ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ಕೈಗಾರಿಕೆಗಳು ಮತ್ತು ವರ್ತಕ ಸಂಘಟನೆಗಳ ಜೊತೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪೀಯುಶ್ ಗೋಯಲ್ ಸಭೆ

Posted On: 27 MAY 2020 6:55PM by PIB Bengaluru

ಕೈಗಾರಿಕೆಗಳು ಮತ್ತು ವರ್ತಕ ಸಂಘಟನೆಗಳ ಜೊತೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪೀಯುಶ್ ಗೋಯಲ್ ಸಭೆ

ಆತ್ಮನಿರ್ಭರ ಭಾರತ ಎಂದರೆ ವಿಶ್ವಾಸಯುಕ್ತ, ಸ್ವಾವಲಂಬೀ ಮತ್ತು ಕಾಳಜಿ ವಹಿಸುವ ರಾಷ್ಟ್ರವೆಂದರ್ಥ ಹೊರತು

ಸ್ವಾರ್ಥ ಚಿಂತನೆ ಅಲ್ಲ ಎಂದಿದ್ದಾರೆ ಶ್ರೀ ಗೋಯಲ್

 

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪೀಯುಶ್ ಗೋಯಲ್ ಅವರಿಂದು ವೀಡಿಯೋ ಕಾನ್ಫರೆನ್ಸ್ ಮೂಲಕ ಕೈಗಾರಿಕೆಗಳು ಮತ್ತು ವರ್ತಕ ಸಂಘಟನೆಗಳ ಜೊತೆ ಸಭೆ ನಡೆಸಿದರು. ಲಾಕ್ ಡೌನ್ ಆರಂಭದ ಬಳಿಕ ಕೋವಿಡ್ -19 ಪರಿಣಾಮವನ್ನು ಮೌಲ್ಯಮಾಪನ ಮಾಡಲು ಸಂಘಟನೆಗಳ ಜೊತೆ ನಡೆಸಲಾದ ಇಂತಹ ಐದನೇ ಸಭೆ ಇದಾಗಿದೆ.ಲಾಕ್ ಡೌನ್ ಸಡಿಲಿಕೆ, ಅದರಿಂದ ಕೈಗಾರಿಕೆಗಳು ಮತ್ತು ವರ್ತಕ ಸಂಘಟನೆಗಳ ಕಾರ್ಯಚಟುವಟಿಕೆಗಳ ಮೇಲಾಗಿರುವ ಪರಿಣಾಮ ಹಾಗು ಆರ್ಥಿಕತೆಯನ್ನು ಮರಳಿ ಹಳಿಯ ಮೇಲೆ ತರಲು ಅವರ ಸಲಹೆಗಳನ್ನು ಪರಿಗಣಿಸುವುದೂ ಸಭೆಯ ಉದ್ದೇಶಗಳಲ್ಲಿ ಸೇರಿದೆ.

ಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ಸಹಾಯಕ ಸಚಿವರಾದ ಶ್ರೀ ಸೋಂ ಪ್ರಕಾಶ್ ಮತ್ತು ಶ್ರೀ ಎಚ್.ಎಸ್. ಪುರಿ ಹಾಗು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಧಿಕಾರಿಗಳು ಪಾಲ್ಗೊಂಡಿದ್ದರು. ಇಂದಿನ ಸಭೆಯಲ್ಲಿ ಭಾಗವಹಿಸಿದ್ದ ಸಂಘಟನೆಗಳಲ್ಲಿ ಸಿ... , ಎಫ್..ಸಿ.ಸಿ.., ಆಸೋಚಾಮ್, ನಾಸ್ಕಾಂ, ಪಿ.ಎಚ್.ಡಿ.ಸಿ.., ಸಿ...ಟಿ, ಎಫ್..ಎಸ್.ಎಂ.., ಲಘು ಉದ್ಯೋಗ ಭಾರತಿ, ಎಸ್...ಎಂ, .ಸಿ.ಎಂ.., .ಎಂ.ಟಿ.ಎಂ.. , ಎಸ್..ಸಿ.ಸಿ.., ಎಫ್..ಎಂ.ಟಿ., .ಸಿ.ಸಿ. ಮತ್ತು ...ಎಂ.. ಗಳು ಸೇರಿವೆ.

