ರೈಲ್ವೇ ಸಚಿವಾಲಯ

ಮೇ 25, 2020 ರವರೆಗೆ ದೇಶಾದ್ಯಂತ ಭಾರತೀಯ ರೈಲ್ವೆಯಿಂದ ಒಟ್ಟು 3274 “ಶ್ರಮಿಕ್ ಸ್ಪೆಷಲ್” ರೈಲುಗಳ ಕಾರ್ಯನಿರ್ವಹಣೆ

Posted On: 26 MAY 2020 5:04PM by PIB Bengaluru

ಮೇ 25, 2020 ವರೆಗೆ ದೇಶಾದ್ಯಂತ ಭಾರತೀಯ ರೈಲ್ವೆಯಿಂದ ಒಟ್ಟು 3274 “ಶ್ರಮಿಕ್ ಸ್ಪೆಷಲ್ರೈಲುಗಳ ಕಾರ್ಯನಿರ್ವಹಣೆ

ಕಳೆದ 25 ದಿನಗಳಲ್ಲಿಶ್ರಮಿಕ್ ಸ್ಪೆಷಲ್ರೈಲುಗಳ ಮೂಲಕ 44 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ತಮ್ಮ ರಾಜ್ಯಗಳಿಗೆ ತಲುಪಿಸಿದೆ

ಪ್ರಯಾಣಿಕರಿಗೆ 74 ಲಕ್ಷಕ್ಕೂ ಹೆಚ್ಚು ಉಚಿತ ಊಟ ಮತ್ತು 1 ಕೋಟಿಗಿಂತ ಹೆಚ್ಚು ನೀರಿನ ಬಾಟಲಿಗಳನ್ನು ವಿತರಿಸಲಾಗಿದೆ
 

ಇಂದು ಚಲಿಸುವ ರೈಲುಗಳು ಯಾವುದೇ ದಟ್ಟಣೆಯನ್ನು ಎದುರಿಸುತ್ತಿಲ್ಲ

 

ಮೇ 12, 2020 ರಿಂದ ಶ್ರಮಿಕ್ ವಿಶೇಷ ರೈಲುಗಳ ಜೊತೆಗೆ ನವದೆಹಲಿಯನ್ನು ಸಂಪರ್ಕಿಸುವ
30 ಜೋಡಿ ವಿಶೇಷ ರೈಲುಗಳು ಭಾರತೀಯ ರೈಲ್ವೆ ಜಾಲದಲ್ಲಿ ಕಾರ್ಯನಿರ್ವಹಿಸುತ್ತಿವೆ

ಜೂನ್ 1, 2020 ರಂದು ಹೆಚ್ಚವರಿ 200 ವೇಳಾಪಟ್ಟಿ ನಿಗಧಿತ ರೈಲುಗಳನ್ನು ಪ್ರಾರಂಭಿಸಲು ಚಿಂತನೆ ನಡೆಸುತ್ತಿದೆ

 

ವಿವಿಧ ಸ್ಥಳಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರು, ಯಾತ್ರಿಕರು, ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ಇತರ ವ್ಯಕ್ತಿಗಳ ಸಂಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯ ಹೊರಡಿಸಿದ ವಿಶೇಷ ರೈಲುಗಳಿಂದ ಸಾಗಾಟದ ಆದೇಶದ ನಂತರ, ಭಾರತೀಯ ರೈಲ್ವೆಯು ಮೇ 1,2020 ರಂದು “ಶ್ರಮಿಕ್ ವಿಶೇಷ” ರೈಲುಗಳನ್ನು ಓಡಿಸಲು ನಿರ್ಧರಿಸಿದೆ.

ಮೇ 25, 2020 ರ ವರೆಗೆ, ದೇಶಾದ್ಯಂತ ವಿವಿಧ ರಾಜ್ಯಗಳಿಂದ ಒಟ್ಟು 3274 “ಶ್ರಮಿಕ್ ವಿಶೇಷ” ರೈಲುಗಳ ಸುಗಮ ಸಂಚಾರವನ್ನು ಕಾರ್ಯಗತಗೊಳಿಸಲಾಗಿದೆ. ಈ “ಶ್ರಮಿಕ್ ವಿಶೇಷ” ರೈಲುಗಳ ಮೂಲಕ ಒಟ್ಟು 44 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ತಮ್ಮ ಸ್ವಂತ ರಾಜ್ಯಗಳನ್ನು ಸುರಕ್ಷಿತವಾಗಿ ತಲುಪಿದ್ದಾರೆ. ಹಾಗೂ 25.05.2020 ರಂದು ದೇಶಾಂದ್ಯಂತ ಒಟ್ಟು 223 ಶ್ರಮಿಕ್ ವಿಶೇಷ ರೈಲುಗಳು ಸುಮಾರು 2.8 ಲಕ್ಷ ಪ್ರಯಾಣಿಕರನ್ನು ಹೊತ್ತು ಚಲಿಸುತ್ತಿವೆ.

ಐ.ಆರ್‌.ಸಿ.ಟಿ.ಸಿ ಸಂಸ್ಥೆಯು 74 ಲಕ್ಷಕ್ಕೂ ಹೆಚ್ಚು ಉಚಿತ ಊಟ ಮತ್ತು 1 ಕೋಟಿಗೂ ಹೆಚ್ಚು ನೀರಿನ ಬಾಟಲಿಗಳನ್ನು ಪ್ರಯಾಣಿಕರಿಗೆ ವಿತರಿಸಿದೆ.

ಇಂದು, ವಿವಿಧ ಪ್ರದೇಶಗಳಿಗೆ ಪ್ರಯಾಣಿಕರನ್ನು ಹೊತ್ತು ಸಾಗಿಸುತ್ತಿರುವ ರೈಲುಗಳು ತಮ್ಮ ಚಲನೆಯಲ್ಲಿ ಯಾವುದೇ ದಟ್ಟಣೆಯನ್ನು ಎದುರಿಸುತ್ತಿಲ್ಲ ಎಂಬುದು ಇಲ್ಲಿ ಗಮನಿಸಬಹುದು.

ಶ್ರಮಿಕ್ ವಿಶೇಷಗಳ ಜೊತೆಗೆ ರೈಲ್ವೆ ನವದೆಹಲಿಗೆ ಸಂಪರ್ಕ ಕಲ್ಪಿಸುವ 15 ಜೋಡಿ ವಿಶೇಷ ರೈಲುಗಳ ಸಂಚಾರವನ್ನೂ ಏರ್ಪಡಿಸಲಾಗಿದೆ. ಮತ್ತು ಜೂನ್ 1 ರಂದು ಇನ್ನೂ 200 ನೂತನ ರೈಲುಗಳನ್ನು ಪ್ರಾರಂಭಿಸಲು ವೇಳಾಪಟ್ಟಿ ಸಿದ್ಧಗೊಳಿಸಿ ಕಾರ್ಯಗತಗೊಳಿಸಲು ಭಾರತೀಯ ರೈಲ್ವೇ ಯೋಜಿಸಿದೆ.

***(Release ID: 1627040) Visitor Counter : 288