ರೈಲ್ವೇ ಸಚಿವಾಲಯ
ಪ್ರಯಾಣಿಕರಿಗೆ ರೈಲ್ವೆ ಸಚಿವಾಲಯ ಮನವಿ
Posted On:
29 MAY 2020 9:58AM by PIB Bengaluru
ಪ್ರಯಾಣಿಕರಿಗೆ ರೈಲ್ವೆ ಸಚಿವಾಲಯ ಮನವಿ
ವಲಸೆ ಕಾರ್ಮಿಕರು ತಮ್ಮ ತವರಿಗೆ ವಾಪಸ್ಸಾಗುವುದನ್ನು ಖಾತ್ರಿಪಡಿಸಲು ಭಾರತೀಯ ರೈಲ್ವೆ ದೇಶಾದ್ಯಂತ ಪ್ರತಿ ದಿನ ಶ್ರಮಿಕ್ ವಿಶೇಷ ರೈಲುಗಳ ಕಾರ್ಯಾಚರಣೆ ನಡೆಸುತ್ತಿದೆ. ಈ ಸೇವೆಯನ್ನು ಬಳಸಿಕೊಳ್ಳುತ್ತಿರುವ ಕೆಲವು ಪ್ರಯಾಣಿಕರಲ್ಲಿ ಮೊದಲೇ ಕೆಲವು ವೈದ್ಯಕೀಯ ಸ್ಥಿತಿಗತಿಗಳು ಸರಿ ಇಲ್ಲದಿರುವುದು ಮತ್ತು ಇದರಿಂದ ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಅವರು ಹೆಚ್ಚಿನ ಅಪಾಯವನ್ನು ಎದುರಿಸುವ ಸಾಧ್ಯತೆಗಳು ಇದೆ. ಪ್ರಯಾಣದ ವೇಳೆ ಮೊದಲಿನ ವೈದ್ಯಕೀಯ ಸ್ಥಿತಿಗತಿಗಳಿಂದಾಗಿ ಕೆಲವು ಸಾವುಗಳು ಸಂಭವಿಸಿವೆ.
ಕೋವಿಡ್-19ನಿಂದ ಸೂಕ್ಷ್ಮ ವ್ಯಕ್ತಿಗಳನ್ನು ರಕ್ಷಿಸುವ ಸಲುವಾಗಿ ಗೃಹ ವ್ಯವಹಾರಗಳ ಸಚಿವಾಲಯದ ಜೊತೆಗೂಡಿ, ಆದೇಶ ಸಂಖ್ಯೆ 40-3/2020-ಡಿಎಂ-ಐ(ಎ) ದಿನಾಂಕ 17.05.2020ರಂದು ರೈಲ್ವೆ ಸಚಿವಾಲಯ ಹೊರಡಿಸಿದ್ದು, ಅದರಲ್ಲಿ ಅನಾರೋಗ್ಯ ಪೀಡಿತ ವ್ಯಕ್ತಿಗಳು (ಉದಾಹರಣೆಗೆ ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು, ಕ್ಯಾನ್ಸರ್, ರೋಗ ನಿರೋಧಕ ಶಕ್ತಿ ಸಂಬಂಧಿ ಕಾಯಿಲೆಗಳು) ಗರ್ಭಿಣಿಯರು, 10 ವರ್ಷದೊಳಗಿನ ಮಕ್ಕಳು ಮತ್ತು 65 ವರ್ಷ ಮೇಲ್ಪಟ್ಟವರು, ಅಗತ್ಯ ಸಂದರ್ಭಗಳನ್ನು ಹೊರತುಪಡಿಸಿ, ಉಳಿದಂತೆ ರೈಲು ಪ್ರಯಾಣವನ್ನು ತಪ್ಪಿಸುವುದು ಒಳ್ಳೆಯದು ಎಂದು ಮನವಿ ಮಾಡಿದೆ.
ಭಾರತೀಯ ರೈಲ್ವೆ ಪರಿವಾರ ದೇಶದಲ್ಲಿ ಪ್ರಯಾಣದ ಅಗತ್ಯತೆ ಇರುವ ಎಲ್ಲ ನಾಗರಿಕರಿಗೆ ರೈಲು ಸೇವೆಗಳನ್ನು ಒದಗಿಸಲು ದಿನದ 24 ಗಂಟೆಯೂ ಕಾರ್ಯೋನ್ಮುಖವಾಗಿದೆ. ನಮ್ಮ ಅತಿ ದೊಡ್ಡ ಕಾಳಜಿ ಎಂದರೆ ಪ್ರಯಾಣಿಕರ ಸುರಕ್ಷತೆ ಆಗಿದೆ. ಆದ್ದರಿಂದ ಈ ನಿಟ್ಟಿನಲ್ಲಿ ನಾವು ಎಲ್ಲ ನಾಗರಿಕರ ಸಹಕಾರವನ್ನು ಕೋರುತ್ತೇವೆ. ಯಾವುದೇ ತುರ್ತು ಅಥವಾ ಸಂಕಷ್ಟಗಳಿದ್ದರೆ ದಯವಿಟ್ಟು ಯಾವುದೇ ಸಂಕೋಚವಿಲ್ಲದೆ ನಿಮ್ಮ ರೈಲ್ವೆ ಪರಿವಾರವನ್ನು ಸಂಪರ್ಕಿಸಿ ಮತ್ತು ಎಂದಿನಂತೆ ನಾವು ಸದಾ ನಿಮಗೆ ಸಹಾಯ ಮಾಡುತ್ತೇವೆ.(ಸಹಾಯವಾಣಿ ಸಂಖ್ಯೆ 139 ಮತ್ತು 138)
***
(Release ID: 1628024)
Visitor Counter : 244
Read this release in:
English
,
Urdu
,
Hindi
,
Marathi
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam