ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ಎಫ್.ಸಿ.ಐ. ಆಹಾರ ಧಾನ್ಯ ವಿತರಣೆ ಮತ್ತು ಖರೀದಿಯನ್ನು ಪರಿಶೀಲಿಸಿದ ಶ್ರೀ ಪಾಸ್ವಾನ್

Posted On: 28 MAY 2020 6:06PM by PIB Bengaluru

ಎಫ್.ಸಿ.. ಆಹಾರ ಧಾನ್ಯ ವಿತರಣೆ ಮತ್ತು ಖರೀದಿಯನ್ನು ಪರಿಶೀಲಿಸಿದ ಶ್ರೀ ಪಾಸ್ವಾನ್

ಎಫ್.ಸಿ.. ಆಹಾರ ವಿತರಣೆಯ ಜೀವನ ರೇಖೆ: ಶ್ರೀ ಪಾಸ್ವಾನ್

 

ವಿತರಣೆ ಮತ್ತು ಖರೀದಿ ಎರಡನ್ನೂ ತ್ವರಿತಗೊಳಿಸಲು ಎಫ್.ಸಿ..ಗೆ ಶ್ರೀ ಪಾಸ್ವಾನ್ ನಿರ್ದೇಶನ , ದಾಸ್ತಾನು ಮರುಪೂರಣಕ್ಕೆ ತೃಪ್ತಿ ವ್ಯಕ್ತಪಡಿಸಿದ ಸಚಿವರು.

ಕೇಂದ್ರ ಬಳಕೆದಾರ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಖಾತೆಗಳ ಸಚಿವರಾದ ಶ್ರೀ ರಾಂ ವಿಲಾಸ್ ಪಾಸ್ವಾನ್ ಅವರು ಆಹಾರ ಧಾನ್ಯಗಳ ವಿತರಣೆ ಮತ್ತು ಖರೀದಿಯ ಕುರಿತು ಇಂದು ಭಾರತೀಯ ಆಹಾರ ನಿಗಮದ ವಲಯ ಕಾರ್ಯಕಾರಿ ನಿರ್ದೇಶಕರು ಮತ್ತು ಪ್ರಾದೇಶಿಕ ಜನರಲ್ ಮ್ಯಾನೇಜರುಗಳ ಜೊತೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು.

ತಮ್ಮ ಭಾಷಣದಲ್ಲಿ ಶ್ರೀ ಪಾಸ್ವಾನ್ ಅವರು ಲಾಕ್ ಡೌನ್ ಅವಧಿಯಲ್ಲಿ ಎಫ್.ಸಿ.. ಪಾತ್ರವನ್ನು ಕೊಂಡಾಡಿದರಲ್ಲದೆ , ಆಹಾರ ಧಾನ್ಯಗಳ ಸಾಗಾಣಿಕೆ ಸಾರ್ವಕಾಲಿಕ ಗರಿಷ್ಟವಾಗಿತ್ತು ಎಂದರು. ಎಫ್.ಸಿ.. ಕಾರ್ಮಿಕ ಶಕ್ತಿಯು ಜಾಗತಿಕ ಸಾಂಕ್ರಾಮಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಆಹಾರ ವಾರಿಯರ್ ಗಳಾಗಿ ಮೂಡಿ ಬಂದಿದೆ ಮತ್ತು ಅವರು ಸವಾಲನ್ನು ಅವಕಾಶವನ್ನಾಗಿ ಪರಿವರ್ತಿಸಿದರು . ಎಫ್.ಸಿ..ಯು ಲಾಕ್ ಡೌನ್ ಅವಧಿಯಲ್ಲಿ ದಾಖಲೆ ಪ್ರಮಾಣದಲ್ಲಿ ಆಹಾರ ಧಾನ್ಯಗಳ ಸರಕು ಹೇರುವಿಕೆ, ಸರಕು ಇಳಿಸುವಿಕೆ ಮತ್ತು ಸಾಗಾಣಿಕೆಯನ್ನು ನಿರ್ವಹಿಸಿದೆ. ಇನ್ನೊಂದೆಡೆ ಖರೀದಿ ಕೂಡಾ ಯಾವುದೇ ಅಡೆ ತಡೆಗಳಿಲ್ಲದೆ ಮುಂದುವರೆದಿದೆ ಮತ್ತು ಸರಕಾರಿ ಏಜೆನ್ಸಿಗಳಿಂದ ಗೋಧಿ ಖರೀದಿ ಪ್ರಮಾಣವು ವರ್ಷ ಈಗಾಗಲೇ ಕಳೆದ ವರ್ಷದ ಪ್ರಮಾಣವನ್ನು ದಾಟಿದೆ ಎಂದೂ ಅವರು ಹೇಳಿದರು.

