ರೈಲ್ವೇ ಸಚಿವಾಲಯ
2020ರ ಜೂನ್ 1 ರಿಂದ ಆರಂಭಗೊಳ್ಳಲಿರುವ ರೈಲು ಸೇವೆಗೆ ಮಾರ್ಗದರ್ಶಿಗಳು
Posted On:
20 MAY 2020 10:25PM by PIB Bengaluru
2020ರ ಜೂನ್ 1 ರಿಂದ ಆರಂಭಗೊಳ್ಳಲಿರುವ ರೈಲು ಸೇವೆಗೆ ಮಾರ್ಗದರ್ಶಿಗಳು
ಹಂತ ಹಂತವಾಗಿ ರೈಲು ಸೇವೆಗಳ ಮರುಸ್ಥಾಪನೆ
ವಲಸೆಗಾರರಿಗೆ ನೆರವಾಗಲು ಮತ್ತು ಶ್ರಮಿಕ ರೈಲುಗಳಲ್ಲದೆ ಬೇರೆ ರೈಲುಗಳಲ್ಲಿ ಪ್ರಯಾಣಿಸಲು ಇಚ್ಚಿಸುವವರಿಗೆ ಸಹಾಯ ಮಾಡುವುದಕ್ಕಾಗಿ
ಈ ನಿಯಮಗಳು ಹೆಚ್ಚಿನ ಸಂಖ್ಯೆಯಲ್ಲಿ ಓಡಾಟ ನಡೆಸಲಿರುವ, ಶ್ರಮಿಕ ರೈಲುಗಳಲ್ಲದ ಇತರ ರೈಲುಗಳಿಗಾಗಿ
100 ಜೋಡಿ ರೈಲುಗಳನ್ನು ಪಟ್ಟಿ ಮಾಡಲಾಗಿದೆ
ಟಿಕೇಟ್ ಗಳ ಬುಕ್ಕಿಂಗ್ ಗಾಗಿ , ಚಾರ್ಟಿಂಗ್, ಮೀಸಲು, ರಿಯಾಯತಿಗಳು, ರದ್ದತಿ ಮತ್ತು ಮರುಪಾವತಿಗಳು, ಆರೋಗ್ಯ ತಪಾಸಣೆ, ಕ್ಯಾಟರಿಂಗ್ ಲಿನೆನ್ ಇತ್ಯಾದಿಗಳಿಗೆ ರೂಪಿಸಲಾಗಿರುವ ಮಾನದಂಡಗಳು
ಈ ಎಲ್ಲಾ ರೈಲುಗಳಿಗೆ ಬುಕ್ಕಿಂಗ್ 21/05/20 ರ ಬೆಳಿಗ್ಗೆ 10 ಗಂಟೆಯಿಂದ ಆರಂಭ.
ಮುಂದಿನ ಸಲಹೆಗಳು ಲಭಿಸುವವರೆಗೆ ಇತರ ನಿಯಮಿತ ಪ್ರಯಾಣಿಕ ಸೇವೆಗಳು, ಎಲ್ಲಾ ಮೈಲ್/ ಎಕ್ಸ್ ಪ್ರೆಸ್, ಪ್ಯಾಸೆಂಜರ್ ಮತ್ತು ಉಪನಗರ ಸೇವೆಗಳ ಆರಂಭ ಇಲ್ಲ
ರೈಲುಗಳಲ್ಲಿ ರಿಸರ್ವ್ ಇಲ್ಲದ ಬೋಗಿಗಳು ಇರುವುದಿಲ್ಲ
ದರ ಸಾಮಾನ್ಯದಂತೆಯೇ ಇರುತ್ತದೆ ಮತ್ತು ಜನರಲ್ ಕೋಚ್ (ಜಿ.ಎಸ್.) ಗಳಿಗೆ, ಕಾಯ್ದಿರಿಸುವಿಕೆಯಿಂದಾಗಿ ಎರಡನೇ ಸೀಟಿಂಗ್ (2 ಎಸ್.) ದರವನ್ನು ವಿಧಿಸಲಾಗುತ್ತದೆ. ಮತ್ತು ಎಲ್ಲಾ ಪ್ರಯಾಣಿಕರಿಗೂ ಸೀಟುಗಳನ್ನು ಒದಗಿಸಲಾಗುತ್ತದೆ
ಆನ್ ಲೈನ್ ಇ-ಟಿಕೇಟಿಂಗ್ ಮಾತ್ರ ಲಭ್ಯ, ಇದನ್ನು ಐ.ಆರ್.ಸಿ.ಟಿ.ಸಿ ಜಾಲತಾಣ ಅಥವಾ ಮೊಬೈಲ್ ಆಪ್ ಮೂಲಕ ಮಾಡಬೇಕಾಗುತ್ತದೆ.ಯಾವುದೇ ರೈಲು ನಿಲ್ದಾಣಗಳ ಮುಂಗಡ ಕಾಯ್ದಿರಿಸುವಿಕೆ ಕೌಂಟರ್ ಗಳಲ್ಲಿ ಟಿಕೇಟ್ ಗಳ ಬುಕ್ಕಿಂಗ್ ಇಲ್ಲ
ಮುಂಗಡ ಟಿಕೇಟ್ ಕಾಯ್ದಿರಿಸುವ ಅವಧಿ (ಎ.ಆರ್.ಪಿ.) ಗರಿಷ್ಟ ಎಂದರೆ 30 ದಿನಗಳು
ದೃಢೀಕೃತ ಟಿಕೇಟ್ ಗಳನ್ನು ಹೊಂದಿರುವ ಪ್ರಯಾಣಿಕರಿಗೆ ಮಾತ್ರವೇ ರೈಲ್ವೇ ನಿಲ್ದಾಣಗಳಿಗೆ ಪ್ರವೇಶಿಸಲು ಅವಕಾಶ ಮಾಡಿಕೊಡಲಾಗುತ್ತದೆ
ರೈಲನ್ನು ಏರುವುದಕ್ಕೆ ಮೊದಲು ವೈದ್ಯಕೀಯ ತಪಾಸಣೆ ನಡೆಸಲಾಗುತ್ತದೆ ಮತ್ತು ರೋಗಲಕ್ಷಣಗಳಿಲ್ಲದ ಪ್ರಯಾಣಿಕರಿಗೆ ಮಾತ್ರ ರೈಲನ್ನು ಏರಲು/ ಪ್ರವೇಶಿಸಲು ಅವಕಾಶ ಮಾಡಿಕೊಡಲಾಗುತ್ತದೆ
ಈ ವಿಶೇಷ ರೈಲುಗಳಲ್ಲಿ ದಿವ್ಯಾಂಗರ ನಾಲ್ಕು ವರ್ಗಗಳ ರಿಯಾಯತಿ ಮತ್ತು 11 ವರ್ಗಗಳ ರೋಗಿಗಳಿಗೆ ರಿಯಾಯತಿಗಳಿಗೆ ಅನುಮತಿ ಇದೆ
ಅವರ ನಿಗದಿತ ಸ್ಥಳ ಬಂದಾಗ, ಪ್ರಯಾಣಿಕರು ಆಯಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಆಯ್ಕೆ ಮಾಡಿರುವ ಆರೋಗ್ಯ ಶಿಷ್ಟಾಚಾರಗಳನ್ನು ಅನುಸರಿಸಬೇಕು
ಲಿನೆನ್, ಬ್ಲಾಂಕೆಟ್ ಗಳು ಮತ್ತು ಪರದೆಗಳನ್ನು ರೈಲಿನೊಳಗೆ ಒದಗಿಸಲಾಗುವುದಿಲ್ಲ
ರೈಲ್ವೇ ಸಚಿವಾಲಯವು (ಎಂ.ಒ.ಆರ್.) ಆರೋಗ್ಯ ಮತ್ತು ಕುಟುಂಬ ಕಲ್ಯಾಣ (ಎಂ.ಒ.ಎಚ್. ಎಫ್.ಡಬ್ಲ್ಯು.) ಮತ್ತು ಗೃಹ ವ್ಯವಹಾರಗಳ ಸಚಿವಾಲಯ (ಎಂ.ಎಚ್.ಎ.) ಗಳ ಜೊತೆ ಸಮಾಲೋಚಿಸಿ 2020ರ ಜೂನ್ 1 ರಿಂದ ಜಾರಿಗೆ ಬರುವಂತೆ ಭಾರತೀಯ ರೈಲ್ವೇಯ ರೈಲು ಸೇವೆಯನ್ನು ಆಂಶಿಕವಾಗಿ ಮರುಸ್ಥಾಪಿಸಲು ನಿರ್ಧರಿಸಿದೆ.
ಭಾರತೀಯ ರೈಲ್ವೇಯು 200 ರಷ್ಟು ರೈಲುಗಳ ಸೇವೆಯನ್ನು ಕೆಳಗೆ ಲಗತ್ತಿಸಿದ ಪಟ್ಟಿಯಲ್ಲಿ ಇರುವಂತೆ ಆರಂಭ ಮಾಡಲು ನಿರ್ಧರಿಸಿದೆ. ಈ ರೈಲುಗಳು 1/6/2020 ರಿದ ಓಡಾಟ ಆರಂಭಿಸಲಿವೆ ಮತ್ತು ಈ ಎಲ್ಲಾ ರೈಲುಗಳಿಗೆ ಮುಂಗಡ ಕಾಯ್ದಿರಿಸುವಿಕೆ 21/05/2020 ರ ಬೆಳಿಗ್ಗೆ 10 ಗಂಟೆಯಿಂದ ಆರಂಭವಾಗಲಿದೆ.
ಈ ವಿಶೇಷ ಸೇವೆಗಳು ಈಗಿರುವ ಮೇ 1 ರಿಂದ ಓಡಾಟ ನಡೆಸುತ್ತಿರುವ ಶ್ರಮಿಕ ವಿಶೇಷ ರೈಲುಗಳು ಮತ್ತು 2020 ರ ಮೇ 12 ರಿಂದ ಕಾರ್ಯಾಚರಿಸುತ್ತಿರುವ ವಿಶೇಷ ಹವಾನಿಯಂತ್ರಿತ ರೈಲುಗಳಿಗೆ (30 ರೈಲುಗಳು ) ಹೆಚ್ಚುವರಿಯಾದುದಾಗಿರುತ್ತವೆ.
ಮೈಲ್/ ಎಕ್ಸ್ ಪ್ರೆಸ್ , ಪ್ಯಾಸೆಂಜರ್, ಮತ್ತು ಉಪನಗರ ಸೇವೆಗಳು ಸಹಿತ ಇತರ ನಿಯಮಿತ ಪ್ರಯಾಣಿಕ ಸೇವೆಗಳು ಮುಂದಿನ ಸಲಹೆಯವರೆಗೆ ರದ್ದಾಗಿರುತ್ತವೆ.
ರೈಲಿನ ಮಾದರಿ: ನಿಯಮಿತ ರೈಲುಗಳ ರೀತಿಯಲ್ಲಿ ವಿಶೇಷ ರೈಲುಗಳು .
ಈ ರೈಲುಗಳು ಪೂರ್ಣವಾಗಿ ಮುಂಗಡ ಕಾಯ್ದಿರಿಸಲ್ಪಡುವ ರೈಲುಗಳಾಗಿದ್ದು, ಹವಾನಿಯಂತ್ರಿತ ಮತ್ತು ಹವಾ ನಿಯಂತ್ರಿತವಲ್ಲದ ವರ್ಗಗಳನ್ನು ಒಳಗೊಂಡಿದೆ. ಸಾಮಾನ್ಯ ಬೋಗಿಗಳಿಗೂ (ಜಿ.ಎಸ್.) ಕುಳಿತುಕೊಳ್ಳಲು ಸೀಟುಗಳನ್ನು ಕಾಯ್ದಿರಿಸಬೇಕಾಗುತ್ತದೆ. ರೈಲಿನಲ್ಲಿ ಕಾದಿರಿಸುವಿಕೆ ರಹಿತವಾದ ಯಾವುದೇ ಬೋಗಿಗಳು ಇರುವುದಿಲ್ಲ.
ದರವು ಸಾಮಾನ್ಯ ದರವಾಗಿರುತದೆ. ಮತ್ತು ಸಾಮಾನ್ಯ ಬೋಗಿಗಳಿಗೆ (ಜಿ.ಎಸ್.) ಮುಂಗಡ ಕಾಯ್ದಿರಿಸುವಿಕೆ ಕಾರಣದಿಂದಾಗಿ ಎರಡನೇ ಸೀಟಿಂಗ್ (2 ಎಸ್.) ದರವನ್ನು ವಿಧಿಸಲಾಗುತ್ತದೆ ಮೆತ್ತು ಎಲ್ಲಾ ಪ್ರಯಾಣಿಕರಿಗೂ ಸೀಟುಗಳನ್ನು ಒದಗಿಸಲಾಗುತ್ತದೆ.
ಟಿಕೇಟುಗಳ ಕಾಯ್ದಿರಿಸುವಿಕೆ ಮತ್ತು ಚಾರ್ಟಿಂಗ್ :
ಐ.ಆರ್. ಟಿ.ಸಿ. ಜಾಲತಾಣ ಅಥವಾ ಮೊಬೈಲ್ ಆಪ್ ಮೂಲಕ ಮಾತ್ರವೇ ಆನ್ ಲೈನ್ ಇ-ಟಿಕೇಟಿಂಗ್ ಗೆ ಅವಕಾಶ. ರೈಲ್ವೇ ನಿಲ್ದಾಣಗಳ ಮುಂಗಡ ಕಾಯ್ದಿರಿಸುವಿಕೆ ಕೌಂಟರ್ ಗಳಲ್ಲಿ ಟಿಕೇಟ್ ಕಾಯ್ದಿರಿಸುವಿಕೆಗೆ ಅವಕಾಶ ಇಲ್ಲ. “ಏಜೆಂಟ”ರ ಮೂಲಕ (ಐ.ಆರ್.ಟಿ.ಸಿ. ಮತ್ತು ರೈಲ್ವೇ ಏಜೆಂಟರು) ಟಿಕೇಟ್ ಮುಂಗಡ ಕಾಯ್ದಿರಿಸುವಿಕೆಗೆ ಅವಕಾಶ ಇಲ್ಲ.
ಮುಂಗಡ ಟಿಕೇಟ್ ಕಾಯ್ದಿರಿಸುವಿಕೆಯ ಅವಧಿ (ಎ.ಆರ್.ಪಿ.) ಗರಿಷ್ಟವೆಂದರೆ 30 ದಿನಗಳು.
