ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ಹೆಚ್ಚು ಸ್ಪರ್ಧಾತ್ಮಕವಾಗಲು ಹಾಗು ಜಗತ್ತಿಗೆ ಗುಣಮಟ್ಟದ ಉತ್ಪನ್ನಗಳನ್ನು ಒದಗಿಸಲು ರಫ್ತುದಾರರಿಗೆ ಶ್ರೀ ಪೀಯುಶ್ ಗೋಯಲ್ ಕರೆ

Posted On: 28 MAY 2020 4:40PM by PIB Bengaluru

ಹೆಚ್ಚು ಸ್ಪರ್ಧಾತ್ಮಕವಾಗಲು ಹಾಗು ಜಗತ್ತಿಗೆ ಗುಣಮಟ್ಟದ ಉತ್ಪನ್ನಗಳನ್ನು ಒದಗಿಸಲು ರಫ್ತುದಾರರಿಗೆ ಶ್ರೀ ಪೀಯುಶ್ ಗೋಯಲ್ ಕರೆ

ಬೇರೆ ಕ್ಷೇತ್ರಗಳಲ್ಲೂ ಬಂಡವಾಳ ಹೂಡಿ ವೈವಿಧ್ಯಮಯ ಕ್ಷೇತ್ರಗಳಲ್ಲಿ ತೊಡಗುವಿಕೆ,

ಪ್ರಸ್ತುತ ಕ್ಷೇತ್ರಗಳಲ್ಲಿ ಇನ್ನಷ್ಟು ಬಲಿಷ್ಟವಾಗುವುದು ಮತ್ತು ಹೊಸ ಮಾರುಕಟ್ಟೆಗಳ ಅನ್ವೇಷಣೆ ಯಶಸ್ಸಿನ ಮಂತ್ರ

 

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆಗಳು ಹಾಗು ರೈಲ್ವೇ ಸಚಿವರಾದ ಶ್ರೀ ಪೀಯುಶ್ ಗೋಯಲ್ ಅವರು ಇಂದು ವೀಡಿಯೋ ಕಾನ್ಫರೆನ್ಸ್ ಮೂಲಕ ಭಾರತೀಯ ಕೈಗಾರಿಕಾ ಮಹಾಒಕ್ಕೂಟ (ಸಿ...) ಆಯೋಜಿಸಿದ್ದ ರಫ್ತು ಕುರಿತ ಡಿಜಿಟಲ್ ಸಮ್ಮೇಳನದಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಪಾಲ್ಗೊಂಡರು. ಭಾರತದ ಎಕ್ಸಿಂ ಬ್ಯಾಂಕ್ ಸಮ್ಮೇಳನಕ್ಕೆ ಸಾಂಸ್ಥಿಕ ಸಹಭಾಗಿತ್ವ ಒದಗಿಸಿತ್ತು.

ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಗೋಯಲ್ ಬೆಳವಣಿಗೆಯ ಭವಿಷ್ಯ ಕೈಗಾರಿಕೆಗಳಲ್ಲಿದೆ ಮತ್ತು ಅದು ಖಾಸಗಿ ವಲಯದಲ್ಲಿದೆ, ಇದರಲ್ಲಿ ಸರಕಾರದ ಪಾತ್ರ ಅಲ್ಪ ಪ್ರಮಾಣದ್ದು ಎಂದರು. ಭಾರತದ ರಫ್ತನ್ನು ಹೆಚ್ಚಿಸಲು ಸಚಿವರು ಮೂರು ಮುಖ್ಯ ದಾರಿಗಳನ್ನು ಗುರುತಿಸಿದರು: ಉತ್ಪಾದನೆಗೆ ಪುನಃಶ್ಚೇತನ, ರಫ್ತು ಉತ್ಪನ್ನಗಳ ವೈವಿಧ್ಯೀಕರಣ ಮತ್ತು ಹೊಸ ಹಾಗು ಹೆಚ್ಚು ಸ್ವೀಕಾರಾರ್ಹ ಮಾರುಕಟ್ಟೆಗಳ ಹುಡುಕುವಿಕೆ. ರಫ್ತು ಉತ್ಪನ್ನಗಳ ವೈವಿಧ್ಯೀಕರಣ , ಜೊತೆಗೆ ಈಗ ಹೊಂದಿರುವ ಕ್ಷೇತ್ರಗಳಲ್ಲಿ ಇನ್ನಷ್ಟು ಬಲಿಷ್ಟವಾಗುವುದು ನಮ್ಮ ಆರ್ಥಿಕತೆಯ ಬೆಳವಣಿಗೆಗೆ ಅವಶ್ಯ ಎಂದವರು ಒತ್ತಿ ಹೇಳಿದರು. ಅಟೋ ಕ್ಷೇತ್ರಗಳಲ್ಲಿ , ಪೀಠೋಪಕರಣಗಳ ಕ್ಷೇತ್ರದಲ್ಲಿ, ಹವಾ ನಿಯಂತ್ರಕಗಳಲ್ಲಿ, ಮತ್ತು ಇತರ ಕ್ಷೇತ್ರಗಳಲ್ಲಿ ದೇಶೀಯ ಉತ್ಪಾದನೆಗಳನ್ನು ಉತ್ತೇಜಿಸಲು ವಿಪುಲ ಅವಕಾಶಗಳಿವೆ ಎಂದವರು ಹೇಳಿದರು. ಎಂ...ಟಿ . ವೈ. ಯು ಇಲೆಕ್ಟ್ರಾನಿಕ್ಸ್ ಉತ್ಪಾದನೆಯನ್ನು ಉತ್ತೇಜಿಸುತ್ತಿದೆ, ಫಾರ್ಮಾ ವಲಯದಲ್ಲಿ ನಾವು ಉತ್ತೇಜನ ನೀಡುತ್ತಿದ್ದೇವೆ. .ಪಿ.. ಉತ್ಪಾದನೆಯಲ್ಲಿ ಮತ್ತು ಕೃಷಿ ರಫ್ತು ವಲಯದಲ್ಲಿ ಭಾರೀ ಅವಕಾಶಗಳಿವೆ ಎಂದು ಹೇಳಿದ ಅವರು .ಟಿ. ಆಧಾರಿತ ಸೇವೆಗಳಲ್ಲಿ ವಿಶ್ವವು ಭಾರತೀಯರ ತಜ್ಞತೆ ಮತ್ತು ಕೌಶಲ್ಯವನ್ನು ಪರಿಗಣಿಸಿದೆ ಮತ್ತು ಅದರಿಂದಾಗಿ ನಾವು ನಾಸ್ಕಾಂಗೆ ಮುಂದಿನ ಐದು ವರ್ಷಗಳಲ್ಲಿ ವಲಯದಲ್ಲಿ ಡಾಲರ್ 500 ಬಿಲಿಯನ್ ರಫ್ತು ಗುರಿಯನ್ನು ಬೆಂಬತ್ತುವಂತೆ ಕೇಳಿದ್ದೇವೆ ಎಂದೂ ನುಡಿದರು.

ಆತ್ಮನಿರ್ಭರ ಭಾರತದ ಬಗ್ಗೆ ಮಾತನಾಡಿದ ಅವರು ಇದು ಇನ್ನಷ್ಟು ಸ್ವಾವಲಂಬನೆ ಮಾತ್ರ ಅಲ್ಲ, ತನ್ನ ಶಕ್ತಿಯಿಂದ ಇಡೀ ವಿಶ್ವದ ಜೊತೆ ವ್ಯವಹರಿಸುವುದು ಕೂಡಾ. ಭಾರತವು ವಿಶ್ವ ಮಾರುಕಟ್ಟೆಯಲ್ಲಿ ಅವಲಂಬಿಸಬಹುದಾದ ಸಹಭಾಗಿ ಮತ್ತು ವಿಶ್ವಾಸಾರ್ಹ ಮಿತ್ರ ಎಂದೂ ಪರಿಗಣಿಸಲ್ಪಡಬೇಕು. ನಿರ್ದಿಷ್ಟವಾಗಿ ಜಾಗತಿಕ ಪೂರೈಕೆ ಸರಪಳಿ ಮರುಹೊಂದಾಣಿಕೆ ಆಗುತ್ತಿರುವಾಗ ಇದು ಬಹಳ ಮುಖ್ಯ ಎಂದೂ ಪ್ರತಿಪಾದಿಸಿದರು. ಭಾರತವನ್ನು ಸ್ವಾವಲಂಬಿಯಾಗಿಸುವ ಪ್ರಧಾನ ಮಂತ್ರಿ ಅವರ ಮುಂಗಾಣ್ಕೆಯನ್ನು ಪ್ರಸ್ತಾಪಿಸಿದ ಅವರು ನಾವು ಶಕ್ತಿಯ ಬಲದಲ್ಲಿ ಮಾತನಾಡಬೇಕು, ಸ್ಪರ್ಧಾತ್ಮಕವಾಗಿರಬೇಕು, ಮತ್ತು ಜಗತ್ತಿಗೆ ಗುಣಮಟ್ಟದ ಉತ್ಪನ್ನಗಳನ್ನು ಕೊಡಬೇಕು ಎಂದರು. ಯಶಸ್ಸನ್ನು ಸಾಧಿಸಲು ನಮ್ಮಲ್ಲಿ ಅಪರಿಮಿತ ಛಲ ಇರಬೇಕು , ಎದುರಿರುವ ಸವಾಲುಗಳನ್ನು ಎದುರಿಸುವ ಇಚ್ಚಾಶಕ್ತಿ ನಮ್ಮಲ್ಲಿದ್ದರೆ, ನಮ್ಮ ಮುನ್ನಡೆಯನ್ನು ಯಾವ ಬಿಕ್ಕಟ್ಟೂ ನಿಲ್ಲಿಸಲಾರದು ಎಂದೂ ಶ್ರೀ ಗೋಯಲ್ ಹೇಳಿದರು.

125 ವರ್ಷಗಳನ್ನು ಪೂರ್ಣಗೊಳಿಸಿರುವುದಕ್ಕೆ ಮತ್ತು ಜಾಗತಿಕ ಮೌಲ್ಯ ಸರಪಳಿ (ಜಿ.ವಿ.ಸಿ.ಗಳು) ಗಳ ಸಮಗ್ರೀಕರಣ ಮೂಲಕ ರಫ್ತು ಹೆಚ್ಚಳಕ್ಕೆ ಕಾರ್ಯಪಡೆ ಆರಂಭಿಸಿರುವುದಕ್ಕೆ ಸಿ... ಯನ್ನು ಶ್ರೀ ಗೋಯಲ್ ಅಭಿನಂದಿಸಿದರು. ಕಾರ್ಯಪಡೆಯ ಜೊತೆ ನಿಕಟವಾಗಿ ಕಾರ್ಯಾಚರಿಸುವ ಬಗ್ಗೆ ತಮ್ಮ ಬದ್ಧತೆಯನ್ನು ಪ್ರಕಟಿಸಿದ ಅವರು ಕೈಗಾರಿಕೆಗಳು ಮತ್ತು ದೇಶದ ಹಿತಕ್ಕಾಗಿ ಅವಶ್ಯ ಇರುವಲ್ಲೆಲ್ಲ ಕ್ರಮಗಳನ್ನು ಕೈಗೊಳ್ಳುವುದಾಗಿಯೂ ಹೇಳಿದರು. ಕೇಂದ್ರ ಇರಲಿ , ರಾಜ್ಯ ಸರಕಾರಗಳಿರಲಿ, ರಫ್ತು ಸಮುದಾಯಕ್ಕೆ ನೆರವು ನೀಡಲು ಮತ್ತು ಸಹಭಾಗಿ ನೆಲೆಯಲ್ಲಿ ಕೆಲಸ ಮಾಡುವ ಆಶಯವನ್ನು ಹೊಂದಿವೆ ಎಂದರು. ದೇಶವು ಕೌಶಲ್ಯಯುಕ್ತ ಕಾರ್ಮಿಕ ಬಲವನ್ನು ಹೊಂದಿದೆ. ವಿಶ್ವ ದರ್ಜೆಯ ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಪ್ರಯೋಗಾಲಯಗಳು ಇಲ್ಲಿವೆ, ನಾವು 130 ಕೋಟಿ ಭಾರತೀಯರ ಒಳಿತಿಗಾಗಿ ಕೆಲಸ ಮಾಡುವ ಎಂದೂ ಅವರು ಹೇಳಿದರು.

ಸಿ... ಮಹಾ ನಿರ್ದೇಶಕ ಶ್ರೀ ಚಂದ್ರಜಿತ್ ಬ್ಯಾನರ್ಜಿ ಮಾತನಾಡಿ ನಮ್ಮ ರಫ್ತನ್ನು ಮರುಜೋಡಣೆ ಮಾಡಲು ಎಲ್ಲಾ ಅವಶ್ಯ ಸುಧಾರಣೆಗಳನ್ನು ಕೈಗೊಳ್ಳಬೇಕು ಮತ್ತು ಇದು ಅದಕ್ಕೆ ಸಕಾಲ ಎಂದರು. ವರ್ತಕ ಸಾಗಾಣಿಕೆ, ಗುಣಮಟ್ಟ ಅನುಸರಣೆ, ಜಿ.ವಿ.ಸಿ.ಗಳ ಅಡೆ ತಡೆ ರಹಿತ ಕಾರ್ಯಾಚರಣೆ, ಎಫ್.ಟಿ..ಗಳಿಗೆ ಸಂಬಂಧಿಸಿ ಬಲಿಷ್ಟ ವ್ಯೂಹ ಅಗತ್ಯ ಎಂದವರು ಪ್ರತಿಪಾದಿಸಿದರು.

***(Release ID: 1628012) Visitor Counter : 6