ಸಂಘಟನೆಗಳನ್ನು ಉದ್ದೇಶಿಸಿ ಮಾತನಾಡಿದ , ಶ್ರೀ ಗೋಯಲ್ ಭವಿಷ್ಯದ ಆಯ್ಕೆ ನಮ್ಮ ಕೈಯಲ್ಲಿದೆ, ಅದು ಉತ್ತಮವಾಗಿರಬೇಕಿದ್ದರೆ ನಾವು ಸಿದ್ದರಾಗಿರಬೇಕು ಮತ್ತು ಕೋವಿಡೋತ್ತರ ಕಾಲದಲ್ಲಿ ಕೆಲಸ ಆರಂಭಿಸಬೇಕು, ಇದಕ್ಕೆ ಉತ್ತಮ ಚಿಂತನೆಗಳು, ದೃಢವಾದ ಅನುಷ್ಟಾನ ಯೋಜನೆಗಳು ಬೇಕು, ಮೂಲಕ ಭಾರತವನ್ನು ಸೂಪರ್ ಪವರ್ ಮಾಡಬಹುದು ಎಂದರು. ಜಾನ್ ಭೀ, ಜಹಾನ್ ಭೀಎಂಬ ಪ್ರಧಾನ ಮಂತ್ರಿ ಅವರ ಹೇಳಿಕೆಯನ್ನು ಉಲ್ಲ್ಲೇಖಿಸಿದ ಅವರು ಆರ್ಥಿಕತೆಗೆ ಸಂಬಂಧಿಸಿದ ಅತ್ಯಂತ ಕೆಟ್ಟ ಪರಿಸ್ಥಿತಿ ನಿವಾರಣೆಯಾಗಿದೆ, ಪರಿಸ್ಥಿತಿ ತಿಳಿಯಾಗುತ್ತಿದೆ, ಪುನಃಶ್ಚೇತನ ಕಾಣುತ್ತಿದೆ ಎಂದರು. ಸರಕಾರವು ಆತ್ಮನಿರ್ಭರ ಆಂದೋಲನ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳು ದೇಶಕ್ಕೆ ಆರ್ಥಿಕತೆಯ ನಿಟ್ಟಿನಲ್ಲಿ ಹೋರಾಡಲು ಸಹಾಯ ಮಾಡಲಿವೆ ಎಂದೂ ಅವರು ಹೇಳಿದರು.