ಆರ್.ಎ.ಸಿ. ಮತ್ತು ಕಾಯುವ ಪಟ್ಟಿಯನ್ನು ನಿಯಮಾನುಸಾರ ತಯಾರಿಸಲಾಗುವುದು, ಆದಾಗ್ಯೂ ಕಾಯುವ ಪಟ್ಟಿಯಲ್ಲಿರುವ ಪ್ರಯಾಣಿಕರು ರೈಲನ್ನೇರಲು ಅವಕಾಶ ಕೊಡಲಾಗುವುದಿಲ್ಲ.
ಮುಂಗಡ ಕಾಯ್ದಿರಿಸಿಲ್ಲದಂತಹ ಟಿಕೇಟ್ (ಯು.ಟಿ.ಎಸ್.) ಗಳನ್ನು ನೀಡಲಾಗುವುದಿಲ್ಲ. ಮತ್ತು ರೈಲಿನಲ್ಲಿ ಪ್ರಯಾಣದ ವೇಳೆ ಯಾವುದೇ ಟಿಕೇಟ್ ಗಳನ್ನು ಪ್ರಯಾಣಿಕರಿಗೆ ನೀಡಲಾಗುವುದಿಲ್ಲ.
ತತ್ಕಾಲ್ ಮತ್ತು ಪ್ರೀಮಿಯಂ ತತ್ಕಾಲ್ ಮುಂಗಡ ಕಾಯ್ದಿರಿಸುವಿಕೆಯನ್ನು ಈ ರೈಲುಗಳಲ್ಲಿ ಅನುಮತಿಸಲಾಗಿಲ್ಲ.
ಮೊದಲ ಚಾರ್ಟನ್ನು ನಿಗದಿತ ವೇಳಾಪಟ್ಟಿಗಿಂತ 4 ಗಂಟೆ ಮೊದಲು ಪ್ರಕಟಿಸತಕ್ಕದ್ದು ಮತ್ತು ಎರಡನೇ ಚಾರ್ಟನ್ನು ರೈಲು ಹೊರಡುವ ಕನಿಷ್ಟ 2 ಗಂಟೆ ಮೊದಲು ತಯಾರಿಸಿರತಕ್ಕದ್ದು. (ಇದುವರೆಗಿನ ಪದ್ದತಿಯಲ್ಲಿ ಇದು 30 ನಿಮಿಷಗಳ ಮೊದಲು ತಯಾರಾಗುತ್ತಿತ್ತು.) ಮೊದಲ ಮತ್ತು ಎರಡನೆ ಚಾರ್ಟ್ ತಯಾರಿಯ ನಡುವೆ ಆನ್ ಲೈನ್ ಮುಂಗಡ ಕಾಯ್ದಿರಿಸುವಿಕೆಗೆ ಮಾತ್ರ ಅನುಮತಿ ಇದೆ.
ಎಲ್ಲಾ ಪ್ರಯಾಣಿಕರನ್ನು ಕಡ್ದಾಯವಾಗಿ ತಪಾಸಣೆ ಮಾಡತಕ್ಕದ್ದು ಮತ್ತು ಯಾವುದೇ ರೋಗ ಲಕ್ಷಣ ಇಲ್ಲದವರನ್ನು ಮಾತ್ರ ರೈಲಿನೊಳಗೆ ಹೋಗಲು ಅವಕಾಶ ಮಾಡಿಕೊಡಲಾಗುವುದು.
ಈ ವಿಶೇಷ ರೈಲುಗಳಲ್ಲಿ ಪ್ರಯಾಣಿಸುವವರು ಈ ಕೆಳಗಿನ ಮುಂಜಾಗರೂಕತಾ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ.
- ಟಿಕೇಟ್ ದೃಢೀಕರಿಸಲ್ಪಟ್ಟ ಪ್ರಯಾಣಿಕರಿಗೆ ಮಾತ್ರ ರೈಲ್ವೇ ನಿಲ್ದಾಣಕ್ಕೆ ಪ್ರವೇಶಿಸಲು ಅವಕಾಶ .
- ಎಲ್ಲಾ ಪ್ರಯಾಣಿಕರೂ ಪ್ರವೇಶ ಮಾಡುವಾಗ ಮತ್ತು ಪ್ರಯಾಣ ಕಾಲದಲ್ಲಿ ಮುಖಗವಸುಗಳನ್ನು ಧರಿಸಿರತಕ್ಕದ್ದು
- ಪ್ರಯಾಣಿಕರು ರೈಲು ನಿಲ್ದಾಣಕ್ಕೆ ಕನಿಷ್ಟ 90 ನಿಮಿಷ ಮುಂಚಿತವಾಗಿ ಆಗಮಿಸತಕ್ಕದ್ದು, ಇದರಿಂದ ನಿಲ್ದಾಣದಲ್ಲಿ ಉಷ್ಣಾಂಶ ತಪಾಸಣೆಗೆ ಅನುಕೂಲವಾಗುತ್ತದೆ. ಯಾವುದೇ ರೋಗ ಲಕ್ಷಣ ಇಲ್ಲದವರಿಗೆ ಮಾತ್ರವೇ ಪ್ರಯಾಣಿಸಲು ಅನುಮತಿಸಲಾಗುವುದು.
