ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
ಕೋವಿಡ್-19 ಎದುರಿಸಲು ವಿಜ್ಞಾನ ಮತ್ತು ತಂತ್ರಜ್ಞಾನ ಪರಿಹಾರಗಳು
Posted On:
28 MAY 2020 6:13PM by PIB Bengaluru
ಕೋವಿಡ್-19 ಎದುರಿಸಲು ವಿಜ್ಞಾನ ಮತ್ತು ತಂತ್ರಜ್ಞಾನ ಪರಿಹಾರಗಳು
ಕಂಪ್ಯೂಟೇಶನಲ್ ಡ್ರಗ್ ಅನ್ವೇಷಣೆಗಾಗಿ ‘ಹ್ಯಾಕಥಾನ್’ ಮಾದರಿಯ
ವಿವಿಧ ಕ್ರಮಪದ್ಧತಿಗಳನ್ನು ಕೈಗೊಳ್ಳಲಾಗುತ್ತಿದೆ: ಪ್ರೊಫೆಸರ್ ಕೆ. ವಿಜಯ್ ರಾಘವನ್
ಕೋವಿಡ್-19 ಸಂಬಂಧಿಸಿದಂತೆ ಪರಿಣಾಮಕಾರಿ ಲಸಿಕೆಗಳು, ಔಷಧ ಕಂಡುಹುಡುಕುವಿಕೆ, ನೂತನ ಅನ್ವೇಷಣೆ, ರೋಗನಿರ್ಣಯ ಮತ್ತು ಪರೀಕ್ಷೆ ಮುಂತಾದ ವಿಷಯಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ . ಕ್ಷೇತ್ರಗಳಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ಸಾರಾಂಶಗಳನ್ನು ನಿತಿ ಆಯೋಗ್ ಸದಸ್ಯ ಡಾ.ವಿನೋದ್ ಪಾಲ್ ಮತ್ತು ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಪ್ರೊಫೆಸರ್ ಕೆ.ವಿಜಯ್ ರಾಘವನ್ ಅವರು ಇಂದಿಲ್ಲಿ ಜರುಗಿದ ಮಾಧ್ಯಮಗೋಷ್ಠಿಯಲ್ಲಿ ವಿವರಿಸಿ ತಿಳಿಸಿದರು
ಲಸಿಕೆಗಳವಿಷಯದಲ್ಲಿ, ಸಾಮಾನ್ಯವಾಗಿ ಪ್ರಕ್ರಿಯೆಯು ಬಹಳ ನಿಧಾನವಾಗಿರುತ್ತದೆ ಮತ್ತು ಅನಿಶ್ಚಿತತೆಗಳಿಂದ ಕೂಡಿರುತ್ತದೆ ಎಂದು ತಿಳಿಸಿದರು. ಆದರೆ, ಕೋವಿಡ್-19 ವಿರುದ್ಧದ ಹೋರಾಟ ಯಶಸ್ವಿಯಾಗಲು ಹೆಚ್ಚಿನ ಸಂಖ್ಯೆಯ ಸಮಾನಾಂತರ ಪ್ರಯತ್ನಗಳು ಕೂಡಾ ಬೇಕಾಗುತ್ತವೆ. ಇದನ್ನು ಜಾಗತಿಕವಾಗಿ ಮತ್ತು ರಾಷ್ಟ್ರೀಯವಾಗಿ ಮಾಡಲಾಗುತ್ತಿದೆ. ಪ್ರಬಲ ಭಾರತೀಯ ಲಸಿಕೆ ಉದ್ಯಮದಲ್ಲಿ ಭಾರತೀಯ ತಜ್ಞರು ಮತ್ತು ಸ್ಟಾರ್ಟ್ ಅಪ್ ಸಂಸ್ಥೆಗಳು, ಲಸಿಕೆಪ್ರಯೋಗಕ್ಕಾಗಿ ಸಿದ್ದವಾದ ಅಭ್ಯರ್ಥಿಗಳ ಮೇಲೆ ಕಾರ್ಯನಿರ್ವಹಿಸುತ್ತವೆ. ಒಟ್ಟು ಮೂರು ರೀತಿಯ ಪ್ರಯತ್ನಗಳು ನಡೆಯುತ್ತಿವೆ. ಮೊದಲನೆಯದು ಸ್ಥಳೀಯ ಪ್ರಯತ್ನಗಳು. ಎರಡನೆಯದು ಭಾರತೀಯ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸುವ ಜಾಗತಿಕವಾಗಿ ಸಹಕಾರಿ ಪ್ರಯತ್ನಗಳು, ಮತ್ತು ಮೂರನೆಯದು ಜಾಗತಿಕ ಪ್ರಯತ್ನಗಳಲ್ಲಿ ಭಾರತೀಯ ಭಾಗವಹಿಸುವಿಕೆ. ಇಂತಹ ದೊಡ್ಡ ವಿಸ್ತೃತ ಕ್ಷೇತ್ರದಲ್ಲಿ, ಉತ್ಪಾದನೆ ಮತ್ತು ದಾಸ್ತಾನು ಮಾಡುವಿಕೆಯ ಅಪಾಯವನ್ನು ತಗ್ಗಿಸುವ ಪ್ರಯತ್ನಗಳ ನಂತರ, ಅಂತಿಮ ಯಶಸ್ಸು ಉತ್ತಮವಾಗಿರುತ್ತದೆ.
