ರಕ್ಷಣಾ ಸಚಿವಾಲಯ
ಭಾರತೀಯ ನೌಕಾಪಡೆಯ “ಸಮುದ್ರ ಸೇತು” ಕಾರ್ಯಾಚರಣೆ ಮುಂದಿನ ಹಂತ ಪ್ರಾರಂಭ
प्रविष्टि तिथि:
30 MAY 2020 6:53PM by PIB Bengaluru
ಭಾರತೀಯ ನೌಕಾಪಡೆಯ “ಸಮುದ್ರ ಸೇತು” ಕಾರ್ಯಾಚರಣೆ ಮುಂದಿನ ಹಂತ ಪ್ರಾರಂಭ
ಭಾರತೀಯ ನಾಗರಿಕರನ್ನು ವಿದೇಶದಿಂದ ವಾಪಾಸು ಕರೆ ತರುವ “ಸಮುದ್ರ ಸೇತು” ಕಾರ್ಯಾಚರಣೆಯ ಮುಂದಿನ ಹಂತ ಜೂನ್ 01, 2020 ರಂದು ಪ್ರಾರಂಭವಾಗಲಿದೆ.
ಈ ಹಂತದಲ್ಲಿ, ಭಾರತೀಯ ನೌಕಾಪಡೆಯ ಜಲಶ್ವಾ ಹಡಗು ಮೂಲಕ, ಶ್ರೀಲಂಕಾ ಗಣರಾಜ್ಯದ ಕೊಲಂಬೊದಿಂದ ವಾಪಾಸು ತಮಿಳುನಾಡಿನ ಟ್ಯುಟಿಕೋರಿನ್ ಗೆ 700 ಸಿಬ್ಬಂದಿಯನ್ನು ಕರೆ ತರಲಿದ್ದಾರೆ. ಆನಂತರ ಅದೇ ಹಡಗದಲ್ಲಿ ರಿಪಬ್ಲಿಕ್ ಆಫ್ ಮಾಲ್ಡೀವ್ಸ್ ನ ಮಾಲೆಯಿಂದ ವಾಪಾಸು ಟುಟಿಕೋರಿನ್ ಗೆ 700 ಜನರ ಇನ್ನೊಂದು ತಂಡವನ್ನು ಕರೆ ತರಲಿದ್ದಾರೆ.
ಹಿಂದಿನ ಹಂತದ “ಸಮುದ್ರ ಸೇತು” ಕಾರ್ಯಾಚರಣೆಯಲ್ಲಿ ಭಾರತೀಯ ನೌಕಾಪಡೆ ಈಗಾಗಲೇ 1,488 ಭಾರತೀಯ ಪ್ರಜೆಗಳನ್ನು ಮಾಲೆಯಿಂದ ವಾಪಸ್ ಕೊಚ್ಚಿಗೆ ಕರೆ ಸುರಕ್ಷಿತವಾಗಿ ಕರೆತಂದಿತ್ತು..
ಶ್ರೀಲಂಕಾ ಮತ್ತು ಮಾಲ್ಡೀವ್ಸ್ ಗಳಲ್ಲಿರುವ ಭಾರತೀಯ ರಾಯಭಾರಿಕಚೇರಿಗಳು ಸ್ಥಳಾಂತರಿಸಬೇಕಾದ ಭಾರತೀಯ ಪ್ರಜೆಗಳ ಪಟ್ಟಿಯನ್ನು ಸಿದ್ಧಪಡಿಸಿ, ಅಗತ್ಯವಾದ ವೈದ್ಯಕೀಯ ತಪಾಸಣೆಯ ನಂತರ ಅವರ ಪ್ರಯಾಣಕ್ಕೆ ಬೇಕಾದ ವ್ಯವಸ್ಥೆಗಳನ್ನು ಮಾಡುತ್ತವೆ. ಕೋವಿಡ್-19, ಸಂಬಂಧಿತ ಶಿಷ್ಠಾಚಾರದ ಸಾಮಾಜಿಕ ಅಂತರದ ಮಾನದಂಡಗಳನ್ನು ಹಡಗಿನಲ್ಲಿ ಕೂಡಾ ಪಾಲಿಸಲು ಬೇಕಾದ ಸೌಕರ್ಯ ಮಾಡಲಾಗಿದೆ ಮತ್ತು ಸ್ಥಳಾಂತರಗೊಂಡವರಿಗೆ ಸಮುದ್ರ-ಸಾಗಣೆಯ ಸಮಯದಲ್ಲಿ ಮೂಲಭೂತ ಸೌಲಭ್ಯಗಳು ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.
ಟುಟಿಕೊರಿನ್ನಲ್ಲಿ ಇಳಿದ ನಂತರ ಸ್ಥಳಾಂತರಿಸಿದವರನ್ನು ಹಾಗೂ ಸಿಬ್ಬಂದಿಯನ್ನು ರಾಜ್ಯ ಅಧಿಕಾರಿಗಳ ಆರೈಕೆಗೆ ಒಪ್ಪಿಸಲಾಗುತ್ತದೆ. ಈ ಕಾರ್ಯಾಚರಣೆಯನ್ನು ಭಾರತ ಸರ್ಕಾರದ ಕೇಂದ್ರ ವಿದೇಶಾಂಗ ವ್ಯವಹಾರಗಳು, ಕೇಂದ್ರ ಗೃಹ ವ್ಯವಹಾರಗಳು, ಕೇಂದ್ರ ಆರೋಗ್ಯ ಸಚಿವಾಲಯಗಳು ಮತ್ತು ವಿವಿಧ ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳೊಂದಿಗೆ ನಿಕಟ ಸಮನ್ವಯದಿಂದ ಏರ್ಪಡಿಸಲಾಗುತ್ತಿದೆ.
***
(रिलीज़ आईडी: 1628059)
आगंतुक पटल : 255
इस विज्ञप्ति को इन भाषाओं में पढ़ें:
Assamese
,
English
,
Urdu
,
Marathi
,
हिन्दी
,
Manipuri
,
Bengali
,
Punjabi
,
Odia
,
Tamil
,
Telugu