ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಆರೋಗ್ಯ ಕಾರ್ಯದರ್ಶಿಯವರು 11ಕ್ಕೂ ಅಧಿಕ ಕೋವಿಡ್-19 ಪ್ರಕರಣ ಹೊಂದಿರುವ ಪುರಸಭೆ ಪ್ರದೇಶಗಳ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದರು

Posted On: 23 MAY 2020 7:50PM by PIB Bengaluru

ಆರೋಗ್ಯ ಕಾರ್ಯದರ್ಶಿಯವರು 11ಕ್ಕೂ ಅಧಿಕ ಕೋವಿಡ್-19 ಪ್ರಕರಣ ಹೊಂದಿರುವ

ಪುರಸಭೆ ಪ್ರದೇಶಗಳ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದರು

ಕೋವಿಡ್-19 ನಿಯಂತ್ರಣ ಮತ್ತು ನಿರ್ವಹಣೆಗಾಗಿ ಕೈಗೊಂಡ ಕ್ರಮಗಳ ಪರಾಮರ್ಶನೆ ಮಾಡಿದರು

ಚೇತರಿಕೆಯ ಪ್ರಮಾಣ 41.39%ರಷ್ಟು ಹೆಚ್ಚಾಗಿದೆ




ಆರೋಗ್ಯ ಕಾರ್ಯದರ್ಶಿ ಪ್ರೀತಿ ಸುದನ್ ರವರು ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ವಿಶೇಷ ಕರ್ತವ್ಯದಲ್ಲಿರುವ ಅಧಿಕಾರಿ (ಒಎಸ್ ಡಿ), ಶ್ರೀ ರಾಜೇಶ್ ಭೂಷಣ್ ರವರು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಪರಿಶೀಲನಾ ಸಭೆ (ವಿಡಿಯೋ ಕಾನ್ಫರೆನ್ಸ್ ಮೂಲಕ) ಪ್ರಾರ್ಥಮಿಕ ಆರೋಗ್ಯ ಕಾರ್ಯದರ್ಶಿಗಳು, ನಗರಾಭಿವೃದ್ಧಿ ಕಾರ್ಯದರ್ಶಿಗಳು, ಪುರಸಭೆ ಆಯುಕ್ತರು, ಮಿಷನ್ ನಿರ್ದೇಶಕರು (ಎನ್ಎಚ್ಎಂ) ಮತ್ತು 11 ಮುನ್ಸಿಪಲ್ ಪ್ರದೇಶಗಳ ಇತರ ಅಧಿಕಾರಿಗಳು ಕೋವಿಡ್ -19 ಅಧಿಕ ಪ್ರಕರಣ ಹೊಂದಿರುವವರ ಜೊತೆ ಇಂದು ಇಲ್ಲಿ ನಡೆಸಿದರು, ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಕಮ್ರಾನ್ ರಿಜ್ವಿ ಸಹ ವಿಡಿಯೋ ಸಂವಾದದಲ್ಲಿ ಭಾಗವಹಿಸಿದರು.
ಕೆಳಗಿನ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 11 ಪುರಸಭೆಯ ಪ್ರದೇಶಗಳು ಭಾಗವಹಿಸಿದ್ದವು:
ಮಹಾರಾಷ್ಟ್ರ, ತಮಿಳುನಾಡು, ಗುಜರಾತ್, ದೆಹಲಿ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ರಾಜಸ್ಥಾನ ಮತ್ತು ಇವುಗಳ ಪಾಲು ಭಾರತದ ಸಕ್ರಿಯ ಪ್ರಕರಣಗಳ 70%ರಷ್ಟಿದೆ.
ಒಟ್ಟು ದೃಢಪಡಿಸಿದ ಪ್ರಕರಣಗಳು, ಪ್ರಕರಣದ ಸಾವಿನ ಪ್ರಮಾಣ, ದ್ವಿಗುಣಗೊಳ್ಳುವ ಸಮಯ, ಪ್ರತಿ ದಶಲಕ್ಷಕ್ಕೆನಡೆಸುವ ಪರೀಕ್ಷೆಗಳು ಮತ್ತು ದೃಢೀಕರಣದ ಶೇಕಡಾವಾರು ಪ್ರಕರಣಗಳಿಗೆ ಸಂಬಂಧಿಸಿದ ಪ್ರವೃತ್ತಿಯನ್ನು ತೋರಿಸುವ ಪ್ರಸ್ತುತಿಯನ್ನು ಮಾಡಲಾಯಿತು. ಕಡಿಮೆ ದ್ವಿಗುಣಗೊಳ್ಳುವ ಸಮಯ, ಹೆಚ್ಚಿನ ಮರಣ ಪ್ರಮಾಣ ಮತ್ತು ರಾಷ್ಟ್ರೀಯ ಸರಾಸರಿಗಿಂತ ಅಧಿಕ ಸೋಂಕಿನ ಪ್ರಮಾಣವನ್ನು ಹೊಂದಿರುವ ನಗರಸಭೆಗಳಿಗೆ ಇದು ಪ್ರಮುಖ ಸವಾಲಾಗಿದೆ ಎಂದು ತಿಳಿಸಲಾಯಿತು. ನಿಯಂತ್ರಣ ಮತ್ತು ಬಫರ್ ವಲಯಗಳನ್ನು ಗುರುತಿಸುವಾಗ ಪರಿಗಣಿಸಬೇಕಾದ ಅಂಶಗಳ ಬಗ್ಗೆ ಅವರಿಗೆ ತಿಳಿಸಲಾಯಿತು; ಪ್ರದೇಶಗಳ ಪರಿಧಿಯ ನಿಯಂತ್ರಣ, ಮನೆಯಿಂದ ಮನೆ ಕಣ್ಗಾವಲು, ಸಂಪರ್ಕ ಪತ್ತೆಹಚ್ಚುವಿಕೆ, ಪರೀಕ್ಷಾ ಶಿಷ್ಟಾಚಾರ, ಸಕ್ರಿಯ ಪ್ರಕರಣಗಳ ಕ್ಲಿನಿಕಲ್ ನಿರ್ವಹಣೆ ಮುಂತಾದ ನಿಯಂತ್ರಣ ವಲಯದಲ್ಲಿನ ಕಡ್ಡಾಯ ಚಟುವಟಿಕೆಗಳು; ಎಸ್ಎಆರ್ / ಐಎಲ್ಐ ಪ್ರಕರಣಗಳ ಮೇಲ್ವಿಚಾರಣೆ, ಸಾಮಾಜಿಕ ಅಂತರವನ್ನು ಖಾತರಿಪಡಿಸುವುದು, ಕೈಗಳ ನೈರ್ಮಲ್ಯವನ್ನು ಉತ್ತೇಜಿಸುವುದು ಮುಂತಾದ ಬಫರ್ ವಲಯದಲ್ಲಿ ಕಣ್ಗಾವಲು ಚಟುವಟಿಕೆಗಳ ಬಗ್ಗೆ ತಿಳಿಸಲಾಯಿತು. ಹಳೆಯ ನಗರಗಳು, ನಗರದ ಕೊಳೆಗೇರಿಗಳು ಮತ್ತು ಇತರ ಹೆಚ್ಚಿನ ಸಾಂದ್ರತೆಯ ಪ್ರದೇಶಗಳಲ್ಲಿರುವ ವಲಸೆ ಕಾರ್ಮಿಕರಿಗಾಗಿ ಶಿಬಿರಗಳು / ಕ್ಲಸ್ಟರ್ಗಳ ಜೊತೆಗೆ ಹೆಚ್ಚಿನ ಜಾಗರೂಕತೆ ಮತ್ತು ಮೇಲ್ವಿಚಾರಣೆಯನ್ನು ನಿರ್ವಹಿಸುವುದು. ನಗರ ಪ್ರದೇಶಗಳಲ್ಲಿನ ಕೋವಿಡ್-19 ನಿರ್ವಹಣೆಯಲ್ಲಿ ಪ್ರಮುಖ ಹಂತಗಳಾಗಿವೆ.
ಹೆಚ್ಚಿನ ಅಪಾಯಕ್ಕೊಳಗಾಗುವ ಮತ್ತು ದುರ್ಬಲ ಜನರು ಮತ್ತು ಗುಂಪುಗಳನ್ನು ಸಕ್ರಿಯವಾಗಿ ತಪಾಸಣೆ ಮಾಡುವ ಮೂಲಕ ತಡೆಗಟ್ಟುವಿಕೆಯತ್ತ ಗಮನ ಹರಿಸಬೇಕಿದೆ ಮತ್ತು ಮರಣದ ಪ್ರಮಾಣವನ್ನು ಕಡಿಮೆ ಮಾಡಲು ದಾಖಲಾದ ಪ್ರಕರಣಗಳ ಪರಿಣಾಮಕಾರಿ ಮತ್ತು ಸದೃಢ ಕ್ಲಿನಿಕಲ್ ನಿರ್ವಹಣೆ ಮಾಡಬೇಕಿದೆ. ಅನೇಕರು 24x7 ರಾಜ್ಯ ನಿಯಂತ್ರಣ ಕೊಠಡಿಗಳನ್ನು ಕಾರ್ಯರೂಪಕ್ಕೆ ತಂದಿರುವರು, ಇತರರು ಸಹ ಇದನ್ನು ಅನುಸರಿಸಹಬಹುದು ಮತ್ತು ಅಂತಹ ಘಟಕಗಳನ್ನು ಪ್ರಾರಂಭಿಸಬಹುದು, ಇದು ಕೋವಿಡ್-19 ನಿರ್ವಹಣೆಗೆ ಸಂಬಂಧಿಸಿದ ವಿವಿಧ ಸೌಲಭ್ಯಗಳು / ಸೇವೆಗಳಿಗೆ ಜನರಿಗೆ ಸಹಾಯವನ್ನು ಒದಗಿಸುತ್ತದೆ, ಅದಲ್ಲದೆ ಸಾವಿನ ಪ್ರಮಾಣವನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿ ಕೊಡುಗೆ ನೀಡುವ ಕ್ಲಿನಿಕಲ್ ಸಮಸ್ಯೆಗಳಿಗೆ ದಿನದ ಇಪ್ಪತ್ತನಾಲ್ಕು ಗಂಟೆಯೂ ಬೆಂಬಲ ಮತ್ತು ಮಾರ್ಗದರ್ಶನವನ್ನು ಒದಗಿಸಲು ಕ್ಷೇತ್ರದ ತಜ್ಞರು ಮತ್ತು ವೈದ್ಯರ ಸಮಿತಿಯನ್ನು ಸಹ ಹೊಂದಿರುತ್ತದೆ.
ಪ್ರಕರಣಗಳನ್ನು ಮೊದಲೇ ಪತ್ತೆ ಹಚ್ಚುವುದು, ಸಮಯೋಚಿತ ಕ್ಲಿನಿಕಲ್ ನಿರ್ವಹಣೆ ಮತ್ತು ಸಾವಿನ ಪ್ರಮಾಣ ಕಡಿಮೆಯಾಗುವುದನ್ನು ಖಚಿತಪಡಿಸಿಕೊಳ್ಳಲು ಕೆಲವು ಪುರಸಭೆಯ ಪ್ರದೇಶಗಳಲ್ಲಿ ಪರೀಕ್ಷೆಯನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಸೂಚಿಸಲಾಯಿತು. ಆಮ್ಲಜನಕ, ವೆಂಟಿಲೇಟರ್ಗಳು ಮತ್ತು ಐಸಿಯು ಹಾಸಿಗೆಗಳೊಂದಿಗಿನ ಪ್ರತ್ಯೇಕ ಹಾಸಿಗೆಗಳ ಮೇಲೆ ವಿಶೇಷ ಗಮನಹರಿಸಿ ಮುಂದಿನ ಎರಡು ತಿಂಗಳುಗಳವರೆಗೆ ಸನ್ನದ್ಧತೆಯನ್ನು ಖಚಿತಪಡಿಸಿಕೊಳ್ಳಲು ಆರೋಗ್ಯ ಮೂಲಸೌಕರ್ಯಗಳನ್ನು ಹೆಚ್ಚಿಸುವ ಬಗ್ಗೆ ಅವರು ಎಚ್ಚರವಹಿಸಬೇಕಾಗಿದೆ. ಹೆಚ್ಚಿನ ಗಮನ ಅಗತ್ಯವಿರುವ ಇತರ ಸಮಸ್ಯೆಗಳೆಂದರೆ, ಮಾದರಿ ಸಂಗ್ರಹದಲ್ಲಿನ ವಿಳಂಬವನ್ನು ಪರಿಹರಿಸಲು ಸರ್ಕಾರಿ ಮತ್ತು ಖಾಸಗಿ ಪ್ರಯೋಗಾಲಯಗಳೊಂದಿಗೆ ಸಕ್ರಿಯ ಹೊಂದಾಣಿಕೆ, ಆರೋಗ್ಯ / ಹಾಸಿಗೆಯ ಸಾಮರ್ಥ್ಯವನ್ನು ಹೆಚ್ಚಿಸಲು ಖಾಸಗಿ ಆಸ್ಪತ್ರೆಗಳ ಸಹಭಾಗಿತ್ವ, ತ್ಯಾಜ್ಯ ವಿಲೇವಾರಿ ಮತ್ತು ಕೋವಿಡ್ ಸೋಂಕಿತ ಪ್ರದೇಶಗಳ ಸೋಂಕುನಿವಾರಣೆ, ವಲಸೆ ಕಾರ್ಮಿಕರಿಗೆ ಶಿಬಿರಗಳ ನಿರ್ವಹಣೆ, ಸ್ಥಳೀಯ ಭಾಷೆಗಳಲ್ಲಿ ರೋಗಿಗಳು ಮತ್ತು ವೈದ್ಯಕೀಯ ವೃತ್ತಿಪರರನ್ನು ಕಳಂಕಗೊಳಿಸದ, ಧೈರ್ಯ ತುಂಬುವ ಮುಂತಾದ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುವುದು, ಸಮುದಾಯದ ಮುಖಂಡರು, ಯುವ ಸಮೂಹಗಳು, ಎನ್ಜಿಒಗಳು ಮತ್ತು ಸ್ವಸಹಾಯ ಗುಂಪುಗಳನ್ನು ಜಾಗೃತಿ ಮತ್ತು ವಿಶ್ವಾಸ ಬೆಳೆಸುವ ಕ್ರಮಗಳಿಗಾಗಿ ಕಣ್ಗಾವಲು ತಂಡಗಳೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳುವುದು.
ಕೋವಿಡ್-19 ಪ್ರಕರಣಗಳ ನಿರ್ವಹಣೆಗಾಗಿ ನಗರಸಭೆಗಳು ಕೈಗೊಂಡ ಕ್ರಮಗಳು ಮತ್ತು ಉತ್ತಮ ಕಾರ್ಯಶೈಲಿಯ ಬಗ್ಗೆಯೂ ಚರ್ಚಿಸಲಾಯಿತು. ಮುಂಬೈ ಮುನಿಸಿಪಲ್ ಕಮಿಷನರ್ ರವರು ಐಸಿಯು ಹಾಸಿಗೆಗಳು / ಆಮ್ಲಜನಕ ಸೌಲಭ್ಯ ಇರುವ ಹಾಸಿಗೆಗಳಂತಹ ಆರೋಗ್ಯ ಮೂಲಸೌಕರ್ಯಗಳನ್ನು ಪಡೆಯಲು ಖಾಸಗಿ ಆಸ್ಪತ್ರೆಗಳು ಮತ್ತು ಪುರಸಭೆ ಅಧಿಕಾರಿಗಳ ನಡುವೆ ನಿಕಟ ಸಹಕಾರವನ್ನು ಸ್ಥಾಪಿಸುವ ಬಗ್ಗೆ ವಿವರಿಸಿದರು. ಪ್ರತಿ ಹಾಸಿಗೆಗೂ ವಿಶಿಷ್ಟವಾದ ಐಡಿ ಸಂಖ್ಯೆಗಳೊಂದಿಗೆ ಹಾಸಿಗೆಯ ಲಭ್ಯತೆಯನ್ನು ಪ್ರದರ್ಶಿಸುವ ಆನ್ಲೈನ್ ಪೋರ್ಟಲ್ ಅನ್ನು ಅವರು ಶೀಘ್ರದಲ್ಲೇ ಪ್ರಕಟಿಸಿದ್ದಾರೆ ಮತ್ತು ಜಿಪಿಎಸ್ ಆಧಾರಿತ ಆನ್ಲೈನ್ ಆಂಬ್ಯುಲೆನ್ಸ್ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಸ್ಥಾಪಿಸಲಿದ್ದಾರೆ. ಇಂದೋರ್ ನಗರದ ಅಧಿಕಾರಿಗಳು ಸಂಪರ್ಕ ಪತ್ತೆಹಚ್ಚುವಿಕೆ ಮತ್ತು ಸಕ್ರಿಯ ಮನೆ ಮನೆಯ ಸಮೀಕ್ಷೆಗೆ ಗಮನ ಕೇಂದ್ರೀಕರಿಸಿದ್ದಾರೆ. ಅವರು ಗಲ್ಲಿ ಗಸ್ತು ತಿರುಗುವ ತಂಡಗಳನ್ನುರಚಿಸಿದ್ದಾರೆ, ಇದರಲ್ಲಿ ಸಮುದಾಯದ ಸ್ವಯಂಸೇವಕರು ಮತ್ತು ನಿವೃತ್ತ ಸರ್ಕಾರಿ ಅಧಿಕಾರಿಗಳು ಇರುವರು. ಇವರು ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು, ಸಕ್ರಿಯ ಕಣ್ಗಾವಲು ಮತ್ತು ಅಗತ್ಯ ವಸ್ತುಗಳನ್ನು ಒದಗಿಸಲು ಸುಧಾರಣಾ ಕೇಂದ್ರಗಳಲ್ಲಿರುವ ವಿಶೇಷ ಕಣ್ಗಾವಲು ತಂಡಗಳಿಗೆ ಸಹಾಯ ಮಾಡುತ್ತಾರೆ.
ಈವರೆಗೆ ಒಟ್ಟು 51,783 ಜನರನ್ನು ಗುಣಪಡಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ 3,250 ರೋಗಿಗಳು ಗುಣಮುಖರಾಗಿದ್ದಾರೆ. ಇದು ಒಟ್ಟು ಚೇತರಿಕೆ ಪ್ರಮಾಣವನ್ನು 41.39% ರಷ್ಟು ಮಾಡಿದೆ. ಸೋಂಕು ದೃಢಪಡಿಸಿದ ಒಟ್ಟು ಪ್ರಕರಣಗಳ ಸಂಖ್ಯೆ ಈಗ 1,25,101 ಆಗಿದೆ. ನಿನ್ನೆಯಿಂದ, ಭಾರತದಲ್ಲಿ ಕೋವಿಡ್-19 ದೃಢಪಡಿಸಿದ ಪ್ರಕರಣಗಳ ಸಂಖ್ಯೆಯಲ್ಲಿ 6654 ಹೆಚ್ಚಳ ಕಂಡುಬಂದಿದೆ.
ಕೋವಿಡ್-19ಗೆ ಸಂಬಂಧಿತ ತಾಂತ್ರಿಕ ಸಮಸ್ಯೆಗಳು, ಮಾರ್ಗಸೂಚಿಗಳು ಮತ್ತು ಸಲಹೆಗಳ ಎಲ್ಲಾ ಅಧಿಕೃತ ಮತ್ತು ಹೊಸ ಮಾಹಿತಿಗಾಗಿ ದಯವಿಟ್ಟು ಇಲಾಖೆಯ ಜಾಲತಾಣಕ್ಕೆ ನಿಯಮಿತವಾಗಿ ಭೇಟಿ ನೀಡಿ: https://www.mohfw.gov.in
ಕೋವಿಡ್-19 ಗೆ ಸಂಬಂಧಿಸಿದ ತಾಂತ್ರಿಕ ಪ್ರಶ್ನೆಗಳನ್ನು technquery.covid19[at]gov[dot]in , ಇತರ ಪ್ರಶ್ನೆಗಳನ್ನು ಕೇಳಲು ncov2019[at]gov[dot]in ಗೆ ಇಮೇಲ್ ಮಾಡಬಹುದು ಮತ್ರು @CovidIndiaSeva ಗೆ ಟ್ವೀಟ್ ಮಾಡಬಹುದು.
ಕೋವಿಡ್-19 ಬಗ್ಗೆ ಯಾವುದೇ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಾಯವಾಣಿ ಸಂಖ್ಯೆ. : +91-11-23978046 ಅಥವಾ 1075 (ಟೋಲ್-ಫ್ರೀ). ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಕೋವಿಡ್-19ಗೆ ಸಂಬಂಧಿಸಿದ ಸಹಾಯವಾಣಿ ಸಂಖ್ಯೆಗಳ ಪಟ್ಟಿ https://www.mohfw.gov.in/pdf/coronvavirushelplinenumber.pdf ನಲ್ಲಿಯೂ ಲಭ್ಯವಿದೆ.

***


(Release ID: 1627013) Visitor Counter : 251