕ್ಟಿವ್ ಪ್ರಕರಣಗಳ ಸಂಖ್ಯೆ 3 ಆಗಿದೆ.
  • ಅಸ್ಸಾಂ: ಕೋವಿಡ್ -19 ಕ್ಕಾಗಿ ನಡೆಸಿದ ಎರಡೂ ಪರೀಕ್ಷೆಗಳಲ್ಲಿ ನೆಗೆಟಿವ್ ಬಂದುದಕ್ಕಾಗಿ 22 ರೋಗಿಗಳನ್ನು ಬಿಡುಗಡೆ ಮಾಡಲಾಗಿದೆ. ಒಟ್ಟು ಆಸ್ಪತ್ರೆಯಿಂದ ಬಿಡುಗಡೆಯಾದ ರೋಗಿಗಳ ಸಂಖ್ಯೆ 185 ಮತ್ತು ಆಕ್ಟಿವ್ ಪ್ರಕರಣಗಳ ಸಂಖ್ಯೆ 1080.
  • ಮಣಿಪುರ: ದೇಶದ ವಿವಿಧೆಡೆಗಳಿಂದ 19,000 ಮಣಿಪುರಿಗಳನ್ನು ವಿಶೇಷ ರೈಲುಗಳಲ್ಲಿ ಜಿರಿಬಾಮ್ ರೈಲ್ವೇ ನಿಲ್ದಾಣಕ್ಕೆ ಕರೆತರಲಾಗಿದ್ದು, ಅವರವರ ಜಿಲ್ಲೆಗಳಿಗೆ ಬಸ್ಸುಗಳಲ್ಲಿ ಕಳುಹಿಸಿಕೊಡಲಾಗಿದೆ. ಇಂಫಾಲಾದ ಲಾಮ್ಡೆಂಗ್ ವಾಂಗ್ಥೊಯಿರಬಾ ಅಂತಾರಾಷ್ಟ್ರೀಯ ಆರಾಧನಾ ಕೇಂದ್ರವು ಬಸ್ ಚಾಲಕರಿಗೆ ಮತ್ತು ಅವರ ಸಹಾಯಕರಿಗೆ  ಮುಖಗವಸುಗಳು, ಹ್ಯಾಂಡ್ ಸ್ಯಾನಿಟೈಸರ್ ಮತ್ತು ಕೈಗವಸುಗಳನ್ನು ವಿತರಿಸಿತು.
  • ಮಿಜೋರಾಂ: ವಿಶೇಷ ರೈಲಿನಲ್ಲಿ ಪ್ರಯಾಣಿಸಿದ  ಕರ್ನಾಟಕದಿಂದ ಮರಳಿದ ಎಲ್ಲರ ಸ್ಯಾಂಪಲ್ ಗಳೂ ಕೋವಿಡ್ -19 ಪರೀಕ್ಷೆಯಲ್ಲಿ ನೆಗೆಟಿವ್ ಆಗಿವೆ.
  • ನಾಗಾಲ್ಯಾಂಡ್: ದಿಮಾಪುರಕ್ಕೆ ನಾಗಾಲ್ಯಾಂಡ್ ದೇಶೀಯ ವಿಮಾನಯಾನ ಸ್ಲಾಟ್ ಸಿಗದೆ ಇರುವ ಕಾರಣಕ್ಕೆ ರದ್ದಾಗಿದೆ. ಮತ್ತು ಅದು ನಾಳೆ ಬರುವ ನಿರೀಕ್ಷೆ ಇದೆ. ನಾಗಾಲ್ಯಾಂಡಿನ ವೋಖಾ ಜಿಲ್ಲಾಧಿಕಾರಿ ಜಿಲ್ಲೆಯಲ್ಲಿ ಸಮ ಮತ್ತು ಬೆಸ ಸಂಖ್ಯೆಯ ಸಂಚಾರಿ ನಿಯಮವನ್ನು ಜಾರಿಗೆ ತರಲು ಆದೇಶಿಸಿದ್ದಾರೆ. ಬೆಸ ಸಂಖ್ಯೆಯ ವಾಹನಗಳಿಗೆ  ಸೋಮವಾರ , ಬುಧವಾರ, ಮತ್ತು ಶುಕ್ರವಾರ ಓಡಾಟಕ್ಕೆ ಅವಕಾಶ. ಸಮಸಂಖ್ಯೆಯಲ್ಲಿ ಕೊನೆಗೊಳ್ಳುವ ವಾಹನಗಳಿಗೆ ಮಂಗಳವಾರ, ಗುರುವಾರ ಮತ್ತು ಶನಿವಾರ ಓಡಾಟಕ್ಕೆ ಅವಕಾಶ 
  • ಸಿಕ್ಕಿಂ: ರಾಜ್ಯದಲ್ಲಿ ಕೆಲಸ ಮಾಡುತ್ತಿದ್ದ ಸಿಕ್ಕಿಂಮೇತರ ಸಿಬ್ಬಂದಿಗಳನ್ನು ಹಿಂತಿರುಗಿ ಕರೆತರಲು ಪ್ರಕ್ರಿಯೆಯನ್ನು ಆರಂಭಿಸುವಂತೆ ಸಿಕ್ಕಿಂ ಗೃಹ ಇಲಾಖೆಯು ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗೆ ಪತ್ರ ಬರೆದಿದೆ.
  • ತ್ರಿಪುರಾ: ಲಾಕ್ ಡೌನ್ ಅವಧಿಯಲ್ಲಿ ತನ್ನ ಉಳಿತಾಯವನ್ನು ಜನರಿಗಾಗಿ ಖರ್ಚು ಮಾಡಿದ ತ್ರಿಪುರಾದ ಬಂಡಿ ಎಳೆಯುವ ಕಾಯಕದ ಗೌತಮ ದಾಸ್ ಹಲವರಿಗೆ ಪ್ರೇರಣೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ, ಪ್ರಧಾನ ಮಂತ್ರಿ ಶ್ರೀ ಮೋದಿ ಅವರು ಕೂಡಾ ಗೌತಮ ದಾಸ್ ಅವರ ಪ್ರಯತ್ನಗಳನ್ನು ಕೊಂಡಾಡಿದ್ದರು.

 

***



(Release ID: 1628511) Visitor Counter : 305