ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
ರಾಷ್ಟ್ರೀಯ ಸಂಶೋಧನಾ ಪ್ರಯೋಗಾಲಯಗಳು ಮತ್ತು ವಿಶ್ವ ವಿದ್ಯಾಲಯಗಳಲ್ಲಿ ಕೋವಿಡ್ ಪರೀಕ್ಷಾ ಕೇಂದ್ರಗಳ (ಹಬ್ ಮತ್ತು ಸ್ಪೋಕ್ ಮಾದರಿ) ಸಂಖ್ಯೆ ಹೆಚ್ಚಳ
Posted On:
30 MAY 2020 3:01PM by PIB Bengaluru
ರಾಷ್ಟ್ರೀಯ ಸಂಶೋಧನಾ ಪ್ರಯೋಗಾಲಯಗಳು ಮತ್ತು ವಿಶ್ವ ವಿದ್ಯಾಲಯಗಳಲ್ಲಿ
ಕೋವಿಡ್ ಪರೀಕ್ಷಾ ಕೇಂದ್ರಗಳ (ಹಬ್ ಮತ್ತು ಸ್ಪೋಕ್ ಮಾದರಿ) ಸಂಖ್ಯೆ ಹೆಚ್ಚಳ
ದೇಶಾದ್ಯಂತ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ವ್ಯಾಪ್ತಿಯನ್ನು ಹೆಚ್ಚಿಸಲು ನಗರ/ ಪ್ರಾದೇಶಿಕ ಕ್ಲಸ್ಟರ್ ಗಳನ್ನು ಹಬ್ ಮತ್ತು ಸ್ಪೋಕ್ ಮಾದರಿಗಳಲ್ಲಿ ಸ್ಥಾಪಿಸಲಾಗಿದೆ ಮತ್ತು ಕೋವಿಡ್-19 ಮಾದರಿಗಳ ಪರೀಕ್ಷೆಗಳನ್ನು ದೇಶಾದ್ಯಂತದ ಸರ್ಕಾರಿ ಸಂಸ್ಥೆಗಳಲ್ಲಿ ಮಾಡಲಾಗುತ್ತಿದೆ. ಮಾದರಿ ಸಂಗ್ರಹಣೆ, ನಿರ್ವಹಣೆ/ಸಂಸ್ಕರಣೆ (ಬಿ ಎಸ್ ಎಲ್-2 ಸೌಲಭ್ಯ) ಮತ್ತು ಪರೀಕ್ಷೆ (ಆರ್ ಟಿ - ಪಿಸಿಆರ್) ಎರಡಕ್ಕೂ ಸಾಮರ್ಥ್ಯ ಮತ್ತು ಪರಿಣಿತಿ ಹೊಂದಿರುವ ಸಂಸ್ಥೆಗಳು ಮತ್ತು ಪ್ರಯೋಗಾಲಯಗಳು ಹಬ್ ಗಳಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಇವುಗಳ ವಿಸ್ತೃತ ಪರೀಕ್ಷಾ ಸೌಲಭ್ಯಗಳಿಗಾಗಿ ಅಗತ್ಯ ಮಾನವ ಸಂಪನ್ಮೂಲವನ್ನು ಮತ್ತು ಆರ್ ಟಿ – ಪಿಸಿಆರ್ ಯಂತ್ರಗಳನ್ನು ಹೊಂದಿರುವ ಹಲವಾರು ಪ್ರಯೋಗಾಲಯಗಳನ್ನು ಇವು ಒಳಗೊಂಡಿರುತ್ತವೆ.