ಸಚಿವರು ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಹಾರ ಧಾನ್ಯಗಳ ವಿತರಣೆಯ ಕುರಿತೂ ಪರಾಮರ್ಶೆ ನಡೆಸಿದರು ಹಾಗು ಮಾಹಿತಿ ಪಡೆದುಕೊಂಡರು.

ಆತ್ಮ ನಿರ್ಭರ ಭಾರತ್ ಪ್ಯಾಕೇಜ್

ವಲಸೆ ಕಾರ್ಮಿಕರಿಗೆ /ಸಿಲುಕಿ ಹಾಕಿಕೊಂಡವರಿಗೆ ಆತ್ಮ ನಿರ್ಭರ ಪ್ಯಾಕೇಜಿನಡಿಯಲ್ಲಿ ಆಹಾರ ಧಾನ್ಯಗಳನ್ನು ಮಂಜೂರು ಮಾಡುವ ಪ್ರಕ್ರಿಯೆಯನ್ನು ಪರಾಮರ್ಶಿಸಿದ ಶ್ರೀ ಪಾಸ್ವಾನ್ , ಭಾರತ ಸರಕಾರವು 37 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ 2020 ಮೇ ಮತ್ತು ಜೂನ್ ತಿಂಗಳಿಗೆ 8.00 ಎಲ್.ಎಂ.ಟಿ. ಆಹಾರಧಾನ್ಯಗಳನ್ನು ( 2.44 ಎಲ್.ಎಂ.ಟಿ. ಗೋಧಿ ಮತ್ತು 5.56 ಎಲ್.ಎಂ.ಟಿ. ಅಕ್ಕಿಯನ್ನು) ಮಂಜೂರು ಮಾಡಿದೆ ಎಂದರು. ಎಫ್.ಸಿ.. ಮೂಲಗಳ ಪ್ರಕಾರ ಮಂಜೂರಾತಿಯಲ್ಲಿ 27.05.2020 ರವರೆಗೆ 2.06 ಎಲ್.ಎಂ.ಟಿ. ಆಹಾರ ಧಾನ್ಯಗಳನ್ನು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಎತ್ತುವಳಿ ಮಾಡಿವೆ. ಅಂಡಮಾನ್ ಮತ್ತು ನಿಕೋಬಾರ್ , ಆಂಧ್ರ ಪ್ರದೇಶ ಮತ್ತು ಲಕ್ಷದ್ವೀಪಗಳು ತಮಗೆ ಮಂಜೂರಾದ ಎರಡು ತಿಂಗಳ ಪೂರ್ಣ ಪ್ರಮಾಣದ ಆಹಾರ ಧಾನ್ಯಗಳನ್ನು ಎತ್ತುವಳಿ ಮಾಡಿವೆ. ಸಚಿವರು ಆಹಾರ ಧಾನ್ಯಗಳನ್ನು ತ್ವರಿತವಾಗಿ ಎತ್ತುವಳಿ ಮಾಡಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರಕಾರಗಳ ಜೊತೆ ಸಮನ್ವಯ ಸಾಧಿಸುವಂತೆ ಎಫ್.ಸಿ..ಗೆ ನಿರ್ದೇಶನ ನೀಡಿದರು. .