ಆತ್ಮನಿರ್ಭರ ಭಾರತ್ ಎಂದರೆ ಒಳಮುಖವಾಗಿ , ಸ್ವಾರ್ಥಪರವಾಗಿರುವುದಲ್ಲ, ಅದು ವಿದೇಶಿ ವಿರೋಧಿಯೂ ಅಲ್ಲ, ಮುಚ್ಚಿದ ದ್ವಾರಗಳ ಚಿಂತನೆಯೂ ಅಲ್ಲ ಎಂದು ಹೇಳಿದ ಸಚಿವರು ಚಿಂತನೆಯು ದೃಢ ವಿಶ್ವಾಸಯುಕ್ತ, ಸ್ವಾವಲಂಬೀ , ರಾಷ್ಟ್ರದ ಬಗ್ಗೆ ಕಾಳಜಿ ವಹಿಸುವ , ಸಮಾಜದ ಎಲ್ಲಾ ವರ್ಗದವರ ಬಗ್ಗೆ ಕಾಳಜಿ ತೋರುವ, ದೇಶದ ಎಲ್ಲಾ ಭಾಗಗಳ ಅಭಿವೃದ್ದಿಯನ್ನು ಪೋಷಿಸುವ ಚಿಂತನೆ ಎಂದರು. ಕಳೆದ ಮೂರು ದಶಕಗಳ ಉದಾರೀಕರಣೋತ್ತರ ಅವಧಿಯಲ್ಲಿ ದೇಶವು ಪ್ರಗತಿ ಹೊಂದಿದೆಯಾದರೂ ಅದು ನಗರ ಕೇಂದ್ರಿತವಾಗಿದೆ. ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳು ಅವಕಾಶಗಳಿಂದ ವಂಚಿತವಾಗಿವೆ, ಮತ್ತು ಇದರಿಂದಾಗಿ ಮಿಲಿಯಾಂತರ ಜನರು ಉದ್ಯೋಗಾವಕಾಶಗಳಿಗಾಗಿ ನಗರಕ್ಕೆ ವಲಸೆ ಹೋಗುವಂತಾಗಿದೆ ಎಂದರು. ಆತ್ಮನಿರ್ಭರ ಭಾರತ್ 130 ಕೋಟಿ ಭಾರತೀಯರಲ್ಲಿ ತಾವೆಲ್ಲರೂ ಒಂದೇ ಎಂಬ ಸ್ಪೂರ್ತಿಯನ್ನು ಬೆಳೆಸಲಿದೆ , ಅದು ಭಾರತೀಯ ಕಂಪೆನಿಗಳನ್ನು ಬೆಂಬಲಿಸಲಿದೆ ಎಂದರು. ಪೀಠೋಪಕರಣಗಳು, ಆಟಿಕೆಗಳು, ಕ್ರೀಡಾ ಶೂಗಳಂತಹ ಸಾಮಾನ್ಯ ವಸ್ತುಗಳನ್ನೂ ನಾವು ಆಮದು ಮಾಡಿಕೊಳ್ಳುತ್ತಿರುವುದು ಬಹಳ ಆಕ್ರೋಶದಿಂದ ಗಮನಿಸಬೇಕಾದ ವಿಷಯ ಎಂದ ಅವರು ಇದು ದೇಶವು ತಾಂತ್ರಿಕ ಪರಿಣತಿ ಮತ್ತು ಮಾನವ ಸಂಪನ್ಮೂಲವನ್ನು ಹೊಂದಿದ್ದಾಗ್ಯೂ ನಡೆಯುತ್ತಿದೆ, ಇದು ಬದಲಾಗಬೇಕು ಎಂದರು.

ನಿಟ್ಟಿನಲ್ಲಿ ಸುಸ್ಥಿರ, ಚೌಕಟ್ಟಿನಾಚೆಗಿನ ಚಿಂತನೆ ಮೂಲಕ ಪ್ರಯತ್ನಗಳನ್ನು ನಡೆಸುವಂತೆ ಕೈಗಾರಿಕೋದ್ಯಮಕ್ಕೆ ಶ್ರೀ ಗೋಯಲ್ ಕರೆ ನೀಡಿದರು,ಕೋವಿಡ್ -19 ವಿರುದ್ದದ ಹೋರಾಟವನ್ನು ಸರಕಾರ ಏಕಾಂಗಿಯಾಗಿ ನಡೆಸಲಾಗದು, ಅದು ರಾಷ್ಟ್ರದ ಹೋರಾಟ ಮತ್ತು ಎಲ್ಲಾ ಭಾಗೀದಾರರೂ ಇದರಲ್ಲಿ ಪ್ರಮುಖ ಧನಾತ್ಮಕ ಪಾತ್ರವನ್ನು ವಹಿಸಬೇಕಾಗುತ್ತದೆ ಎಂದವರು ಹೇಳಿದರು. ಸಂಘಟನೆಗಳು ನೀಡಿದ ಸಲಹೆಗಳನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದ ಸಚಿವರು, ನಿಟ್ಟಿನಲ್ಲಿ ಸಕಾಲಿಕ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದೂ ಹೇಳಿದರು.

***



(Release ID: 1627381) Visitor Counter : 239