- ಪ್ರಯಾಣಿಕರು ರೈಲು ನಿಲ್ದಾಣ ಮತ್ತು ರೈಲುಗಳಲ್ಲಿ ಸಾಮಾಜಿಕ ಅಂತರವನ್ನು ಪಾಲಿಸಬೇಕು
- ಅವರ ನಿಗದಿತ ಇಳಿದಾಣ ಬಂದಾಗ , ಪ್ರಯಾಣಿಕರು ಅಲ್ಲಿಯ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ನಿರ್ದಿಷ್ಟಪಡಿಸಿದ ಆರೋಗ್ಯ ಶಿಷ್ಟಾಚಾರಗಳನ್ನು ಪಾಲಿಸಬೇಕು
ಕೋಟಾ ಅನುಮತಿಸಲ್ಪಟ್ಟಿದೆ:
ಈ ವಿಶೇಷ ರೈಲಿನಲ್ಲಿ ಸಾಮಾನ್ಯವಾಗಿ ನಿಯಮಿತ ನೆಲೆಯಲ್ಲಿ ಓಡಾಡುವ ರೈಲುಗಳಲ್ಲಿರುವಂತೆ ಎಲ್ಲಾ ರೀತಿಯ ಮೀಸಲುಗಳಿಗೂ ಅನುಮತಿ ಇದೆ. ಈ ನಿಟ್ಟಿನಲ್ಲಿ ಕೆಲವೇ ಕೆಲವು ಮುಂಗಡ ಕಾಯ್ದಿರಿಸುವಿಕೆ ಕೌಂಟರುಗಳು (ಪಿ.ಆರ್.ಎಸ್.) ಕಾರ್ಯಾಚರಿಸುತ್ತವೆ. ಆದಾಗ್ಯೂ ಈ ಕೌಂಟರುಗಳ ಮೂಲಕ ಸಾಮಾನ್ಯ ಟಿಕೇಟ್ ಬುಕ್ಕಿಂಗ್ ಮಾಡಲಾಗುವುದಿಲ್ಲ.
ರಿಯಾಯತಿಗಳು: ನಾಲ್ಕು ವರ್ಗದ ದಿವ್ಯಾಂಗನ್ ರಿಯಾಯತಿಗಳು ಮತ್ತು 11 ವರ್ಗದ ರೋಗಿಗಳ ರಿಯಾಯತಿಗಳು ಈ ವಿಶೇಷ ರೈಲುಗಳಲ್ಲಿ ಅನುಮತಿಸಲ್ಪಟ್ಟಿವೆ.
ರದ್ದು ಮತ್ತು ಮರುಪಾವತಿ ನಿಯಮಗಳು: ರೈಲ್ವೇ ಪ್ರಯಾಣಿಕರ (ಪ್ರಯಾಣದ ಟಿಕೇಟ್ ರದ್ದತಿ ಮತ್ತು ದರ ಮರುಪಾವತಿ ) ನಿಯಮಗಳು ,2015 ಇದಕ್ಕೆ ಅನ್ವಯಿಸುತ್ತವೆ.
ಇದಕ್ಕೆ ಹೆಚ್ಚುವರಿಯಾಗಿ ಒಂದು ವೇಳೆ ಕೊರೊನಾ ರೋಗಲಕ್ಷಣಗಳ ಕಾರಣಕ್ಕೆ ಪ್ರಯಾಣಿಕರು ಪ್ರಯಾಣಕ್ಕೆ ಅರ್ಹರಾಗಿರದೇ ಇದ್ದಲ್ಲಿ ಈಗಾಗಲೇ ನೀಡಲಾಗಿರುವ ಈ ಕೆಳಗೆ ನೀಡಲಾದ ಸೂಚನೆಗಳ ಅನ್ವಯ ಪ್ರಯಾಣದರ ಮರುಪಾವತಿಗೆ ಅರ್ಹರಾಗುತ್ತಾರೆ.
ಎಂ.ಎಚ್.ಎ. ಮಾರ್ಗದರ್ಶಿಗಳ ಪ್ರಕಾರ ಎಲ್ಲಾ ಪ್ರಯಾಣಿಕರೂ ಕಡ್ದಾಯವಾಗಿ ತಪಾಸಣೆಗಳಿಗೆ ಒಳಗಾಗಬೇಕು ಮತ್ತು ರೋಗ ಲಕ್ಷಣ ಇಲ್ಲದ ಪ್ರಯಾಣಿಕರಿಗೆ ಮಾತ್ರ ರೈಲಿಗೆ ಪ್ರವೇಶಾವಕಾಶ ಪಡೆಯುತ್ತಾರೆ.
