ರೈಲ್ವೇ ಸಚಿವಾಲಯ

ಭಾರತೀಯ ರೈಲ್ವೇಯ ಹಸಿರು ನಿಶಾನೆ, ಮುಂಗಡ ಕಾಯ್ದಿರಿಸುವಿಕೆ ಕೌಂಟರುಗಳು ಮತ್ತು ಸಾಮಾನ್ಯ ಸೇವಾ ಕೇಂದ್ರಗಳು (ಸಿ.ಎಸ್.ಸಿ.ಗಳು) ಹಾಗು ಏಜೆಂಟರ ಮೂಲಕ ಬುಕ್ಕಿಂಗ್ ಮರು ಆರಂಭವಾಗಲಿದೆ

Posted On: 21 MAY 2020 9:12PM by PIB Bengaluru

ಭಾರತೀಯ ರೈಲ್ವೇಯ ಹಸಿರು ನಿಶಾನೆ, ಮುಂಗಡ ಕಾಯ್ದಿರಿಸುವಿಕೆ ಕೌಂಟರುಗಳು ಮತ್ತು ಸಾಮಾನ್ಯ ಸೇವಾ ಕೇಂದ್ರಗಳು (ಸಿ.ಎಸ್.ಸಿ.ಗಳು) ಹಾಗು ಏಜೆಂಟರ ಮೂಲಕ ಬುಕ್ಕಿಂಗ್ ಮರು ಆರಂಭವಾಗಲಿದೆ

ಹಂತ ಹಂತವಾಗಿ ಮುಂಗಡ ಕಾಯ್ದಿರಿಸುವಿಕೆ ಕೌಂಟರುಗಳನ್ನು ತೆರೆಯುವಿಕೆಯನ್ನು ನಾಳೆ ಅಧಿಸೂಚಿಸುವಂತೆ ವಲಯ ರೈಲ್ವೇಗಳಿಗೆ ಸೂಚಿಸಲಾಗಿದೆ ಮತ್ತು ಸ್ಥಳೀಯ ಆವಶ್ಯಕತೆಗಳು ಹಾಗು ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಅವುಗಳ ಸ್ಥಳ ಮತ್ತು ವೇಳಾಪಟ್ಟಿಯ ಬಗ್ಗೆ ವ್ಯಾಪಕ ಮಾಹಿತಿ ಪ್ರಸಾರ ಮಾಡಲಾಗುತ್ತದೆ

ಮುಂಗಡ ಟಿಕೇಟ್ ಕಾಯ್ದಿರಿಸುವ ಕೇಂದ್ರಗಳ ತೆರೆಯುವಿಕೆ ಪ್ರಯಾಣಿಕ ರೈಲ್ವೇ ಸೇವೆಗಳನ್ನು ಹಂತ ಹಂತವಾಗಿ ಮರುಸ್ಥಾಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ

 

ಭಾರತೀಯ ರೈಲ್ವೇಯು ಹಂತ ಹಂತವಾಗಿ ಮುಂಗಡ ಟಿಕೇಟ್ ಕಾಯ್ದಿರಿಸುವ ಕೌಂಟರುಗಳನ್ನು ತೆರೆಯಲು ಮುಂದಾಗುತ್ತಿದೆ.