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನಾ

ಯೋಜನೆ ಅಡಿಯಲ್ಲಿ ಸರಕಾರವು 37 ರಾಜ್ಯ/ ಕೇಂದ್ರಾದಳಿತ ಪ್ರದೇಶಗಳಿಗೆ 2020 ಏಪ್ರಿಲ್, ಮೇ ಮತ್ತು ಜೂನ್ ತಿಂಗಳಿಗಾಗಿ 120.04 ಎಲ್.ಎಂ.ಟಿ. ಆಹಾರ ಧಾನ್ಯಗಳನ್ನು (15.65 ಎಲ್.ಎಂ.ಟಿ. ಗೋಧಿ ಮತ್ತು 104.4 ಎಲ್.ಎಂ.ಟಿ. ಅಕ್ಕಿ ) ಮಂಜೂರು ಮಾಡಿದೆ. ಕಾರ್ಯಕ್ರಮದ ಪ್ರಗತಿ ಪರಿಶೀಲನೆ ಮಾಡಿದ ಶ್ರೀ ಪಾಸ್ವಾನ್ ಸಂಬಂಧಿತ ಅಧಿಕಾರಿಗಳಿಗೆ ಆಹಾರ ಧಾನ್ಯಗಳ ಎತ್ತುವಳಿಯನ್ನು ತ್ವರಿತಗೊಳಿಸುವುದಕ್ಕೆ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಜೊತೆ ಸಮನ್ವಯ ಸಾಧಿಸುವಂತೆ ಸೂಚಿಸಿದರು. ಇದರಿಂದ ಫಲಾನುಭವಿಗಳಿಗೆ ಸಕಾಲದಲ್ಲಿ ಆಹಾರ ಧಾನ್ಯಗಳು ತಲುಪುವಂತಾಗುತ್ತದೆ ಎಂದರು. ಪಿ.ಎಂ.ಜಿ.ಕೆ..ವೈ. ಮಂಜೂರಾತಿಯಲ್ಲಿ ದಿನಾಂಕ 27.05.2020 ರವರೆಗೆ 95.80 ಎಲ್.ಎಂ.ಟಿ. ಆಹಾರ ಧಾನ್ಯಗಳನ್ನು (15.6 ಎಲ್.ಎಂ.ಟಿ. ಗೋಧಿ ಮತ್ತು 83.38 ಎಲ್.ಎಂ.ಟಿ. ಅಕ್ಕಿ) ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಎತ್ತುವಳಿ ಮಾಡಿವೆ ಎಂದು ಎಫ್.ಸಿ.. ತಿಳಿಸಿತು.

-ಹರಾಜು ಇಲ್ಲದೆ .ಎಂ.ಎಸ್.ಎಸ್. (ಡಿ) ಅಡಿಯಲ್ಲಿ ದತ್ತಿ ಸಂಸ್ಥೆಗಳಿಗೆ/ ಎನ್.ಜಿ..ಗಳಿಗೆ ಆಹಾರಧಾನ್ಯಗಳ ಮಾರಾಟ

ಭಾರತ ಸರಕಾರದ ಸೂಚನೆಯ ಮೇರೆಗೆ ದಿನಾಂಕ 25.05.2020ರವರೆಗೆ , ಎಫ್...ಯು 186 ಸಂಘಟನೆಗಳಿಗೆ 1179 ಎಂ.ಟಿ. ಗೋಧಿ ಮತ್ತು 890 ಸಂಘಟನೆಗಳಿಗೆ 8496 ಎಂ.ಟಿ. ಅಕ್ಕಿಯ ಮಾರಾಟವನ್ನು ಅನುಮೋದಿಸಿದೆ ಎಂದು ತಿಳಿಸಿತು. ಸಂಘಟನೆಗಳು 886 ಎಂ.ಟಿ. ಗೋಧಿ ಮತ್ತು 7778 ಎಂ.ಟಿ. ಅಕ್ಕಿಯನ್ನು ಎತ್ತುವಳಿ ಮಾಡಿವೆ.

ಪಶ್ಚಿಮ ಬಂಗಾಳ ಮತ್ತು ಒಡಿಶಾಗಳಲ್ಲಿ ಅಂಫಾನ್ ಚಂಡಮಾರುತ.