ಉಷ್ಣಾಂಶ ತಪಾಸಣೆ ವೇಳೆ ಪ್ರಯಾಣಿಕರಲ್ಲಿ ಅತ್ಯಂತ ಹೆಚ್ಚಿನ ಉಷ್ಣಾಂಶ ದಾಖಲಾದರೆ / ಕೋವಿಡ್ -19 ಇತ್ಯಾದಿಗಳ ರೋಗ ಲಕ್ಷಣಗಳು ಕಂಡು ಬಂದರೆ , ಆ ಪ್ರಯಾಣಿಕರು ದೃಢೀಕೃತ ಟಿಕೇಟ್ ಹೊಂದಿದ್ದರೂ ಪ್ರಯಾಣಕ್ಕೆ ಅವಕಾಶ ನೀಡಲಾಗದು. ಇಂತಹ ಸಂದರ್ಭದಲ್ಲಿ ಈ ಕೆಳಗಿನಂತೆ ಆ ಪ್ರಯಾಣಿಕರಿಗೆ ಪೂರ್ಣ ದರದ ಮರುಪಾವತಿ ಮಾಡಲಾಗುತ್ತದೆ.
ಎಂ.ಎಚ್.ಎ. ಮಾರ್ಗದರ್ಶಿಗಳ ಪ್ರಕಾರ ಎಲ್ಲಾ ಪ್ರಯಾಣಿಕರೂ ಕಡ್ದಾಯವಾಗಿ ತಪಾಸಣೆಗಳಿಗೆ ಒಳಗಾಗಬೇಕು ಮತ್ತು ರೋಗ ಲಕ್ಷಣ ಇಲ್ಲದ ಪ್ರಯಾಣಿಕರಿಗೆ ಮಾತ್ರ ರೈಲಿಗೆ ಪ್ರವೇಶಾವಕಾಶ ಪಡೆಯುತ್ತಾರೆ.
ಉಷ್ಣಾಂಶ ತಪಾಸಣೆ ವೇಳೆ ಪ್ರಯಾಣಿಕರಲ್ಲಿ ಅತ್ಯಂತ ಹೆಚ್ಚಿನ ಉಷ್ಣಾಂಶ ದಾಖಲಾದರೆ / ಕೋವಿಡ್ -19 ಇತ್ಯಾದಿಗಳ ರೋಗ ಲಕ್ಷಣಗಳು ಕಂಡು ಬಂದರೆ , ಆ ಪ್ರಯಾಣಿಕರು ದೃಢೀಕೃತ ಟಿಕೇಟ್ ಹೊಂದಿದ್ದರೂ ಪ್ರಯಾಣಕ್ಕೆ ಅವಕಾಶ ನೀಡಲಾಗದು. ಇಂತಹ ಸಂದರ್ಭದಲ್ಲಿ ಈ ಕೆಳಗಿನಂತೆ ಆ ಪ್ರಯಾಣಿಕರಿಗೆ ಪೂರ್ಣ ದರದ ಮರುಪಾವತಿ ಮಾಡಲಾಗುತ್ತದೆ.
(I). ಏಕ ಪ್ರಯಾಣಿಕ ಪಿ.ಎನ್.ಆರ್. ಹೊಂದಿರುವ ಪ್ರಕರಣಗಳಲ್ಲಿ.
(ii). ಒಂದು ಗುಂಪು/ ತಂಡ ಟಿಕೇಟ್ ಹೊಂದಿರುವ ಪ್ರಕರಣದಲ್ಲಿ ಓರ್ವ ಪ್ರಯಾಣಿಕ ಪ್ರಯಾಣಕ್ಕೆ ಅನರ್ಹ ಎಂದು ಕಂಡುಬಂದಲ್ಲಿ ಮತ್ತು ಅದೇ ಪಿ.ಎನ್.ಆರ್. ಹೊಂದಿರುವ ಇತರ ಪ್ರಯಾಣಿಕರು ಪ್ರಯಾಣಿಸಲು ಇಚ್ಚಿಸದಿದ್ದಲ್ಲಿ ಅಂತಹ ಪ್ರಕರಣಗಳಲ್ಲಿ ಎಲ್ಲಾ ಪ್ರಯಾಣಿಕರಿಗೂ ಪೂರ್ಣ ಮರು ಪಾವತಿ ಮಾಡಲಾಗುತ್ತದೆ.
(iii) ತಂಡದಲ್ಲಿ ಟಿಕೇಟ್ ಪಡೆದಿದ್ದು, ಅವರಲ್ಲಿ ಓರ್ವ ಪ್ರಯಾಣಿಕ ಪ್ರಯಾಣಿಸಲು ಅನರ್ಹ ಎಂದು ಕಂಡು ಬಂದಿದ್ದಲ್ಲಿ ಮತ್ತು ಆ ಪಿ.ಎನ್.ಆರ್. ಹೊಂದಿರುವ ತಂಡದ ಇತರ ಸದಸ್ಯರು ಪ್ರಯಾಣಕ್ಕೆ ಇಚ್ಚೆ ಪಟ್ಟರೆ ಆಗ ಆ ಪ್ರಯಾಣಿಸಲಾಗದ ಪ್ರಯಾಣಿಕರಿಗೆ ಪ್ರಯಾಣದರವನ್ನು ಪೂರ್ಣವಾಗಿ ಮರುಪಾವತಿ ಮಾಡತಕ್ಕದ್ದು.