ಔಷಧಿ ಅನ್ವೇಷಣೆಯಲ್ಲಿ, ನಮ್ಮ ವೈಜ್ಞಾನಿಕ ಪ್ರಯತ್ನಗಳು ಮೂರು ವಿಧಾನಗಳನ್ನು ತೆಗೆದುಕೊಳ್ಳುತ್ತವೆ. ಮೊದಲನೆಯದು, ಅಸ್ತಿತ್ವದಲ್ಲಿರುವ ಔಷಧಗಳು ವೈರಸ್ ವಿರುದ್ಧ ಮತ್ತು ರೋಗದ ಪರಿಣಾಮಗಳನ್ನು ತಗ್ಗಿಸುವಲ್ಲಿ ಎಷ್ಟು ಪರಿಣಾಮಕಾರಿ ಎಂದು ನೋಡಲು ಪ್ರಯತ್ನಗಳಾಗುತ್ತಿವೆ, ಎರಡನೆಯದಾಗಿ, ಔಷಧೀಯ ಸಸ್ಯಗಳಿಂದ ಫೈಟೊ- ಔಷಧಗಳು ಮತ್ತು ಸಾರಗಳನ್ನು ಪರೀಕ್ಷಿಸಲಾಗುತ್ತಿದೆ. ಅಂತಿಮವಾಗಿ, ವೈವಿಧ್ಯಮಯ ವಿಧಾನಗಳನ್ನು ಬಳಸಿಕೊಂಡು, ಕಂಪ್ಯೂಟೇಶನಲ್ ಡ್ರಗ್ ಆವಿಷ್ಕಾರಕ್ಕಾಗಿ ‘ಹ್ಯಾಕಥಾನ್’ ಸೇರಿದಂತೆ ಹೊಸ ಔಷಧ ಅನ್ವೇಷಣೆಯನ್ನು ಕೈಗೊಳ್ಳಲಾಗುತ್ತಿದೆ.
ಸಂಶೋಧನಾ ಪ್ರಯತ್ನಗಳ ಒಂದು ಸಂಯೋಜನೆಯು ಹೊಸ ಪರೀಕ್ಷೆಗಳು ಮತ್ತು ಪರೀಕ್ಷಾ ಕಿಟ್ಗಳ ಉತ್ಪಾದನೆಗೆ ಕಾರಣವಾಗಿದೆ. ವೈರಸ್ ಪತ್ತೆಗಾಗಿ ಮತ್ತು ಪ್ರತಿಕಾಯ ಪತ್ತೆಗಾಗಿ ಹೊಸ ಪರೀಕ್ಷೆಗಳು ಇವುಗಳಲ್ಲಿ ಸೇರಿವೆ. ಎರಡನೆಯದನ್ನು ಸೆರೋಲಾಜಿಕಲ್ ಅಧ್ಯಯನಕ್ಕಾಗಿ ಬಳಸಲಾಗುತ್ತಿದೆ.
ಈ ಉತ್ತಮ ಬೆಳವಣಿಗೆಗಳ ವೇಗವು ಇಷ್ಟು ತೀವ್ರಗೊಳ್ಳಲು ನಮ್ಮ ವಿಜ್ಞಾನಿಗಳು, ಸಂಸ್ಥೆಗಳು ಮತ್ತು ವಿಜ್ಞಾನ ಸಂಸ್ಥೆಗಳ ಸಹಯೋಗದ ಪ್ರಯತ್ನಗಳಿಂದ ಮಾತ್ರ ಸಾಧ್ಯವಾಗಿದೆ. ಈ ಯೋಜನೆಗಳ ನಿಯಂತ್ರಕ ವ್ಯವಸ್ಥೆಯು ಸಂಶೋಧನೆಯ ವೇಗಗತಿಯನ್ನು ಗುಣಮಟ್ಟದೊಂದಿಗೆ ಸಂಯೋಜಿಸುತ್ತಾ ಎಲ್ಲಾ ಚಟುವಟಿಕೆಗಳನ್ನು ಬಹಳ ನಿಕಟದಿಂದ ಪರಶೀಲಿಸುತ್ತಿದೆ.
***
(Release ID: 1628008)
Visitor Counter : 251