ಹಂತ ಹಂತವಾಗಿ ಮುಂಗಡ ಕಾಯ್ದಿರಿಸುವಿಕೆ ಕೌಂಟರುಗಳ ತೆರೆಯುವಿಕೆಯನ್ನು ನಾಳೆ ಅಧಿಸೂಚಿಸುವಂತೆ ವಲಯ ರೈಲ್ವೇಗಳಿಗೆ ಸೂಚಿಸಲಾಗಿದೆ ಮತ್ತು ಸ್ಥಳೀಯ ಆವಶ್ಯಕತೆಗಳು ಹಾಗು ಪರಿಸ್ಥಿತಿಗಳಿಗೆ ಅನುಗುಣವಾಗಿ ನಿರ್ಧಾರ ತಳೆಯಲು ತಿಳಿಸಲಾಗಿದೆ. ಮುಂಗಡ ಕಾಯ್ದಿರಿಸುವ ಕೌಂಟರುಗಳು ನಾಳೆಯಿಂದ ಹಂತ ಹಂತವಾಗಿ ತೆರೆಯಲ್ಪಡುತ್ತವೆ. ಮತ್ತು ಅವುಗಳಿರುವ ಸ್ಥಳ ಹಾಗು ವೇಳಾಪಟ್ಟಿಯನ್ನೊಳಗೊಂಡ ಮಾಹಿತಿಗಳನ್ನು ಸ್ಥಳೀಯ ಆವಶ್ಯಕತೆಗಳು ಮತ್ತು ಪರಿಸ್ಥಿತಿಗಳಿಗನುಗುಣವಾಗಿ ವ್ಯಾಪಕವಾಗಿ ಪ್ರಚುರಪಡಿಸಲಾಗುತ್ತದೆ.

ಭಾರತೀಯ ರೈಲ್ವೇಯು ಮುಂಗಡ ಟಿಕೇಟ್ ಕಾಯ್ದಿರಿಸುವಿಕೆಯನ್ನು ನಾಳೆಯಿಂದ ಸಾಮಾನ್ಯ ಸೇವಾ ಕೇಂದ್ರಗಳು ಮತ್ತು ಟಿಕೆಟಿಂಗ್ ಏಜೆಂಟರ ಮೂಲಕವೂ ಮಾಡಬಹುದಾದ ಅವಕಾಶವನ್ನು ಒದಗಿಸಿದೆ.

ಶ್ರಮಿಕ ವಿಶೇಷ ರೈಲುಗಳ ಓಡಾಟವನ್ನು ಸ್ಥಳೀಯ ರಾಜ್ಯ ಸರಕಾರಗಳ ಜೊತೆಗೂಡಿಯೇ ಮತ್ತು ಜಾರಿಯಲ್ಲಿರುವ ಶಿಷ್ಟಾಚಾರಗಳ ಅನ್ವಯವೇ ನಿರ್ವಹಿಸಲಾಗುತ್ತದೆ ಎಂಬುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ.

ಮತ್ತು ಮುಂಗಡ ಕಾಯ್ದಿರಿಸುವಿಕೆ ಸೌಲಭ್ಯಗಳ ತೆರೆಯುವಿಕೆಯು ಪ್ರಯಾಣಿಕ ರೈಲು ಸೇವೆಯ ಮರುಸ್ಥಾಪನೆ ಹಂತ ಹಂತವಾಗಿ ನಡೆಯುವುದರ ಪ್ರಮುಖ ಸಂಕೇತವಾಗಿದೆ. ಹಾಗು ಎಲ್ಲಾ ಪ್ರಯಾಣಿಕರಿಗೆ ಭಾರತದ ಯಾವುದೇ ಭಾಗಕ್ಕೆ ರೈಲುಗಳಲ್ಲಿ ಟಿಕೇಟ್ ಕಾಯ್ದಿರಿಸುವ ಕೆಲಸವನ್ನು ಸುಲಭಗೊಳಿಸಲಿದೆ.

ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಕಾರಣಕ್ಕಾಗಿ ವಲಯ ರೈಲ್ವೇಗಳು ಸಾಮಾನ್ಯ ಸಾಮಾಜಿಕ ಅಂತರ ಪಾಲಿಸುವ ಮಾರ್ಗದರ್ಶಿಗಳಿಗೆ ಬದ್ದವಾಗಿರಬೇಕಾಗುತ್ತದೆ ಮತ್ತು ನೈರ್ಮಲ್ಯ ಶಿಷ್ಟಾಚಾರಗಳನ್ನು ಪಾಲಿಸಬೇಕಾಗುತ್ತದೆ.

***



(Release ID: 1625992) Visitor Counter : 214