ಈ ಮೇಲಿನ ಎಲ್ಲಾ ಪ್ರಕರಣಗಳಲ್ಲಿ , ಟಿ.ಟಿ.ಇ. ಪ್ರಮಾಣಪತ್ರವನ್ನು ಪ್ರಯಾಣಿಕರಿಗೆ ಪ್ರವೇಶ/ತಪಾಸಣಾ/ ಸ್ಕ್ರೀನಿಂಗ್ ಕೇಂದ್ರಗಳಲ್ಲಿ “ ಕೋವಿಡ್ 19 ರೋಗ ಲಕ್ಷಣದ ಕಾರಣಕ್ಕಾಗಿ ಪ್ರಯಾಣಿಸಲಾಗದ ಪ್ರಯಾಣಿಕರ ಸಂಖ್ಯೆಯನ್ನು ನಮೂದಿಸಿ ಕೊಡಲಾಗುತ್ತದೆ.
ಟಿ.ಟಿ.ಇ. ಪ್ರಮಾಣಪತ್ರವನ್ನು ಪಡೆದ ಬಳಿಕ, ಪ್ರಯಾಣಿಸದ ಪ್ರಯಾಣಿಕರ ಹಣ ಮರುಪಾವತಿ ಪಡೆಯುವುದಕ್ಕಾಗಿ ಟಿ.ಡಿ.ಆರ್. ನ್ನು ಪ್ರಯಾಣದ ದಿನಾಂಕದ 10 ದಿನಗಳ ಒಳಗೆ ಮೂಲದೊಂದಿಗೆ ಸಲ್ಲಿಸಬೇಕು.
ಟಿ.ಟಿ.ಇ. ನೀಡಿದ ಪ್ರಮಾಣ ಪತ್ರವನ್ನು ಪ್ರಯಾಣಿಕರು ಐ.ಆರ್.ಸಿ.ಟಿ.ಸಿ.ಗೆ ಕಳುಹಿಸಬೇಕು. ಮತ್ತು ಪ್ರಯಾಣಿಸದೇ ಇರುವ ಪ್ರಯಾಣಿಕರ ಪೂರ್ಣ ಟಿಕೇಟ್ ದರವನ್ನು ಐ.ಆರ್.ಸಿ.ಟಿ.ಸಿ. ಯು ಗ್ರಾಹಕರ ಖಾತೆಗೆ ಜಮಾ ಮಾಡತಕ್ಕದ್ದು.
ಮೇಲ್ಕಾಣಿಸಿದ ಉದ್ದೇಶಗಳಿಗಾಗಿ , ಸಿ.ಆರ್.ಐ.ಎಸ್. ಮತ್ತು ಐ.ಆರ್.ಸಿ.ಟಿ.ಸಿ. ಗಳು ಕೋವಿಡ್ -19 ಲಕ್ಷಣಗಳ ಕಾರಣಕ್ಕಾಗಿ ಪ್ರಯಾಣಿಸಲಾಗದ ಪ್ರಯಾಣಿಕರ ಟಿ.ಡಿ.ಆರ್. ಸಲ್ಲಿಕೆಗೆ ಅವಶ್ಯ ಬದಲಾವಣೆಗಳನ್ನು ಮಾಡತಕ್ಕದ್ದು. ಒಂದು ದಾರಿ ಎಂದರೆ “ ಆಂಶಿಕ / ಇಡೀಯ ಪ್ರಯಾಣಿಕರಿಗೆ ಅತಿ ಹೆಚ್ಚು ಉಷ್ಣಾಂಶ ಇರುವ ಕಾರಣದಿಂದ / ಕೋವಿಡ್ -19 ಲಕ್ಷಣಗಳಿರುವ ಕಾರಣಕ್ಕೆ ರೈಲ್ವೇಯಲ್ಲಿ ಪ್ರಯಾಣಕ್ಕೆ ಅವಕಾಶ ನೀಡಲಾಗಿರುವುದಿಲ್ಲ” ಎಂಬ ಅಂಶ ಅಲ್ಲಿ ಲಭ್ಯ ಇರುತ್ತದೆ.
ಕ್ಯಾಟರಿಂಗ್ :
ಪ್ರಯಾಣದರದಲ್ಲಿ ಊಟ ಉಪಹಾರದ ವೆಚ್ಚಗಳು ಸೇರಿರುವುದಿಲ್ಲ. ಪೂರ್ವ ಪಾವತಿ ಮಾಡಿ ಊಟ ಮುಂಗಡ ಕಾಯ್ದಿರಿಸಲು ಇ-ಕ್ಯಾಟರಿಂಗ್ ವ್ಯವಸ್ಥೆ ಇಲ್ಲ. ಅದಾಗ್ಯೂ ಐ.ಆರ್.ಸಿ.ಟಿ.ಸಿ. ಯು ಒಂದು ಮಿತಿಯಲ್ಲಿ ಆಹಾರ ಮತ್ತು ಪ್ಯಾಕ್ ಮಾಡಲ್ಪಟ್ಟ ಕುಡಿಯುವ ನೀರಿನ ವ್ಯವಸ್ಥೆಯನ್ನು ಅಡುಗೆ ವ್ಯವಸ್ಥೆ ಇರುವ (ಪ್ಯಾಂಟ್ರಿ ಕಾರ್) ಕೆಲವು ರೈಲುಗಳಲ್ಲಿ ಪಾವತಿ ಮಾಡಿ ಪಡೆಯುವ ಆಧಾರದಲ್ಲಿ ಮಾಡಲಿದೆ. ಈ ಬಗ್ಗೆ ಮಾಹಿತಿಯನ್ನು ಟಿಕೇಟ್ ಮುಂಗಡ ಕಾಯ್ದಿರಿಸುವಾಗಲೇ ಪ್ರಯಾಣಿಕರಿಗೆ ಲಭ್ಯವಾಗುವಂತೆ ಮಾಡಲಾಗುತ್ತದೆ.