ಎಫ್.ಸಿ.. ಪ್ರಕಾರ ಪಶ್ಚಿಮ ಬಂಗಾಳವು .ಎಂ.ಎಸ್.ಎಸ್. (ಡಿ) ಮಾರಾಟ ಅಡಿಯಲ್ಲಿ 11,800 ಎಂ.ಟಿ. ಅಕ್ಕಿ ದಾಸ್ತಾನಿಗೆ ಕೋರಿಕೆ ಸಲ್ಲಿಸಿತ್ತು, -ಹರಾಜು ಇಲ್ಲದೆ ಕ್ವಿಂಟಾಲೊಂದಕ್ಕೆ 2250 ರೂ. ದರವನ್ನು ನಿಗದಿ ಮಾಡಲಾಗಿತ್ತು, ಆದರೆ ಒಡಿಶಾ ಸರಕಾರ ಇಂದಿನವರೆಗೆ ಆಹಾರ ಧಾನ್ಯಗಳ ಆವಶ್ಯಕತೆಯ ಬಗ್ಗೆ ಮಾಹಿತಿ ಒದಗಿಸಿಲ್ಲ. ಚಂಡಮಾರುತ ಪೀಡಿತ ರಾಜ್ಯಗಳಾದ ಪಶ್ಚಿಮ ಬಂಗಾಳ ಮತ್ತು ಒಡಿಶಾಗಳಲ್ಲಿ ಆಹಾರ ಧಾನ್ಯಗಳ ಇತ್ತೀಚಿನ ಪರಿಸ್ಥಿತಿಯ ಬಗ್ಗೆ ಮೌಲ್ಯಮಾಪನ ಮಾಡಲು ಎರಡೂ ರಾಜ್ಯಗಳ ಜೊತೆ ಎಫ್.ಸಿ.. ಸಮನ್ವಯ ಸಾಧಿಸಬೇಕು ಎಂದು ಹೇಳಿದರು.

ಖರೀದಿ (ಅಕ್ಕಿ/ ಗೋಧಿ)

ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವರು ಆರ್.ಎಂ.ಎಸ್. 2020-21 ರಲ್ಲಿ ಗೋಧಿ ಮಾರಾಟವನ್ನು ಮತ್ತು ಕೆ.ಎಂ.ಎಸ್. 2019-20 ರಲ್ಲಿ ಅಕ್ಕಿ ಖರೀದಿಯನ್ನು ಪರಿಶೀಲಿಸಿದರು. ಗೋಧಿ ಖರೀದಿಯಲ್ಲಿ ಹಿಂದಿನ ವರ್ಷದ ಖರೀದಿ ಪ್ರಮಾಣಕ್ಕಿಂತ ಹೆಚ್ಚಳವಾಗಿದ್ದು, ಸಚಿವರು ಗೋಧಿ (ಆರ್.ಎಂ.ಎಸ್. 2020-21) ಮತ್ತು ಅಕ್ಕಿ (ಕೆ.ಎಂ.ಎಸ್. 20-21) ಖರೀದಿಯನ್ನು ಸಕಾಲಿಕಗೊಳಿಸುವಂತೆ ಎಫ್.ಸಿ..ಗೆ ಸಚಿವರು ಸೂಚಿಸಿದರು. 27.05.2020 ರವರೆಗೆ ಒಟ್ಟು 351 ಎಲ್.ಎಂ.ಟಿ. ಗೋಧಿಯನ್ನು (ಆರ್.ಎಂ.ಎಸ್. 20-21) ಖರೀದಿ ಮಾಡಲಾಗಿದೆ. 60.40 ಎಲ್.ಎಂ.ಟಿ. ಅಕ್ಕಿಯನ್ನು (ಆರ್.ಎಂ.ಎಸ್.) ಖರೀದಿ ಮಾಡಲಾಗಿದೆ.ಒಟ್ಟು 700.29 ಎಲ್.ಎಂ.ಟಿ. ಭತ್ತವನ್ನು ( 470.23 ಎಲ್.ಎಂ.ಟಿ. ಅಕ್ಕಿ ಸಹಿತ ) 2019-20ರಲ್ಲಿ ಖರೀದಿ ಮಾಡಲಾಗಿದೆ ಎಂಬುದು ಎಫ್.ಸಿ.. ಹೇಳಿಕೆ.