ಈ ಹಬ್ ಗಳು ಐಸಿಎಂ ಆರ್ ಮಾರ್ಗಸೂಚಿಗಳ ಪ್ರಕಾರ ಆಯಾ ಸಚಿವಾಲಯಗಳು, ಇಲಾಖೆಗಳು, (ಡಿಬಿಟಿ, ಡಿಎಸ್ ಟಿ, ಸಿ ಎಸ್ ಐ ಆರ್, ಡಿಎಇ, ಡಿ ಆರ್ ಡಿ ಒ, ಐಸಿಎಆರ್ ಇತ್ಯಾದಿ) ಅನುಮೋದಿಸಿದ ಸರ್ಕಾರಿ ಪ್ರಯೋಗಾಲಯಗಲಾಗಿವೆ. ಇಲ್ಲಿವರೆಗೆ 19 ನಗರ/ಪ್ರಾದೇಶಿಕ ಕ್ಲಸ್ಟರ್ ಗಳನ್ನು ಬೆಂಗಳೂರು, ದೆಹಲಿ/ಎನ್ ಸಿ ಆರ್, ಹೈದ್ರಾಬಾದ್, ತಿರುವನಂತಪುರಂ, ಚಂಡೀಗಡ್/ಮೊಹಾಲಿ, ಭುವನೇಶ್ವರ್, ನಾಗ್ಪುರ್, ಪುಣೆ, ಮುಂಬೈ, ಲಖನೌ, ಚೆನ್ನೈ, ಕೋಲ್ಕತ್ತಾ, ಈಶಾನ್ಯ ಪ್ರದೇಶಗಳು, ಜಮ್ಮು ಮತ್ತು ಕಾಶ್ಮೀರ, ಅಹ್ಮದಾಬಾದ್, ಮಧ್ಯಪ್ರದೇಶ, ರಾಜಸ್ಥಾನ, ಬನಾರಸ್, ಪಾಲಂಪೂರ್ ಮತ್ತು ದೆಹಲಿ ನಗರಗಳಲ್ಲಿ ಸ್ಥಾಪಿಸಲಾಗಿದೆ
ಸುಮಾರು 100 ಸಂಸ್ಥೆಗಳು ಇದರಲ್ಲಿ ಭಾಗಿಯಾಗಿದ್ದು 1,60,000 ಕ್ಕೂ ಹೆಚ್ಚು ಮಾದರಿಗಳನ್ನು ಪರೀಕ್ಷಿಸಲಾಗಿದೆ. 7 ಡಿಬಿಟಿ ಸ್ವಾಯತ್ತ ಸಂಸ್ಥೆಗಳನ್ನು ಐಸಿಎಂಆರ್ ಹಬ್ ಗಳಾಗಿ ಅನುಮೋದಿಸಿದೆ ಮತ್ತು ಅವರು ಕೋವಿಡ್ – 19 (ಆರ್ ಜಿಸಿಬಿ, ಟಿ ಹೆಚ್ ಎಸ್ ಟಿ ಐ, ಐಎಲ್ ಎಸ್, ಇನ್ ಸ್ಟೆಮ್, ಎನ್ ಸಿಸಿಎಸ್, ಸಿಡಿಎಫ್ ಡಿ, ಎನ್ ಐ ಬಿ ಎಂ ಜಿ) ರೋಗನಿರ್ಣಯಕ್ಕಾಗಿ ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ
ಆಯಾ ನಗರಗಳು/ಪ್ರದೇಶಗಳಲ್ಲಿ ಹಬ್ ಗಳಾಗಿಯೂ ಅವರು ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಹಲವಾರು ಇತರ ಪ್ರಧಾನ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಸಂಸ್ಥೆಗಳೊಂದಿಗೆ ಜೊತೆಗೂಡಿ ಪ್ರಯತ್ನಗಳನ್ನು ಮುಂದುವರಿಸಿದ್ದಾರೆ. ಇದರ ಜೊತೆಗೆ ಅವರು ಪರೀಕ್ಷೆಗೆ ಮಾದರಿಗಳನ್ನು ಪಡೆಯಲು ಆಯಾ ರಾಜ್ಯ ಸರ್ಕಾರಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಅವರ ಪರೀಕ್ಷಾ ಫಲಿತಾಂಶಗಳ ಕುರಿತು ಪ್ರತಿದಿನ ಐಸಿಎಂಆರ್ ಗೆ ವರದಿ ಸಲ್ಲಿಸುತ್ತಿದ್ದಾರೆ. ಸುಮಾರು 4 ವಾರಗಳಲ್ಲಿ ಒಟ್ಟಾರೆಯಾಗಿ ಈ ಕ್ಲಸ್ಟರ್ ಗಳು ಸುಮಾರು 1,70,000 ಪರೀಕ್ಷೆಗಳನ್ನು ಮಾಡಿವೆ.ಈ ಕ್ಲಸ್ಟರ್ ಗಳನ್ನು ಮುಂಬರುವ 4 ವಾರಗಳಲ್ಲಿ ಸುಮಾರು 50 ಕ್ಕೆ ಏರಿಸಲಾಗುತ್ತದೆ ಮತ್ತು ದೇಶದ ಮೂಲೆ ಮೂಲೆಗೆ ತಲುಪಲಿದೆ.
***
(Release ID: 1628053)
Visitor Counter : 265