ಪ್ರಯಾಣಿಕರು ತಮ್ಮದೇ ಆಹಾರ ಮತ್ತು ನೀರಿನ ವ್ಯವಸ್ಥೆಯೊಂದಿಗೆ ಪ್ರಯಾಣಿಸುವುದು ಉತ್ತಮ.
ರೈಲು ನಿಲ್ದಾಣಗಳಲ್ಲಿ ಇರುವ ಎಲ್ಲಾ ಸ್ಥಿರ ಕ್ಯಾಟರಿಂಗ್ ಮತ್ತು ಮಾರಾಟ ಘಟಕಗಳು (ಬಹು ಉದ್ದೇಶಿತ ಅಂಗಡಿಗಳು, ಪುಸ್ತಕದಂಗಡಿಗಳು, ಕೆಮಿಸ್ಟ್ ಅಂಗಡಿಗಳು) ತೆರೆದಿರುತ್ತವೆ. ಆಹಾರ ಪ್ಲಾಜಾ ಮತ್ತು ಉಪಾಹಾರ ಕೊಠಡಿಗಳ ವಿಷಯದಲ್ಲಿ ಬೇಯಿಸಿದ ಆಹಾರವನ್ನು ವಿತರಿಸಬಹುದು ,ಆದರೆ ಕುಳಿತು ತಿನ್ನುವ ವ್ಯವಸ್ಥೆ ಇರುವುದಿಲ್ಲ. ಪೊಟ್ಟಣದಲ್ಲಿ ಆಹಾರವನ್ನು ಕೊಂಡೊಯ್ಯಬಹುದು.
ಲಿನೆನ್ ಮತ್ತು ಬ್ಲಾಂಕೆಟ್ :
ಲಿನೆನ್ , ಬ್ಲಾಂಕೆಟ್ ಗಳು ಮತ್ತು ಪರದೆಗಳನ್ನು ರೈಲಿನೊಳಗೆ ಒದಗಿಸಲಾಗುವುದಿಲ್ಲ. ಅವರದೇ ಬಟ್ಟೆ/ಹೊದಿಕೆಗಳೊಂದಿಗೆ ಪ್ರಯಾಣಿಸುವಂತೆ ಪ್ರಯಾಣಿಕರಿಗೆ ಸಲಹೆ ಮಾಡಲಾಗಿದೆ. ಹವಾನಿಯಂತ್ರಿತ ಬೋಗಿಗಳಲ್ಲಿ ಉಷ್ಣಾಂಶವನ್ನು ಈ ಉದ್ದೇಶಕ್ಕಾಗಿ ಸೂಕ್ತ ರೀತಿಯಲ್ಲಿ ನಿಯಂತ್ರಿಸಲಾಗುವುದು.
ಎಲ್ಲಾ ಪ್ರಯಾಣಿಕರೂ ಆರೋಗ್ಯ ಸೇತು ಆಪ್ ನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು ಮತ್ತು ಬಳಸಬೇಕು. ಪ್ರಯಾಣಿಕರು ಆದಷ್ಟು ಕಡಿಮೆ ಲಗೇಜುಗಳೊಂದಿಗೆ ಪ್ರಯಾಣ ಮಾಡುವಂತೆ ಸಲಹೆ ಮಾಡಲಾಗಿದೆ.
ಎಂ.ಎಚ್.ಎ. ಮಾರ್ಗದರ್ಶಿಗಳ ಪ್ರಕಾರ ಪ್ರಯಾಣಿಕರ ಸಾರಿಗೆ ಮತ್ತು ಪ್ರಯಾಣಿಕರನ್ನು ಕರೆದೊಯ್ಯುವ ವಾಹನದ ಚಾಲಕರನ್ನು ರೈಲ್ವೇ ನಿಲ್ದಾಣಕ್ಕೆ ಮತ್ತು ಅಲ್ಲಿಂದ ಇತರೆಡೆಗೆ ತೆರಳಲು ದೃಢೀಕೃತ ಇ- ಟಿಕೇಟ್ ಆಧಾರದಲ್ಲಿ ಮಾತ್ರ ಅವಕಾಶ
ವಿವರಗಳಗೆ ಕೊಂಡಿ
***
(Release ID: 1626002)
Visitor Counter : 344