ಆಹಾರ ಧಾನ್ಯಗಳ ಸಾಗಾಟ

ಲಾಕ್ ಡೌನ್ ನಿಂದಾಗಿ ಈಶಾನ್ಯ ರಾಜ್ಯಗಳು ಸೇರಿದಂತೆ ದೇಶಾದ್ಯಂತ ಆಹಾರ ಧಾನ್ಯಗಳನ್ನು ರಸ್ತೆ, ರೈಲು, ಜಲ ಮಾರ್ಗಗಳು, ಮತ್ತು ಕಠಿಣ ಹಾಗು ಗಿರಿ ಪ್ರದೇಶಗಳಿಗೆ ವಾಯು ಮಾರ್ಗದ ಮೂಲಕ ರವಾನಿಸಲಾಗಿದೆ. ಸುಮಾರು 100 ಎಲ್.ಟಿ. ಆಹಾರ ಧಾನ್ಯಗಳನ್ನು 3550 ರೈಲ್ ರೇಕ್ ಗಳ ಮೂಲಕ ಸಾಗಾಟ ಮಾಡಲಾಗಿದೆ. 12 ಎಲ್.ಟಿ. ಆಹಾರ ಧಾನ್ಯಗಳನ್ನು ರಸ್ತೆ ಮೂಲಕ ಮತ್ತು 12,000 ಟನ್ ಆಹಾರ ಧಾನ್ಯಗಳನ್ನು 12 ಹಡಗುಗಳ ಮೂಲಕ ಸಾಗಾಣಿಕೆ ಮಾಡಲಾಗಿದೆ.ಒಟ್ಟು 9.61 ಎಲ್.ಎಂ.ಟಿ. ಆಹಾರ ಧಾನ್ಯಗಳನ್ನು ಈಶಾನ್ಯ ರಾಜ್ಯಗಳಿಗೆ ಸಾಗಾಟ ಮಾಡಲಾಗಿದೆ.

ಕೇಂದ್ರೀಯ ಪೂಲಿನಲ್ಲಿ ದಾಸ್ತಾನು

27.05.2020ರವರೆಗೆ ಆಹಾರ ಧಾನ್ಯಗಳ ಹಾಲಿ ದಾಸ್ತಾನುಗಳ ಸ್ಥಿತಿಯ ಬಗ್ಗೆ ಎಫ್.ಸಿ.. ಮಾಹಿತಿ ನೀಡಿತು. 479.40 ಎಲ್.ಎಂ.ಟಿ. ಗೋಧಿ ಮತ್ತು 272.29 ಎಲ್.ಎಂ.ಟಿ. ಅಕ್ಕಿಯ ಸಹಿತ ಒಟ್ಟು 751.69 ಎಲ್.ಎಂ.ಟಿ. ಆಹಾರ ಧಾನ್ಯಗಳು ಕೇಂದ್ರೀಯ ಶೇಖರಣೆಯಲ್ಲಿ/ ಸಂಗ್ರಹದಲ್ಲಿ ಲಭ್ಯ ಇವೆ ಎಂದು ಅಧಿಕಾರಿಗಳು ತಿಳಿಸಿದರು. ದೇಶದ ಹಾಲಿ ಮತ್ತು ಭವಿಷ್ಯದ ಆಹಾರ ಧಾನ್ಯಗಳ ಆವಶ್ಯಕತೆಯನ್ನು ಈಡೇರಿಸುವಷ್ಟು ದಾಸ್ತಾನು ಇರುವ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಶ್ರೀ ಪಾಸ್ವಾನ್ ಬಿಕ್ಕಟ್ಟಿನ ಸಂದರ್ಭದಲ್ಲಿ ಕಠಿಣ ದುಡಿಮೆ ಮಾಡುತ್ತಿರುವ ಎಫ್.ಸಿ.. ಅಧಿಕಾರಿಗಳಿಗೆ ಮತ್ತು ಕೆಲಸಗಾರರಿಗೆ ಸರಕಾರದ ಸರ್ವ ರೀತಿಯ ಸಹಕಾರದ ಭರವಸೆ ನೀಡಿದರು.

***



(Release ID: 1628046) Visitor Counter : 265