ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

ಸಿಪೆಟ್ ಅನ್ನು ಕೇಂದ್ರೀಯ ಪೆಟ್ರೋ ಕೆಮಿಕಲ್ ಇಂಜಿನಿಯರಿಂಗ್ ಹಾಗೂ ತಂತ್ರಜ್ಞಾನ ಕೇಂದ್ರ ಎಂದು ಮರು ನಾಮಕರಣ

Posted On: 28 MAY 2020 1:21PM by PIB Bengaluru

ಸಿಪೆಟ್ ಅನ್ನು ಕೇಂದ್ರೀಯ ಪೆಟ್ರೋ ಕೆಮಿಕಲ್ ಇಂಜಿನಿಯರಿಂಗ್ ಹಾಗೂ ತಂತ್ರಜ್ಞಾನ ಕೇಂದ್ರ ಎಂದು ಮರು ನಾಮಕರಣ

ಸಿಪೆಟ್ ಪೆಟ್ರೋ ಕೆಮಿಕಲ್ ವಲಯದ ಬೆಳವಣಿಗೆಗೆ ಸಂಪೂರ್ಣವಾಗಿ ಸಮರ್ಪಿಸಿಕೊಳ್ಳಲಿದೆ: ಸಚಿವ ಡಿ.ವಿ.ಸದಾನಂದ ಗೌಡ

 

ಭಾರತ ಸರ್ಕಾರದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದಡಿ ಬರುವ ಅತ್ಯಂತ ಪ್ರಮುಖ ರಾಷ್ಟ್ರೀಯ ಸಂಸ್ಥೆ, ಕೇಂದ್ರೀಯ ಪ್ಲಾಸ್ಟಿಕ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ- ಸಿಪೆಟ್(ಸಿಐಪಿಇಟಿ)ಅನ್ನು ಕೇಂದ್ರ ಪೆಟ್ರೋ ಕೆಮಿಕಲ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ (ಸಿಪೆಟ್) ಎಂದು ಮರು ನಾಮಕರಣ ಮಾಡಲಾಗಿದೆ.

ಬದಲಾವಣೆಯಾಗಿರುವ ಹೆಸರನ್ನು ತಮಿಳುನಾಡು ಸೊಸೈಟಿ ನೋಂದಣಿ ಕಾಯ್ದೆ 1975 (ತಮಿಳುನಾಡು ಕಾಯ್ದೆ 1975 ನಿಯಮ 27) ಅಡಿ ನೋಂದಣಿ ಮಾಡಿಸಲಾಗಿದೆ.

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡ ಅವರು ಇನ್ನು ಸಿಪೆಟ್ ಇಡೀ ಪೆಟ್ರೋ ಕೆಮಿಕಲ್ ವಲಯದ ಬೆಳವಣಿಗೆಗೆ ಸಂಪೂರ್ಣವಾಗಿ ತನ್ನನ್ನು ತಾನು ಸಮರ್ಪಿಸಿಕೊಳ್ಳಲಿದೆ ಮತ್ತು ವಿಶೇಷವಾಗಿ ಶೈಕ್ಷಣಿಕ, ಕೌಶಲ್ಯ, ತಾಂತ್ರಿಕ ಬೆಂಬಲ ಮತ್ತು ಸಂಶೋಧನೆಗೆ ಹೆಚ್ಚಿನ ಒತ್ತು ನೀಡಲಿದೆ ಎಂದರು.

ಸಿಪೆಟ್ ಪ್ರಾಥಮಿಕ ಧ್ಯೇಯ, ಶಿಕ್ಷಣ ಮತ್ತು ಸಂಶೋಧನೆ ಕಾರ್ಯಕ್ರಮಗಳನ್ನು ಒಗ್ಗೂಡಿಸಿ, ಪ್ಲಾಸ್ಟಿಕ್ ಉದ್ಯಮದ ಪ್ರಗತಿಗೆ ಕೊಡುಗೆ ನೀಡುವುದಾಗಿದೆ. ಸಂಸ್ಥೆ ಹಲವು ವರ್ಷಗಳಿಂದ ಬೆಳೆದು ಅದು ಉದ್ಯಮಗಳೊಂದಿಗೆ ನಿಕಟ ಬಾಂಧವ್ಯವನ್ನು ಸೃಷ್ಟಿಕೊಂಡಿದೆ ಮತ್ತು ಸಂಪನ್ಮೂಲ ದಕ್ಷತೆ ಮತ್ತು ಮಾರುಕಟ್ಟೆ ಆಗುವಂತಹ ಪರಿಹಾರವಾಗುವಂತಹ ಪ್ಲಾಸ್ಟಿಕ್ ವಲಯದಲ್ಲಿ ನಾವಿನ್ಯ ಸೃಷ್ಟಿ ಕೆಲಸವನ್ನು ಮಾಡುತ್ತದೆ.

***


(Release ID: 1627545) Visitor Counter : 316